ವಿಸಿಡಿಯಲ್ಲಿ ವಿಡಿಯೋ ಕಾರ್ಯಕ್ರಮಗಳು
ರಕ್ತಪೂರಣ ಬದಲಿಗಳು—ಸಾಕ್ಷ್ಯಚಿತ್ರ ಸರಣಿ (ಇಂಗ್ಲಿಷ್) ಎಂದು ಹೆಸರಿಸಲ್ಪಟ್ಟಿರುವ ವಿಸಿಡಿಗಳ ಶ್ರೇಣಿಯಲ್ಲಿ ಮೂರು ವಿಡಿಯೋ ಕಾರ್ಯಕ್ರಮಗಳು ಇವೆ. ರಕ್ತಚಿಕಿತ್ಸೆಗೆ ಸರಳ, ಸುರಕ್ಷಿತ, ಪರಿಣಾಮಕಾರಿಯಾದ ಪರ್ಯಾಯ ಉಪಾಯಗಳು ಎಂಬ ವಿಡಿಯೋ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ವಿನ್ಯಾಸಿಸಲ್ಪಟ್ಟಿತು ಮತ್ತು ಈ ಕಾರಣದಿಂದ ಅದರಲ್ಲಿ ಇತರ ಎರಡು ವಿಡಿಯೋಗಳಿಗಿಂತ ಹೆಚ್ಚಿನ ವೈದ್ಯಕೀಯ ದೃಶ್ಯಗಳಿವೆ. ರಕ್ತಪೂರಣಕ್ಕೆ ಬದಲಿಯಾದ ಆರೋಗ್ಯಾರೈಕೆ—ರೋಗಿಯ ಅಗತ್ಯಗಳು ಮತ್ತು ಹಕ್ಕುಗಳನ್ನು ಪೂರೈಸುವುದು ಎಂಬ ವಿಡಿಯೋ ವಿಶೇಷವಾಗಿ ವೈದ್ಯಕೀಯ ಪತ್ರಿಕೋದ್ಯಮಿಗಳಿಗೆ, ಆರೋಗ್ಯಾರೈಕೆಯ ಅಧಿಕಾರಿಗಳಿಗೆ, ಸಮಾಜ ಸೇವಕರಿಗೆ, ಮತ್ತು ನ್ಯಾಯಾಧೀಶರಿಗಾಗಿ ವಿನ್ಯಾಸಿಸಲ್ಪಟ್ಟಿತು. ರೋಗಿಯ ಅಗತ್ಯಗಳಿಗೆ ಗಮನವನ್ನು ಕೊಡುವ ಅದೇ ಸಮಯದಲ್ಲಿ ಅವರ ಕಾನೂನುಬದ್ಧ ಹಕ್ಕುಗಳನ್ನು ಹೇಗೆ ಪರಿಗಣನೆಗೆ ತೆಗೆದುಕೊಳ್ಳಬಹುದೆಂಬುದನ್ನು ಇದು ಪರಿಗಣಿಸುತ್ತದೆ. ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ ಎಂಬ ವಿಡಿಯೋ ಪ್ರಧಾನವಾಗಿ ಸಾಮಾನ್ಯ ಜನರಿಗಾಗಿ ತಯಾರಿಸಲ್ಪಟ್ಟಿತು. ಈ ವಿಡಿಯೋ ಕಾರ್ಯಕ್ರಮಗಳು ಸದ್ಯಕ್ಕೆ ಇಂಗ್ಲಿಷ್ನಲ್ಲಿ ಮಾತ್ರ ಲಭ್ಯವಿವೆ. ವಿಸಿಡಿ ಪ್ಲೇಅರನ್ನು ಹೊಂದಿರುವ ಕುಟುಂಬಗಳು ತಮ್ಮ ವಿನಂತಿಗಳನ್ನು ಕಳುಹಿಸಬಹುದು. ಈ ವಿಡಿಯೋ ಕಾರ್ಯಕ್ರಮಗಳನ್ನು ನಿಮ್ಮ ವೈದ್ಯರು, ಬೈಬಲ್ ವಿದ್ಯಾರ್ಥಿಗಳು, ಸಾಕ್ಷ್ಯೇತರ ಸಂಗಾತಿ, ಸಂಬಂಧಿಕರು, ಉಪಾಧ್ಯಾಯರು, ಸಹೋದ್ಯೋಗಿಗಳು ಮತ್ತು ಸಹಪಾಠಿಗಳಿಗೆ ತೋರಿಸಲು ದಯವಿಟ್ಟು ಹಿಂಜರಿಯದಿರಿ.