ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/07 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2007 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜನವರಿ 8ರಿಂದ ಆರಂಭವಾಗುವ ವಾರ
  • ಜನವರಿ 15ರಿಂದ ಆರಂಭವಾಗುವ ವಾರ
  • ಜನವರಿ 22ರಿಂದ ಆರಂಭವಾಗುವ ವಾರ
  • ಜನವರಿ 29ರಿಂದ ಆರಂಭವಾಗುವ ವಾರ
  • ಫೆಬ್ರವರಿ 5ರಿಂದ ಆರಂಭವಾಗುವ ವಾರ
2007 ನಮ್ಮ ರಾಜ್ಯದ ಸೇವೆ
km 1/07 ಪು. 2

ಸೇವಾ ಕೂಟದ ಶೆಡ್ಯೂಲ್‌

ಜನವರಿ 8ರಿಂದ ಆರಂಭವಾಗುವ ವಾರ

ಗೀತೆ 12

10 ನಿ: ಸ್ಥಳಿಕ ಪ್ರಕಟನೆಗಳು. ಜನವರಿ 22ರಿಂದ ಆರಂಭವಾಗುವ ವಾರದ ಸೇವಾ ಕೂಟದಲ್ಲಿ ನಡೆಸಲ್ಪಡುವ ಚರ್ಚೆಯ ತಯಾರಿಗೆ ರಕ್ತರಹಿತ ಚಿಕಿತ್ಸೆ​—⁠ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ (ಇಂಗ್ಲಿಷ್‌) ವಿಡಿಯೋವನ್ನು ವೀಕ್ಷಿಸುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜನವರಿ-ಮಾರ್ಚ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಜನವರಿ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಪ್ರತ್ಯಕ್ಷಾಭಿನಯದಲ್ಲಿ “ನಾನು ಕಾರ್ಯಮಗ್ನನು” ಎಂಬ ಸಂಭಾಷಣಾ ತಡೆಗಟ್ಟನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ತೋರಿಸಿರಿ.​—⁠ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ 11-12ನೆಯ ಪುಟಗಳನ್ನು ನೋಡಿರಿ.

15 ನಿ: ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದರಿಂದ ಪ್ರಯೋಜನ ಪಡೆಯಿರಿ. ಇದು ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು​—⁠2007ರ ಮುನ್ನುಡಿಯ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ದಿನದ ವಚನ ಮತ್ತು ಹೇಳಿಕೆಗಳನ್ನು ಪರಿಗಣಿಸಲು ಎಲ್ಲರೂ ಪ್ರತಿ ದಿನ ಸ್ವಲ್ಪ ಸಮಯವನ್ನು ಬದಿಗಿರಿಸುವುದು ಎಷ್ಟು ಅಗತ್ಯ ಎಂಬುದನ್ನು ಚರ್ಚಿಸಿರಿ. ಒಬ್ಬರು ಅಥವಾ ಇಬ್ಬರು, ದಿನದ ವಚನವನ್ನು ಪರಿಗಣಿಸುವ ತಮ್ಮ ರೂಢಿಯ ಕುರಿತು ಮತ್ತು ಅದರಿಂದ ಹೇಗೆ ಪ್ರಯೋಜನವನ್ನು ಹೊಂದಿದ್ದಾರೆ ಎಂಬುದರ ಕುರಿತು ಹೇಳಿಕೆ ನೀಡುವಂತೆ ಮುಂಚಿತವಾಗಿ ಏರ್ಪಾಡುಮಾಡಿರಿ. 2007ರ ವಾರ್ಷಿಕವಚನದ ಸಂಕ್ಷಿಪ್ತ ಚರ್ಚೆಯೊಂದಿಗೆ ಸಮಾಪ್ತಿಗೊಳಿಸಿರಿ.

20 ನಿ: ಸುವಾರ್ತೆಯನ್ನು ಪ್ರತಿಯೊಬ್ಬರಿಗೆ ತಲಪಿಸಿರಿ. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಪುಟ 92 ರಿಂದ 102ರಲ್ಲಿರುವ ಉಪಶೀರ್ಷಿಕೆಯವರೆಗಿನ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.

ಗೀತೆ 165 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 15ರಿಂದ ಆರಂಭವಾಗುವ ವಾರ

ಗೀತೆ 93

10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.

15 ನಿ: ಬೇಕಾದ ಹೆಜ್ಜೆಯನ್ನು ತೆಗೆದುಕೊಳ್ಳುವುದರಿಂದ ನಿಮ್ಮನ್ನು ಏನಾದರೂ ತಡೆದುಹಿಡಿಯುತ್ತಿದೆಯೊ? 2002, ಏಪ್ರಿಲ್‌ 1ರ ಕಾವಲಿನಬುರುಜುವಿನ ಪುಟ 13-15ರ ಮೇಲಾಧಾರಿತವಾಗಿ ಹಿರಿಯನೊಬ್ಬನಿಂದ ನೀಡಲ್ಪಡುವ ಭಾಷಣ.

20 ನಿ: “ನನಗೆ ಆಸಕ್ತಿ ಇಲ್ಲ.”a ಪ್ಯಾರ 4ನ್ನು ಚರ್ಚಿಸುವಾಗ ಸ್ಥಳಿಕ ಟೆರಿಟೊರಿಯಲ್ಲಿ ಜನರಿಗೆ ಯಾವ ವಿಷಯದಲ್ಲಿ ಆಸಕ್ತಿಯಿದೆಯೆಂದು ಸಭಿಕರನ್ನು ಕೇಳಿರಿ. ‘ನನಗೆ ಆಸಕ್ತಿ ಇಲ್ಲ’ ಎಂಬ ಸಂಭಾಷಣಾ ತಡೆಗಟ್ಟನ್ನು ಹೇಗೆ ನಿಭಾಯಿಸುವುದೆಂದು ತೋರಿಸುವ ಎರಡು ಚುಟುಕಾದ ಪ್ರತ್ಯಕ್ಷಾಭಿನಯಗಳಿರಲಿ.​—⁠ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯ 8ನೇ ಪುಟವನ್ನು ನೋಡಿರಿ.

ಗೀತೆ 135 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 22ರಿಂದ ಆರಂಭವಾಗುವ ವಾರ

ಗೀತೆ 224

10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 4 ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜನವರಿ-ಮಾರ್ಚ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಫೆಬ್ರವರಿ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಪ್ರತ್ಯಕ್ಷಾಭಿನಯವು ಪತ್ರಿಕಾ ಮಾರ್ಗದಲ್ಲಿ ಸಂದರ್ಶಿಸುವ ವ್ಯಕ್ತಿಯನ್ನು ಪುನಃರ್ಭೇಟಿ ಮಾಡುವಂತೆ ಇರಲಿ.

10 ನಿ: ಸ್ಥಳಿಕ ಅಗತ್ಯಗಳು.

25 ನಿ: “ಅತ್ಯುನ್ನತ ಗುಣಮಟ್ಟದ ವೈದ್ಯಕೀಯ ಆರೈಕೆ​—⁠ಅದು ಯಾವುದು?” ಹಿರಿಯನಿಂದ ನಿರ್ವಹಿಸಲ್ಪಡತಕ್ಕದ್ದು. ನೇರವಾಗಿ ಈ ಲೇಖನದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ ರಕ್ತರಹಿತ ಚಿಕಿತ್ಸೆ ವಿಡಿಯೋವಿನ ಕುರಿತು ಸಭಿಕರೊಂದಿಗೆ ಚರ್ಚಿಸಿರಿ. ಕೊನೆಯ ಪ್ಯಾರಗ್ರಾಫನ್ನು ಓದಿರಿ. ಉಲ್ಲೇಖಿಸಲ್ಪಟ್ಟಿರುವ ಕಾವಲಿನಬುರುಜು ಲೇಖನಗಳನ್ನು ಜಾಗರೂಕತೆಯಿಂದ ಪರಿಶೀಲಿಸುವಂತೆ ಎಲ್ಲರನ್ನು ಪ್ರೋತ್ಸಾಹಿಸುತ್ತಾ ಮುಕ್ತಾಯಗೊಳಿಸಿರಿ.

ಗೀತೆ 188 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 29ರಿಂದ ಆರಂಭವಾಗುವ ವಾರ

ಗೀತೆ 55

10 ನಿ: ಸ್ಥಳಿಕ ಪ್ರಕಟನೆಗಳು. ಜನವರಿ ತಿಂಗಳಿನ ಸೇವಾ ವರದಿಗಳನ್ನು ನೀಡುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಫೆಬ್ರವರಿ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ ಮತ್ತು ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.

20 ನಿ: “ನೈಸರ್ಗಿಕ ವಿಪತ್ತಿಗಾಗಿ ಪೂರ್ವಸಿದ್ಧತೆ ಮಾಡಿದ್ದೀರೊ?”b ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡತಕ್ಕದ್ದು. 2005, ನವೆಂಬರ್‌ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 3ರಲ್ಲಿರುವ ಹೇಳಿಕೆಗಳನ್ನು ಸೇರಿಸಿ.

15 ನಿ: ಹಿಂದಿರುಗಿ ಬರುವಿರೆಂದು ಮಾತು ಕೊಟ್ಟಿರುವಲ್ಲಿ, ನಿಮ್ಮ ಮಾತನ್ನು ಉಳಿಸಿಕೊಳ್ಳಿ. 1999, ಸೆಪ್ಟೆಂಬರ್‌ 15ರ ಕಾವಲಿನಬುರುಜು ಪುಟ 11ರ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ತಾವು ಮಾತು ಕೊಟ್ಟಂತೆ ಹಿಂದಿರುಗಿ ಹೋದದ್ದರಿಂದ ಹೇಗೆ ಆಶೀರ್ವದಿಸಲ್ಪಟ್ಟರು ಎಂಬುದನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿ.

ಗೀತೆ 137 ಮತ್ತು ಸಮಾಪ್ತಿಯ ಪ್ರಾರ್ಥನೆ.

ಫೆಬ್ರವರಿ 5ರಿಂದ ಆರಂಭವಾಗುವ ವಾರ

ಗೀತೆ 3

10 ನಿ: ಸ್ಥಳಿಕ ಪ್ರಕಟಣೆಗಳು.

15 ನಿ: ನಾನು ಇರೋದೆ ಹೀಗೆ! ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸಮವಯಸ್ಕರು ತಮ್ಮನ್ನು ಕುಚೋದ್ಯಮಾಡಬಹುದೆಂಬ ಅನಿಸಿಕೆಯಿಂದ ತಾವೊಬ್ಬ ಯೆಹೋವನ ಸಾಕ್ಷಿಯೆಂದು ಹೇಳಿಕೊಳ್ಳಲು ಕೆಲವು ಯುವಜನರು ಹಿಂಜರಿಯುತ್ತಾರೆ. ಆದರೆ ನೀವು ಹಾಗೆ ಗುರುತಿಸಿಕೊಳ್ಳಲು ಸಕಾರಣಗಳಿವೆ. ನಿಮ್ಮ ನಂಬಿಕೆಗಳ ಕುರಿತು ತಿಳಿದಿರುವ ಉಪಾಧ್ಯಾಯರು ಅವನ್ನು ಗೌರವಿಸುವರು ಮತ್ತು ಅನುಚಿತವಾದ ವಿಷಯಗಳನ್ನು ಮಾಡುವಂತೆ ನಿಮ್ಮನ್ನು ಒತ್ತಾಯಿಸರು. ನೈತಿಕ ಮೂಲತತ್ತ್ವಗಳಿಗೆ ಅನುಸಾರವಾಗಿ ಜೀವಿಸದ ಯುವಜನರು ಅಯೋಗ್ಯ ನಡತೆಯಲ್ಲಿ ಒಳಗೂಡುವಂತೆ ನಿಮ್ಮನ್ನು ಆಮಂತ್ರಿಸರು. ಡೇಟಿಂಗ್‌, ಶಾಲಾ ಕ್ರೀಡೆಗಳು, ಪಠ್ಯೇತರ ಚಟುವಟಿಕೆಗಳು ಮತ್ತು ಇನ್ನಿತರ ವಿಷಯಗಳಲ್ಲಿ ನಿಮ್ಮ ನಿರ್ಣಯಗಳನ್ನು ಇತರರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವರು. ಮಾತ್ರವಲ್ಲ, ಶಾಲೆಯಲ್ಲಿ ಸಾಕ್ಷಿಕೊಡಲು ಅಥವಾ ಟೆರಿಟೊರಿಯಲ್ಲಿ ಸಹಪಾಠಿಯನ್ನು ಭೇಟಿಮಾಡುವಲ್ಲಿ ಅವರಿಗೆ ಸಾಕ್ಷಿನೀಡಲು ನೀವು ಹಿಂಜರಿಯುವುದಿಲ್ಲ. (g02 3/22 ಪು. 12) ಶಾಲೆಯಲ್ಲಿ ತಮ್ಮನ್ನು ಒಬ್ಬ ಯೆಹೋವನ ಸಾಕ್ಷಿಯೆಂದು ಗುರುತಿಸಿಕೊಂಡದ್ದರಿಂದ ಸಿಕ್ಕಿದ ಪ್ರಯೋಜನಗಳನ್ನು ತಿಳಿಸುವಂತೆ ಪ್ರಚಾರಕರನ್ನು ಕೇಳಿಕೊಳ್ಳಿ. ಒಂದು ಅಥವಾ ಎರಡು ಹೇಳಿಕೆಗಳನ್ನು ಮುಂಚಿತವಾಗಿಯೇ ಏರ್ಪಡಿಸಬಹುದು.

20 ನಿ: “ಪ್ರೀತಿ​—⁠ಫಲಪ್ರದವಾದ ಶುಶ್ರೂಷೆಗೆ ಕೀಲಿ ಕೈ.”c 2003, ಫೆಬ್ರವರಿ 1ರ ಕಾವಲಿನಬುರುಜುವಿನ ಪುಟ 23, ಪ್ಯಾರ. 16-17ರಲ್ಲಿರುವ ಹೇಳಿಕೆಗಳನ್ನು ಒಳಗೂಡಿಸಿರಿ.

ಗೀತೆ 83 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ