ಸೇವಾ ಕೂಟದ ಶೆಡ್ಯೂಲ್
ಜೂನ್ 13ರಿಂದ ಆರಂಭವಾಗುವ ವಾರ
ಗೀತೆ 198
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಜೂನ್ 15ರ ಕಾವಲಿನಬುರುಜು ಮತ್ತು ಏಪ್ರಿಲ್-ಜೂನ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಇತರ ಪ್ರಾಯೋಗಿಕ ನಿರೂಪಣೆಗಳನ್ನು ಉಪಯೋಗಿಸಬಹುದು. ಒಂದು ನಿರೂಪಣೆಯಲ್ಲಿ, ಅನೌಪಚಾರಿಕ ಸನ್ನಿವೇಶದಲ್ಲಿ ಹೇಗೆ ಪತ್ರಿಕೆಗಳನ್ನು ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿ.
15 ನಿ: ಅಸ್ನಾತ ಪ್ರಚಾರಕರಾಗಲು ಇತರರಿಗೆ ಸಹಾಯಮಾಡಿರಿ. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಎಂಬ ಪುಸ್ತಕದ ಪುಟ 79-81ರ ಮೇಲಾಧಾರಿತವಾಗಿ ಒಬ್ಬ ಹಿರಿಯನಿಂದ ಕೊಡಲ್ಪಡುವ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸಭೆಯೊಂದಿಗೆ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ಬೈಬಲ್ ವಿದ್ಯಾರ್ಥಿಯು ಶಾಸ್ತ್ರೀಯ ಅಗತ್ಯತೆಗಳನ್ನು ತಲಪಿದ್ದಾನೊ ಎಂಬುದನ್ನು ನಿರ್ಧರಿಸಲಿಕ್ಕಾಗಿರುವ ಏರ್ಪಾಡಿನ ಕುರಿತು ಚರ್ಚಿಸಿರಿ. ಅಸ್ನಾತ ಪ್ರಚಾರಕರಾಗಲು ಅರ್ಹರಾಗಿರುವ ಬೈಬಲ್ ವಿದ್ಯಾರ್ಥಿಗಳಿಗೆ, ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಭಾಗವಹಿಸಲು ಆರಂಭಿಸುವಂತೆ ನಾವು ಹೇಗೆ ತರಬೇತುಗೊಳಿಸಬಲ್ಲೆವು ಎಂಬುದನ್ನು ಮುಂದಿನ ವಾರ ಪರಿಗಣಿಸೋಣ.
20 ನಿ: “ಸಾರುವಿಕೆಯು ತಾಳಿಕೊಳ್ಳಲು ನಮಗೆ ಸಹಾಯಮಾಡುತ್ತದೆ.”a ಸಮಯವು ಅನುಮತಿಸುವ ಮೇರೆಗೆ, ಸೂಚಿಸಲ್ಪಟ್ಟಿರುವ ಶಾಸ್ತ್ರವಚನಗಳ ಮೇಲೆ ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.
ಗೀತೆ 149 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 20ರಿಂದ ಆರಂಭವಾಗುವ ವಾರ
ಗೀತೆ 206
10 ನಿ: ಸ್ಥಳಿಕ ಪ್ರಕಟನೆಗಳು. 2003ರ ಜುಲೈ ತಿಂಗಳಿನ ನಮ್ಮ ರಾಜ್ಯದ ಸೇವೆ, ಪುಟ 8ರಿಂದ ಮುಖ್ಯ ಅಂಶಗಳನ್ನು ಪುನರ್ವಿಮರ್ಶಿಸಿರಿ. ಪ್ರಚಾರಕರು ವಿದೇಶೀ ಭಾಷೆಯಲ್ಲಿ ಸಾಹಿತ್ಯವನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ವಿವರಿಸಿರಿ. ಈ ಮಾಹಿತಿಯು ಸ್ಥಳಿಕ ಟೆರಿಟೊರಿಗೆ ಹೇಗೆ ಅನ್ವಯಿಸುತ್ತದೆ ಎಂಬುದನ್ನು ಚರ್ಚಿಸಿರಿ. ವಿದೇಶೀ ಭಾಷೆಯ ಸಾಹಿತ್ಯಕ್ಕಾಗಿನ ಯಾವುದೇ ವಿನಂತಿಯನ್ನು—ಅದು ಕೇವಲ ಒಂದೇ ಒಂದು ಪ್ರಕಾಶನವಾಗಿದ್ದರೂ—ಲಿಟರೇಚರ್ ನೋಡಿಕೊಳ್ಳುವವನ ಮೂಲಕವೇ ಮಾಡಬೇಕು. ಹೀಗೆ ಮಾಡುವುದಾದರೆ ಅಗತ್ಯವಿರುವ ಪ್ರಕಾಶನವನ್ನು ತಡವಿಲ್ಲದೆ ಪಡೆದುಕೊಳ್ಳಲು ಸಾಧ್ಯವಾಗುವುದು.
15 ನಿ: ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಆನಂದಿಸಲಾದ ಕ್ಷೇತ್ರ ಸೇವಾ ಅನುಭವಗಳನ್ನು ತಿಳಿಸಿರಿ ಅಥವಾ ಪುನರಭಿನಯಿಸಿ ತೋರಿಸಿರಿ. ಜ್ಞಾಪಕಾಚರಣೆಯ ಸಮಯದಲ್ಲಿ ಶುಶ್ರೂಷೆಯಲ್ಲಿನ ತಮ್ಮ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಯಾವ ಪ್ರಯತ್ನವನ್ನು ಮಾಡಿದ್ದಾರೆ ಮತ್ತು ಅದರ ಫಲಿತಾಂಶವಾಗಿ ಯಾವ ಆಶೀರ್ವಾದಗಳಲ್ಲಿ ಆನಂದಿಸಿದ್ದಾರೆ ಎಂಬುದನ್ನು ತಿಳಿಸುವಂತೆ ಒಬ್ಬ ಅಥವಾ ಇಬ್ಬರು ಪ್ರಚಾರಕರೊಂದಿಗೆ ಮುಂಚಿತವಾಗಿಯೇ ಏರ್ಪಾಡು ಮಾಡಿರಿ. ಎಚ್ಚರಿಕೆಯಿಂದಿರಿ! ಬ್ರೋಷರನ್ನು ಪಡೆದುಕೊಂಡವರನ್ನು ಪುನಃ ಭೇಟಿಮಾಡಿದರಿಂದ ದೊರೆತ ಅನುಭವಗಳನ್ನು ಹೇಳುವಂತೆ ಸಭಿಕರನ್ನು ಆಮಂತ್ರಿಸಿರಿ. ಎದ್ದುಕಾಣುವ ಅನುಭವಗಳನ್ನು ಪುನರಭಿನಯಿಸಿ ತೋರಿಸುವಂತೆ ಏರ್ಪಾಡು ಮಾಡಿರಿ. ವಿಶೇಷ ಕಾರ್ಯಾಚರಣೆಗೆ ತಮ್ಮ ಬೆಂಬಲವನ್ನು ನೀಡಿದ ಎಲ್ಲರನ್ನು ಶ್ಲಾಘಿಸಿರಿ.
20 ನಿ: “ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು—ಭಾಗ 10.”b ಪೂರ್ವಾಭಿನಯವನ್ನು ಮಾಡಲಾಗುತ್ತಿರುವುದನ್ನು ತೋರಿಸುವ ಒಂದು ಪ್ರತ್ಯಕ್ಷಾಭಿನಯನ್ನು ಸೇರಿಸಿರಿ. ವಿದ್ಯಾರ್ಥಿಯು ನಿರೂಪಣೆಯನ್ನು ಅಭ್ಯಾಸಿಸುತ್ತಿರುವಾಗ, ಮನೆಯವನ ಪಾತ್ರವನ್ನು ವಹಿಸಿರುವ ಈ ಭಾಗದ ನಿರ್ವಾಹಕನು, ಒಂದು ಸಾಮಾನ್ಯ ಆಕ್ಷೇಪಣೆಯನ್ನು ಎಬ್ಬಿಸುತ್ತಾನೆ ಮತ್ತು ವಿದ್ಯಾರ್ಥಿಗೆ ಏನು ಮಾಡಬೇಕೆಂದು ತೋಚದ ಸಮಯದಲ್ಲಿ, ಅದನ್ನು ಹೇಗೆ ನಿಭಾಯಿಸಬಹುದಿತ್ತು ಎಂಬುದನ್ನು ವಿವರಿಸುತ್ತಾನೆ. ಇದಕ್ಕೆ ಕೂಡಿಸಿ, ಮನೆಯಿಂದ ಮನೆಯ ಶುಶ್ರೂಷೆಯನ್ನು ತಾವು ಆರಂಭಿಸಿದ ಸಮಯದಲ್ಲಿ ತಮಗೆ ದೊರೆತ ತರಬೇತಿನ ಕುರಿತು ಒಬ್ಬ ಅಥವಾ ಇಬ್ಬರು ಹೇಳಿಕೆ ನೀಡುವಂತೆ ಮುಂಚಿತವಾಗಿಯೇ ಏರ್ಪಾಡು ಮಾಡಿರಿ.
ಗೀತೆ 208 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 27ರಿಂದ ಆರಂಭವಾಗುವ ವಾರ
ಗೀತೆ 113
10 ನಿ: ಸ್ಥಳಿಕ ಪ್ರಕಟನೆಗಳು. ಜೂನ್ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ನೆನಪಿಸಿರಿ. ಅಕೌಂಟ್ಸ್ ವರದಿ ಮತ್ತು ದೊರೆತಂಥ ದಾನಗಳ ಅಕ್ನಾಲಿಜ್‌ಮಂಟ್‌ಗಳನ್ನು ಓದಿ ಹೇಳಿರಿ. ಜುಲೈ 1ರ ಕಾವಲಿನಬುರುಜು ಅಥವಾ ಜುಲೈ-ಸೆಪ್ಟೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಇತರ ಪ್ರಾಯೋಗಿಕ ನಿರೂಪಣೆಗಳನ್ನು ಉಪಯೋಗಿಸಬಹುದು. ಪ್ರತ್ಯಕ್ಷಾಭಿನಯದ ನಂತರ, ಮನೆಯವನ ಆಸಕ್ತಿಯನ್ನು ಕೆರಳಿಸಲು ಆರಂಭದಲ್ಲಿ ಉಪಯೋಗಿಸಲಾದ ಹೇಳಿಕೆಯ ಕಡೆಗೆ ಸಭಿಕರ ಗಮನವನ್ನು ಸೆಳೆಯಿರಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: ಜುಲೈ ಮತ್ತು ಆಗಸ್ಟ್‌ನಲ್ಲಿ ಬ್ರೋಷರ್‌ಗಳನ್ನು ನೀಡುವುದು. ಪುರವಣಿಯಲ್ಲಿರುವ ವಿಷಯವನ್ನು ಉಪಯೋಗಿಸುತ್ತಾ ಕೊಡಲ್ಪಡುವ ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಪುಟ 3ರಲ್ಲಿರುವ ಚೌಕವನ್ನು ಮತ್ತು 2005ರ ಜನವರಿ ತಿಂಗಳಿನ ನಮ್ಮ ರಾಜ್ಯದ ಸೇವೆ, ಪುಟ 8ರಿಂದ ಕೆಲವು ಮುಖ್ಯ ಅಂಶಗಳನ್ನು ಎತ್ತಿತೋರಿಸುತ್ತಾ, ಪುರವಣಿಯನ್ನು ಹೇಗೆ ಉಪಯೋಗಿಸುವುದು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರಿ. ಸ್ಥಳಿಕ ಟೆರಿಟೊರಿಯಲ್ಲಿ ಪ್ರಥಮ ಭೇಟಿಯ ಸಮಯದಲ್ಲಿ ಬ್ರೋಷರನ್ನು ನೀಡಲು ಉಪಯುಕ್ತವಾಗಿರುವ ಸಲಹೆಗಳನ್ನು ಚರ್ಚಿಸಿರಿ. ಎರಡು ಅಥವಾ ಮೂರು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿ ತೋರಿಸಿರಿ. ಕಡಿಮೆಪಕ್ಷ ಒಂದು ಪ್ರತ್ಯಕ್ಷಾಭಿನಯವನ್ನು ಒಬ್ಬ ಚಿಕ್ಕ ಹುಡುಗ/ಹುಡುಗಿ ನಿರ್ವಹಿಸುವಂತೆ ಏರ್ಪಾಡು ಮಾಡಿರಿ.
ಗೀತೆ 196 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 4ರಿಂದ ಆರಂಭವಾಗುವ ವಾರ
ಗೀತೆ 70
10 ನಿ: ಸ್ಥಳಿಕ ಪ್ರಕಟನೆಗಳು.
15 ನಿ: ಕುಟುಂಬ ಕಾಲತಖ್ತೆಯಿಂದ ನೀವು ಪ್ರಯೋಜನವನ್ನು ಪಡೆಯುತ್ತಿದ್ದೀರೊ? 2005ರ ಮೇ ತಿಂಗಳಿನ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿರುವ ಸಲಹೆಗಳನ್ನು ಪುನರ್ವಿಮರ್ಶಿಸಿರಿ. ಆ ಸಲಹೆಗಳನ್ನು ಅನ್ವಯಿಸಲು ಪ್ರಯತ್ನಿಸಿರುವವರು ಮತ್ತು ಅದರಿಂದ ಪ್ರಯೋಜನವನ್ನು ಪಡೆದುಕೊಂಡಿರುವವರು ತಮ್ಮ ಹೇಳಿಕೆಗಳನ್ನು ನೀಡುವಂತೆ ಆಮಂತ್ರಿಸಿರಿ.
20 ನಿ: “ಸಾರ್ವಜನಿಕ ಸ್ಥಳಗಳಲ್ಲಿ ಪರಿಣಾಮಕಾರಿಯಾಗಿ ಸಾಕ್ಷಿನೀಡುವುದು.”c ಸ್ಥಳಿಕ ಟೆರಿಟೊರಿಗೆ ಅನ್ವಯವನ್ನು ಮಾಡಿರಿ. ಎಲ್ಲಿ ಸೂಕ್ತವೊ ಅಲ್ಲಿ ಪ್ಲೀಸ್ ಫಾಲೊ ಅಪ್ (S-43) ಫಾರ್ಮ್‌ನ ಉಪಯೋಗವನ್ನು ಮಾಡುವಂತೆ ಪ್ರಚಾರಕರಿಗೆ ನೆನಪುಹುಟ್ಟಿಸಿರಿ.—2005ರ ಫೆಬ್ರವರಿ ತಿಂಗಳಿನ ನಮ್ಮ ರಾಜ್ಯದ ಸೇವೆ, ಪುಟ 6ನ್ನು ನೋಡಿ.
ಗೀತೆ 120 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.