ಸೇವಾ ಕೂಟದ ಶೆಡ್ಯೂಲ್
ನವೆಂಬರ್ 10ರಿಂದ ಆರಂಭವಾಗುವ ವಾರ
ಗೀತೆ 26 (212)
10 ನಿ: ಸ್ಥಳಿಕ ಪ್ರಕಟನೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 4ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಅಕ್ಟೋಬರ್-ಡಿಸೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು), ಮತ್ತು ನವೆಂಬರ್ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದರ ಕುರಿತು ಎರಡು ಸ್ವಾಭಾವಿಕವಾದ ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿಯೂ ಒಂದೇ ಪತ್ರಿಕೆಯ ಕುರಿತು ಮಾತಾಡಲ್ಪಡುತ್ತದಾದರೂ ಜೋಡಿಯಾಗಿ ಎರಡು ಪತ್ರಿಕೆಗಳು ನೀಡಲ್ಪಡಬೇಕು. ಒಂದು ಪ್ರತ್ಯಕ್ಷಾಭಿನಯದಲ್ಲಿ ನಮ್ಮ ಲೋಕವ್ಯಾಪಕ ಕೆಲಸವು ಹೇಗೆ ಆರ್ಥಿಕವಾಗಿ ಬೆಂಬಲಿಸಲ್ಪಡುತ್ತದೆ ಎಂಬುದನ್ನು ತಿಳಿಸುವ ಒಂದು ವಿವರಣೆಯು ಇರಲಿ.—ಕಾವಲಿನಬುರುಜು ಪತ್ರಿಕೆಯ ಪು. 2, ಅಥವಾ ಎಚ್ಚರ! ಪತ್ರಿಕೆಯ ಪು. 5ನ್ನು ನೋಡಿರಿ.
15 ನಿ: “ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ”a ಆತ್ಮಿಕ ಬೆನ್ನಟ್ಟುವಿಕೆಗಳಲ್ಲಿ ಪ್ರಯೋಜನಾರ್ಥವಾಗಿ ವ್ಯಯಿಸಬಲ್ಲ ಸಮಯವನ್ನು ಸದ್ಯದ ವಿಷಯಗಳ ವ್ಯವಸ್ಥೆಯ ಚಿಂತೆಗಳು ಮತ್ತು ಅಪಕರ್ಷಣೆಗಳು ಕಬಳಿಸದಂತೆ ನೋಡಿಕೊಳ್ಳಲು ಅವರಿಗೆ ಯಾವುದು ಸಹಾಯಮಾಡುತ್ತದೆ ಎಂಬುದರ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.
20 ನಿ: ನೀವು ನಿಮ್ಮ ಒಡನಾಡಿಗಳನ್ನು ಹೇಗೆ ಆರಿಸಿಕೊಳ್ಳುತ್ತೀರಿ? ದೇವರನ್ನು ಆರಾಧಿಸಿರಿ ಪುಸ್ತಕದ 47-9ನೆಯ ಪುಟಗಳ ಮೇಲಾಧಾರಿತವಾದ ಸಭಿಕರೊಂದಿಗಿನ ಚರ್ಚೆ. ಪ್ಯಾರಗ್ರಾಫ್ 13ರಲ್ಲಿರುವ ಪ್ರಶ್ನೆಗಳನ್ನೂ ಉದ್ಧೃತ ಶಾಸ್ತ್ರವಚನಗಳನ್ನೂ ಉಪಯೋಗಿಸುತ್ತಾ, ನಮ್ಮ ಒಡನಾಡಿಗಳನ್ನು ಆರಿಸಿಕೊಳ್ಳುವುದರಲ್ಲಿ ನಮ್ಮನ್ನು ಮಾರ್ಗದರ್ಶಿಸಬೇಕಾದ ಬೈಬಲ್ ಮೂಲತತ್ತ್ವಗಳ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.
ಗೀತೆ 15 (127) ಮತ್ತು ಸಮಾಪ್ತಿಯ ಪ್ರಾರ್ಥನೆ.
ನವೆಂಬರ್ 17ರಿಂದ ಆರಂಭವಾಗುವ ವಾರ
ಗೀತೆ 6 (45)
12 ನಿ: ಸ್ಥಳಿಕ ಪ್ರಕಟನೆಗಳು. ಸದ್ಯದ ಸಾಹಿತ್ಯ ನೀಡುವಿಕೆಯನ್ನು ಉಪಯೋಗಿಸುತ್ತಾ, ಆಸಕ್ತಿಕರವಾದ ಕ್ಷೇತ್ರ ಸೇವಾ ಅನುಭವಗಳನ್ನು ಪಡೆದುಕೊಂಡ ಇಬ್ಬರು ಅಥವಾ ಮೂವರು ಪ್ರಚಾರಕರ ಇಂಟರ್‌ವ್ಯೂ ಮಾಡಿರಿ. ಕೆಲವರಿಗೆ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಸಾಧ್ಯವಾಗಿದ್ದಿರಬಹುದು.
15 ನಿ: ಕೊಡುವ ಮನೋಭಾವವನ್ನು ಬೆಳೆಸಿಕೊಳ್ಳಿರಿ. 2003, ನವೆಂಬರ್ 1ರ ಕಾವಲಿನಬುರುಜು ಪತ್ರಿಕೆಯ 27-30ನೆಯ ಪುಟಗಳ ಮೇಲಾಧಾರಿತವಾದ ಹಿರಿಯನಿಂದ ಭಾಷಣ.
18 ನಿ: “ಪ್ರಶಂಸೆಯು ಚೈತನ್ಯಗೊಳಿಸುತ್ತದೆ.”b ಕುಟುಂಬ ಸಂತೋಷ ಪುಸ್ತಕದ 49-50ನೇ ಪುಟಗಳಲ್ಲಿರುವ 21ನೆಯ ಪ್ಯಾರಗ್ರಾಫ್‌ನ ಕುರಿತು ಹೇಳಿಕೆಗಳನ್ನು ಸೇರಿಸಿಕೊಳ್ಳಿ. ಇತರರ ಪ್ರಶಂಸೆಯ ಮಾತುಗಳಿಂದ ಪ್ರೋತ್ಸಾಹನೆಯನ್ನು ಪಡೆದುಕೊಂಡ ವ್ಯಕ್ತಿಗಳಿಂದ ಚುಟುಕಾದ ಹೇಳಿಕೆಗಳನ್ನು ಆಮಂತ್ರಿಸಿರಿ.
ಗೀತೆ 11 (85) ಮತ್ತು ಸಮಾಪ್ತಿಯ ಪ್ರಾರ್ಥನೆ.
ನವೆಂಬರ್ 24ರಿಂದ ಆರಂಭವಾಗುವ ವಾರ
ಗೀತೆ 23 (200)
12 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ. ಪುಟ 4ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಅಕ್ಟೋಬರ್-ಡಿಸೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು), ಮತ್ತು ಡಿಸೆಂಬರ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದರ ಕುರಿತು ಎರಡು ಪ್ರತ್ಯಕ್ಷಾಭಿನಯಗಳಿರಲಿ. ಪುಟ 4ರಲ್ಲಿ ಉದ್ಧರಿಸಲ್ಪಟ್ಟಿರುವ ಶಾಸ್ತ್ರವಚನಕ್ಕೆ ಬದಲಾಗಿ ಬೇರೆ ವಚನವನ್ನೂ ಉಪಯೋಗಿಸಬಹುದು. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿಯೂ ಒಂದೇ ಪತ್ರಿಕೆಯ ಕುರಿತು ಮಾತಾಡಲ್ಪಡುತ್ತದಾದರೂ ಜೋಡಿಯಾಗಿ ಎರಡು ಪತ್ರಿಕೆಗಳು ನೀಡಲ್ಪಡಬೇಕು. ಅದರಲ್ಲಿ ಒಂದು ನೀಡುವಿಕೆಯಲ್ಲಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುತ್ತಿರುವಾಗ ಅಥವಾ ಬೇರೊಂದು ಸೂಕ್ತವಾದ ಸ್ಥಳಿಕ ಸನ್ನಿವೇಶದಲ್ಲಿ ಅನೌಪಚಾರಿಕವಾಗಿ ಪತ್ರಿಕೆಗಳನ್ನು ನೀಡುತ್ತಿರುವುದಾಗಿ ಪ್ರತ್ಯಕ್ಷಾಭಿನಯಿಸಿರಿ.
10 ನಿ: ಪ್ರಶ್ನಾ ಚೌಕ. ಹಿರಿಯನಿಂದ ಭಾಷಣ.
23 ನಿ: “ಯೆಹೋವನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುವುದು.”c ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಶಾಸ್ತ್ರವಚನಗಳು ಹೇಗೆ ಅನ್ವಯಿಸುತ್ತವೆ ಎಂಬುದರ ಕುರಿತು ಸಭಿಕರಿಂದ ಹೇಳಿಕೆಗಳನ್ನು ಬರಮಾಡಿರಿ. ತಮ್ಮ ವೈಯಕ್ತಿಕ ಬೈಬಲ್ ಅಧ್ಯಯನದ ಗುಣಮಟ್ಟವನ್ನು ಉತ್ತಮಗೊಳಿಸಲು ಅವರಿಗೆ ಯಾವುದು ಸಹಾಯಮಾಡಿತು ಎಂಬುದರ ಕುರಿತು ಹೇಳಿಕೆ ನೀಡುವಂತೆ ಒಬ್ಬರು ಅಥವಾ ಇಬ್ಬರನ್ನು ಮುಂಚಿತವಾಗಿ ಏರ್ಪಾಡು ಮಾಡಿರಿ.
ಗೀತೆ 1 (13) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 1ರಿಂದ ಆರಂಭವಾಗುವ ವಾರ
ಗೀತೆ 21 (191)
10 ನಿ: ಸ್ಥಳಿಕ ಪ್ರಕಟನೆಗಳು. ನವೆಂಬರ್ ತಿಂಗಳಿಗಾಗಿರುವ ಕ್ಷೇತ್ರ ಸೇವಾ ವರದಿಗಳನ್ನು ಕೊಡುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. ಡಿಸೆಂಬರ್ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ. ಸೂಚಿಸಲ್ಪಟ್ಟ ಒಂದು ಅಥವಾ ಎರಡು ನಿರೂಪಣೆಗಳನ್ನು ಪುನರ್ವಿಮರ್ಶಿಸಿರಿ. ಹೆಚ್ಚಿನ ನಿರೂಪಣೆಗಳನ್ನು ಕಂಡುಕೊಳ್ಳಲಿಕ್ಕಾಗಿ ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ ಅನ್ನು ಪ್ರಚಾರಕರು ಹೇಗೆ ಉಪಯೋಗಿಸಬಹುದು ಎಂಬುದನ್ನು ವಿವರಿಸಿರಿ.—ಸೆಪ್ಟೆಂಬರ್ 2001ರ ನಮ್ಮ ರಾಜ್ಯದ ಸೇವೆಯ 2ನೇ ಪುಟವನ್ನು ನೋಡಿರಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: ಇತರರಿಗೆ ಕಲಿಸಲು ಸಾಕಷ್ಟು ಅರ್ಹರಾಗಿರುವುದು. 2000, ಜೂನ್ 1ರ ಕಾವಲಿನಬುರುಜು ಪತ್ರಿಕೆಯ 16-17ನೆಯ ಪುಟಗಳಲ್ಲಿರುವ 9-13 ಪ್ಯಾರಗ್ರಾಫ್‌ಗಳ ಮೇಲಾಧಾರಿತವಾದ ಸಭಿಕರೊಂದಿಗಿನ ಚರ್ಚೆ. ನಮ್ಮ ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಿ ಬೋಧಿಸಲು ಶಕ್ತರಾಗಿರುವುದು ಒಂದು ಪ್ರಾಥಮಿಕ ಗುರಿಯಾಗಿದೆ. ಕುರಿಸದೃಶ ವ್ಯಕ್ತಿಗಳಿಗೆ ನಾವು ನೀಡುವ ನೆರವಿನ ಯಶಸ್ಸು, ನಾವು ರಾಜ್ಯ ಸಂದೇಶವನ್ನು ಬೋಧಪ್ರದ ಮತ್ತು ಪ್ರೇರಣಾತ್ಮಕ ರೀತಿಯಲ್ಲಿ ನೀಡುವ ಸಾಮರ್ಥ್ಯದ ಮೇಲೆ ಆತುಕೊಂಡಿದೆ. ಈ ಮುಂದಿನ ಪ್ರಶ್ನೆಗಳನ್ನು ಚರ್ಚಿಸಿರಿ: (1) ಸಾರುವುದು ಮತ್ತು ಬೋಧಿಸುವುದರ ಮಧ್ಯೆ ವ್ಯತ್ಯಾಸವೇನು? (it-2 ಪು. 672 ಪ್ಯಾರ. 2) (2) ಒಂದು ಬೈಬಲ್ ಅಧ್ಯಯನವನ್ನು ನಡೆಸುವುದರ ವಿಷಯದಲ್ಲಿ ಕೆಲವರು ಏಕೆ ಸ್ವಲ್ಪ ಹಿಂಜರಿಕೆಯನ್ನು ತೋರಿಸುತ್ತಾರೆ? (3) ನಮ್ಮ ಬೋಧಿಸುವ ಸಾಮರ್ಥ್ಯವನ್ನು ನಾವು ಹೇಗೆ ಉತ್ತಮಗೊಳಿಸಬಲ್ಲೆವು? (4) ತಾನು ಏನು ಕಲಿಯುತ್ತಿದ್ದಾನೋ ಅದನ್ನು ನಮ್ಮ ವಿದ್ಯಾರ್ಥಿಯು ಅರ್ಥಮಾಡಿಕೊಳ್ಳುತ್ತಾನೆ ಎಂಬುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು? (5) ವಿದ್ಯಾರ್ಥಿಯು ಯಾವ ಗುರಿಯನ್ನು ಮುಟ್ಟುವಂತೆ ನಾವು ಅವನಿಗೆ ಸಹಾಯಮಾಡಬೇಕು?
ಗೀತೆ 22 (130) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.