ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/07 ಪು. 1
  • “ನನಗೆ ಆಸಕ್ತಿ ಇಲ್ಲ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನನಗೆ ಆಸಕ್ತಿ ಇಲ್ಲ”
  • 2007 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಿರಾಸಕ್ತಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?
    1997 ನಮ್ಮ ರಾಜ್ಯದ ಸೇವೆ
  • ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ಹೊಂದಿಸಿಕೊಳ್ಳುವವರಾಗಿರುವ ಮೂಲಕ
    2005 ನಮ್ಮ ರಾಜ್ಯದ ಸೇವೆ
  • ಪೂರ್ಣ ಸಮಯದ ಸೇವೆಯಲ್ಲಿ ಆನಂದವನ್ನು ಕಾಪಾಡಿಕೊಳ್ಳುವ ವಿಧ
    ಕಾವಲಿನಬುರುಜು—1997
  • ಸುವಾರ್ತೆಯನ್ನು ನೀಡುವದು—ಹೆಚ್ಚು ಸಲ ಸೇವೆಯಾದ ಕ್ಷೇತ್ರದಲ್ಲಿ
    1991 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2007 ನಮ್ಮ ರಾಜ್ಯದ ಸೇವೆ
km 1/07 ಪು. 1

“ನನಗೆ ಆಸಕ್ತಿ ಇಲ್ಲ”

1 ಇದು ಕೆಲವು ಕ್ಷೇತ್ರಗಳಲ್ಲಿ ನಮ್ಮ ಸಂದೇಶಕ್ಕೆ ಸಿಗುವ ಸಾಮಾನ್ಯ ಪ್ರತಿಕ್ರಿಯೆಯಾಗಿದೆ. ಟೆರಿಟೊರಿಯಲ್ಲಿ ಇಂಥ ನಿರ್ಲಕ್ಷ್ಯವನ್ನು ಎದುರಿಸುವಾಗ ನಾವು ನಿರುತ್ಸಾಹಗೊಳ್ಳದಿರಲು ಯಾವುದು ಸಹಾಯಮಾಡುತ್ತದೆ? ನಾವು ಹೇಗೆ ಸುವಾರ್ತೆಯಲ್ಲಿ ಅವರ ಆಸಕ್ತಿಯನ್ನು ಕೆರಳಿಸಸಾಧ್ಯವಿದೆ?

2 ಆನಂದವನ್ನು ಕಾಪಾಡಿಕೊಳ್ಳಿ: ಅನೇಕರು ಏಕೆ ನಿರ್ಲಕ್ಷ್ಯ ಮನೋಭಾವವನ್ನು ತೋರಿಸುತ್ತಾರೆ ಎಂಬುದನ್ನು ನೆನಪಿನಲ್ಲಿಡುವುದು ತಾನೇ ನಮ್ಮ ಆನಂದವನ್ನು ಕಾಪಾಡಿಕೊಳ್ಳಲು ನೆರವು ನೀಡುವುದು. ವಿಕಾಸವಾದ ಕಲಿಸಲ್ಪಟ್ಟವರು ಅಥವಾ ನಾಸ್ತಿಕವಾದವನ್ನು ನಂಬುವ ಜನರ ಮಧ್ಯೆ ಬೆಳೆದವರು ಪ್ರಾಯಶಃ ಬೈಬಲಿನ ಮೌಲ್ಯವನ್ನು ಪರಿಗಣಿಸದಿರಬಹುದು. ಇತರರು ಧರ್ಮದಲ್ಲಿ ನಡೆಯುವ ಕಪಟಾಚಾರವನ್ನು ಕಂಡು ಆಶಾಭಂಗಗೊಂಡಿರಬಹುದು. ಇನ್ನು ಕೆಲವರು ಎಷ್ಟೊಂದು ಬೆಸತ್ತು ಹೋಗಿದ್ದಾರೆಂದೂ ಹತಾಶರಾಗಿದ್ದಾರೆಂದೂ ಅವರ ನಿರ್ಲಕ್ಷ್ಯ ಮನೋಭಾವದಲ್ಲಿ ತೋರಿಬರಬಹುದು. (ಎಫೆ. 2:12) ಇನ್ನಿತರರಾದರೊ ಜೀವನದ ಚಿಂತೆಗಳಲ್ಲಿ ಮುಳುಗಿಹೋಗಿರುವ ಕಾರಣ ಬೈಬಲ್‌ ಸಂದೇಶಕ್ಕೆ ‘ಲಕ್ಷ್ಯ’ಕೊಡದಿರಬಹುದು.​—⁠ಮತ್ತಾ. 24:37-39, NW.

3 ಕೆಲವರು ನಕಾರಾತ್ಮಕ ಪ್ರತಿಕ್ರಿಯೆ ತೋರಿಸುವುದಾದರೂ, ನಮ್ಮ ಪ್ರಯತ್ನಗಳು ಯೆಹೋವನನ್ನು ಮಹಿಮೆಪಡಿಸುತ್ತವೆ ಎಂಬುದನ್ನು ನೆನಪಿನಲ್ಲಿಡುವುದು ಶುಶ್ರೂಷೆಯಲ್ಲಿ ನಾವು ಆನಂದಿಸುವಂತೆ ಮಾಡುತ್ತದೆ. (1 ಪೇತ್ರ 4:11) ಮಾತ್ರವಲ್ಲ, ಸತ್ಯವನ್ನು ಗಣ್ಯಮಾಡದವರೊಂದಿಗೆ ಅದರ ಕುರಿತು ಮಾತಾಡುವುದು ಸ್ವತಃ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ. ಆದಕಾರಣ ಟೆರಿಟೊರಿಯಲ್ಲಿರುವ ಜನರ ಕಡೆಗೆ ಯೆಹೋವನಿಗಿರುವ ನೋಟವನ್ನು ನಾವಿಟ್ಟುಕೊಳ್ಳುವ ಪ್ರಯತ್ನಮಾಡೋಣ. ಆತನು “ಎಡಗೈ ಬಲಗೈ ತಿಳಿಯದ” ನಿನೆವೆಯ ಜನರಿಗಾಗಿ ಮನಮರುಗಿದನು. (ಯೋನ 4:11) ನಮ್ಮ ಟೆರಿಟೊರಿಯಲ್ಲಿರುವ ಜನರಿಗೆ ಸುವಾರ್ತೆ ನಿಜವಾಗಿಯೂ ಅಗತ್ಯ! ಆದುದರಿಂದ ನಾವು ಪ್ರಯತ್ನವನ್ನು ಕೈಬಿಡದೆ, ಬೈಬಲ್‌ ಸಂದೇಶದಲ್ಲಿ ಅವರ ಆಸಕ್ತಿಯನ್ನು ಕೆರಳಿಸಲಿಕ್ಕಾಗಿ ವಿವಿಧ ಮಾರ್ಗಗಳನ್ನು ಹುಡುಕುತ್ತಲೇ ಇರಬೇಕು.

4 ಸ್ಥಳಿಕ ಚಿಂತೆಗಳ ಕುರಿತು ಚರ್ಚಿಸಿ: ನೀವು ಸಂಭಾಷಣೆಯನ್ನು ಆರಂಭಿಸುವಾಗ ಸ್ಥಳಿಕವಾಗಿ ಮನೆಮನಗಳನ್ನು ಚಿಂತೆಗೀಡುಮಾಡಿರುವ ವಿಷಯದ ಕುರಿತು ತಿಳಿಸಬಹುದು. ನಂತರ ಅದರ ಕುರಿತು ಮನೆಯವನ ಅಭಿಪ್ರಾಯವನ್ನು ಕೇಳಬಹುದು. ಅವನು ಮಾತನಾಡುವಾಗ ಗಮನಕೊಟ್ಟು ಆಲಿಸಿರಿ. ಬಳಿಕ ಅವನನ್ನು ಚಿಂತೆಗೀಡುಮಾಡಿರುವ ವಿಷಯದ ಕುರಿತು ಬೈಬಲ್‌ನಲ್ಲಿರುವ ಸಾಂತ್ವನದಾಯಕ ಸಂದೇಶವನ್ನು ಅವನಿಗೆ ತೋರಿಸಿರಿ. ಒಮ್ಮೆ ಸಾಕ್ಷಿಯೊಬ್ಬನು ಒಂದು ಸ್ಥಳಿಕ ದುರಂತದ ಬಳಿಕ ಪ್ರತಿ ಮನೆಯಲ್ಲೂ ಮನಃಪೂರ್ವಕ ವಿಶಾದವನ್ನು ವ್ಯಕ್ತಪಡಿಸಿದನು. ಅವನು ಹೇಳುವುದು: “ಕೂಡಲೆ ಜನರು ಪ್ರತಿಕ್ರಿಯಿಸಲು ಪ್ರಾರಂಭಿಸಿದರು. ನಾನು ಅವರಿಗೆ ವೈಯಕ್ತಿಕ ಆಸಕ್ತಿಯನ್ನು ತೋರಿಸಿದ ಕಾರಣ ಅಂದು ಅನೇಕ ಉತ್ತಮ ಸಂಭಾಷಣೆಗಳಲ್ಲಿ ನಾನು ಆನಂದಿಸಿದೆ.”

5 ಈಗ ಮಾನವಕುಲವು ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಯನ್ನು ದೇವರ ರಾಜ್ಯವು ಬಗೆಹರಿಸಲಿದೆ. ಮನೆಯವನನ್ನು ಹೆಚ್ಚು ಚಿಂತೆಗೀಡುಮಾಡಿರುವ ಕೇವಲ ಒಂದು ಸಮಸ್ಯೆಯನ್ನು ನೀವು ಗುರುತಿಸಲು ಪ್ರಯತ್ನಿಸಿರಿ. ಒಂದೇವೇಳೆ ನೀವು ಬೈಬಲ್‌ನಲ್ಲಿರುವ ನಿರೀಕ್ಷೆಯ ಸಂದೇಶವನ್ನು ವಿವರಿಸುವಂತೆ ಅವನು ಅನುಮತಿಸಬಹುದು. ಇಲ್ಲದಿದ್ದಲ್ಲಿ, “ಇನ್ನೊಂದು ಸಾರಿ” ಕೇಳಲು ಮನಸ್ಸುಮಾಡಬಹುದು.​—⁠ಅ. ಕೃ. 17:⁠32.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ