ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/01 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2001 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಏಪ್ರಿಲ್‌ 9ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 16ರಂದು ಆರಂಭವಾಗುವ ವಾರ
  • ಏಪ್ರಿಲ್‌ 23ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 30ರಿಂದ ಆರಂಭವಾಗುವ ವಾರ
  • ಮೇ 7ರಿಂದ ಆರಂಭವಾಗುವ ವಾರ
2001 ನಮ್ಮ ರಾಜ್ಯದ ಸೇವೆ
km 4/01 ಪು. 2

ಸೇವಾ ಕೂಟದ ಶೆಡ್ಯೂಲ್‌

ಏಪ್ರಿಲ್‌ 9ರಿಂದ ಆರಂಭವಾಗುವ ವಾರ

ಗೀತೆ 20 (93)

15 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಸಭೆಯ ಜ್ಞಾಪಕಾಚರಣೆಯ ಹಾಜರಿಯನ್ನು ಪ್ರಕಟಿಸಿರಿ. ಪ್ರಥಮ ಬಾರಿ ಹಾಜರಾದವರು ಹೇಳಿದಂಥ ಗಣ್ಯತೆಯ ಅಭಿವ್ಯಕ್ತಿಗಳನ್ನು ತಿಳಿಸುವಂತೆ ಸಭಿಕರನ್ನು ಆಹ್ವಾನಿಸಿರಿ. ಏಪ್ರಿಲ್‌ 23ರಂದು ಸೇವಾ ಕೂಟದಲ್ಲಿ ನಡೆಯಲಿರುವ ಚರ್ಚೆಯ ತಯಾರಿಯಾಗಿ ಬೈಬಲ್‌​—⁠ನಿಮ್ಮ ಜೀವಿತದಲ್ಲಿ ಅದರ ಪ್ರಭಾವ (ಇಂಗ್ಲಿಷ್‌) ಎಂಬ ವಿಡಿಯೊವನ್ನು ವೀಕ್ಷಿಸುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.

10 ನಿ:  ಸ್ಥಳಿಕ ಅಗತ್ಯಗಳು.

20 ನಿ:  “ನಿಮ್ಮ ಶುಶ್ರೂಷೆಯಲ್ಲಿ ‘ಅತ್ಯಾಸಕ್ತಿಯಿಂದ ನಿರತರಾಗಿರಿ.’”a ಪ್ಯಾರ. 3-5ರಲ್ಲಿ ಶಿಫಾರಸ್ಸುಮಾಡಲ್ಪಟ್ಟಿರುವಂತೆ, ಇತರರಿಗೆ ಸಹಾಯ ಮಾಡುವುದರಲ್ಲಿ ಆನಂದಿಸಿದ ಅನುಭವಗಳನ್ನು ಹೇಳುವಂತೆ ಇಬ್ಬರು ಅಥವಾ ಮೂವರು ಪ್ರಚಾರಕರನ್ನು ಆಹ್ವಾನಿಸಿರಿ.

ಗೀತೆ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 16ರಂದು ಆರಂಭವಾಗುವ ವಾರ

ಗೀತೆ 13 (124)

10 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ. ಏಪ್ರಿಲ್‌ ತಿಂಗಳಿಗೆ ಎರಡೇ ವಾರಾಂತ್ಯಗಳು ಉಳಿದಿರುವುದರಿಂದ ಅದಕ್ಕೆ ಮುಂಚೆ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.

15 ನಿ:  “‘ದೇವರ ವಾಕ್ಯದ ಬೋಧಕರು’​—⁠2001ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ.” ಇದನ್ನು ಸೆಕ್ರಿಟರಿಯು ನಿರ್ವಹಿಸುವನು. ಮೊದಲಾಗಿ, ಸೊಸೈಟಿಯಿಂದ ಬಂದಿರುವ ಮಾರ್ಚ್‌ 15, 2001ರ ಅಧಿವೇಶನ ನೇಮಕ ಪತ್ರವನ್ನು ಓದಿ. ನಾವೆಲ್ಲರೂ ಸೊಸೈಟಿಯ ಮಾರ್ಗದರ್ಶನವನ್ನು ಏಕೆ ನಿಕಟವಾಗಿ ಪಾಲಿಸಬೇಕು ಎಂಬುದನ್ನು ತೋರಿಸಲು, ಅದರಲ್ಲಿ ಉಲ್ಲೇಖಿಸಲ್ಪಟ್ಟಿರುವ ವಚನಗಳನ್ನು ಉಪಯೋಗಿಸಿರಿ. ಅಧಿವೇಶನದ ಮೂರೂ ದಿನಗಳ ಕಾರ್ಯಕ್ರಮಕ್ಕೆ ಹಾಜರಾಗುವಂತೆ, ಕೆಲಸದಿಂದ ರಜೆಯನ್ನು ಪಡೆದುಕೊಳ್ಳುವ ಏರ್ಪಾಡನ್ನು ಆದಷ್ಟು ಬೇಗನೆ ಮಾಡುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳಿರಿ. ಸೊಸೈಟಿಯ ಏರ್ಪಾಡುಗಳೊಂದಿಗೆ ಸಹಕರಿಸುವುದಕ್ಕಾಗಿ ಎಲ್ಲರನ್ನೂ ಪ್ರಶಂಸಿಸಿರಿ.

20 ನಿ:  “ಸರಳವಾದ ನಿರೂಪಣೆಯೇ ಅತ್ಯುತ್ತಮ.”b 1999ರ ಜುಲೈ ತಿಂಗಳ ನಮ್ಮ ರಾಜ್ಯದ ಸೇವೆಯ 4ನೇ ಪುಟದಲ್ಲಿ “ಚುಟುಕಾಗಿ ಹೇಳಿ!” ಎಂಬ ಲೇಖನದಲ್ಲಿರುವ ಮಾಹಿತಿಯನ್ನು ಒಳಗೂಡಿಸಿರಿ. ಒಂದು ಅಥವಾ ಎರಡು ಸರಳವಾದ ನಿರೂಪಣೆಗಳನ್ನು ಚುಟುಕಾಗಿ ಪ್ರತ್ಯಕ್ಷಾಭಿನಯಿಸಿರಿ.

ಗೀತೆ 11 (85) ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 23ರಿಂದ ಆರಂಭವಾಗುವ ವಾರ

ಗೀತೆ 23 (200)

5 ನಿ: ಸ್ಥಳಿಕ ಪ್ರಕಟನೆಗಳು.

15 ನಿ:  “ಮುಂದಾಗಿ ಯೋಜಿಸುವುದು​—⁠ಯಾವುದಕ್ಕಾಗಿ?” ಭಾಷಣ. 2000, ನವೆಂಬರ್‌ 1ರ ಕಾವಲಿನಬುರುಜು ಪತ್ರಿಕೆಯ 18-21ನೆಯ ಪುಟಗಳಲ್ಲಿರುವ ಲೇಖನದಿಂದ ಉಚಿತವಾಗಿರುವ ಅಂಶಗಳನ್ನು ಒಳಗೂಡಿಸಿ.

25 ನಿ:  “ಬೈಬಲ್‌​—⁠ನಿಮ್ಮ ಜೀವಿತದಲ್ಲಿ ಅದರ ಪ್ರಭಾವ ಎಂಬ ವಿಡಿಯೊದ ಕುರಿತಾದ ಅಭಿಪ್ರಾಯಗಳು.” ಸಭಿಕರೊಂದಿಗೆ ಚರ್ಚೆ. ಸೊಸೈಟಿಯ ವಿಡಿಯೊಗಳನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಳ್ಳುವುದರ ಕುರಿತು 1997 ಯಿಯರ್‌ಬುಕ್‌ನ ಪುಟ 54, ಪ್ಯಾರಗ್ರಾಫ್‌ 1ರಲ್ಲಿರುವ ಅನುಭವದಲ್ಲಿ ಕೊಡಲ್ಪಟ್ಟಿರುವ ಅಂಶವನ್ನು ಏಕೆ ಅನ್ವಯಿಸಬಾರದು? ಯೆಹೋವನ ಸಾಕ್ಷಿಗಳು ನಾಸಿ ಆಕ್ರಮಣದ ವಿರುದ್ಧ ದೃಢವಾಗಿ ನಿಲ್ಲುತ್ತಾರೆ (ಇಂಗ್ಲಿಷ್‌) ಎಂಬ ವಿಡಿಯೊವನ್ನು ಜೂನ್‌ ತಿಂಗಳಿನಲ್ಲಿ ನಾವು ಪುನರ್ವಿಮರ್ಶಿಸುವೆವು.

ಗೀತೆ 1 (13) ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 30ರಿಂದ ಆರಂಭವಾಗುವ ವಾರ

ಗೀತೆ 22 (130)

10 ನಿ:  ಸ್ಥಳಿಕ ಪ್ರಕಟನೆಗಳು. ಏಪ್ರಿಲ್‌ ತಿಂಗಳಿಗಾಗಿರುವ ಕ್ಷೇತ್ರಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿ. ಮೇ 6ರೊಳಗಾಗಿ ಎಲ್ಲಾ ವರದಿಗಳ ಲೆಕ್ಕ ಮಾಡಿಮುಗಿಸುವಂತೆ ಪುಸ್ತಕ ಅಭ್ಯಾಸದ ಚಾಲಕರು ತಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬರು ವರದಿಹಾಕಿದ್ದಾರೊ ಇಲ್ಲವೊ ಎಂಬುದನ್ನು ಕೇಳಿತಿಳಿದುಕೊಳ್ಳಬೇಕು.

15 ನಿ:  “ಒಳ್ಳೆಯ ನೆರೆಯವರಾಗಿ ಸಾಕ್ಷಿನೀಡಿ.”c ನಮ್ಮ ನಡತೆಯ ಮೂಲಕ ನಾವು ಸಾಕ್ಷಿಯನ್ನು ನೀಡಸಾಧ್ಯವಿರುವ ಇನ್ನಿತರ ವಿಧಾನಗಳ ಕುರಿತು ತಿಳಿಸಿರಿ.​—⁠1997, ನವೆಂಬರ್‌ 1ರ ಕಾವಲಿನಬುರುಜು ಪತ್ರಿಕೆಯ ಪುಟ 18, ಪ್ಯಾರ 16ನ್ನು ನೋಡಿ.

20 ನಿ:  ಪಯನೀಯರರು ಇತರರಿಗೆ ನೆರವು ನೀಡುತ್ತಾರೆ. ಸೇವಾ ಮೇಲ್ವಿಚಾರಕನ ಭಾಷಣ ಮತ್ತು ಇಂಟರ್‌ವ್ಯೂಗಳು. 1998ರ ಸೆಪ್ಟೆಂಬರ್‌ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 8ರಲ್ಲಿ ಕೊಡಲ್ಪಟ್ಟಿರುವ, ಪಯನೀಯರರು ಇತರರಿಗೆ ನೆರವು ನೀಡುತ್ತಾರೆ ಕಾರ್ಯಕ್ರಮವನ್ನು ಪುನರ್ವಿಮರ್ಶಿಸಿರಿ. ಸ್ಥಳಿಕವಾಗಿ ಸಾಧಿಸಲ್ಪಟ್ಟಿರುವ ಹುರಿದುಂಬಿಸುವ ವಿಷಯಗಳ ಕುರಿತು ವಿವರಿಸಿರಿ. ಸಹಾಯವನ್ನು ನೀಡಿರುವ ಒಬ್ಬ ಪಯನೀಯರರನ್ನು ಮತ್ತು ನೆರವನ್ನು ಪಡೆದುಕೊಂಡಿರುವ ಪ್ರಚಾರಕನನ್ನು ಇಂಟರ್‌ವ್ಯೂ ಮಾಡಿ. ಸೇವೆಯಲ್ಲಿ ಒಟ್ಟಿಗೆ ಕೆಲಸಮಾಡಿದ್ದರಿಂದ ಇಬ್ಬರೂ ಹೇಗೆ ಪ್ರಯೋಜನವನ್ನು ಪಡೆದುಕೊಂಡರು ಎಂಬುದನ್ನು ತೋರಿಸಿರಿ. ಬರಲಿರುವ ತಿಂಗಳುಗಳಲ್ಲಿ ಈ ಏರ್ಪಾಡಿನ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಇತರರನ್ನು ಆಹ್ವಾನಿಸಿರಿ.

ಗೀತೆ 9 (37) ಮತ್ತು ಸಮಾಪ್ತಿಯ ಪ್ರಾರ್ಥನೆ.

ಮೇ 7ರಿಂದ ಆರಂಭವಾಗುವ ವಾರ

ಗೀತೆ 6 (45)

10 ನಿ:  ಸ್ಥಳಿಕ ಪ್ರಕಟನೆಗಳು.

15 ನಿ:  “ದೇವರಿಗೆ ಎಲ್ಲವು ಸಾಧ್ಯ.”d ಘೋಷಕರು (ಇಂಗ್ಲಿಷ್‌) ಪುಸ್ತಕದ ಪುಟ 443ರಲ್ಲಿ ತಿಳಿಸಲ್ಪಟ್ಟಿರುವ ವಿಷಯಗಳ ಕುರಿತು ಚುಟುಕಾಗಿ ಹೇಳಿಕೆಯನ್ನು ನೀಡಿ. 1935ರಲ್ಲಿ ಮಾಡಲ್ಪಟ್ಟ ಸಾರುವ ಕೆಲಸವನ್ನು, ಸದ್ಯದ ಯಿಯರ್‌ಬುಕ್‌ನಲ್ಲಿರುವ ವರದಿಯೊಂದಿಗೆ ಹೋಲಿಸಿರಿ. ಒಂದು ಸಮಯದಲ್ಲಿ, ಈ ಮಹತ್ತರವಾದ ವಿಸ್ತರಣೆಯು ಹೇಗೆ ಅಸಾಧ್ಯವಾಗಿ ತೋರುತ್ತಿತ್ತೆಂಬುದನ್ನು ತಿಳಿಸಿರಿ.

20 ನಿ:  ನಮ್ಮ ಕುಟುಂಬವು ಹೇಗೆ ಪವಿತ್ರತೆಯನ್ನು ಪ್ರದರ್ಶಿಸಬಲ್ಲದು? ಹಿರಿಯ ಮತ್ತು ಅವನ ಕುಟುಂಬವು, 1996 ಆಗಸ್ಟ್‌ 1ರ ಕಾವಲಿನಬುರುಜು ಪತ್ರಿಕೆಯ 17-20ನೆಯ ಪುಟಗಳನ್ನು ಚರ್ಚಿಸುತ್ತದೆ. ಮನೆಯಲ್ಲಿ, ಸಂಬಂಧಿಕರೊಂದಿಗೆ, ಸಭೆಯಲ್ಲಿ ಮತ್ತು ನೆರೆಹೊರೆಯಲ್ಲಿ ಹಾಗೂ ಶಾಲೆ ಮತ್ತು ಕೆಲಸದ ಸ್ಥಳದಲ್ಲಿ ಪವಿತ್ರತೆಯನ್ನು ತೋರಿಸುವ ವಿಧಗಳನ್ನು ಪುನರ್ವಿಮರ್ಶಿಸಿರಿ.

ಗೀತೆ 22 (130) ಮತ್ತು ಸಮಾಪ್ತಿಯ ಪ್ರಾರ್ಥನೆ.

[ಅಧ್ಯಯನ ಪ್ರಶ್ನೆಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ