ಉತ್ತರಿಸುವ ಯಂತ್ರಕ್ಕೆ (ಆ್ಯನ್ಸರಿಂಗ್ ಮಷೀನ್) ನೀವು ಏನು ಹೇಳಸಾಧ್ಯವಿದೆ?
ಮನೆಯಲ್ಲಿಲ್ಲದ ಜನರಿಗೆ ಇಲ್ಲವೆ ನಾವು ಹೋಗಲಾರದಂತಹ ಟೆರಿಟೊರಿಗಳಲ್ಲಿ ವಾಸಿಸುವ ಜನರಿಗೆ ಸಾಕ್ಷಿನೀಡುವ ಉತ್ತಮ ಮಾಧ್ಯಮವು ಟೆಲಿಫೋನ್ ಆಗಿದೆ. ಆದರೆ ಹೆಚ್ಚೆಚ್ಚು ಜನರು ಫೋನ್ ಕರೆಗೆ ಪ್ರತ್ಯುತ್ತರ ಕೊಡುವುದಿಲ್ಲ. ಅದಕ್ಕೆ ಬದಲಾಗಿ, ಅವರ ಉತ್ತರಿಸುವ ಯಂತ್ರವು ಫೋನ್ ಕರೆಗೆ ಉತ್ತರವನ್ನು ಕೊಡುತ್ತದೆ. ಆಗ ನೀವೇನು ಮಾಡಸಾಧ್ಯವಿದೆ? ಫೋನ್ ಅನ್ನು ಕೆಳಗಿಟ್ಟುಬಿಡಬೇಡಿ. ಅದಕ್ಕೆ ಬದಲಾಗಿ, ಚೆನ್ನಾಗಿ ತಯಾರಿಸಿದ ಪ್ರತ್ಯುತ್ತರವನ್ನು ಬರೆದಿಟ್ಟುಕೊಂಡು, ಅದನ್ನು ನೀವು ಫೋನಿನಲ್ಲಿ ಓದಿಹೇಳಬಹುದು. ಮನಸ್ಸಿಗೆ ಮುದನೀಡುವ ಹಾಗೂ ಸ್ನೇಹಭಾವದ ಧ್ವನಿಯಲ್ಲಿ ಮಾತಾಡಲು ಅಭ್ಯಾಸಮಾಡಿಕೊಳ್ಳಿರಿ. ನೀವು ಏನು ಹೇಳಸಾಧ್ಯವಿದೆ?
ರಾಜ್ಯ ಸಭಾಗೃಹದಲ್ಲಿ ಮುಂದಿನ ಸಾರ್ವಜನಿಕ ಕೂಟಕ್ಕೆ ಬರುವಂತೆ ಮನೆಯವನಿಗೆ ಹಾರ್ದಿಕವಾಗಿ ಸ್ವಾಗತಿಸಿರಿ. ನೀವು ಹೀಗೆ ಹೇಳಬಹುದು: “ನಾನು ನಿಮ್ಮೊಟ್ಟಿಗೆ ಫೋನಿನಲ್ಲಿ ಮಾತಾಡಲು ಪ್ರಯತ್ನಿಸಿದೆ. ಆದರೆ ನೀವು ಸಿಗಲಿಲ್ಲ. [ಸಾರ್ವಜನಿಕ ಭಾಷಣದ ಶೀರ್ಷಿಕೆ] ಕುರಿತಾದ ಬೈಬಲ್ ಆಧಾರಿತ ಚರ್ಚೆಯನ್ನು ಕೇಳಿಸಿಕೊಳ್ಳಲು ನೀವು ಇಷ್ಟಪಡುವಲ್ಲಿ, ದಯವಿಟ್ಟು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಬನ್ನಿ. ಸಾರ್ವಜನಿಕರಿಗೆ ಹಾರ್ದಿಕ ಸ್ವಾಗತವಿದೆ. ಅದಕ್ಕಾಗಿ ಯಾವುದೇ ಹಣವನ್ನು ತೆಗೆದುಕೊಳ್ಳುವುದಿಲ್ಲ.” ಅನಂತರ ಕೂಟದ ದಿನ ಹಾಗೂ ಸಮಯವನ್ನು ಸ್ಪಷ್ಟವಾಗಿ ತಿಳಿಸಿರಿ ಮತ್ತು ವಿಳಾಸ ಇಲ್ಲವೆ ರಾಜ್ಯ ಸಭಾಗೃಹವು ಇರುವ ಸ್ಥಳದ ಕುರಿತು ವರ್ಣನೆಯನ್ನು ಕೊಡಿರಿ.
ಕೂಟಗಳಿಗೆ ಹೊಸಬರು ಯಾರೇ ಬರಲಿ, ಅವರ ಬಳಿ ಹೋಗಿ ನಿಮ್ಮನ್ನೇ ಪರಿಚಯಿಸಿಕೊಳ್ಳಿರಿ. ಹೀಗೆ ಮಾಡುವ ಮೂಲಕ, ಇಲ್ಲಿ ಅವರಿಗೆ ಹಾರ್ದಿಕ ಸ್ವಾಗತವಿದೆ ಎಂಬುದನ್ನು ತೋರ್ಪಡಿಸಿರಿ. ಮನೆಯಲ್ಲಿಯೇ ಅವರೊಂದಿಗೆ ಉಚಿತವಾಗಿ ಬೈಬಲ್ ಅಭ್ಯಾಸವನ್ನು ಮಾಡುವುದರ ಬಗ್ಗೆ ಅವರಿಗೆ ತಿಳಿಸುವುದನ್ನು ಮಾತ್ರ ಮರೆಯಬೇಡಿ!