ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/04 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2004 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜುಲೈ 12ರಿಂದ ಆರಂಭವಾಗುವ ವಾರ
  • ಜುಲೈ 19ರಿಂದ ಆರಂಭವಾಗುವ ವಾರ
  • ಜುಲೈ 26ರಿಂದ ಆರಂಭವಾಗುವ ವಾರ
  • ಆಗಸ್ಟ್‌ 2ರಿಂದ ಆರಂಭವಾಗುವ ವಾರ
2004 ನಮ್ಮ ರಾಜ್ಯದ ಸೇವೆ
km 7/04 ಪು. 2

ಸೇವಾ ಕೂಟದ ಶೆಡ್ಯೂಲ್‌

ಜುಲೈ 12ರಿಂದ ಆರಂಭವಾಗುವ ವಾರ

ಗೀತೆ 108

12 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. 4ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಹಾಗೂ ಜುಲೈ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಈ ನಿರೂಪಣೆಗಳಲ್ಲೊಂದರಲ್ಲಿ, ನಿಮ್ಮ ಭಾಷೆಯನ್ನು ಸರಾಗವಾಗಿ ಮಾತಾಡದ ಒಬ್ಬ ವ್ಯಕ್ತಿಗೆ ಬೀದಿಯಲ್ಲಿ ಪತ್ರಿಕೆ ನೀಡುವುದನ್ನು ಪ್ರತ್ಯಕ್ಷಾಭಿನಯಿಸಿರಿ.

18 ನಿ: “ಯೆಹೋವನ ನ್ಯಾಯವನ್ನು ಅನುಕರಿಸಿರಿ.”a ಸಮಯ ಅನುಮತಿಸುವಷ್ಟರ ಮಟ್ಟಿಗೆ, ಕೊಡಲ್ಪಟ್ಟಿರುವ ವಚನಗಳ ಕುರಿತಾಗಿ ಹೇಳಿಕೆಗಳನ್ನು ಕೊಡುವಂತೆ ಸಭಿಕರನ್ನು ಆಮಂತ್ರಿಸಿರಿ.

15 ನಿ: ಬೈಬಲ್‌​—⁠ವಿಶ್ವಾಸಾರ್ಹ ಭವಿಷ್ಯನುಡಿಗಳ ಪುಸ್ತಕ. ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಬ್ರೋಷರಿನ, 27-9ನೆಯ ಪುಟಗಳ ಮೇಲಾಧಾರಿತ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ನಮ್ಮ ಶುಶ್ರೂಷೆಯಲ್ಲಿ, ಭವಿಷ್ಯದ ಬಗ್ಗೆ ಆಸಕ್ತರಾಗಿರುವ ಜನರನ್ನು ಅನೇಕವೇಳೆ ಭೇಟಿಮಾಡುತ್ತೇವೆ. ವಿಧೇಯ ಮಾನವಕುಲಕ್ಕಾಗಿರುವ ಉಜ್ವಲವಾದ ಭವಿಷ್ಯದ ಕುರಿತಾಗಿ ವಿಶ್ವಾಸಾರ್ಹವಾದ ಮಾಹಿತಿಯನ್ನು ಬೈಬಲ್‌ ಒದಗಿಸುತ್ತದೆ. ಬೈಬಲಿನ ಭಾವೀ ಭವಿಷ್ಯನುಡಿಗಳಲ್ಲಿ ಭರವಸೆಯನ್ನು ಬಲಪಡಿಸುವಂಥ ಕೆಲವೊಂದು ಬೈಬಲ್‌ ಪ್ರವಾದನೆಗಳನ್ನು ಪರಿಗಣಿಸಿರಿ. ಬೈಬಲಿನಲ್ಲಿ ಒಬ್ಬ ಆಸಕ್ತ ವ್ಯಕ್ತಿಯ ಭರವಸೆಯನ್ನು ಕಟ್ಟಲಿಕ್ಕಾಗಿ, ಬೈಬಲ್‌ ಘಟನೆಗಳನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ಒಬ್ಬ ಪ್ರಚಾರಕನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಲಿ.

ಗೀತೆ 16 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 19ರಿಂದ ಆರಂಭವಾಗುವ ವಾರ

ಗೀತೆ 83

10 ನಿ: ಸ್ಥಳಿಕ ಪ್ರಕಟನೆಗಳು. ರಜಾದಿನಗಳಂಥ ಬೇರೆ ಚಟುವಟಿಕೆಗಳ ಸಮಯದಲ್ಲೂ, ದೈನಂದಿನ ಬೈಬಲ್‌ ವಾಚನದ ಕ್ರಮವಾದ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವ ಮಹತ್ವವನ್ನು ಚರ್ಚಿಸಿರಿ. ಆಗಸ್ಟ್‌ 15, 2000 ಕಾವಲಿನಬುರುಜು ಪತ್ರಿಕೆಯ ಪುಟ 32ರಲ್ಲಿರುವ ಹೇಳಿಕೆಗಳನ್ನು ಸೇರಿಸಿರಿ.

15 ನಿ: ಪ್ರಶ್ನಾ ಚೌಕ. ಹಿರಿಯನಿಂದ ನಿರ್ವಹಿಸಲ್ಪಡತಕ್ಕದ್ದು. ಇಡೀ ಲೇಖನವನ್ನು ಓದಿ ಚರ್ಚಿಸಿರಿ. ಸಾಹಿತ್ಯವನ್ನು ಇಲ್ಲವೆ ಪತ್ರಿಕೆಗಳನ್ನು ಮನೆಯವರೊಂದಿಗೆ ಬಿಟ್ಟುಬರಬೇಕೊ ಇಲ್ಲವೊ ಎಂಬುದು, ಕಾಣಿಕೆಯನ್ನು ಕೊಡುವ ಅವರ ಸಾಮರ್ಥ್ಯದ ಮೇಲಲ್ಲ, ಬದಲಾಗಿ ಅವರು ನಿಜವಾಗಿಯೂ ಆಸಕ್ತರಾಗಿದ್ದಾರೊ ಎಂಬುದರ ಮೇಲೆ ಹೊಂದಿಕೊಂಡಿದೆ ಎಂಬ ಅಂಶಕ್ಕೆ ಒತ್ತುನೀಡಿರಿ. ಲೋಕವ್ಯಾಪಕ ಕೆಲಸಕ್ಕಾಗಿರುವ ಮಾಸಿಕ ಕಾಣಿಕೆಗಳು ಕಡಿಮೆಯಾಗಿರುವುದರಿಂದ ಹಿರಿಯರು ಕೇವಲ ಕ್ಯಾಂಪೇನ್‌ ಸಾಹಿತ್ಯಕ್ಕಾಗಿ ಮಾತ್ರ ವಿನಂತಿಸುವ ಅಗತ್ಯವಿಲ್ಲ. ಪಯನೀಯರರ ಮತ್ತು ಪ್ರಚಾರಕರ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಸಭೆಗಳಲ್ಲಿ ಸಾಕಷ್ಟು ಪ್ರಮಾಣದ ಸಾಹಿತ್ಯ ಸ್ಟಾಕ್‌ನಲ್ಲಿರಬೇಕು. ಮನೆಯವರಿಗೆ ಸ್ವಯಂಪ್ರೇರಿತ ದಾನಗಳನ್ನು ಕೊಡುವುದರ ಬಗ್ಗೆ ವಿವರಿಸುವುದು ಹೇಗೆಂಬದನ್ನು ತೋರಿಸುವ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಸೇರಿಸಿರಿ.

20 ನಿ: “ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು​—⁠ಭಾಗ 1.” ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡಬೇಕಾದ ಭಾಷಣ. ಆಧುನಿಕ ಸಮಯಗಳಲ್ಲಿ ಬೈಬಲ್‌ ಅಧ್ಯಯನ ಕೆಲಸದ ಬೆಳವಣಿಗೆಯನ್ನು ತಿಳಿಸುವ, ಘೋಷಕರು# ಪುಸ್ತಕದ 572-4 ಪುಟಗಳಲ್ಲಿನ ಮಾಹಿತಿಯಿಂದ ಹೇಳಿಕೆಗಳನ್ನು ಕೊಡುವಂತೆ ಸಭಿಕರಿಗೆ ಅವಕಾಶಕೊಡಿರಿ. ಮುಂದಿನ ಸಂಚಿಕೆಗಳಲ್ಲಿ ಬರುವ ಲೇಖನಮಾಲೆಗಾಗಿ ಉತ್ಸಾಹವನ್ನು ಬೆಳೆಸಿರಿ. ಪರಿಗಣಿಸಲಾಗುವ ವಿಷಯಗಳಲ್ಲಿ, ಅಧ್ಯಯನ ನಡೆಸಲು ಹೇಗೆ ತಯಾರಿಮಾಡಬೇಕು, ವಿದ್ಯಾರ್ಥಿಯು ತಯಾರಿಸುವಂತೆ ಹೇಗೆ ಸಹಾಯಮಾಡಬೇಕು, ಎಷ್ಟು ಅಧ್ಯಯನ ವಿಷಯಭಾಗವನ್ನು ಆವರಿಸಬೇಕು, ಶಾಸ್ತ್ರವಚನಗಳನ್ನು ಪರಿಣಾಮಕಾರಿಯಾಗಿ ಹೇಗೆ ಉಪಯೋಗಿಸಬೇಕು, ವಿದ್ಯಾರ್ಥಿಯು ಎಬ್ಬಿಸುವ ಪ್ರಶ್ನೆಗಳನ್ನು ಹೇಗೆ ನಿರ್ವಹಿಸಬೇಕು, ಪ್ರಾರ್ಥನೆಮಾಡುವುದನ್ನು ಹೇಗೆ ಪ್ರಾರಂಭಿಸಬಹುದು ಮತ್ತು ವಿದ್ಯಾರ್ಥಿಯನ್ನು ಸಂಸ್ಥೆಯ ಕಡೆಗೆ ಹೇಗೆ ನಿರ್ದೇಶಿಸಬಹುದು ಎಂಬ ವಿಷಯಗಳು ಇರುವವು. ಒದಗಿಸಲ್ಪಡುವ ಸಲಹೆಸೂಚನೆಗಳನ್ನು ಅನ್ವಯಿಸುವಂತೆ ಮತ್ತು ಮುಂದೆ ಉಪಯೋಗಿಸಲಾಗುವಂತೆ ಈ ಲೇಖನಗಳನ್ನು ಸುರಕ್ಷಿತವಾಗಿಡಲು ಎಲ್ಲರನ್ನೂ ಉತ್ತೇಜಿಸಿರಿ.

ಗೀತೆ 10 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 26ರಿಂದ ಆರಂಭವಾಗುವ ವಾರ

ಗೀತೆ 216

12 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ. ಜುಲೈ ತಿಂಗಳ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ನೆನಪುಹುಟ್ಟಿಸಿರಿ. 4ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಆಗಸ್ಟ್‌ 1ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿ, “ನೀವು ಅಷ್ಟೊಂದು ಸಲ ಸಂದರ್ಶಿಸುವುದೇಕೆ?” ಎಂಬ ಸಂಭಾಷಣಾ ತಡೆಗಟ್ಟನ್ನು ನಿರ್ವಹಿಸುವುದು ಹೇಗೆಂಬುದರ ಭಿನ್ನಭಿನ್ನ ವಿಧಗಳನ್ನು ತೋರಿಸಿರಿ.​—⁠ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ 12ನೆಯ ಪುಟವನ್ನು ನೋಡಿರಿ.

8 ನಿ: ಸ್ಥಳಿಕ ಅಗತ್ಯಗಳು.

25 ನಿ: “ವ್ಯಾಪಾರದ ಟೆರಿಟೊರಿಯಲ್ಲಿ ಸಾರುವುದು ಹೇಗೆ?”b ವ್ಯಾಪಾರದ ಟೆರಿಟೊರಿಗಳಲ್ಲಿ ಸಾರುವುದಕ್ಕಾಗಿ ಮಾಡಲಾಗಿರುವ ಸ್ಥಳಿಕ ಏರ್ಪಾಡುಗಳ ಬಗ್ಗೆ ತಿಳಿಸಿರಿ. 4-5ನೆಯ ಪ್ಯಾರಗ್ರಾಫ್‌ಗಳಲ್ಲಿರುವ ಎರಡು ನಿರೂಪಣೆಗಳನ್ನು ಇಲ್ಲವೆ ಸ್ಥಳಿಕವಾಗಿ ಕಾರ್ಯಸಾಧಕವಾಗಿರುವ ಬೇರಾವುದೇ ನಿರೂಪಣೆಯನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿರಿ. ಸಮಯವು ಅನುಮತಿಸುವಷ್ಟರ ಮಟ್ಟಿಗೆ, ವ್ಯಾಪಾರದ ಟೆರಿಟೊರಿಯಲ್ಲಿ ಕೆಲಸಮಾಡುವಾಗ ಸಿಕ್ಕಿದ ಸಕಾರಾತ್ಮಕ ಅನುಭವಗಳನ್ನು ಹಂಚಿಕೊಳ್ಳುವಂತೆ ಸಭಿಕರನ್ನು ಆಮಂತ್ರಿಸಿರಿ.

ಗೀತೆ 173 ಮತ್ತು ಸಮಾಪ್ತಿಯ ಪ್ರಾರ್ಥನೆ.

ಆಗಸ್ಟ್‌ 2ರಿಂದ ಆರಂಭವಾಗುವ ವಾರ

ಗೀತೆ 60

8 ನಿ: ಸ್ಥಳಿಕ ಪ್ರಕಟನೆಗಳು.

22 ನಿ: ನೀವು ಕಾರಣಗಳನ್ನು ಕೊಡುತ್ತೀರೊ? ಶುಶ್ರೂಷಾ ಶಾಲೆ ಪುಸ್ತಕದ 254ನೇ ಪುಟದಲ್ಲಿ 1-2ನೆಯ ಪ್ಯಾರಗ್ರಾಫ್‌ಗಳ ಮೇಲಾಧಾರಿತವಾದ ಭಾಷಣ ಮತ್ತು ಚರ್ಚೆ. ನಾವು ಕ್ಷೇತ್ರ ಸೇವೆಯಲ್ಲಿ ಮತ್ತು ವೇದಿಕೆಯಿಂದ ಶಾಸ್ತ್ರವಚನಗಳನ್ನು ವಿವರಿಸಿ ಅನ್ವಯಿಸುವಾಗ, ‘ವಿಷಯವು ಹೀಗೆ ಇದೆ’ ಎಂದಷ್ಟೇ ಹೇಳುವ ಬದಲು, ನಾವೇನನ್ನು ಹೇಳುತ್ತಿದ್ದೇವೊ ಅದಕ್ಕೆ ಕಾರಣಗಳನ್ನು ಕೊಡುವಲ್ಲಿ ಆಗ ನಮ್ಮ ಬೋಧನೆಯು ಹೆಚ್ಚು ಪರಿಣಾಮಕಾರಿಯಾಗಿರುವುದು. ರೀಸನಿಂಗ್‌# ಪುಸ್ತಕ ಇಲ್ಲವೆ ನಮ್ಮ ಸ್ಥಳಿಕ ಟೆರಿಟೊರಿಗೆ ಸೂಕ್ತವಾಗಿರುವ ಬೇರಾವುದೇ ಪ್ರಕಾಶನಗಳಿಂದ ಉದಾಹರಣೆಗಳನ್ನು ಉಪಯೋಗಿಸುತ್ತಾ ಈ ಮುಂದಿನ ವಿಷಯಗಳನ್ನು ಹೇಗೆ ಮಾಡಬೇಕೆಂಬದನ್ನು ತೋರಿಸಿರಿ: (1) ಒಂದು ವಚನದಲ್ಲಿ ಮುಖ್ಯ ಪದಗಳನ್ನು ಆಯ್ಕೆಮಾಡಿ ವಿವರಿಸುವುದು, (2) ಪೂರ್ವಾಪರ ವಚನಗಳಿಂದ ಇಲ್ಲವೆ ಆ ವಿಷಯದೊಂದಿಗೆ ವ್ಯವಹರಿಸುವ ಇನ್ನೊಂದು ವಚನದಿಂದ ಬೆಂಬಲಿಸುವಂಥ ಸಾಕ್ಷ್ಯವನ್ನು ಮುಂದಿಡುವುದು, (3) ನೀವು ಹೇಳಿರುವ ವಿಷಯದ ತರ್ಕಸಂಗತತೆಯನ್ನು ತೋರಿಸುವ ಒಂದು ದೃಷ್ಟಾಂತವನ್ನು ಬಳಸುವುದು, ಮತ್ತು (4) ವಿಷಯದ ಕುರಿತಾಗಿ ತರ್ಕಿಸುವಂತೆ ಆಲಿಸುವವರಿಗೆ ಸಹಾಯಮಾಡಲು ಪ್ರಶ್ನೆಗಳನ್ನು ಉಪಯೋಗಿಸುವುದು. ತರ್ಕಸಮ್ಮತವಾದ ರೀತಿಯಲ್ಲಿ ಮಾತಾಡುವುದರ ಪ್ರಯೋಜನಗಳನ್ನು ಒತ್ತಿಹೇಳಿರಿ.

15 ನಿ: ಸ್ಥಳಿಕ ಅನುಭವಗಳು. ಕಳೆದ ಜಿಲ್ಲಾ ಅಧಿವೇಶನವನ್ನು ಹಾಜರಾದದ್ದರ, ಆಕ್ಸಿಲಿಯರಿ ಪಯನೀಯರ್‌ ಸೇವೆ, ಇಲ್ಲವೆ ಇತ್ತೀಚೆಗೆ ಅವರು ಒಳಗೂಡಿದಂಥ ಆಧ್ಯಾತ್ಮಿಕ ಚಟುವಟಿಕೆಗಳ ಸಂಬಂಧದಲ್ಲಿ ಭಕ್ತಿವರ್ಧಕ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.

ಗೀತೆ 32 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಕನ್ನಡದಲ್ಲಿ ಲಭ್ಯವಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ