ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/01 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2001 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಸೆಪ್ಟೆಂಬರ್‌ 10ರಿಂದ ಆರಂಭವಾಗುವ ವಾರ
  • ಸೆಪ್ಟೆಂಬರ್‌ 17ರಿಂದ ಆರಂಭವಾಗುವ ವಾರ
  • ಸೆಪ್ಟೆಂಬರ್‌ 24ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 1ರಿಂದ ಆರಂಭವಾಗುವ ವಾರ
2001 ನಮ್ಮ ರಾಜ್ಯದ ಸೇವೆ
km 9/01 ಪು. 2

ಸೇವಾ ಕೂಟದ ಶೆಡ್ಯೂಲ್‌

ಸೆಪ್ಟೆಂಬರ್‌ 10ರಿಂದ ಆರಂಭವಾಗುವ ವಾರ

ಗೀತೆ 23 (200)

10 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.

13 ನಿ:  ಸ್ಥಳಿಕ ಅಗತ್ಯಗಳು.

22 ನಿ:  “ನೀವು ನಿಮ್ಮ ಶುಶ್ರೂಷೆಯನ್ನು ಸಂಪೂರ್ಣವಾಗಿ ಪೂರೈಸುತ್ತಿದ್ದೀರೊ?”a 1-3ನೆಯ ಪ್ಯಾರಗ್ರಾಫ್‌ಗಳನ್ನು ಸಭಿಕರೊಂದಿಗೆ ಚರ್ಚಿಸಿದ ನಂತರ, ಎರಡು ಸಂಕ್ಷಿಪ್ತ ಪತ್ರಿಕಾ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿ​—⁠ಒಂದನ್ನು ಜುಲೈಯಿಂದ ಸೆಪ್ಟೆಂಬರ್‌ ವರೆಗಿನ ಎಚ್ಚರ! ಪತ್ರಿಕೆಯನ್ನು ಉಪಯೋಗಿಸುತ್ತಾ ಹಾಗೂ ಮತ್ತೊಂದನ್ನು ಸೆಪ್ಟೆಂಬರ್‌ 15ರ ಕಾವಲಿನಬುರುಜು ಪತ್ರಿಕೆಯನ್ನು ಉಪಯೋಗಿಸುತ್ತಾ ಮಾಡಿ. 4ನೇ ಪ್ಯಾರಗ್ರಾಫನ್ನು ಚರ್ಚಿಸಿದ ನಂತರ, ಜ್ಞಾನ ಪುಸ್ತಕದೊಂದಿಗೆ ಸೂಚಿಸಲ್ಪಟ್ಟಿರುವ ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.

ಗೀತೆ 13 (124) ಮತ್ತು ಸಮಾಪ್ತಿಯ ಪ್ರಾರ್ಥನೆ.

ಸೆಪ್ಟೆಂಬರ್‌ 17ರಿಂದ ಆರಂಭವಾಗುವ ವಾರ

ಗೀತೆ 4 (43)

15 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ. “ಅದು ವಿಷಯಸೂಚಿಯಲ್ಲಿ ಇದೆ.” ಸೃಷ್ಟಿ (ಇಂಗ್ಲಿಷ್‌) ಪುಸ್ತಕಕ್ಕಾಗಿ ನಿರೂಪಣೆಗಳನ್ನು ಹೇಗೆ ಕಂಡುಹಿಡಿಯಬಹುದು ಎಂಬುದನ್ನು ತೋರಿಸಿ.

15 ನಿ:  ಕಳೆದ ವರ್ಷ ನಾವೇನನ್ನು ಸಾಧಿಸಿದೆವು? ಸೇವಾ ಮೇಲ್ವಿಚಾರಕನಿಂದ ಭಾಷಣ. 2001ನೆಯ ಸೇವಾ ವರ್ಷದ ಸಭೆಯ ವರದಿಯಿಂದ ಮುಖ್ಯಾಂಶಗಳನ್ನು ಕೊಡಿರಿ. ಸಾಧಿಸಲಾಗಿರುವ ಒಳ್ಳೆಯ ಕೆಲಸಗಳಿಗಾಗಿ ಎಲ್ಲರನ್ನೂ ಪ್ರಶಂಸಿಸಿ. ಸುಧಾರಣೆಗಾಗಿ ಪ್ರಾಯೋಗಿಕವಾದ ಸಲಹೆಗಳನ್ನು ಸಂಕ್ಷಿಪ್ತವಾಗಿ ತಿಳಿಸುತ್ತಾ, ಸಭೆಯು ಕೂಟದ ಹಾಜರಿಯಲ್ಲಿ, ಕ್ಷೇತ್ರ ಸೇವೆಯಲ್ಲಿನ ಕ್ರಮಬದ್ಧತೆಯ ವಿಷಯದಲ್ಲಿ, ಮತ್ತು ಬೈಬಲ್‌ ಅಭ್ಯಾಸದ ಚಟುವಟಿಕೆಯಲ್ಲಿ ಏನನ್ನು ಮಾಡಿದೆಯೆಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಿ. ಮುಂದಿನ ವರ್ಷಕ್ಕಾಗಿ ತಲಪಸಾಧ್ಯವಿರುವಂಥ ಗುರಿಗಳನ್ನಿಡಿರಿ.

15 ನಿ:  ಪ್ರಶ್ನಾ ರೇಖಾಚೌಕ. ಒಂದು ಭಾಷಣ. ಸೇವೆಗಾಗಿರುವ ಕೂಟಗಳ ಸಭೆಯ ಸಾಪ್ತಾಹಿಕ ಶೆಡ್ಯೂಲನ್ನು ಪುನರ್ವಿಮರ್ಶಿಸಿ. ಕೂಡಿಬರುವವರೆಲ್ಲರೂ ಈ ಕೂಟಗಳಲ್ಲಿ ಒಂದು ಫಲಭರಿತವಾದ ಚರ್ಚೆಗೆ ಹೇಗೆ ಕೂಡಿಸಬಹುದು ಎಂಬುದನ್ನು ವಿವರಿಸಿ. ಈ ಸೇವಾ ಏರ್ಪಾಡುಗಳನ್ನು ಬೆಂಬಲಿಸುವಂತೆ ಸಭೆಯನ್ನು ಪ್ರೋತ್ಸಾಹಿಸಿ.

ಗೀತೆ 18 (162) ಮತ್ತು ಸಮಾಪ್ತಿಯ ಪ್ರಾರ್ಥನೆ.

ಸೆಪ್ಟೆಂಬರ್‌ 24ರಿಂದ ಆರಂಭವಾಗುವ ವಾರ

ಗೀತೆ 6 (45)

15 ನಿ:  ಸ್ಥಳಿಕ ಪ್ರಕಟನೆಗಳು. “ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?” ಎಂಬ ರೇಖಾಚೌಕದಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಎರಡು ಪತ್ರಿಕಾ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿ​—⁠ಒಂದನ್ನು ಜುಲೈಯಿಂದ ಸೆಪ್ಟೆಂಬರ್‌ ವರೆಗಿನ ಎಚ್ಚರ! ಪತ್ರಿಕೆಯ ಎರಡನೆಯ ನಿರೂಪಣೆಯನ್ನು ಉಪಯೋಗಿಸುತ್ತಾ ಹಾಗೂ ಮತ್ತೊಂದನ್ನು ಅಕ್ಟೋಬರ್‌ 1ರ ಕಾವಲಿನಬುರುಜು ಪತ್ರಿಕೆಯನ್ನು ಉಪಯೋಗಿಸುತ್ತಾ ಮಾಡಿ.

30 ನಿ:  ದೇವರನ್ನು ಪ್ರೀತಿಸಿರಿ​—⁠ಲೋಕದಲ್ಲಿರುವವುಗಳನ್ನಲ್ಲ. (1 ಯೋಹಾನ 2:15-17) ಕಳೆದ ಸೇವಾ ವರ್ಷದಲ್ಲಿ ನಡೆದ ಸರ್ಕಿಟ್‌ ಸಮ್ಮೇಳನದ ಕಾರ್ಯಕ್ರಮವನ್ನು ಪುನರ್ವಿಮರ್ಶಿಸುವ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಕಲಿಯಲಾದಂಥ ಪ್ರಾಮುಖ್ಯ ಅಂಶಗಳ ಕುರಿತು ಹೇಳಿಕೆಯನ್ನು ನೀಡುವಂತೆ ಮತ್ತು ಇದನ್ನು ಅವರು ಹೇಗೆ ವೈಯಕ್ತಿಕವಾಗಿ ಅಥವಾ ಕುಟುಂಬದ ಗುಂಪುಗಳೋಪಾದಿ ಅನ್ವಯಿಸಲು ಸಾಧ್ಯವಾಯಿತು ಎಂಬುದನ್ನು ಹೇಳುವಂತೆ ಪ್ರಚಾರಕರನ್ನು ಕೇಳಿ. (ಭಾಗಗಳನ್ನು ಮುಂಚಿತವಾಗಿಯೇ ನೇಮಿಸಬಹುದು.) ಕಾರ್ಯಕ್ರಮದ ಈ ಭಾಗಗಳನ್ನು ಎತ್ತಿತೋರಿಸಿ: (1) “ದೇವರಿಗಾಗಿರುವ ಪ್ರೀತಿಯು ಸೇವೆಯಲ್ಲಿ ನಮ್ಮನ್ನು ಪ್ರಚೋದಿಸುತ್ತದೆ.” ನಮ್ಮನ್ನು ಸಾರುವುದರಿಂದ ತಡೆಗಟ್ಟಬಹುದಾದ, ಪುಕ್ಕಲುತನ, ಅಸಮರ್ಥತೆಯ ಅನಿಸಿಕೆಗಳು, ಮನುಷ್ಯರ ಭಯ ಎಂಬಂಥ ನಕಾರಾತ್ಮಕ ಅನಿಸಿಕೆಗಳನ್ನು ನಿಭಾಯಿಸಲು ಈ ರೀತಿಯ ಪ್ರೀತಿಯು ನಮಗೆ ಸಹಾಯಮಾಡುತ್ತದೆ. (2) “ಯೆಹೋವನನ್ನು ಪ್ರೀತಿಸುವವರು ಕೆಟ್ಟದ್ದನ್ನು ದ್ವೇಷಿಸುತ್ತಾರೆ.” (w-KA99 10/1 28-31) ದೇವರೊಂದಿಗೆ ಒಂದು ಸಂಬಂಧವನ್ನು ಇಟ್ಟುಕೊಳ್ಳುವುದು ಆತನು ಯಾವುದನ್ನು ದ್ವೇಷಿಸುತ್ತಾನೋ ಅದನ್ನು ನಾವೂ ದ್ವೇಷಿಸುವುದರ ಮೇಲೆ ಅವಲಂಬಿಸುತ್ತದೆ​—⁠ಕೇವಲ ಸ್ಪಷ್ಟವಾಗಿ ದುಷ್ಟವೆಂದು ಕಾಣುವಂಥವುಗಳನ್ನು ಮಾತ್ರವಲ್ಲದೆ, ಅಷ್ಟು ಸ್ಪಷ್ಟವಾಗಿ ಕಾಣಿಸದ ತಪ್ಪುಗಳನ್ನೂ ದ್ವೇಷಿಸಬೇಕಾಗಿದೆ. (3) “ಪ್ರೀತಿಯ ಉತ್ಕೃಷ್ಟ ಮಾರ್ಗವನ್ನು ಬೆನ್ನಟ್ಟಿರಿ.” (w-KA92 7/15 27-30) ಒಂದನೆಯ ಕೊರಿಂಥ 13:​4-8, ನಾವು ತಾಳ್ಮೆಯಿಂದ ಇತರರ ಅಪರಿಪೂರ್ಣತೆಗಳನ್ನು ಏಕೆ ಸಹಿಸಿಕೊಂಡು ಹೋಗುತ್ತೇವೆ, ಸ್ವಾರ್ಥ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಏಕೆ ತ್ಯಜಿಸುತ್ತೇವೆ, ಹಾನಿಕರವಾದ ಗಾಳಿಮಾತನ್ನು ಏಕೆ ಹಬ್ಬಿಸುವುದಿಲ್ಲ ಮತ್ತು ದೇವರ ಸಂಸ್ಥೆಗೆ ಏಕೆ ನಿಷ್ಠಾವಂತರಾಗಿ ಉಳಿಯುತ್ತೇವೆ ಎಂಬುದನ್ನು ತೋರಿಸುತ್ತದೆ. (4) “ಲೋಕದಲ್ಲಿರುವವುಗಳು​—⁠ಅವುಗಳನ್ನು ನಾವು ಹೇಗೆ ವೀಕ್ಷಿಸುತ್ತೇವೆ?” ನಾವು ಲೋಕದಲ್ಲಿರುವ ವಿಷಯಗಳನ್ನು ಪ್ರೀತಿಸಬಾರದು, ಶರೀರದಾಶೆಗಳಿಗೆ ಮಣಿಯಬಾರದು, ಕಣ್ಣಿನಾಶೆಗಳಿಂದ ಮೋಸಹೋಗಬಾರದು, ಅಥವಾ ಬದುಕುಬಾಳಿನ ಡಂಬವನ್ನು ತೋರಿಸಬಾರದು. (5) “ಲೋಕದ ಭಾಗವಾಗಿರದೇ ಇರುವುದು ನಮ್ಮನ್ನು ರಕ್ಷಿಸುತ್ತದೆ.” ಎರಡನೆಯ ಕೊರಿಂಥ 6:​14-18, ಕೆಲವು ನಂಬಿಕೆಗಳು, ಪದ್ಧತಿಗಳು, ಮತ್ತು ಆಚರಣೆಗಳು ಹೇಗೆ ನಮ್ಮನ್ನು ದೇವರ ಸಮ್ಮತವಲ್ಲದವರಾಗಿ ಮಾಡಸಾಧ್ಯವಿದೆ ಎಂಬುದನ್ನು ತೋರಿಸುತ್ತದೆ. ಪಿಶಾಚನಿಂದ ರಚಿಸಲ್ಪಟ್ಟಿರುವ ಕುಳಿಗಳನ್ನು ನಾವು ಗ್ರಹಿಸಬೇಕು ಮತ್ತು ಅವುಗಳನ್ನು ತ್ಯಜಿಸಬೇಕು. (6) “ದೇವರನ್ನು ಪ್ರೀತಿಸುವವರಿಗಾಗಿ ಮಾಡಲ್ಪಟ್ಟಿರುವ ದೈವಿಕ ವಾಗ್ದಾನಗಳು.” (w86 6/15 5-6) ಯೆಹೋವನ ಆಶೀರ್ವಾದವು ನಮ್ಮ ಜೀವನಗಳಿಗೆ ಹರ್ಷಾನಂದವನ್ನು ಕೂಡಿಸುತ್ತದೆ ಮತ್ತು ನಮ್ಮನ್ನು ಆತ್ಮಿಕವಾಗಿ ಸಮೃದ್ಧಗೊಳಿಸುತ್ತದೆ.​—⁠1 ತಿಮೊ. 6:​17-19.

ಗೀತೆ 3 (32) ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 1ರಿಂದ ಆರಂಭವಾಗುವ ವಾರ

ಗೀತೆ 7 (51)

10 ನಿ:  ಸ್ಥಳಿಕ ಪ್ರಕಟನೆಗಳು. ಸೆಪ್ಟೆಂಬರ್‌ ತಿಂಗಳ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ.

15 ನಿ:  ಶಾಲೆಯಲ್ಲಿ ನಾನು ಹೇಗೆ ಇನ್ನೂ ಉತ್ತಮವಾಗಿ ಓದಬಲ್ಲೆ? ಒಬ್ಬ ಹಿರಿಯನು ಮತ್ತು ಅವನ ಹೆಂಡತಿ ಅಥವಾ ಒಬ್ಬ ಶುಶ್ರೂಷಾ ಸೇವಕನು ಮತ್ತು ಅವನ ಹೆಂಡತಿ ಅವರ ಶಾಲಾ ಪ್ರಾಯದ ಮಗನೊಂದಿಗೆ ಮಾತಾಡುತ್ತಾರೆ. ಮಗನು ತನ್ನ ಶಾಲಾಕೆಲಸದಲ್ಲಿ ಹಿಂದುಳಿಯುತ್ತಿರುವ ಕಾರಣ ಅವರು ಚಿಂತಿತರಾಗಿದ್ದಾರೆ. ಯುವ ಜನರ ಪ್ರಶ್ನೆಗಳು ಪುಸ್ತಕದ ಅಧ್ಯಾಯ 18ರ ಬುದ್ಧಿವಾದವನ್ನು ಅವರು ಪುನರ್ವಿಮರ್ಶಿಸುತ್ತಾರೆ, ಮತ್ತು ಅಭಿವೃದ್ಧಿಹೊಂದಲು ಮಗನು ಏನು ಮಾಡಬೇಕು ಎಂಬುದನ್ನು ಅವರು ಚರ್ಚಿಸುತ್ತಾರೆ. ಪವಿತ್ರ ಸೇವೆಯನ್ನು ಬೆನ್ನಟ್ಟುವುದರಲ್ಲಿ ಒಬ್ಬನು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಉಪಯೋಗಿಸಲಿಕ್ಕಾಗಿ, ಒಳ್ಳೆಯ ಮೂಲಭೂತ ಶಿಕ್ಷಣವನ್ನು ಪಡೆದುಕೊಳ್ಳುವುದರ ಪ್ರಾಮುಖ್ಯತೆಯನ್ನು ಹೆತ್ತವರು ಒತ್ತಿಹೇಳುತ್ತಾರೆ.

20 ನಿ:  “ಅದು ಸಾರುವ ಕಾರ್ಯಕ್ಕೆ ಒಂದು ಅಡಚಣೆಯಾಗಿದೆಯೋ?”b ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡುವಂಥ ಆದ್ಯತೆಗಳನ್ನು ಸ್ಥಾಪಿಸುವ ಮೂಲಕ, ಐಹಿಕ ಕೆಲಸದಲ್ಲಿ ಸಮತೂಕದಿಂದಿರುವ ಅಗತ್ಯವನ್ನು ಒತ್ತಿಹೇಳಿ. ತಮ್ಮ ಆತ್ಮಿಕ ಅಗತ್ಯಗಳನ್ನು ತ್ಯಾಗಮಾಡದೇ, ತಮ್ಮ ಮನೆವಾರ್ತೆಯನ್ನು ಭೌತಿಕವಾಗಿ ಪೋಷಿಸುವ ಪಂಥಾಹ್ವಾನವನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ಹೇಳುವಂತೆ ಸಭೆಯಲ್ಲಿರುವ ಕೆಲವು ಕುಟುಂಬದ ತಲೆಗಳನ್ನು ಕೇಳಿ.

ಗೀತೆ 11 (85) ಮತ್ತು ಸಮಾಪ್ತಿಯ ಪ್ರಾರ್ಥನೆ.

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ