ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/00 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2000 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ನವೆಂಬರ್‌ 13ರಿಂದ ಆರಂಭವಾಗುವ ವಾರ
  • ನವೆಂಬರ್‌ 20ರಿಂದ ಆರಂಭವಾಗುವ ವಾ
  • ನವೆಂಬರ್‌ 27ರಿಂದ ಆರಂಭವಾಗುವ ವಾರ
  • ಡಿಸೆಂಬರ್‌ 4ರಿಂದ ಆರಂಭವಾಗುವ ವಾರ
2000 ನಮ್ಮ ರಾಜ್ಯದ ಸೇವೆ
km 11/00 ಪು. 2

ಸೇವಾ ಕೂಟದ ಶೆಡ್ಯೂಲ್‌

ನವೆಂಬರ್‌ 13ರಿಂದ ಆರಂಭವಾಗುವ ವಾರ

ಸಂಗೀತ 6 (45)

10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.

13 ನಿ: ರಾಜ್ಯ ವಾರ್ತೆ ನಂ. 36ನ್ನು ನೀಡಿರುವುದರಿಂದ ಸಿಕ್ಕಿದ ಅನುಭವಗಳು. ಇಷ್ಟರ ವರೆಗೆ ರಾಜ್ಯ ವಾರ್ತೆ ನಂ. 36ನ್ನು ವಿತರಿಸುವುದರಿಂದ ಸಿಕ್ಕಿರುವ ಫಲಿತಾಂಶಗಳನ್ನು ತಿಳಿಸುವಂತೆ ಬೇರೆ ಬೇರೆ ಪ್ರಚಾರಕರನ್ನು ಕೇಳಿರಿ. ಈ ಕಾರ್ಯಾಚರಣೆಯಲ್ಲಿ ಇನ್ನೂ ಹೆಚ್ಚು ಪಾಲ್ಗೊಂಡಿದ್ದಕ್ಕಾಗಿ ಮತ್ತು ಬೇರೆ ಬೇರೆ ಪ್ರಚಾರಕರೊಂದಿಗೆ ಕೆಲಸಮಾಡುವ ಅವಕಾಶವನ್ನು ಪಡೆದುಕೊಂಡದ್ದಕ್ಕಾಗಿ ತಮ್ಮ ಗಣ್ಯತೆಯನ್ನು ವ್ಯಕ್ತಪಡಿಸುವಂತೆ ರೆಗ್ಯುಲರ್‌ ಹಾಗೂ ಆಕ್ಸಿಲಿಯರಿ ಪಯನೀಯರರನ್ನು ಆಹ್ವಾನಿಸಿರಿ.

22 ನಿ: ರೀಸನಿಂಗ್‌ ಪುಸ್ತಕದ ಸದುಪಯೋಗವನ್ನು ಮಾಡಿರಿ. 7-8ನೆಯ ಪುಟಗಳ ಪ್ರಶ್ನೋತ್ತರ ಚರ್ಚೆ. ಶುಶ್ರೂಷೆಯಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯದ ರೀತಿಯಲ್ಲಿ ಪಾಲ್ಗೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಈ ಪುಸ್ತಕವು ಯಾವ ರೀತಿಯಲ್ಲಿ ತಯಾರಿಸಲ್ಪಟ್ಟಿದೆ ಎಂಬುದನ್ನು ತೋರಿಸಿರಿ. ಈ ಪುಸ್ತಕವನ್ನು ಟೆಲಿಫೋನ್‌ ಸಾಕ್ಷಿಕಾರ್ಯದಲ್ಲಿ ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ವಿವರಿಸಿರಿ. ಒಂದು ಪ್ರಶ್ನೆಗೆ ಉತ್ತರವನ್ನು ಹೇಳಲಿಕ್ಕಾಗಿ ಸಹಾಯಕಾರಿ ಮಾಹಿತಿಯನ್ನು ಹೇಗೆ ಕಂಡುಹಿಡಿಯಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿ ತೋರಿಸಿರಿ. ಈ ಪುಸ್ತಕದೊಂದಿಗೆ ಚಿರಪರಿಚಿತರಾಗುವಂತೆ ಹಾಗೂ ಅದನ್ನು ಯಾವಾಗಲೂ ಬ್ರೀಫ್‌ಕೇಸ್‌ ಅಥವಾ ಬ್ಯಾಗ್‌ನಲ್ಲಿಟ್ಟುಕೊಂಡು, ಉಪಯೋಗಿಸುವಂತೆ ಎಲ್ಲರಿಗೂ ಉತ್ತೇಜನವನ್ನು ನೀಡಿರಿ.

ಸಂಗೀತ 5 (46) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 20ರಿಂದ ಆರಂಭವಾಗುವ ವಾ

ಸಂಗೀತ 8 (53)

12 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ. ಇಷ್ಟರ ವರೆಗೆ ಎಷ್ಟು ಟೆರಿಟೊರಿಯನ್ನು ಆವರಿಸಲಾಗಿದೆ ಹಾಗೂ ನವೆಂಬರ್‌ 30ರೊಳಗೆ ಪೂರ್ತಿ ಟೆರಿಟೊರಿಯನ್ನು ಆವರಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಒಂದು ಸಂಕ್ಷಿಪ್ತ ವರದಿ.

13 ನಿ: ಪ್ರಶ್ನಾ ರೇಖಾಚೌಕ. ಹಿರಿಯನಿಂದ ಭಾಷಣ.

20 ನಿ: “ಸಾರುತ್ತಾ ಇರಿ!” ಭಾಷಣ ಹಾಗೂ ಇಂಟರ್‌ವ್ಯೂ. ಕೆಲವರು ಯೆಹೋವನ ಸಂಸ್ಥೆಯೊಂದಿಗೆ ನಿಕಟವಾದ ಸಹವಾಸವನ್ನಿಟ್ಟುಕೊಂಡು, ಜೀವಮಾನ ಪೂರ್ತಿ ಸಾರುವ ಕೆಲಸದಲ್ಲಿ ಪಟ್ಟುಹಿಡಿದಿದ್ದಾರೆ. ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಂಡಿರುವ ಮೂಲಕ, ಅವರು ಸಾರುವ ಕೆಲಸದಲ್ಲಿ ಸಂತೋಷವನ್ನು ಕಂಡುಕೊಂಡಿದ್ದಾರೆ. (ಜ್ಞಾನ ಪುಸ್ತಕದ, ಪುಟ 179, ಪ್ಯಾರಗ್ರಾಫ್‌ 20ನ್ನು ಮತ್ತು 1992, ಆಗಸ್ಟ್‌ 1ರ ಕಾವಲಿನಬುರುಜು, 21-2 ಪುಟಗಳು, 14-15 ಪ್ಯಾರಗ್ರಾಫ್‌ಗಳನ್ನು ನೋಡಿರಿ.) ಅನೇಕ ವರ್ಷಗಳಿಂದ ಕ್ರಿಯಾಶೀಲನಾಗಿರುವ ಒಬ್ಬ ಪ್ರಚಾರಕನನ್ನು, ಸಾರುವ ಕೆಲಸದಲ್ಲಿ ಪಟ್ಟುಹಿಡಿದವನಾಗಿದ್ದುದರ ಕಾರಣಗಳೇನು ಎಂಬುದನ್ನು ತಿಳಿಸುವಂತೆ ಆಮಂತ್ರಿಸಿರಿ.

ಸಂಗೀತ 17 (187) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 27ರಿಂದ ಆರಂಭವಾಗುವ ವಾರ

ಸಂಗೀತ 2 (15)

10 ನಿ: ಸ್ಥಳಿಕ ತಿಳಿಸುವಿಕೆಗಳು. ನವೆಂಬರ್‌ ತಿಂಗಳಿಗಾಗಿ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. ಡಿಸೆಂಬರ್‌ ತಿಂಗಳಿನಲ್ಲಿ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಬೈಬಲಿನೊಂದಿಗೆ ಜ್ಞಾನ ಪುಸ್ತಕವನ್ನು ನೀಡಬೇಕು. ಅನೇಕ ಭಾಷೆಗಳಲ್ಲಿ ಬೈಬಲನ್ನು ಹೊರತರುವುದರಲ್ಲಿ ಯೆಹೋವನ ಸಾಕ್ಷಿಗಳು ಯಾವ ರೀತಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದಾರೆ ಎಂಬುದನ್ನು ವಿವರಿಸಿರಿ.—1997, ಅಕ್ಟೋಬರ್‌ 15, ಕಾವಲಿನಬುರುಜು, ಪುಟಗಳು 11-12.

20 ನಿ: “ರಾಜ್ಯ ವಾರ್ತೆ ನಂ. 36ರಿಂದ ಹುರಿದುಂಬಿಸಲ್ಪಟ್ಟಿರುವ ಆಸಕ್ತಿಯನ್ನು ಬೆಳೆಸಿಕೊಳ್ಳಿರಿ.” 1-5ರ ವರೆಗಿನ ಪ್ಯಾರಗ್ರಾಫ್‌ಗಳ ಪ್ರಶ್ನೋತ್ತರ ಚರ್ಚೆ. ಇಷ್ಟರ ವರೆಗೆ ಸಾರಲ್ಪಟ್ಟಿರದ ಯಾವುದೇ ಟೆರಿಟೊರಿಯಿರುವಲ್ಲಿ, ಅದನ್ನು ಆವರಿಸಲಿಕ್ಕಾಗಿ ಸ್ಥಳಿಕ ಏರ್ಪಾಡುಗಳೇನಾದರೂ ಮಾಡಿರುವಲ್ಲಿ ಅದನ್ನು ತಿಳಿಸಿರಿ. ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ 7 ಮತ್ತು 8ನೇ ಪ್ಯಾರಗ್ರಾಫ್‌ಗಳಲ್ಲಿರುವ ಪ್ರಸ್ತಾವನೆಗಳನ್ನು ಪುನರ್ವಿಮರ್ಶಿಸಿರಿ ಮತ್ತು ಪ್ರತಿಯೊಂದಕ್ಕೂ ಒಂದೊಂದು ಪ್ರತ್ಯಕ್ಷಾಭಿನಯವಿರಲಿ. ಆಸಕ್ತರೆಲ್ಲರನ್ನೂ ಪುನಃ ಭೇಟಿಮಾಡುವುದರ ಹಾಗೂ ಬೈಬಲ್‌ ಅಭ್ಯಾಸಗಳನ್ನು ಪ್ರಾರಂಭಿಸುವುದರ ಮಹತ್ತ್ವವನ್ನು ಒತ್ತಿಹೇಳಿರಿ. ಪ್ಯಾರಗ್ರಾಫ್‌ 9ನ್ನು ಹಾಗೂ ಕೊಡಲ್ಪಟ್ಟಿರುವ ಶಾಸ್ತ್ರವಚನಗಳನ್ನು ಚರ್ಚಿಸುವ ಮೂಲಕ ಸಮಾಪ್ತಿಗೊಳಿಸಿರಿ.

15 ನಿ: ಅತಿಯಾಗಿ ಟಿವಿ ನೋಡುವುದರಿಂದ ನಾನು ನನ್ನನ್ನು ಹೇಗೆ ನಿಯಂತ್ರಿಸಿಕೊಳ್ಳಬಲ್ಲೆ? ದಿನವೊಂದರಲ್ಲಿ ಬಹಳಷ್ಟು ಘಂಟೆಗಳನ್ನು ಟಿವಿ ಮುಂದೆ ಕುಳಿತು ಕಳೆಯುವ ಒಬ್ಬ ಯುವ ಸಹೋದರನೊಂದಿಗೆ ಹಿರಿಯನೊಬ್ಬನು ಮಾತಾಡುತ್ತಾನೆ. ಮೊದಲು ಆ ಸಹೋದರನು ಟಿವಿ ನೋಡುವುದರಲ್ಲಿ ಏನೂ ಹಾನಿಯಿಲ್ಲ ಎಂದು ವಾದಿಸುತ್ತಾನೆ. ಅದು ಕೇವಲ ಒಂದು ರೀತಿಯ ವಿನೋದವಾಗಿದ್ದು, ಅದರಿಂದ ತನಗೆ ಯಾವ ಹಾನಿಯೂ ಆಗಿಲ್ಲ ಎಂದು ಹೇಳುತ್ತಾನೆ. ಆಗ ಹಿರಿಯನು ಯುವ ಜನರ ಪ್ರಶ್ನೆಗಳು ಎಂಬ ಪುಸ್ತಕದ 36ನೇ ಅಧ್ಯಾಯದಲ್ಲಿರುವ ಮುಖ್ಯ ಅಂಶಗಳನ್ನು ಪುನರ್ವಿಮರ್ಶಿಸುತ್ತಾನೆ. ಅತಿಯಾಗಿ ಟಿವಿಯನ್ನು ನೋಡುವಾಗ, ಅದು ವೈಯಕ್ತಿಕ ಅಧ್ಯಯನ, ಶುಶ್ರೂಷೆಗೆ ಹೋಗುವ ಅಥವಾ ಸಭೆಯ ಇನ್ನಿತರ ಕೆಲಸಗಳಿಗೆ ಸಹಾಯವನ್ನು ನೀಡುವ ಅಮೂಲ್ಯವಾದ ಸಮಯವನ್ನು ಕಬಳಿಸಿಬಿಡಬಹುದು ಎಂದು ಅವನು ವಿವರಿಸುತ್ತಾನೆ. ಇದರ ಬಗ್ಗೆ ಸಲಹೆಯನ್ನು ನೀಡಿದ್ದಕ್ಕಾಗಿ ಆ ಯುವ ಸಹೋದರನು ಗಣ್ಯತೆಯನ್ನು ವ್ಯಕ್ತಪಡಿಸುತ್ತಾನೆ ಮತ್ತು ತನ್ನ ಆತ್ಮಿಕ ಪ್ರಯೋಜನಕ್ಕಾಗಿ ಇನ್ನು ಮುಂದೆ ತಾನು ಅತಿಯಾಗಿ ಟಿವಿಯನ್ನು ನೋಡುವುದಿಲ್ಲ ಎಂದು ಹೇಳುತ್ತಾನೆ.

ಸಂಗೀತ 22 (130) ಮತ್ತು ಸಮಾಪ್ತಿಯ ಪ್ರಾರ್ಥನೆ.

ಡಿಸೆಂಬರ್‌ 4ರಿಂದ ಆರಂಭವಾಗುವ ವಾರ

ಸಂಗೀತ 4 (43)

10 ನಿ: ಸ್ಥಳಿಕ ತಿಳಿಸುವಿಕೆಗಳು. “ಉತ್ತರಿಸುವ ಯಂತ್ರಕ್ಕೆ (ಆ್ಯನ್ಸರಿಂಗ್‌ ಮಷೀನ್‌) ನೀವು ಏನು ಹೇಳಸಾಧ್ಯವಿದೆ?”

15 ನಿ: ರಾಜ್ಯ ವಾರ್ತೆ ನಂ. 36ನ್ನು ವಿತರಿಸಿರುವುದರಿಂದ ಸಿಕ್ಕಿದ ಅನುಭವಗಳು. ಟೆರಿಟೊರಿಯನ್ನು ಆವರಿಸುವುದರಲ್ಲಿ ಸಿಕ್ಕಿದ ಯಶಸ್ಸನ್ನು ತಿಳಿಸಿರಿ. ಸಭೆಯಲ್ಲಿ ಮೊದಲ ಬಾರಿಗೆ ಯಾರಾದರೂ ಸೇವೆಯಲ್ಲಿ ಭಾಗವಹಿಸಿದರೋ? ಮನೆಯವರಿಂದ ಹೇಳಲ್ಪಟ್ಟ ಒಳ್ಳೆಯ ಹೇಳಿಕೆಗಳನ್ನು ತಿಳಿಸಿರಿ. ಕೆಲವು ಪ್ರಚಾರಕರು ಬೈಬಲ್‌ ಅಭ್ಯಾಸಗಳನ್ನು ಪ್ರಾರಂಭಿಸಲು ಶಕ್ತರಾದರೋ? ಹಾಗಿರುವಲ್ಲಿ, ಅವರು ಅದನ್ನು ಹೇಗೆ ಮಾಡಿದರು ಎಂಬುದನ್ನು ವಿವರಿಸಲಿ ಇಲ್ಲವೆ ಅದನ್ನು ಪ್ರತ್ಯಕ್ಷಾಭಿನಯಿಸಿ ತೋರಿಸಲಿ. ಕಂಡುಕೊಂಡ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗುವಂತೆ ಪ್ರಯತ್ನಗಳನ್ನು ಮಾಡಲು ಎಲ್ಲರಿಗೂ ಜ್ಞಾಪಿಸಿರಿ.

20 ನಿ: “ಸಮಯೋಚಿತವಾದ ಮಾತುಗಳು.” ಸಭಿಕರೊಂದಿಗೆ ಚರ್ಚೆ ಹಾಗೂ ಪ್ರತ್ಯಕ್ಷಾಭಿನಯಗಳು. ಸಂಭಾಷಣೆಗಳನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿರುವಾಗ ತಾವು ಸಮರ್ಥರಲ್ಲ ಎಂಬ ಭಾವನೆಯು ಅನೇಕರಿಗೆ ಬರುತ್ತದೆ. ಏಕೆಂದರೆ ಅನೇಕರ ಮನಸ್ಸಿನಲ್ಲಿ, ಒಳ್ಳೆಯ ಫಲಿತಾಂಶಗಳನ್ನು ಪಡೆಯಬೇಕಾದರೆ ವಿಶೇಷವಾದ ನಿಪುಣತೆಯನ್ನು ಹೊಂದಿರಬೇಕು ಎಂಬ ತಪ್ಪಾದ ಭಾವನೆಯಿರುತ್ತದೆ. ಹೊಸಬರು ಹಾಗೂ ಯುವ ಪ್ರಚಾರಕರನ್ನು ಒಳಗೊಂಡು ಎಲ್ಲರೂ ಸ್ವಲ್ಪವೇ ಪ್ರಯತ್ನ ಮಾಡುವುದರೊಂದಿಗೆ ಹೇಗೆ ಚರ್ಚೆಗಳನ್ನು ನಡೆಸಬಹುದು ಎಂಬುದನ್ನು ವಿವರಿಸಿರಿ. ಸೂಚಿಸಲ್ಪಟ್ಟ ಪ್ರಸ್ತಾವನೆಗಳನ್ನು ಪುನರ್ವಿಮರ್ಶಿಸಿರಿ. ಅವುಗಳ ಸರಳತೆಯನ್ನು ಎತ್ತಿಹಿಡಿಯಿರಿ. ಹಾಗೂ ಇಬ್ಬರು ಇಲ್ಲವೆ ಮೂವರು ಪ್ರಚಾರಕರು ಅವುಗಳನ್ನು ಪ್ರತ್ಯಕ್ಷಾಭಿನಯಿಸಲಿ. ಉಪಯೋಗಿಸಬಹುದಾದ ಇನ್ನೂ ಹೆಚ್ಚಿನ ಪ್ರಸ್ತಾವನೆಗಳಿಗಾಗಿ ಮಾರ್ಚ್‌ 1998 ನಮ್ಮ ರಾಜ್ಯದ ಸೇವೆಯ ಪುಟ 8ನ್ನು ಉಲ್ಲೇಖಿಸಿರಿ. ಶುಶ್ರೂಷೆಯಲ್ಲಿ ಇನ್ನೂ ಹೆಚ್ಚಿನ ಸಂತೋಷವನ್ನು ಕಂಡುಕೊಳ್ಳಲಿಕ್ಕಾಗಿ ಸಕಾರಾತ್ಮಕ ಮನೋಭಾವವನ್ನು ಹೊಂದಿರುವಂತೆ ಎಲ್ಲರನ್ನೂ ಪ್ರೇರೇಪಿಸಿರಿ.

ಸಂಗೀತ 29 (222) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ