ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/05 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2005 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜನವರಿ 10ರಿಂದ ಆರಂಭವಾಗುವ ವಾರ
  • ಜನವರಿ 17ರಿಂದ ಆರಂಭವಾಗುವ ವಾರ
  • ಜನವರಿ 24ರಿಂದ ಆರಂಭವಾಗುವ ವಾರ
  • ಜನವರಿ 31ರಿಂದ ಆರಂಭವಾಗುವ ವಾರ
  • ಫೆಬ್ರವರಿ 7ರಿಂದ ಆರಂಭವಾಗುವ ವಾರ
2005 ನಮ್ಮ ರಾಜ್ಯದ ಸೇವೆ
km 1/05 ಪು. 2

ಸೇವಾ ಕೂಟದ ಶೆಡ್ಯೂಲ್‌

ಜನವರಿ 10ರಿಂದ ಆರಂಭವಾಗುವ ವಾರ

ಗೀತೆ 223

10 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಜನವರಿ 15ರ ಕಾವಲಿನಬುರುಜು ಮತ್ತು ಜನವರಿ-ಮಾರ್ಚ್‌ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಇತರ ಪ್ರಾಯೋಗಿಕ ನಿರೂಪಣೆಗಳನ್ನು ಉಪಯೋಗಿಸಬಹುದು. ಒಂದು ನಿರೂಪಣೆಯಲ್ಲಿ, ಒಬ್ಬ ಸಾಕ್ಷಿಯಲ್ಲದ ಸಂಬಂಧಿಕನಿಗೆ ಹೇಗೆ ಪತ್ರಿಕೆಗಳನ್ನು ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿ.

15 ನಿ:  “‘ನಂಬಿಕೆಯ ವಾಕ್ಯಗಳಿಂದ’ ಪೋಷಿಸಲ್ಪಡುವುದು.”a ಸಮಯವು ಅನುಮತಿಸಿದಂತೆ ಸೂಚಿಸಲ್ಪಟ್ಟಿರುವ ವಚನಗಳನ್ನು ಓದಿ ಚರ್ಚಿಸಿರಿ.

20 ನಿ:  “ಹೊಂದಿಸಿಕೊಳ್ಳಸಾಧ್ಯವಿರುವಂಥ ಒಂದು ಪ್ರಸ್ತಾಪವನ್ನು ಉಪಯೋಗಿಸಲು ಪ್ರಯತ್ನಿಸಿರಿ.” ಸಭಿಕರೊಂದಿಗೆ ಪುರವಣಿಯ 6ನೇ ಪುಟದ ಚರ್ಚೆ. ಈ ತಿಂಗಳಿನ ಸಾಹಿತ್ಯ ನೀಡುವಿಕೆಯಲ್ಲಿ ಈ ಪ್ರಸ್ತಾಪವನ್ನು ಉಪಯೋಗಿಸಸಾಧ್ಯವಿರುವ ಎರಡು ವಿಧಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ, ಪ್ರಚಾರಕನು ಮನೆಯವರು ವ್ಯಕ್ತಪಡಿಸಿದ ಚಿಂತೆಯನ್ನು ಸಂಬೋಧಿಸುವ ಒಂದು ಶಾಸ್ತ್ರವಚನವನ್ನು ಓದುವಂತೆ ಮಾಡಿ.

ಗೀತೆ 143 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 17ರಿಂದ ಆರಂಭವಾಗುವ ವಾರ

ಗೀತೆ 34

10 ನಿ:  ಸ್ಥಳಿಕ ಪ್ರಕಟನೆಗಳು.

15 ನಿ:  ಯುವ ಜನರೇ​—⁠ನೀವು ಆತ್ಮಿಕ ಪ್ರಗತಿಯನ್ನು ಮಾಡುತ್ತಿದ್ದೀರೊ? ಏಪ್ರಿಲ್‌ 1, 2003, ಕಾವಲಿನಬುರುಜುವಿನ 8-10ನೇ ಪುಟಗಳ ಮೇಲಾಧಾರಿತವಾದ ಹಿರಿಯನಿಂದ ಭಾಷಣ. ವಾಸ್ತವಿಕವಾದ ಮತ್ತು ಸಾಧಿಸಲುಸಾಧ್ಯವಿರುವ ಕೆಲವು ಗುರಿಗಳ ಕುರಿತು ತಿಳಿಸಿರಿ, ಹಾಗೂ ತಮಗಾಗಿ ನಿರ್ದಿಷ್ಟ ಆಧ್ಯಾತ್ಮಿಕ ಗುರಿಗಳನ್ನು ಇಟ್ಟುಕೊಳ್ಳುವಂತೆ ಯುವ ಜನರನ್ನು ಪ್ರೋತ್ಸಾಹಿಸಿರಿ.

20 ನಿ:  “ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು​—⁠ಭಾಗ 5.”b ಪ್ಯಾರಗ್ರಾಫ್‌ 4-5ರಲ್ಲಿ ತಿಳಿಸಲ್ಪಟ್ಟಿರುವ ಪಾಶಗಳನ್ನು ಹೇಗೆ ತಪ್ಪಿಸಬಹುದು ಎಂಬುದರ ಕುರಿತು ಒಬ್ಬ ಅನುಭವಸ್ಥ ಬೋಧಕನು ಹೊಸ ಪ್ರಚಾರಕನೊಂದಿಗೆ ಚರ್ಚಿಸುತ್ತಿರುವ ಪ್ರತ್ಯಕ್ಷಾಭಿನಯವನ್ನು ಸೇರಿಸಿಕೊಳ್ಳಿ.

ಗೀತೆ 78 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 24ರಿಂದ ಆರಂಭವಾಗುವ ವಾರ

ಗೀತೆ 163

10 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ. “ವಿಸಿಡಿಯಲ್ಲಿ ವಿಡಿಯೋ ಕಾರ್ಯಕ್ರಮಗಳು” ಎಂಬ ಚೌಕವನ್ನು ಸಂಕ್ಷಿಪ್ತವಾಗಿ ಪರಿಶೀಲಿಸಿರಿ.

10 ನಿ:  ಪ್ರಶ್ನಾ ಚೌಕ. ಒಂದು ಭಾಷಣ.

25 ನಿ:  “ಮಾದರಿ ನಿರೂಪಣೆಗಳನ್ನು ಉಪಯೋಗಿಸುವ ವಿಧ.”c ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಈ ತಿಂಗಳಿನ ಪುರವಣಿಯ 3-5ನೆಯ ಪುಟಗಳಲ್ಲಿ ನಾವು ನೀಡಲಿರುವ ಪ್ರಕಾಶನಗಳ ನಿರೂಪಣೆಗಳು ಅಡಕವಾಗಿವೆ ಎಂಬುದನ್ನು ತಿಳಿಸಿರಿ. ವರ್ಷದಾದ್ಯಂತ ಉಪಯೋಗಿಸಲಿಕ್ಕಾಗಿ ಈ ಪುರವಣಿಯನ್ನು ಜೋಪಾನವಾಗಿಡಿ. ಲೇಖನವನ್ನು ಪರಿಗಣಿಸಿದ ತರುವಾಯ, ಫೆಬ್ರವರಿ ತಿಂಗಳಿನಲ್ಲಿ ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವನ್ನು ನಾವು ಹೇಗೆ ನೀಡಬಲ್ಲೆವು ಎಂಬುದನ್ನು ಚರ್ಚಿಸಿರಿ. ಎರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಅವು ಪುಟ 3ರಲ್ಲಿ ಕೊಡಲ್ಪಟ್ಟಿರುವ ಮಾದರಿ ನಿರೂಪಣೆಗಳ ಮೇಲೆ ಆಧಾರಿತವಾಗಿರಬಹುದು ಅಥವಾ ಸ್ಥಳಿಕ ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿರಬಹುದಾದ ಇತರ ನಿರೂಪಣೆಗಳ ಮೇಲೆ ಆಧಾರಿತವಾಗಿರಬಹುದು.

ಗೀತೆ 200 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 31ರಿಂದ ಆರಂಭವಾಗುವ ವಾರ

ಗೀತೆ 157

10 ನಿ:  ಸ್ಥಳಿಕ ಪ್ರಕಟನೆಗಳು. ಜನವರಿ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವಲ್ಲಿ) ಉಪಯೋಗಿಸುತ್ತಾ, ಫೆಬ್ರವರಿ 1ರ ಕಾವಲಿನಬುರುಜು ಅಥವಾ ಜನವರಿ-ಮಾರ್ಚ್‌ ಎಚ್ಚರ! ಪತ್ರಿಕೆಯನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಇತರ ಪ್ರಾಯೋಗಿಕ ನಿರೂಪಣೆಗಳನ್ನು ಉಪಯೋಗಿಸಬಹುದು.

15 ನಿ:  ಸ್ಥಳಿಕ ಅಗತ್ಯಗಳು.

20 ನಿ:  ನೀವು ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುತ್ತಿದ್ದೀರೋ? ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು​—⁠2005ರ ಮುನ್ನುಡಿಯ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ದಿನದ ವಚನ ಮತ್ತು ಹೇಳಿಕೆಗಳನ್ನು ಪರಿಗಣಿಸಲು ಎಲ್ಲರೂ ಪ್ರತಿ ದಿನ ಸ್ವಲ್ಪ ಸಮಯವನ್ನು ಬದಿಗಿರಿಸುವ ಅಗತ್ಯತೆಯ ಕುರಿತು ಚರ್ಚಿಸಿರಿ. ಒಬ್ಬರು ಅಥವಾ ಇಬ್ಬರು, ದಿನದ ವಚನವನ್ನು ಪರಿಗಣಿಸುವ ಅವರ ರೂಢಿಯ ಕುರಿತು ಮತ್ತು ಅವರು ಹೇಗೆ ಪ್ರಯೋಜನವನ್ನು ಹೊಂದಿದ್ದಾರೆ ಎಂಬುದರ ಕುರಿತು ಹೇಳಿಕೆ ನೀಡುವಂತೆ ಮುಂಚಿತವಾಗಿ ಏರ್ಪಾಡು ಮಾಡಿರಿ. 2005ರ ವಾರ್ಷಿಕವಚನದ ಸಂಕ್ಷಿಪ್ತ ಚರ್ಚೆಯೊಂದಿಗೆ ಸಮಾಪ್ತಿಗೊಳಿಸಿರಿ.

ಗೀತೆ 184 ಮತ್ತು ಸಮಾಪ್ತಿಯ ಪ್ರಾರ್ಥನೆ.

ಫೆಬ್ರವರಿ 7ರಿಂದ ಆರಂಭವಾಗುವ ವಾರ

ಗೀತೆ 97

10 ನಿ:  ಸ್ಥಳಿಕ ಪ್ರಕಟನೆಗಳು.

15 ನಿ:  ದೇವರನ್ನು ಮತ್ತು ನೆರೆಯವನನ್ನು ಪ್ರೀತಿಸುವಂತೆ ಹೊಸಬರಿಗೆ ಸಹಾಯಮಾಡಿರಿ. ಜುಲೈ 1, 2004, ಕಾವಲಿನಬುರುಜುವಿನ ಪುಟ 16, ಪ್ಯಾರಗ್ರಾಫ್‌ 7-9ರ ಮೇಲಾಧಾರಿತವಾದ ಭಾಷಣ. ಹೊಸಬರು ಕ್ರಿಸ್ತನ ಶಿಷ್ಯರಾಗುವಂತೆ ಸಹಾಯಮಾಡುವುದರಲ್ಲಿ ಹೇಗೆ ಸಭೆಯಲ್ಲಿರುವ ಪ್ರತಿಯೊಬ್ಬ ಸದಸ್ಯನಿಗೆ ಒಂದು ಪಾತ್ರವನ್ನು ನಿರ್ವಹಿಸಲಿಕ್ಕಿರುತ್ತದೆ ಎಂಬುದನ್ನು ಎತ್ತಿತೋರಿಸಿ.

20 ನಿ:  ಯೆಹೋವನು ಎಲ್ಲಾ ಶುಭವನ್ನು ದಯಪಾಲಿಸುತ್ತಾನೆ. (ಕೀರ್ತ. 84:11) ಪರೀಕ್ಷೆಗಳನ್ನು ನಂಬಿಗಸ್ತಿಕೆಯಿಂದ ತಾಳಿಕೊಂಡಿರುವ ಕೆಲವು ಸಹೋದರ ಸಹೋದರಿಯರನ್ನು ಇಂಟರ್‌ವ್ಯೂ ಮಾಡಿರಿ. ಅವರು ಯಾವ ಕಷ್ಟಗಳನ್ನು ಎದುರಿಸಿದ್ದಾರೆ? ಇವುಗಳನ್ನು ತಾಳಿಕೊಳ್ಳುವಂತೆ ಅವರಿಗೆ ಯಾವುದು ಸಹಾಯಮಾಡಿದೆ? ಯಾವ ಆನಂದ ಆಶೀರ್ವಾದಗಳನ್ನು ಅವರು ಅನುಭವಿಸಿದ್ದಾರೆ?

ಗೀತೆ 104 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ