ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 19 ಪು. 145-ಪು. 146 ಪ್ಯಾ. 5
  • ಬೈಬಲನ್ನು ಉಪಯೋಗಿಸಲು ಪ್ರೋತ್ಸಾಹಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲನ್ನು ಉಪಯೋಗಿಸಲು ಪ್ರೋತ್ಸಾಹಿಸುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಪ್ರಶ್ನಾ ರೇಖಾಚೌಕ
    2000 ನಮ್ಮ ರಾಜ್ಯದ ಸೇವೆ
  • ಶಾಸ್ತ್ರವಚನಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸಭಿಕರಿಗೆ ಬೋಧಪ್ರದವಾದ ವಿಷಯ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ದೃಷ್ಟಿ ಸಂಪರ್ಕ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 19 ಪು. 145-ಪು. 146 ಪ್ಯಾ. 5

ಅಧ್ಯಾಯ 19

ಬೈಬಲನ್ನು ಉಪಯೋಗಿಸಲು ಪ್ರೋತ್ಸಾಹಿಸುವುದು

ನೀವೇನು ಮಾಡುವ ಅಗತ್ಯವಿದೆ

ವಚನಗಳು ಓದಲ್ಪಡುವಾಗ ಬೈಬಲನ್ನು ತೆರೆದು ಅನುಸರಿಸುವಂತೆ ಸಭಿಕರನ್ನು ಪ್ರೋತ್ಸಾಹಿಸಿರಿ.

ಇದು ಪ್ರಾಮುಖ್ಯವೇಕೆ?

ಒಬ್ಬನು ತನ್ನ ಸ್ವಂತ ಕಣ್ಣುಗಳಿಂದ, ವಿಶೇಷವಾಗಿ ತನ್ನ ಸ್ವಂತ ಬೈಬಲಿನಲ್ಲಿರುವುದನ್ನು ನೋಡುವುದು, ಹೆಚ್ಚು ಆಳವಾದ ಪ್ರಭಾವವನ್ನು ಬೀರುತ್ತದೆ.

ದೇವರ ವಾಕ್ಯವಾದ ಬೈಬಲಿನ ಕಡೆಗೆ ಎಲ್ಲರ ಗಮನವನ್ನು ಸೆಳೆಯುವುದು ನಮ್ಮ ಬಯಕೆಯಾಗಿದೆ. ಏಕೆಂದರೆ, ಆ ಪವಿತ್ರ ಗ್ರಂಥವು ನಾವು ಸಾರುವ ಸಂದೇಶಕ್ಕೆ ಆಧಾರವಾಗಿದೆ. ಮತ್ತು ನಾವು ಹೇಳುವ ಮಾತುಗಳು ನಮ್ಮ ಸ್ವಂತದವುಗಳಲ್ಲ, ಬದಲಾಗಿ ದೇವರಿಂದ ಬಂದಿವೆಯೆಂದು ಜನರು ಗ್ರಹಿಸಬೇಕೆಂಬುದು ನಮ್ಮ ಅಪೇಕ್ಷೆ. ಜನರು ಬೈಬಲಿನಲ್ಲಿ ಭರವಸೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ.

ಕ್ಷೇತ್ರ ಶುಶ್ರೂಷೆಯಲ್ಲಿ. ಕ್ಷೇತ್ರ ಶುಶ್ರೂಷೆಗೆ ತಯಾರಿಯನ್ನು ಮಾಡುವಾಗ, ಕಿವಿಗೊಡಲು ಬಯಸುವ ಜನರೊಂದಿಗೆ ಹಂಚಿಕೊಳ್ಳಲಿಕ್ಕಾಗಿ ಯಾವಾಗಲೂ ಒಂದು ಅಥವಾ ಹೆಚ್ಚು ಶಾಸ್ತ್ರವಚನಗಳನ್ನು ಆರಿಸಿಕೊಳ್ಳಿರಿ. ನೀವು ಬೈಬಲ್‌ ಸಾಹಿತ್ಯದ ಒಂದು ಸಂಕ್ಷಿಪ್ತ ನಿರೂಪಣೆಯನ್ನು ನೀಡಲು ಯೋಜಿಸುತ್ತಿರುವುದಾದರೂ, ಅನೇಕವೇಳೆ ಸೂಕ್ತವಾದ ಬೈಬಲ್‌ ವಚನವನ್ನು ಓದುವುದು ಉಪಯುಕ್ತವಾಗಿದೆ. ನಾವು ಸ್ವತಃ ಏನೇ ಹೇಳಲಿ, ಕುರಿಸದೃಶ ಜನರನ್ನು ಮಾರ್ಗದರ್ಶಿಸುವುದರಲ್ಲಿ ನಮಗಿಂತಲೂ ಬೈಬಲಿಗೆ ಹೆಚ್ಚಿನ ಶಕ್ತಿಯಿದೆ. ಬೈಬಲನ್ನು ತೆರೆದು ಓದಲು ಸಾಧ್ಯವಾಗದಂಥ ಸ್ಥಳಗಳಲ್ಲಿ, ಅದನ್ನು ಉಲ್ಲೇಖಿಸಿ ಹೇಳಲು ನೀವು ಆರಿಸಿಕೊಳ್ಳಬಹುದು. ಒಂದನೆಯ ಶತಮಾನದಲ್ಲಿ ಶಾಸ್ತ್ರದ ಸುರುಳಿಗಳ ಪ್ರತಿಗಳು ವ್ಯಾಪಕವಾಗಿ ಲಭ್ಯವಿರಲಿಲ್ಲ. ಆದರೂ, ಯೇಸು ಮತ್ತು ಅವನ ಅಪೊಸ್ತಲರು ಶಾಸ್ತ್ರವಚನಗಳಿಂದ ದೊಡ್ಡ ಪ್ರಮಾಣದಲ್ಲಿ ಉಲ್ಲೇಖಿಸಿದರು. ನಾವೂ ಶಾಸ್ತ್ರವಚನಗಳನ್ನು ಬಾಯಿಪಾಠ ಮಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ನಮ್ಮ ಶುಶ್ರೂಷೆಯಲ್ಲಿ ಅವುಗಳನ್ನು ಸೂಕ್ತವಾಗಿ ಉಪಯೋಗಿಸಬೇಕು; ಕೆಲವು ಬಾರಿ ಅವುಗಳನ್ನು ಬೈಬಲಿನಿಂದ ತೆರೆದು ಓದದೆ ಕೇವಲ ಉಲ್ಲೇಖಿಸಬಹುದು.

ನಿಮಗೆ ಬೈಬಲನ್ನು ತೆರೆದು ಓದಲು ಸಾಧ್ಯವಿರುವುದಾದರೆ, ನೀವು ಮನೆಯವನ ಮುಂದೆ ಓದುತ್ತಿರುವಾಗ ಅವನೂ ಅದನ್ನು ನೋಡಿ ಅನುಸರಿಸಸಾಧ್ಯವಾಗುವಂತಹ ರೀತಿಯಲ್ಲಿ ಬೈಬಲನ್ನು ಹಿಡಿಯಿರಿ. ನೀವು ಓದುವಾಗ ಮನೆಯವನು ತನ್ನ ಸ್ವಂತ ಬೈಬಲಿನಲ್ಲಿ ಅನುಸರಿಸುವುದಾದರೆ, ಅವನು ಏನನ್ನು ಓದುತ್ತಾನೋ ಅದರ ಕಡೆಗಿನ ಅವನ ಪ್ರತಿಕ್ರಿಯೆಯು ಇನ್ನೂ ಹೆಚ್ಚು ಅನುಕೂಲಕರವಾಗಿರುವುದು.

ಆದರೆ, ಕೆಲವು ಬೈಬಲ್‌ ಭಾಷಾಂತರಕಾರರು ದೇವರ ವಾಕ್ಯವನ್ನು ಮನಬಂದಂತೆ ಭಾಷಾಂತರಿಸಿದ್ದಾರೆಂಬುದನ್ನು ನೀವು ಗ್ರಹಿಸಬೇಕು. ಅವರ ಭಾಷಾಂತರಗಳು ಮೂಲ ಬೈಬಲ್‌ ಭಾಷೆಗಳಿಗೆ ಎಲ್ಲ ವಿಧಗಳಲ್ಲಿ ಹೊಂದಿಕೊಳ್ಳಲಿಕ್ಕಿಲ್ಲ. ಅನೇಕ ಆಧುನಿಕ ಭಾಷಾಂತರಗಳು ದೇವರ ಸ್ವಂತ ಹೆಸರನ್ನು ತೆಗೆದುಹಾಕಿ, ಮೃತರ ಸ್ಥಿತಿಯ ಕುರಿತು ಮೂಲ ಭಾಷೆಯ ಗ್ರಂಥಪಾಠಗಳು ಏನು ಹೇಳುತ್ತವೊ ಅದನ್ನು ಅಸ್ಪಷ್ಟಗೊಳಿಸಿ, ಭೂಮಿಗಾಗಿರುವ ದೇವರ ಉದ್ದೇಶದ ಕುರಿತು ಬೈಬಲ್‌ ಏನು ಹೇಳುತ್ತದೊ ಅದನ್ನು ಮರೆಮಾಡಿವೆ. ಹೀಗೆ ಮಾಡಲಾಗಿರುವುದನ್ನು ಒಬ್ಬನಿಗೆ ತೋರಿಸಲಿಕ್ಕಾಗಿ, ನೀವು ಅನೇಕ ಬೈಬಲುಗಳಿಂದ ಅಥವಾ ಒಂದೇ ಭಾಷೆಯ ಹಿಂದಿನ ಭಾಷಾಂತರಗಳಿಂದ ಮುಖ್ಯ ವಚನಗಳನ್ನು ಹೋಲಿಸಿ ನೋಡಬೇಕಾದೀತು. ಅನೇಕ ವಿಷಯವಸ್ತುಗಳ ಸಂಬಂಧದಲ್ಲಿ, ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್‌) ಪುಸ್ತಕವು, ಹೆಚ್ಚಾಗಿ ಉಪಯೋಗಿಸಲ್ಪಡುವ ವಚನಗಳಲ್ಲಿರುವ ಮುಖ್ಯ ಅಭಿವ್ಯಕ್ತಿಗಳನ್ನು ವಿವಿಧ ಭಾಷಾಂತರಗಳು ಅನುವಾದಮಾಡಿರುವ ವಿಧಗಳ ಹೋಲಿಕೆಯನ್ನು ಒದಗಿಸುತ್ತದೆ. ಸತ್ಯವನ್ನು ಪ್ರೀತಿಸುವ ಯಾವುದೇ ವ್ಯಕ್ತಿಯು ಈ ನಿಜತ್ವಗಳ ಜ್ಞಾನಕ್ಕಾಗಿ ಕೃತಜ್ಞನಾಗಿರುವನು.

ಸಭಾ ಕೂಟಗಳಲ್ಲಿ. ಸಭಾ ಕೂಟಗಳಲ್ಲಿ ಎಲ್ಲರೂ ತಮ್ಮ ತಮ್ಮ ಬೈಬಲುಗಳನ್ನು ಉಪಯೋಗಿಸುವಂತೆ ಪ್ರೋತ್ಸಾಹಿಸಲ್ಪಡಬೇಕು. ಇದು ಅನೇಕ ವಿಧಗಳಲ್ಲಿ ಒಳ್ಳೆಯದನ್ನು ಸಾಧಿಸುತ್ತದೆ. ಚರ್ಚಿಸಲ್ಪಡುತ್ತಿರುವ ವಿಷಯದ ಕಡೆಗೆ ಸಭಿಕರ ಗಮನವನ್ನು ಸೆರೆಹಿಡಿಯುವಂತೆ ಇದು ಸಹಾಯಮಾಡುತ್ತದೆ. ಭಾಷಣಕಾರನಿಂದ ಕೊಡಲ್ಪಡುವ ಬಾಯಿಮಾತಿನ ಉಪದೇಶಕ್ಕೆ ಇದು ದೃಶ್ಯ ಪರಿಣಾಮವನ್ನು ಕೂಡಿಸುತ್ತದೆ. ಮತ್ತು ಬೈಬಲು ನಿಶ್ಚಯವಾಗಿಯೂ ನಮ್ಮ ನಂಬಿಕೆಗಳ ಮೂಲವಾಗಿದೆ ಎಂಬ ಅಭಿಪ್ರಾಯವನ್ನು ಹೊಸ ಆಸಕ್ತರ ಮನಸ್ಸುಗಳಲ್ಲಿ ಅಚ್ಚೊತ್ತಿಸುತ್ತದೆ.

ನಿಮ್ಮ ಸಭಿಕರು ತಮ್ಮ ಸ್ವಂತ ಬೈಬಲುಗಳಲ್ಲಿ ನೀವು ಓದುತ್ತಿರುವ ವಚನಗಳನ್ನು ನೋಡುತ್ತಾರೊ ಇಲ್ಲವೊ ಎಂಬುದು, ಬಹುಮಟ್ಟಿಗೆ ನೀವು ಕೊಡುವ ಪ್ರೋತ್ಸಾಹದ ಮೇಲೆ ಹೊಂದಿಕೊಂಡಿರುತ್ತದೆ. ನೇರವಾಗಿ ಕೊಡುವ ಆಮಂತ್ರಣವು ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ.

ಸಭಿಕರು ಅವುಗಳನ್ನು ತೆರೆದು ನೋಡುವಂತೆ ಕೇಳಿಕೊಳ್ಳುವ ಮೂಲಕ ಯಾವ ವಚನಗಳನ್ನು ಒತ್ತಿಹೇಳಬೇಕೆಂಬುದನ್ನು ನಿರ್ಧರಿಸುವುದು ಭಾಷಣಕಾರರಾದ ನಿಮಗೆ ಸೇರಿದ್ದು. ನಿಮ್ಮ ಮುಖ್ಯಾಂಶಗಳನ್ನು ವಿಕಸಿಸಲು ಸಹಾಯಕವಾಗಿರುವ ವಚನಗಳನ್ನು ಓದುವುದು ಅತ್ಯುತ್ತಮ. ಆಮೇಲೆ, ಸಮಯವಿರುವಲ್ಲಿ, ನಿಮ್ಮ ವಾದಾಂಶಗಳನ್ನು ಬೆಂಬಲಿಸುವ ಇನ್ನಿತರ ವಚನಗಳನ್ನು ಕೂಡಿಸಿರಿ.

ಕೇವಲ ವಚನವನ್ನು ಎತ್ತಿಹೇಳುವುದು ಇಲ್ಲವೆ ಸಭಿಕರು ವಚನವನ್ನು ಓದುವಂತೆ ಕೇಳಿಕೊಳ್ಳುವುದು ಸಾಮಾನ್ಯವಾಗಿ ಸಾಲದೆಂಬುದು ನಿಶ್ಚಯ. ನೀವು ಒಂದು ವಚನವನ್ನು ಓದಿದ ಮೇಲೆ ಆ ಕೂಡಲೇ, ಅಂದರೆ ಸಭಿಕರು ಮೊದಲಿನ ವಚನವನ್ನು ತೆರೆದು ನೋಡುವ ಮೊದಲೇ ಇನ್ನೊಂದಕ್ಕೆ ಹೋಗುವುದಾದರೆ, ಅವರು ಬೇಗನೆ ನಿರಾಶರಾಗಿ ಬೈಬಲನ್ನು ತೆರೆದು ಹಿಂಬಾಲಿಸುವ ಪ್ರಯತ್ನವನ್ನು ನಿಲ್ಲಿಸುವರು. ಆದುದರಿಂದ ಸಭಿಕರನ್ನು ಅವಲೋಕಿಸಿರಿ. ಅವರಲ್ಲಿ ಹೆಚ್ಚಿನವರು ವಚನವನ್ನು ತೆರೆದಿರುವಾಗ ಅದನ್ನು ಓದಿರಿ.

ಮುಂದಾಗಿ ಯೋಚಿಸಿರಿ. ಓದುವುದಕ್ಕೆ ಸಾಕಷ್ಟು ಮುಂಚಿತವಾಗಿ ನಿಮ್ಮ ವಚನವನ್ನು ಉದ್ಧರಿಸಿರಿ. ಆಗ ಸಭಿಕರು ವಚನವನ್ನು ತೆರೆಯಲಿಕ್ಕಾಗಿ ನೀವು ಕಾಯುವುದರಿಂದ ಉಂಟಾಗುವ ಸಮಯನಷ್ಟವು ಕಡಿಮೆಯಾಗುತ್ತದೆ. ಸಭಿಕರು ವಚನಗಳನ್ನು ತೆರೆಯಲು ನೀವು ಸಮಯಾವಕಾಶವನ್ನು ಕೊಡಬೇಕಾಗಿರುವಾಗ ಕಡಿಮೆ ವಿಷಯಗಳನ್ನು ಆವರಿಸಸಾಧ್ಯವಾಗಬಹುದಾದರೂ, ಅದರಿಂದ ಬರುವ ಪ್ರಯೋಜನವು ಸಾರ್ಥಕವಾಗಿರುವುದು.

ಇದನ್ನು ಮಾಡುವ ವಿಧ

  • ನೀವು ವಚನವನ್ನು ಬೈಬಲಿನಿಂದ ಓದುವಾಗ ಮನೆಯವನಿಗೆ ಅದನ್ನು ತೋರಿಸಿರಿ, ಅಥವಾ ಅವನ ಸ್ವಂತ ಬೈಬಲಿನಲ್ಲಿ ಅದನ್ನು ಅನುಸರಿಸುವಂತೆ ಕೇಳಿಕೊಳ್ಳಿರಿ.

  • ಸಭೆಯಲ್ಲಿ ಮಾತನಾಡುವಾಗ, ಮುಖ್ಯ ವಚನಗಳನ್ನು ತೆರೆದು ನೋಡುವಂತೆ ಸಭಿಕರನ್ನು ನೇರವಾಗಿ ಕೇಳಿಕೊಂಡ ಬಳಿಕ, ಅವರು ಹಾಗೆ ಮಾಡಲು ಸಾಕಷ್ಟು ಸಮಯವನ್ನು ಕೊಡಿರಿ.

ಅಭ್ಯಾಸಪಾಠಗಳು: ಪುನರ್ಭೇಟಿಗಳಲ್ಲಿ ಇವುಗಳನ್ನು ಮಾಡಲು ಪ್ರಯತ್ನಿಸಿರಿ: (1) ನಿಮ್ಮ ಬೈಬಲನ್ನು ಮನೆಯವನಿಗೆ ಕೊಟ್ಟು, ನೀವು ಈಗಾಗಲೇ ತೆರೆದಿರುವ ವಚನವನ್ನು ಅವನು ಓದಬಯಸುತ್ತಾನೊ ಎಂದು ಕೇಳಿರಿ. (2) ಮನೆಯವನು ತನ್ನ ಸ್ವಂತ ಬೈಬಲನ್ನು ತಂದು ಮುಖ್ಯ ವಚನವನ್ನು ಓದಲು ಇಷ್ಟಪಡುವನೊ ಎಂದು ಅವನನ್ನು ಕೇಳಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ