ವ್ಯಾಪಾರದ ಟೆರಿಟೊರಿಯಲ್ಲಿ ಸಾರುವುದು ಹೇಗೆ?
1. ವ್ಯಾಪಾರದ ಟೆರಿಟೊರಿಯಲ್ಲಿ ಸಾಕ್ಷಿನೀಡುವುದರ ಕೆಲವೊಂದು ಪ್ರಯೋಜನಗಳಾವುವು?
1 ಎಲ್ಲಿ ಜನರು ಸಾಮಾನ್ಯವಾಗಿ ಸಂದರ್ಶಕರನ್ನು ಸ್ವಾಗತಿಸುತ್ತಾರೊ ಮತ್ತು ‘ಮನೆಯಲ್ಲಿಲ್ಲ’ ಎಂಬ ಪ್ರಸಂಗವು ತೀರ ಅಪರೂಪವೊ ಅಂಥ ಟೆರಿಟೊರಿಯೊಂದರಲ್ಲಿ ನೀವು ಸಾರಲು ಇಷ್ಟಪಡುವಿರೊ? ನೀವಿದನ್ನು ನಿಮ್ಮ ಸಭೆಯ ಟೆರಿಟೊರಿಯಲ್ಲೇ ಮಾಡಲು ಶಕ್ತರಾಗಬಹುದು. ಅದು ಹೇಗೆ? ಅಲ್ಲಿರುವ ಅಂಗಡಿಗಳನ್ನು ಸಂದರ್ಶಿಸುವ ಮೂಲಕವೇ. ಅಂಗಡಿಯಿಂದ ಅಂಗಡಿಗೆ ಹೋಗಿ ಸಾಕ್ಷಿನೀಡುವ ಪ್ರಚಾರಕರು ಅನೇಕವೇಳೆ ಒಳ್ಳೇ ಫಲಿತಾಂಶಗಳನ್ನು ಅನುಭವಿಸುತ್ತಾರೆ.
2. ವ್ಯಾಪಾರ ಸ್ಥಳಗಳಲ್ಲಿನ ಸಾಕ್ಷಿಕಾರ್ಯವನ್ನು ಹೇಗೆ ಸಂಘಟಿಸಬಹುದು?
2 ಕೆಲವೊಂದು ಸಭೆಗಳಿಗೆ ನೇಮಿಸಲ್ಪಟ್ಟಿರುವ ಟೆರಿಟೊರಿಯಲ್ಲಿ ವ್ಯಾಪಾರದ ಟೆರಿಟೊರಿಗಳು ಒಳಗೂಡಿರುತ್ತವೆ. ಟೆರಿಟೊರಿಯನ್ನು ನೋಡಿಕೊಳ್ಳುವ ಸಹೋದರನು ಕೇವಲ ಅಂಗಡಿಗಳೇ ಇರುವ ಇಂಥ ವ್ಯಾಪಾರ ಕ್ಷೇತ್ರಗಳ ವಿಶೇಷ ಮ್ಯಾಪ್ ಕಾರ್ಡ್ಗಳನ್ನು ತಯಾರಿಸಬಹುದು. ಜನನಿವಾಸದ ಟೆರಿಟೊರಿ ಮ್ಯಾಪ್ ಕಾರ್ಡ್ಗಳಲ್ಲಿ ಇಂಥ ವ್ಯಾಪಾರದ ಕ್ಷೇತ್ರಗಳಿರುವಲ್ಲಿ, ಇವುಗಳನ್ನು ಟೆರಿಟೊರಿಯ ಭಾಗವಾಗಿ ಆವರಿಸಬಾರದೆಂದು ಆ ಕಾರ್ಡ್ ಮೇಲೆ ಸ್ಪಷ್ಟವಾಗಿ ಸೂಚಿಸಲ್ಪಟ್ಟಿರಬೇಕು. ಬೇರೆ ಟೆರಿಟೊರಿಗಳಲ್ಲಿ, ವ್ಯಾಪಾರದ ಸ್ಥಳಗಳನ್ನು ಮತ್ತು ಜನರ ನಿವಾಸಗಳನ್ನು ಜೊತೆಜೊತೆಯಾಗಿ ಆವರಿಸಬಹುದು. ನೀವು ಹಿಂದೆಂದೂ ವ್ಯಾಪಾರದ ಸ್ಥಳಗಳಲ್ಲಿ ಸಾಕ್ಷಿಕಾರ್ಯವನ್ನು ಮಾಡಿರದಿರುವಲ್ಲಿ, ಕೆಲವೊಂದು ಚಿಕ್ಕಪುಟ್ಟ ಅಂಗಡಿಗಳಲ್ಲಿ ಸಾಕ್ಷಿಕೊಡಲು ಪ್ರಯತ್ನಿಸುವ ಮೂಲಕ ಆರಂಭಿಸಿರಿ.
3. ಅಂಗಡಿಯಿಂದ ಅಂಗಡಿಯ ಸಾಕ್ಷಿಕಾರ್ಯದಲ್ಲಿ ಪರಿಣಾಮಕಾರಿಯಾಗಿರುವಂತೆ ನಮಗೇನು ಸಹಾಯಮಾಡುವುದು?
3 ಸರಳವಾದ ಪ್ರಸ್ತಾವವನ್ನು ಬಳಸಿರಿ: ಅಂಗಡಿಯಿಂದ ಅಂಗಡಿಯ ಸಾಕ್ಷಿಕಾರ್ಯದಲ್ಲಿ ತೊಡಗಿರುವಾಗ, ನೀವು ರಾಜ್ಯ ಸಭಾಗೃಹದಲ್ಲಿನ ಕೂಟವೊಂದಕ್ಕಾಗಿ ಉಡುವಂಥ ರೀತಿಯ ಬಟ್ಟೆಗಳನ್ನೇ ತೊಡುವುದು ಪ್ರಾಮುಖ್ಯ. ಅಂಗಡಿಯವರು ಕಾರ್ಯಮಗ್ನರಾಗಿರದ ಸಮಯವನ್ನು ಆಯ್ಕೆಮಾಡುವುದೂ ಉಚಿತ. ಸಾಧ್ಯವಿರುವಲ್ಲಿ, ಯಾವುದೇ ಗಿರಾಕಿಗಳಿಲ್ಲದಿರುವಾಗ ಪ್ರವೇಶಿಸಿರಿ. ಮ್ಯಾನೇಜರನೊಂದಿಗೊ, ಉಸ್ತುವಾರಿ ಮಾಡುತ್ತಿರುವವನೊಂದಿಗೊ ಮಾತಾಡಲು ಕೇಳಿಕೊಳ್ಳಿರಿ. ಚುಟುಕಾಗಿಯೂ, ನೇರವಾಗಿಯೂ ಮಾತಾಡಿರಿ. ಆದರೆ ನೀವೇನು ಹೇಳಬಹುದು?
4-6. ಅಂಗಡಿಯವನಿಗೆ ಇಲ್ಲವೆ ಮ್ಯಾನೇಜರನಿಗೆ ಸಾಕ್ಷಿಕೊಡುವಾಗ ನಾವೇನು ಹೇಳಬಹುದು?
4 ಅಂಗಡಿಯವನು ಇಲ್ಲವೆ ಮ್ಯಾನೇಜರನೊಂದಿಗೆ ಮಾತಾಡುವಾಗ ನೀವು ಹೀಗೇನಾದರೂ ಹೇಳಬಹುದು: “ವ್ಯಾಪಾರಿಗಳು ಎಷ್ಟು ಬಿಜಿ ಆಗಿರುತ್ತಾರೆಂದರೆ ಅವರು ಮನೆಯಲ್ಲಿ ಸಿಗುವುದೇ ಕಷ್ಟ, ಆದುದರಿಂದಲೇ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮನ್ನು ಭೇಟಿ ಮಾಡುತ್ತಿದ್ದೇವೆ. ನಮ್ಮ ಪತ್ರಿಕೆಗಳು ಪ್ರಚಲಿತ ಘಟನೆಗಳ ಬಗ್ಗೆ ಒಂದು ಭೌಗೋಳಿಕ ನೋಟವನ್ನು ಕೊಡುತ್ತವೆ.” ನಂತರ ಒಂದು ಪತ್ರಿಕೆಯಿಂದ ಒಂದು ಚುಟುಕಾದ ಅಂಶವನ್ನು ಎತ್ತಿತೋರಿಸಿರಿ.
5 ಅಥವಾ ಈ ಸರಳವಾದ ಪ್ರಸ್ತಾವವನ್ನು ನೀವು ಪ್ರಯತ್ನಿಸಬಹುದು: “ಅನೇಕವೇಳೆ ಜನರು, ತಮ್ಮ ಯಾವುದೇ ತಪ್ಪಿಲ್ಲದೆ ಏಕೆ ಕಷ್ಟವನ್ನು ಅನುಭವಿಸುತ್ತಾರೆಂಬುದರ ಕುರಿತಾಗಿ ನೀವು ಎಂದಾದರೂ ಯೋಚಿಸಿದ್ದುಂಟೊ? ಅವರು ಕಡು ಬಡತನದ ಕುಟುಂಬಗಳಲ್ಲಿ ಹುಟ್ಟಿರಬಹುದು, ಮತ್ತು ಇನ್ನು ಕೆಲವರು ವಿರೂಪಿಗಳು ಇಲ್ಲವೆ ಅಂಗವಿಕಲರಾಗಿಯೂ ಜನಿಸಿರಬಹುದು. ಒಬ್ಬ ವ್ಯಕ್ತಿಯು ಅನುಭವಿಸುವ ಕಷ್ಟಗಳು ಅವನು ತನ್ನ ಹಿಂದಿನ ಜನ್ಮದಲ್ಲಿ ಮಾಡಿದಂಥ ಯಾವುದೊ ಕೆಟ್ಟ ಕೆಲಸದ ಫಲಿತಾಂಶವಾಗಿದೆ ಎಂದು ಅನೇಕ ಜನರು ನೆನಸುತ್ತಾರೆ. ಇದು ಸತ್ಯವೊ? ಮಾನವರು ಈ ರೀತಿಯಲ್ಲಿ ಕಷ್ಟಾನುಭವಿಸಬೇಕೆಂದು ಸೃಷ್ಟಿಕರ್ತನು ಉದ್ದೇಶಿಸಿದನೊ? ಈ ಪ್ರಶ್ನೆಗಳಿಗೆ ಮನಗಾಣಿಸುವಂಥ ಉತ್ತರಗಳನ್ನು ಕಂಡುಕೊಳ್ಳುವಂತೆ ಈ ಟ್ರ್ಯಾಕ್ಟ್ ನಿಮಗೆ ಸಹಾಯಮಾಡುವುದು.” ನಂತರ ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೊ? ಎಂಬ ಹೊಸ ಟ್ರ್ಯಾಕ್ಟನ್ನು ನೀಡಿರಿ. ಆ ವ್ಯಕ್ತಿಗೆ ಬೈಬಲ್ಗಾಗಿ ಸ್ವಲ್ಪವಾದರೂ ಗೌರವವಿರುವಂತೆ ತೋರುವಲ್ಲಿ, ಈ ಟ್ರ್ಯಾಕ್ಟ್ನ 5-6ನೆಯ ಪುಟಗಳಲ್ಲಿರುವ ಸೂಕ್ತವಾದ ವಚನಗಳನ್ನು ತೋರಿಸಿರಿ.
6 ಉಸ್ತುವಾರಿ ಮಾಡುವ ವ್ಯಕ್ತಿಯು ತುಂಬ ಬಿಜಿಯಾಗಿರುವಂತೆ ತೋರುವಲ್ಲಿ, ನೀವು ಕೇವಲ ಒಂದು ಟ್ರ್ಯಾಕ್ಟನ್ನು ನೀಡಿ ಹೀಗನ್ನಬಹುದು: “ನಿಮಗೆ ಸ್ವಲ್ಪ ಬಿಡುವಿರುವಾಗ ಪುನಃ ಬರುವೆ. ಈ ಟ್ರ್ಟಾಕ್ಟ್ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ತಿಳಿದುಕೊಳ್ಳಲು ಬಯಸುತ್ತೇನೆ.”
7. ವ್ಯಾಪಾರದ ಕ್ಷೇತ್ರದಲ್ಲಿ ನಾವು ಕಂಡುಕೊಳ್ಳುವಂಥ ಆಸಕ್ತಿಯನ್ನು ಹೇಗೆ ಬೆಳೆಸಬಲ್ಲೆವು?
7 ತೋರಿಸಲ್ಪಟ್ಟಿರುವ ಆಸಕ್ತಿಯನ್ನು ಬೆಳೆಸುವುದು: ವ್ಯಾಪಾರದ ಕ್ಷೇತ್ರದಲ್ಲಿ ನೀವು ಒಂದು ಬೈಬಲ್ ಅಧ್ಯಯನವನ್ನು ನಡೆಸಲಿಕ್ಕೂ ಶಕ್ತರಾಗಬಹುದು. ಒಬ್ಬ ವಿಶೇಷ ಪಯನೀಯರನು ಒಬ್ಬ ವ್ಯಾಪಾರಿಗೆ ಪತ್ರಿಕೆಗಳನ್ನು ಕ್ರಮವಾಗಿ ತಲಪಿಸುತ್ತಿದ್ದನು. ಆ ವ್ಯಕ್ತಿಯು ತಾನು ಓದುತ್ತಿದ್ದ ವಿಷಯಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸಿದಾಗ, ಆ ಪಯನೀಯರನು ಅಪೇಕ್ಷಿಸು ಬ್ರೋಷರನ್ನು ಉಪಯೋಗಿಸುತ್ತಾ ಬೈಬಲ್ ಅಧ್ಯಯನದ ಏರ್ಪಾಡನ್ನು ಪ್ರತ್ಯಕ್ಷಾಭಿನಯಿಸಿದನು. ಅಲ್ಲಿಯೇ, ಅಂದರೆ ಆ ವ್ಯಕ್ತಿಯ ಕೆಲಸದ ಸ್ಥಳದಲ್ಲೇ ಒಂದು ಅಧ್ಯಯನವನ್ನು ಆರಂಭಿಸಲಾಯಿತು. ಅಲ್ಲಿನ ಪರಿಸ್ಥಿತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಪಯನೀಯರನು ಅಧ್ಯಯನವನ್ನು ಪ್ರತಿ ಬಾರಿ 10-15 ನಿಮಿಷಗಳಿಗೆ ಸೀಮಿತಗೊಳಿಸಿದನು. ಅದೇ ರೀತಿಯಲ್ಲಿ ನಾವು ವ್ಯಾಪಾರ ಕ್ಷೇತ್ರದಲ್ಲಿ ಸಾಕ್ಷಿಕೊಡುವ ಮೂಲಕ ಅರ್ಹ ವ್ಯಕ್ತಿಗಳಿಗಾಗಿ ಹುಡುಕುವುದನ್ನು ಮುಂದುವರಿಸೋಣ.