ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2003ರ ಡಿಸೆಂಬರ್ 29ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2003ರ ನವೆಂಬರ್ 3ರಿಂದ ಡಿಸೆಂಬರ್ 29ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಕ್ಷೇತ್ರ ಶುಶ್ರೂಷೆಯಲ್ಲಿ ಬೈಬಲನ್ನು ಉಪಯೋಗಿಸುವುದು ಏಕೆ ಬಹಳ ಪ್ರಾಮುಖ್ಯವಾಗಿದೆ? [be-KA ಪು. 145 ಪ್ಯಾರ. 2, ಚೌಕ]
2. ಒಂದು ಶಾಸ್ತ್ರವಚನವು ಪರಿಚಯಿಸಲ್ಪಡುವ ರೀತಿಯ ಮೇಲೆ ಪೂರ್ವಾಪರವು ಹೇಗೆ ಪರಿಣಾಮ ಬೀರುತ್ತದೆ? [be-KA ಪು. 149]
3. ಒಂದು ಬೈಬಲ್ ವಚನವನ್ನು ಓದುತ್ತಿರುವಾಗ ಸರಿಯಾದ ಪದಗಳಿಗೆ ಒತ್ತುನೀಡಿ ಓದುವುದು ಪ್ರಾಮುಖ್ಯವೇಕೆ, ಮತ್ತು ಅದನ್ನು ಸಾಧಿಸುವುದು ಹೇಗೆ? [be-KA ಪು. 151 ಪ್ಯಾರ. 2, ಚೌಕ]
4. ಇತರರಿಗೆ ಕಲಿಸುವಾಗ, “ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸು” ಎಂಬ ಪೌಲನ ಬುದ್ಧಿವಾದವನ್ನು ನಾವು ಹೇಗೆ ಅನ್ವಯಿಸುತ್ತೇವೆ, ಮತ್ತು ಇದು ಪ್ರಾಮುಖ್ಯವೇಕೆ? (2 ತಿಮೊ. 2:15) [be-KA ಪು. 153 ಪ್ಯಾರ. 2, ಚೌಕ]
5. ಪೌಲನು ಹೇಗೆ ‘ಶಾಸ್ತ್ರಾಧಾರದಿಂದ ತರ್ಕಿಸಿದನು’? (ಅ. ಕೃ. 17:2, 3, NW) [be-KA ಪು. 155 ಪ್ಯಾರ. 6-ಪು. 156 ಪ್ಯಾರ. 1]
ನೇಮಕ ನಂಬರ್ 1
6. ನಾವು ಒಂದು ಭಾಷಣವನ್ನು ತಯಾರಿಸಲಿಕ್ಕಾಗಿ ನಮ್ಮ ಅತಿಮುಖ್ಯ ಸಂಶೋಧನಾ ಸಾಧನವಾದ ಬೈಬಲನ್ನು ಉಪಯೋಗಿಸುವಾಗ, (1) ವಚನಗಳ ಪೂರ್ವಾಪರವನ್ನು ಪರೀಕ್ಷಿಸುವುದು, (2) ಅಡ್ಡ ಉಲ್ಲೇಖಗಳನ್ನು ಪರೀಕ್ಷಿಸಿ ನೋಡುವುದು, ಮತ್ತು (3) ಬೈಬಲ್ ಕನ್ಕಾರ್ಡೆನ್ಸ್ನ ಸಹಾಯದೊಂದಿಗೆ ಹುಡುಕುವುದು ಏಕೆ ಪ್ರಯೋಜನಕಾರಿಯಾಗಿರುವುದು? [be-KA ಪು. 34 ಪ್ಯಾರ. 3-ಪು. 35 ಪ್ಯಾರ. 2]
7. ನಿಜ ನಿಷ್ಠೆಯು ಹೇಗೆ ತೋರಿಸಲ್ಪಡುತ್ತದೆ ಮತ್ತು ಯಾರ ಕಡೆಗೆ? [w-KA01 10/1 ಪು. 22-3]
8. ಯೆಹೋವನು ನಿಷ್ಕೃಷ್ಟವಾದ ಸಮಯಪಾಲಕನೆಂಬುದನ್ನು ಯಾವುದು ಸೂಚಿಸುತ್ತದೆ? (ದಾನಿ. 11:35-40; ಲೂಕ 21:24) [si ಪು. 284 ಪ್ಯಾರ. 1]
9. ಒಂದು ಭಾಷಣಕ್ಕಾಗಿ ಸಂಶೋಧನೆಯನ್ನು ಮಾಡಿದ ಬಳಿಕ, ಯಾವ ಅಂಶಗಳನ್ನು ಉಪಯೋಗಿಸುವುದು ಎಂದು ತೀರ್ಮಾನಿಸುವಾಗ ಯಾವ ವಿಚಾರಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು? [be-KA ಪು. 38]
10. ‘ನೋಹನ ದಿವಸಗಳ’ ಕುರಿತಾದ ಯೇಸುವಿನ ಹೇಳಿಕೆಯು ಇಂದಿನ ನಮ್ಮ ಸನ್ನಿವೇಶಕ್ಕೆ ಏಕೆ ಸಂಬಂಧಿಸಿದೆ? (ಮತ್ತಾ. 24:37) [w-KA01 11/15 ಪು. 31 ಪ್ಯಾರ. 2-3]
ಸಾಪ್ತಾಹಿಕ ಬೈಬಲ್ ವಾಚನ
11. ಒಬ್ಬ ಕ್ರೈಸ್ತನ ನೇಮಕವು, ಸಾಮಾಜಿಕ ಪರಿವರ್ತನೆಯನ್ನು ತರುವಂಥದ್ದಾಗಿಲ್ಲ ಬದಲಾಗಿ ವ್ಯಕ್ತಿಗಳು ಕ್ರೈಸ್ತರಾಗುವಂತೆ ಸಹಾಯಮಾಡುವುದೇ ಆಗಿದೆ ಎಂಬುದನ್ನು ಪೌಲನು ಫಿಲೆಮೋನನಿಗೆ ಬರೆದ ಪತ್ರವು ಹೇಗೆ ತೋರಿಸುತ್ತದೆ? (ಫಿಲೆ. 12)
12. ‘ತಪ್ಪಿಹೋಗುವುದು,’ “ಬಿಟ್ಟುಹೋಗು”ವುದು, ಮತ್ತು ‘ಬಿದ್ದುಹೋಗುವುದರ’ ಮಧ್ಯೆಯ ವ್ಯತ್ಯಾಸವೇನು? (ಇಬ್ರಿ. 2:1; 3:12; 6:6, NW) [w-KA99 7/15 ಪು. 19 ಪ್ಯಾರ. 12; w86 6/1 ಪು. 14 ಪ್ಯಾರ. 16-17; w80 12/1 ಪು. 23 ಪ್ಯಾರ. 8]
13. “ದೇವರ ಚಿತ್ತವಾದರೆ” ಎಂಬ ಅಭಿವ್ಯಕ್ತಿಯನ್ನು ಅಲ್ಪಮಾತ್ರದ್ದಾಗಿ ಮಾಡುವುದನ್ನು ನಾವು ಹೇಗೆ ತ್ಯಜಿಸಬಲ್ಲೆವು? (ಯಾಕೋ. 4:15) [cj ಪು. 171 ಪ್ಯಾರ. 1-2]
14. ‘ಯೆಹೋವನ ದಿನದ ಸಾನ್ನಿಧ್ಯವನ್ನು ಕಾಯುತ್ತ, ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳುವುದು’ ಎಂಬುದರ ಅರ್ಥವೇನು, ಮತ್ತು ಇದನ್ನು ನಾವು ಹೇಗೆ ಮಾಡಬಲ್ಲೆವು? (2 ಪೇತ್ರ 3:11, 12, NW) [w-KA97 9/1 ಪು. 19-20]
15. ಪ್ರಕಟನೆ ಪುಸ್ತಕದ 2ನೆಯ ಮತ್ತು 3ನೆಯ ಅಧ್ಯಾಯಗಳಲ್ಲಿ ಏಳು ಸಭೆಗಳಿಗೆ ಕೊಡಲ್ಪಟ್ಟ ಸಂದೇಶಗಳಲ್ಲಿ ಇಂದಿನ ಕ್ರೈಸ್ತರಿಗೆ ಯಾವ ಮುಖ್ಯವಾದ ಬುದ್ಧಿವಾದವು ಅಡಕವಾಗಿದೆ? (ಪ್ರಕ. 2:4, 5, 10, 14, 20; 3:3, 10, 11, 17, 19)