ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 10/02 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2002 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಅಕ್ಟೋಬರ್‌ 14ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 21ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 28ರಿಂದ ಆರಂಭವಾಗುವ ವಾರ
  • ನವೆಂಬರ್‌ 4ರಿಂದ ಆರಂಭವಾಗುವ ವಾರ
2002 ನಮ್ಮ ರಾಜ್ಯದ ಸೇವೆ
km 10/02 ಪು. 2

ಸೇವಾ ಕೂಟದ ಶೆಡ್ಯೂಲ್‌

ಅಕ್ಟೋಬರ್‌ 14ರಿಂದ ಆರಂಭವಾಗುವ ವಾರ

ಗೀತೆ 11 (85)

10 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಅಕ್ಟೋಬರ್‌ 28ರ ವಾರದ ಸೇವಾ ಕೂಟದಲ್ಲಿನ ಚರ್ಚೆಗಾಗಿ ಸಿದ್ಧತೆಯಲ್ಲಿ, ಎಲ್ಲರೂ ಅರಣ್ಯಕಾಂಡ 25ನೆಯ ಅಧ್ಯಾಯವನ್ನು ಮತ್ತು ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಪುಸ್ತಕದ ಸಂಪುಟ 2, 419ನೆಯ ಪುಟದ 3-5ನೆಯ ಪ್ಯಾರಗ್ರಾಫ್‌ಗಳಲ್ಲಿರುವ ವಿಷಯಗಳನ್ನು ಓದಿ, ನಂತರ ನಮ್ಮ ದಿನಕ್ಕಾಗಿ ಎಚ್ಚರಿಕೆಯ ಉದಾಹರಣೆಗಳು ವಿಡಿಯೋವನ್ನು ನೋಡುವಂತೆ ಉತ್ತೇಜಿಸಿರಿ. 8ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! ಪತ್ರಿಕೆಯನ್ನು (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಅಕ್ಟೋಬರ್‌ 15ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬೇಕೆಂಬುದರ ವಿಷಯದಲ್ಲಿ ಎರಡು ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿಯೂ, “ನನಗೆ ಈವಾಗಲೇ ನಿಮ್ಮ ಕೆಲಸದ ಒಳ್ಳೆಯ ಪರಿಚಯವಿದೆ” ಎಂಬ ಸಂಭಾಷಣಾ ತಡೆಗಟ್ಟನ್ನು ನಿರ್ವಹಿಸುವ ಭಿನ್ನ ವಿಧವನ್ನು ತೋರಿಸಿರಿ.​—⁠ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯ ಪುಟ 12ನ್ನು ನೋಡಿರಿ.

15 ನಿ:  ಒಂಟಿ ಹೆತ್ತವರು ಎದುರಿಸುವ ಪಂಥಾಹ್ವಾನಗಳು. ಒಂಟಿ ಹೆತ್ತವರು ತಮ್ಮ ಮಕ್ಕಳಿಗೆ ತರಬೇತಿಯನ್ನು ನೀಡುವ, ಶಿಸ್ತುಗೊಳಿಸುವ, ಹಾಗೂ ಆತ್ಮಿಕವಾಗಿ ಮಾರ್ಗದರ್ಶಿಸುವ ವಿಷಯದಲ್ಲಿ ಏಳುವ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಲಿಕ್ಕಾಗಿ, ಒಬ್ಬ ಹಿರಿಯನು ಒಬ್ಬರು ಅಥವಾ ಇಬ್ಬರು ಒಂಟಿ ಹೆತ್ತವರ (ಅಥವಾ ಯಾರ ಸಂಗಾತಿಗಳು ಸಾಕ್ಷಿಗಳಾಗಿಲ್ಲವೋ ಅಂಥವರ) ಇಂಟರ್‌ವ್ಯೂ ನಡೆಸುತ್ತಾನೆ. ಕುಟುಂಬದ ಜವಾಬ್ದಾರಿಗಳನ್ನು ಪೂರೈಸಲು ಮತ್ತು ಕೂಟಗಳಿಗೆ ಹಾಗೂ ಕ್ಷೇತ್ರ ಸೇವೆಗೆ ಕ್ರಮವಾಗಿ ಹಾಜರಾಗಲು ಅವರು ಹೇಗೆ ಶಕ್ತರಾಗಿದ್ದಾರೆ? ಕುಟುಂಬ ಸಂತೋಷ ಪುಸ್ತಕದ 104-10ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಕೆಲವು ಸಲಹೆಗಳನ್ನು ಎತ್ತಿತೋರಿಸಿರಿ. 113-15ನೇ ಪುಟಗಳಲ್ಲಿ ಸೂಚಿಸಲ್ಪಟ್ಟಿರುವಂತೆ, ಇತರರು ಸಹಾಯಮಾಡಸಾಧ್ಯವಿರುವ ಪ್ರಾಯೋಗಿಕ ವಿಧಗಳನ್ನು ಸಹ ಎತ್ತಿತೋರಿಸಿರಿ.

20 ನಿ:  “ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರು ವೈಯಕ್ತಿಕ ಆಸಕ್ತಿಯನ್ನು ತೋರಿಸುವ ವಿಧ.” ಇದು ಪ್ರಶ್ನೋತ್ತರ ಚರ್ಚೆಯಾಗಿದ್ದು, ಒಬ್ಬ ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರಿಂದ ನಿರ್ವಹಿಸಲ್ಪಡತಕ್ಕದ್ದು. ಪೀಠಿಕೆಯ ಹೇಳಿಕೆಗಳಲ್ಲಿ, ಪುಸ್ತಕ ಅಧ್ಯಯನ ಏರ್ಪಾಡು ಹೇಗೆ ಆರಂಭಗೊಂಡಿತು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರಿ. (jv 237 ಪ್ಯಾರ. 4) ಸಭಾ ಪುಸ್ತಕ ಅಧ್ಯಯನದ ಮೂಲಕ ತಮಗೆ ತೋರಿಸಲ್ಪಟ್ಟ ವೈಯಕ್ತಿಕ ಆಸಕ್ತಿಯಿಂದ ಅವರು ಹೇಗೆ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂಬುದರ ಕುರಿತು ಹೇಳಿಕೆ ನೀಡುವಂತೆ ಇಬ್ಬರು ಅಥವಾ ಮೂವರು ಪ್ರಚಾರಕರನ್ನು ಮುಂದಾಗಿಯೇ ಏರ್ಪಡಿಸಿರಿ.

ಗೀತೆ 23 (200) ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 21ರಿಂದ ಆರಂಭವಾಗುವ ವಾರ

ಗೀತೆ 4 (43)

10 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ.

35 ನಿ:  “ಬಹುಭಾಷೀಯ ಟೆರಿಟೊರಿಯಲ್ಲಿ ಶಿಷ್ಯರನ್ನು ಮಾಡುವುದು.” ಇದು ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆಯಾಗಿದ್ದು, ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡತಕ್ಕದ್ದು. 8ನೆಯ ಪ್ಯಾರಗ್ರಾಫನ್ನು ಚರ್ಚಿಸುತ್ತಿರುವಾಗ, ಇಬ್ಬರು ಪ್ರಚಾರಕರು ಒಂದು ಪ್ರಗತಿಪರ ಬೈಬಲ್‌ ಅಧ್ಯಯನವನ್ನು, ಆ ಬೈಬಲ್‌ ವಿದ್ಯಾರ್ಥಿಯ ಭಾಷೆಯನ್ನು ಉಪಯೋಗಿಸುತ್ತಿರುವಂಥ ಒಂದು ಸಭೆಯ ಪ್ರಚಾರಕನೊಬ್ಬನಿಗೆ ಕೊಡುವುದನ್ನು ಪ್ರತ್ಯಕ್ಷಾಭಿನಯಿಸುವಂತೆ ಏರ್ಪಡಿಸಿರಿ. ಸ್ಥಳಿಕ ಪರಿಸ್ಥಿತಿಗಳ ಮೇಲಾಧಾರಿಸಿ, ಸಭೆಯಲ್ಲಿ ಮತ್ತು ಟೆರಿಟೊರಿಯಲ್ಲಿ ಬೇರೆ ಭಾಷೆಗಳನ್ನು ಮಾತಾಡುವವರಿಗೆ ನೆರವಾಗಲಿಕ್ಕಾಗಿ ಏನು ಮಾಡಲ್ಪಡುತ್ತಿದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

ಗೀತೆ 20 (93) ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 28ರಿಂದ ಆರಂಭವಾಗುವ ವಾರ

ಗೀತೆ 16 (143)

8 ನಿ: ಸ್ಥಳಿಕ ಪ್ರಕಟನೆಗಳು. ಮುಂದಿನ ವಾರದ ಸೇವಾ ಕೂಟದಲ್ಲಿನ ಚರ್ಚೆಗಾಗಿ ಸಿದ್ಧತೆಯಲ್ಲಿ, ಕಳೆದ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮದಲ್ಲಿ ಬರೆದುಕೊಂಡ ತಮ್ಮ ಟಿಪ್ಪಣಿಗಳನ್ನು ಪುನರ್ವಿಮರ್ಶಿಸುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ. ಅಕ್ಟೋಬರ್‌ ತಿಂಗಳ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ನೆನಪು ಹುಟ್ಟಿಸಿರಿ. 8ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! ಪತ್ರಿಕೆಯನ್ನು (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೂರನೆಯದ್ದು) ಹೇಗೆ ನೀಡುವುದು ಎಂಬುದನ್ನು ಒಬ್ಬ ಸಹೋದರನು ತೋರಿಸಲಿ ಮತ್ತು ನವೆಂಬರ್‌ 1ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡುವುದೆಂಬುದನ್ನು ಒಬ್ಬ ಸಹೋದರಿಯು ಪ್ರತ್ಯಕ್ಷಾಭಿನಯಿಸಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದ ಬಳಿಕ, ಆ ನಿರೂಪಣೆಯ ಪರಿಣಾಮಕಾರಿ ಅಂಶವನ್ನು ಸಂಕ್ಷಿಪ್ತವಾಗಿ ಎತ್ತಿಹೇಳಿರಿ.

12 ನಿ:  ಶಾಲೆಯಲ್ಲಿ ಸತ್ಯಕ್ಕಾಗಿ ನಿಲುವನ್ನು ತೆಗೆದುಕೊಳ್ಳುವುದು. ಅವಿಶ್ವಾಸಿ ಸಹಪಾಠಿಗಳೊಂದಿಗಿನ ಸಹವಾಸವನ್ನು ಮಿತಗೊಳಿಸುವ ಅಗತ್ಯವಿದೆ ಎಂದು ಮನಗಾಣುವಂಥ ಒಬ್ಬಿಬ್ಬರು ಎಳೆಯ ಪ್ರಚಾರಕರ ಇಂಟರ್‌ವ್ಯೂ ನಡೆಸಿರಿ. ರಾಷ್ಟ್ರೀಯ ಸಮಾರಂಭಗಳು, ಶಾಲಾ ಡ್ಯಾನ್ಸ್‌ಗಳು ಮತ್ತು ರ್ಯಾಲಿಗಳು, ಹಾಗೂ ಅಶುದ್ಧ ನಡವಳಿಕೆಯು ತಂದೊಡ್ಡುವಂಥ ಪಂಥಾಹ್ವಾನಗಳು ಹಾಗೂ ಆಕರ್ಷಣೆಗಳನ್ನು ಯಾವ ವಿಧದಲ್ಲಿ ನಿಭಾಯಿಸಬೇಕೆಂಬುದನ್ನು ಅವರು ಹೇಗೆ ಯೋಜಿಸುತ್ತಾರೆ? ಅವರು ಶಾಲೆಯಲ್ಲಿ ಸಾಕ್ಷಿಯನ್ನು ನೀಡಲು ಯೋಜಿಸುವ ವಿಧಗಳ ಕುರಿತಾದ ಹೇಳಿಕೆಗಳನ್ನೂ ಒಳಗೂಡಿಸಿರಿ.

25 ನಿ:  “ನಮ್ಮ ದಿನಕ್ಕಾಗಿ ಎಚ್ಚರಿಕೆಯ ಉದಾಹರಣೆಗಳು​—⁠ಅವುಗಳಿಗೆ ಲಕ್ಷ್ಯ ನೀಡುವಂತೆ ಹಾರ್ದಿಕ ವಿನಂತಿ.” ಆರಂಭದ ಹೇಳಿಕೆಗಳನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಸಮಯಕ್ಕೆ ಮಿತಗೊಳಿಸಿರಿ, ಮತ್ತು ನಂತರ ನೇರವಾಗಿ ಲೇಖನದಲ್ಲಿ ಕೊಡಲ್ಪಟ್ಟಿರುವ ಪ್ರತಿಯೊಂದು ಪ್ರಶ್ನೆಯನ್ನು ಸಭಿಕರೊಂದಿಗೆ ಚರ್ಚಿಸಲು ಆರಂಭಿಸಿರಿ. ಡಿಸೆಂಬರ್‌ ತಿಂಗಳಿನಲ್ಲಿ ನಾವು, ರಕ್ತರಹಿತ ಚಿಕಿತ್ಸೆ​—⁠ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ (ಇಂಗ್ಲಿಷ್‌) ಎಂಬ ವಿಡಿಯೋವನ್ನು ಪುನರ್ವಿಮರ್ಶಿಸಲಿರುವೆವು.

ಗೀತೆ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 4ರಿಂದ ಆರಂಭವಾಗುವ ವಾರ

ಗೀತೆ 9 (37)

10 ನಿ:  ಸ್ಥಳಿಕ ಪ್ರಕಟನೆಗಳು. ಅಪೇಕ್ಷಿಸು ಬ್ರೋಷರನ್ನು ಹಾಗೂ ಜ್ಞಾನ ಪುಸ್ತಕವನ್ನು ನೀಡಲಿಕ್ಕಾಗಿ, ಜನವರಿ 2002ರ ನಮ್ಮ ರಾಜ್ಯದ ಸೇವೆಯ ಪುರವಣಿಯಿಂದ ಕೆಲವೊಂದು ಸಲಹೆಗಳನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ. ಆ ನಿರೂಪಣೆಗಳಲ್ಲಿ ಒಂದನ್ನು ಪ್ರತ್ಯಕ್ಷಾಭಿನಯಿಸಿರಿ.

13 ನಿ:  ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳುವವರಲ್ಲ. (ರೋಮಾ. 1:15) ಒಬ್ಬ ಯುವ ವ್ಯಕ್ತಿಯು ಒಂದು ಸಮಸ್ಯೆಯೊಂದಿಗೆ ತಂದೆಯ ಬಳಿ ಬರುತ್ತಾನೆ. ತನ್ನ ಸಮವಯಸ್ಕರಿಂದ ಅಪಹಾಸ್ಯಕ್ಕೆ ಗುರಿಯಾಗುವೆ ಎಂಬ ಭಯದಿಂದ ಆ ಯುವ ವ್ಯಕ್ತಿಯು ತಾನೊಬ್ಬ ಯೆಹೋವನ ಸಾಕ್ಷಿ ಎಂದು ತನ್ನನ್ನು ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. ಈ ವಿಷಯದಲ್ಲಿ ತನ್ನ ಮನಸ್ಸಿನಲ್ಲಿದ್ದ ವಿಚಾರವನ್ನು ನೇರವಾಗಿ ಹೇಳಿದ್ದಕ್ಕಾಗಿ ತಂದೆಯು ಆ ಯುವ ವ್ಯಕ್ತಿಗೆ ಉಪಕಾರ ಹೇಳುತ್ತಾನೆ. ಸಮಾನಸ್ಥರ ಒತ್ತಡದ ಕಾರಣದಿಂದ ಪೇತ್ರನು ಸಹ ಒಂದು ಸಲ ಹೇಗೆ ಪ್ರತಿಕ್ರಿಯಿಸಿದನು ಎಂಬುದನ್ನು ತಂದೆಯು ಅವನಿಗೆ ತಿಳಿಸುತ್ತಾನೆ. (ಮತ್ತಾ. 26:​69-74) ತಂದೆಯು ಈ ಮುಂದಿನ ಬುದ್ಧಿವಾದವನ್ನು ನೀಡುತ್ತಾನೆ: ಕ್ರೈಸ್ತರೋಪಾದಿ ನಾವು ಯಾರಾಗಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಲು ನಾವೆಂದಿಗೂ ನಾಚಿಕೆಪಡಬಾರದು. (ಮಾರ್ಕ 8:38) ಶಾಲೆಯಲ್ಲಿ ನಿಮ್ಮನ್ನು ಒಬ್ಬ ಸಾಕ್ಷಿಯಾಗಿ ಗುರುತಿಸಿಕೊಳ್ಳುವುದು ಪ್ರಯೋಜನಕರವಾದದ್ದಾಗಿದೆ. ಇದರ ಬಗ್ಗೆ ಶಿಕ್ಷಕರ ಬಳಿ ಮಾತಾಡುವಲ್ಲಿ, ಅವರಲ್ಲಿ ಅನೇಕರು ನಿಮ್ಮ ನಂಬಿಕೆಗಳನ್ನು ಗೌರವಿಸುವರು ಮತ್ತು ನಿಮಗೆ ಆಕ್ಷೇಪಣೆಯಿರುವಂಥ ಚಟುವಟಿಕೆಗಳಲ್ಲಿ ನಿಮ್ಮನ್ನು ಒಳಗೂಡಿಸಲು ಪ್ರಯತ್ನಿಸದಿರುವರು. ಆಗ, ನೀತಿನಿಷ್ಠೆಗಳಿಲ್ಲದ ಯುವ ಜನರು ನಿಮ್ಮನ್ನು ದುರ್ನಡತೆಯಲ್ಲಿ ಒಳಗೂಡುವಂತೆ ಒತ್ತಾಯಿಸಲು ಪ್ರಯತ್ನಿಸದಿರುವ ಸಂಭವನೀಯತೆಯಿರುತ್ತದೆ. ನೀವು ಡೇಟಿಂಗ್‌ನಲ್ಲಿ ಒಳಗೂಡದಿರುವ, ಪಠ್ಯೇತರ ಕ್ರೀಡೆಗಳಲ್ಲಿ ಭಾಗವಹಿಸದಿರುವ, ಅಥವಾ ಶಾಲಾನಂತರದ ಚಟುವಟಿಕೆಗಳಲ್ಲಿ ಸೇರದಿರುವ ಆಯ್ಕೆಯನ್ನು ಏಕೆ ಮಾಡುತ್ತೀರಿ ಎಂಬುದನ್ನು ತರಗತಿಯ ಇತರ ವಿದ್ಯಾರ್ಥಿಗಳು ಸುಲಭವಾಗಿ ಅರ್ಥಮಾಡಿಕೊಳ್ಳುವರು. ಸಮಯವು ಅನುಮತಿಸಿದಂತೆ, ಯುವ ಜನರ ಪ್ರಶ್ನೆಗಳು ಪುಸ್ತಕದ 315-18ನೆಯ ಪುಟಗಳಲ್ಲಿರುವ “ದೇವರೊಂದಿಗಿನ ನಿಮ್ಮ ಸ್ನೇಹವನ್ನು ಬಹಿರಂಗವಾಗಿ ಪ್ರಕಟಿಸುವುದು” ಎಂಬ ಉಪಶೀರ್ಷಿಕೆಯಿಂದ ತೆಗೆದ ಅಂಶಗಳನ್ನು ತಂದೆ ಮತ್ತು ಆ ಯೌವನಸ್ಥನು ಚರ್ಚಿಸುತ್ತಾರೆ. ಈ ಒಳ್ಳೇ ಬುದ್ಧಿವಾದಕ್ಕಾಗಿ ಆ ಹದಿವಯಸ್ಕನು ಗಣ್ಯತೆಯನ್ನು ವ್ಯಕ್ತಪಡಿಸುತ್ತಾನೆ.

22 ನಿ:  ದೇವರಿಗೆ ಅಧೀನರಾಗಿರಿ​—⁠ಸೈತಾನನನ್ನು ವಿರೋಧಿಸಿರಿ. (ಯಾಕೋ. 4:⁠7, NW) ಇಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ ಒಬ್ಬ ಹಿರಿಯನು, ಕಳೆದ ಸೇವಾ ವರ್ಷದಲ್ಲಿ ನಡೆದ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮದ ಕುರಿತು ಸಭಿಕರೊಂದಿಗೆ ಉತ್ಸಾಹಭರಿತ ಚರ್ಚೆಯನ್ನು ನಡೆಸುತ್ತಾನೆ. ತಾವು ಕಲಿತುಕೊಂಡ ವಿಷಯಗಳನ್ನು ಸಭಿಕರು ಹೇಗೆ ಅನ್ವಯಿಸಿಕೊಳ್ಳಲು ಶಕ್ತರಾಗಿದ್ದಾರೆ ಎಂಬುದರ ಕುರಿತು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ. (ಭಾಗಗಳನ್ನು ಮುಂಚಿತವಾಗಿಯೇ ನೇಮಿಸಸಾಧ್ಯವಿದೆ.) ಕಾರ್ಯಕ್ರಮದ ಈ ಮುಂದಿನ ಭಾಗಗಳನ್ನು ಎತ್ತಿತೋರಿಸಿರಿ: (1) “ದಾಸತ್ವದಲ್ಲಿರುವ ಲೋಕವೊಂದರಲ್ಲಿ ದೇವರಿಗೆ ಅಧೀನತೆಯನ್ನು ತೋರಿಸುವುದು.” ಲೌಕಿಕ ಪಾಶಗಳಿಂದ ದೂರವಿರಲು ನಾವೇಕೆ ಎಚ್ಚರವಾಗಿರಬೇಕು? (2) “ಕುಟುಂಬದ ಸದಸ್ಯರೋಪಾದಿ ದೈವಿಕ ಅಧೀನತೆಯನ್ನು ತೋರಿಸುವುದು.” ಯೆಹೋವನ ಸಂಸ್ಥೆಯೊಳಗೇ ಕುಟುಂಬ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸುವ ತುರ್ತಿನ ಆವಶ್ಯಕತೆಯಿದೆ ಏಕೆ? ನಾವಿದನ್ನು ಹೇಗೆ ಮಾಡಸಾಧ್ಯವಿದೆ? (3) “ಯೆಹೋವನ ಪಕ್ಷದಲ್ಲಿ ದೃಢವಾಗಿ ನಿಲ್ಲುವಂತೆ ಹೊಸ ಶಿಷ್ಯರಿಗೆ ಸಹಾಯ ಮಾಡಿರಿ.” ಹೊಸಬರು ತಮ್ಮ ನಂಬಿಕೆಯನ್ನು ಪರೀಕ್ಷಿಸುವಂಥ ವಿಘ್ನಗಳನ್ನು ಜಯಿಸುವಂತೆ ನಾವು ಅವರಿಗೆ ಹೇಗೆ ಸಹಾಯಮಾಡಸಾಧ್ಯವಿದೆ? (4) “ಪಿಶಾಚನನ್ನು ವಿರೋಧಿಸುವುದರ ಅರ್ಥ.” ಪಿಶಾಚನ ವಿರುದ್ಧ ಯಶಸ್ವಿಕರವಾಗಿ ನಿಲ್ಲಲು ಇರುವ ಕೀಲಿ ಕೈ ಯಾವುದಾಗಿದೆ? ಎಫೆಸ 6:​11-18ರಲ್ಲಿ ವರ್ಣಿಸಲ್ಪಟ್ಟಿರುವ ಆತ್ಮಿಕ ಸರ್ವಾಯುಧವು ನಮ್ಮನ್ನು ಹೇಗೆ ಸಂರಕ್ಷಿಸಬಲ್ಲದು? (w-KA92 8/15 21-3) (5) “ಕೆಡುಕನನ್ನು ಯಶಸ್ವಿಯಾಗಿ ಪ್ರತಿರೋಧಿಸುವ ಯುವ ಜನರು” ಮತ್ತು “ದೈವಿಕ ಅಧೀನತೆಯಿಂದ ಪ್ರಯೋಜನ ಪಡೆಯುವ ಯುವ ಜನರು.” ಯುವ ಜನರು ತಮ್ಮನ್ನು ಯಾವುದರಿಂದ ಕಾಪಾಡಿಕೊಳ್ಳಬೇಕೋ ಸೈತಾನನ ಆ ತಂತ್ರೋಪಾಯಗಳಲ್ಲಿ ಕೆಲವು ಯಾವುವು? ಯೆಹೋವನಿಗೆ ಅಧೀನರಾಗಿ ಮುಂದುವರಿಯುವ ಮೂಲಕ ಯುವ ಜನರು ಹೇಗೆ ಆಶೀರ್ವದಿಸಲ್ಪಟ್ಟಿದ್ದಾರೆ? (w-KA91 9/1 30-31, ಪ್ಯಾರ. 15-17) (6) “ದೈವಿಕ ಅಧೀನತೆಯಿಂದ ಪ್ರಯೋಜನ ಪಡೆಯುವುದು.” ಕ್ರೈಸ್ತರು ಯಾವ ರೀತಿಯಲ್ಲಿ ಸರಕಾರಿ ಅಧಿಕಾರಿಗಳಿಗೆ, ಐಹಿಕ ಯಜಮಾನರಿಗೆ, ಕುಟುಂಬ ವೃತ್ತದಲ್ಲಿ, ಮತ್ತು ಕ್ರೈಸ್ತ ಸಭೆಯಲ್ಲಿ ಅಧೀನತೆಯನ್ನು ತೋರಿಸುತ್ತಾರೆ ಎಂಬುದನ್ನು ವಿವರಿಸಿರಿ. ಹೀಗೆ ಮಾಡಲು ಯಾವ ಗುಣಗಳು ನಮಗೆ ಸಹಾಯಮಾಡುವವು?

ಗೀತೆ 24 (185) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ