ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು
ಭಾಗ 1: ಬೈಬಲ್ ಅಧ್ಯಯನ ಎಂದರೇನು?
1 ಲೋಕವ್ಯಾಪಕವಾಗಿ ದೇವಜನರು ಪ್ರತಿ ತಿಂಗಳು ಸುಮಾರು ಅರುವತ್ತು ಲಕ್ಷ ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ಪರಿಣಾಮಕಾರಿಯಾದ ಬೋಧನಾ ವಿಧಾನಗಳನ್ನು ಬಳಸುವ ಮೂಲಕ, ಈ ಬೈಬಲ್ ವಿದ್ಯಾರ್ಥಿಗಳು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹಂತವನ್ನು ತಲಪುವಂತೆ, ಹಾಗೂ ‘ಇತರರಿಗೆ ಬೋಧಿಸಲು ಶಕ್ತ’ರಾಗುವಂತೆ ನಾವು ಸಹಾಯಮಾಡಬಲ್ಲೆವು. (2 ತಿಮೊ. 2:2) ಈ ರೀತಿಯ ಪ್ರಗತಿಯನ್ನು ಮಾಡುವಂತೆ ನಿಮ್ಮ ವಿದ್ಯಾರ್ಥಿಗೆ ಸಹಾಯಮಾಡಲು ಇಚ್ಛಿಸುತ್ತೀರೊ? ಈ ಸಂಚಿಕೆಯಿಂದಾರಂಭಿಸಿ ನಮ್ಮ ರಾಜ್ಯದ ಸೇವೆಯು, ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದರ ಮೂಲಭೂತ ಅಂಶಗಳನ್ನು ವಿವರಿಸುವಂಥ ಒಂದು ಲೇಖನಮಾಲೆಯನ್ನು ಪ್ರಸ್ತುತಪಡಿಸುವುದು.
2 ಒಂದು ಬೈಬಲ್ ಅಧ್ಯಯನವನ್ನು ಯಾವಾಗ ವರದಿಸಬೇಕು? ಶಿಫಾರಸ್ಸುಮಾಡಲ್ಪಟ್ಟಿರುವ ಪ್ರಕಾಶನಗಳಲ್ಲಿ ಒಂದರಿಂದ ನೀವು ಬೈಬಲನ್ನು ಬಳಸುತ್ತಾ ಕ್ರಮವಾಗಿ ಮತ್ತು ವ್ಯವಸ್ಥಿತ ರೀತಿಯಲ್ಲಿ—ಸಂಕ್ಷಿಪ್ತವಾದರೂ ಸರಿ—ಬೈಬಲ್ ಚರ್ಚೆಗಳನ್ನು ನಡೆಸುತ್ತಿರುವಲ್ಲಿ, ನೀವೊಂದು ಬೈಬಲ್ ಅಧ್ಯಯನವನ್ನು ನಡೆಸುತ್ತಿದ್ದೀರಿ. ಈ ಅಧ್ಯಯನವು ಮನೆಬಾಗಿಲಲ್ಲೇ ನಡೆಸಲ್ಪಡಲಿ, ಇಲ್ಲವೇ ಟೆಲಿಫೋನ್ ಮೂಲಕ ನಡೆಸಲ್ಪಡಲಿ ಅದೊಂದು ಅಧ್ಯಯನವಾಗಿದೆ. ಬೈಬಲ್ ಅಧ್ಯಯನವನ್ನು ಹೇಗೆ ಮಾಡುತ್ತೇವೆಂದು ಪ್ರದರ್ಶಿಸಿದ ನಂತರ, ಅಧ್ಯಯನವು ಇನ್ನೂ ಎರಡು ಸಲ ನಡೆಸಲ್ಪಟ್ಟಿರುವಲ್ಲಿ ಮತ್ತು ಅದು ಮುಂದುವರಿಯುವುದು ಎಂಬಂತೆ ತೋರುವಲ್ಲಿ, ಅದನ್ನು ಒಂದು ಅಧ್ಯಯನವೆಂದು ವರದಿಸಬಹುದು.
3 ಅನೇಕ ಬೈಬಲ್ ಅಧ್ಯಯನಗಳನ್ನು ನಡೆಸಲು ಅಪೇಕ್ಷಿಸು ಬ್ರೋಷರ್ ಮತ್ತು ಜ್ಞಾನ ಪುಸ್ತಕವನ್ನು ಉಪಯೋಗಿಸಲಾಗುತ್ತದೆ. ಈ ಪ್ರಕಾಶನಗಳನ್ನು ಮುಗಿಸಿದ ನಂತರ, ವ್ಯಕ್ತಿಯು—ನಿಧಾನವಾಗಿಯಾದರೂ ಸರಿ—ಪ್ರಗತಿ ಮಾಡುತ್ತಿದ್ದಾನೆ ಮತ್ತು ತಾನೇನನ್ನು ಕಲಿಯುತ್ತಿದ್ದಾನೊ ಅದಕ್ಕಾಗಿ ಗಣ್ಯತೆಯನ್ನು ಬೆಳೆಸಿಕೊಳ್ಳುತ್ತಿದ್ದಾನೆಂದು ವ್ಯಕ್ತವಾಗುತ್ತಿರುವಲ್ಲಿ, ನಂತರ ದೇವರನ್ನು ಆರಾಧಿಸಿರಿ ಪುಸ್ತಕದಲ್ಲಿ ಅಧ್ಯಯನವನ್ನು ಮುಂದುವರಿಸಬಹುದು.
4 ಬೈಬಲ್ ಅಧ್ಯಯನ ಕೆಲಸವು, ಲಕ್ಷಗಟ್ಟಲೆ ಜನರು ಯೇಸು ಕ್ರಿಸ್ತನ ನಿಜ ಶಿಷ್ಯರಾಗುವಂತೆ ಸಹಾಯಮಾಡುವುದರಲ್ಲಿ ಪರಿಣಾಮಕಾರಿಯಾಗಿರುತ್ತದೆ. (ಮತ್ತಾ. 28:19, 20) ಈ ಲೇಖನಮಾಲೆಯಲ್ಲಿ ಮುಂದೆ ಬರಲಿರುವ ಲೇಖನಗಳಲ್ಲಿ ನೀಡಲ್ಪಡುವ ಸಲಹೆಗಳನ್ನು ಅನ್ವಯಿಸುವ ಮೂಲಕ, ನೀವೊಂದು ಪ್ರಗತಿಪರ ಬೈಬಲ್ ಅಧ್ಯಯನವನ್ನು ನಡೆಸಬಲ್ಲಿರಿ.