ಹೊಸ ಸೇವಾ ವರ್ಷಕ್ಕೆ ಯೋಗ್ಯ ಗುರಿ
1. ಹೊಸ ಸೇವಾ ವರ್ಷಕ್ಕಾಗಿ ನಾವು ಯಾವ ಗುರಿಯನ್ನಿಡಬಹುದು?
1 ನಾವು ಆಧ್ಯಾತ್ಮಿಕ ಪ್ರಗತಿ ಮಾಡಲು ಅಪೇಕ್ಷಿಸುವಲ್ಲಿ ಗುರಿಗಳನ್ನಿಡಬೇಕು. ಹೊಸ ಸೇವಾ ವರ್ಷಕ್ಕಾಗಿ ನೀವು ಯಾವ ವೈಯಕ್ತಿಕ ಗುರಿಗಳನ್ನು ಇಟ್ಟಿದ್ದೀರಿ? ಒಂದು ಇಲ್ಲವೇ ಹೆಚ್ಚು ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆಮಾಡುವುದು ಒಂದು ಅತ್ಯುತ್ತಮ ಗುರಿ. ಈ ಹರ್ಷದಾಯಕ ಚಟುವಟಿಕೆಗೆ ಮುಂಚಿತವಾಗಿಯೇ ಯೋಜಿಸುವ ಅಗತ್ಯವಿದೆ. ಆದುದರಿಂದ, ಈಗಲೇ ಯೋಜನೆಗಳನ್ನು ಮಾಡಲು ಆರಂಭಿಸಿರಿ. ಆದರೆ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಏಕೆ ಗುರಿಯನ್ನಾಗಿ ಮಾಡಬೇಕು?
2. ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಒಂದು ಗುರಿಯನ್ನಾಗಿಡಲು ನಮಗೆ ಯಾವ ಕಾರಣಗಳಿವೆ?
2 ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಕಾರಣಗಳು: ನಾವು ಶುಶ್ರೂಷೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾ ನಮ್ಮ ಸ್ವರ್ಗೀಯ ಪಿತನನ್ನು “ಇನ್ನೂ ಹೆಚ್ಚಾಗಿ” ಸಂತೋಷಪಡಿಸುವಂತೆ ಆಕ್ಸಿಲಿಯರಿ ಪಯನೀಯರ್ ಸೇವೆ ಸಾಧ್ಯಗೊಳಿಸುತ್ತದೆ. (1 ಥೆಸ. 4:1) ಯೆಹೋವನು ನಮಗಾಗಿ ಮಾಡಿರುವುದೆಲ್ಲವನ್ನೂ ಪರಿಗಣಿಸುವಾಗ ಆತನ ಬಗ್ಗೆ ಇತರರಿಗೆ ಹೇಳುವಂತೆ ನಾವು ಪ್ರಚೋದಿಸಲ್ಪಡುತ್ತೇವೆ. (ಕೀರ್ತ. 34:1, 2) ಶುಶ್ರೂಷೆಯಲ್ಲಿ ಹೆಚ್ಚಿನದ್ದನ್ನು ಮಾಡಲು ನಾವು ಗೈಯುವ ವೈಯಕ್ತಿಕ ತ್ಯಾಗಗಳನ್ನು ಯೆಹೋವನು ಗಮನಿಸುತ್ತಾನೆ ಮತ್ತು ಮಾನ್ಯಮಾಡುತ್ತಾನೆ. (ಇಬ್ರಿ. 6:10) ನಮ್ಮ ಕಠಿನ ಶ್ರಮದಿಂದ ನಾವು ಯೆಹೋವನನ್ನು ಸಂತೋಷಪಡಿಸುತ್ತೇವೆಂಬ ಅರಿವು ನಮಗೆ ಮಹಾನಂದವನ್ನು ತರುತ್ತದೆ.—1 ಪೂರ್ವ. 29:9.
3, 4. ಆಕ್ಸಿಲಿಯರಿ ಪಯನೀಯರ್ ಸೇವೆಯಿಂದ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?
3 ಸಾಮಾನ್ಯವಾಗಿ ಯಾವುದೇ ಕೆಲಸವನ್ನು ನಾವು ಎಷ್ಟು ಹೆಚ್ಚು ಮಾಡುತ್ತೇವೋ ಅದು ಅಷ್ಟೇ ಹೆಚ್ಚು ಸುಲಭವೂ ಆನಂದದಾಯಕವೂ ಆಗುತ್ತದೆ. ಶುಶ್ರೂಷೆಯಲ್ಲಿ ಹೆಚ್ಚೆಚ್ಚು ಸಮಯವನ್ನು ಕಳೆಯುವುದರಿಂದ ಮನೆಮನೆಯ ಸೇವೆಯಲ್ಲಿ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುವುದು. ಸಂಭಾಷಣೆಗಳನ್ನು ಆರಂಭಿಸುವುದರಲ್ಲಿ ಮತ್ತು ಬೈಬಲನ್ನು ಉಪಯೋಗಿಸುವುದರಲ್ಲಿ ನೀವು ಹೆಚ್ಚು ನುರಿತವರಾಗುವಿರಿ. ನಿಮ್ಮ ನಂಬಿಕೆಯ ಕುರಿತಾಗಿ ನೀವು ಎಷ್ಟು ಹೆಚ್ಚಾಗಿ ಮಾತಾಡುತ್ತೀರೊ ಅದು ಅಷ್ಟು ಹೆಚ್ಚಾಗಿ ಬಲಗೊಳ್ಳುವುದು. ಬೈಬಲ್ ಅಧ್ಯಯನವೇ ಇಲ್ಲದಿದ್ದ ಅನೇಕರು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವಾಗ ಒಂದು ಅಧ್ಯಯನ ಆರಂಭಿಸಲು ಶಕ್ತರಾಗಿದ್ದಾರೆ.
4 ಜಡವಾಗಿರುವ ಕ್ರೈಸ್ತ ರೂಢಿಯೊಂದನ್ನು ಮತ್ತೆ ಚೇತರಿಸಲಿಕ್ಕಾಗಿಯೂ ಆಕ್ಸಿಲಿಯರಿ ಪಯನೀಯರ್ ಸೇವೆ ಸಹಾಯ ಮಾಡಬಹುದು. ಒಂದೊಮ್ಮೆ ರೆಗ್ಯುಲರ್ ಪಯನೀಯರ್ ಆಗಿದ್ದ ಸಹೋದರನಿಗೆ ತನ್ನ ಐಹಿಕ ಕೆಲಸಕ್ಕೆ ತಾನು ತೀರ ಹೆಚ್ಚು ಮಹತ್ವ ಕೊಡುತ್ತಿದ್ದೇನೆಂದು ಭಾಸವಾಯಿತು. ಆದುದರಿಂದ ಅವನು ಒಂದು ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ನಿರ್ಣಯಿಸಿದನು. ಅವನಂದದ್ದು: “ಆ ಒಂದು ತಿಂಗಳು ನನ್ನನ್ನು ಆಧ್ಯಾತ್ಮಿಕವಾಗಿ ಎಷ್ಟೊಂದು ಹುರಿದುಂಬಿಸಿತೆಂಬುದನ್ನು ನನಗೆ ನಂಬಲಾಗಲಿಲ್ಲ! ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುತ್ತಾ ಇರಲು ನಾನು ಏರ್ಪಾಡುಮಾಡಿದೆ. ಇದು ನಾನು ಪುನಃ ಒಮ್ಮೆ ರೆಗ್ಯುಲರ್ ಪಯನೀಯರ್ ಆಗುವುದಕ್ಕೆ ನಡೆಸಿತು.”
5. ಸೇವೆಮಾಡುವ ಸಾಮರ್ಥ್ಯವಿಲ್ಲವೆಂಬ ಅನಿಸಿಕೆಗಳನ್ನು ನಾವು ಹೇಗೆ ಜಯಿಸಬಹುದು?
5 ಅಡ್ಡಿಗಳನ್ನು ಜಯಿಸುವುದು: ಕೆಲವರು, ತಮ್ಮಲ್ಲಿ ಸೌವಾರ್ತಿಕರಿಗೆ ಇರಬೇಕಾದ ಕೌಶಲಗಳಿಲ್ಲವೆಂದು ನೆನಸುತ್ತಾ ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿ ಅರ್ಜಿ ಹಾಕದಿರಬಹುದು. ಒಂದುವೇಳೆ ಇದು ನಿಮಗೆ ಅಡ್ಡಿಯಾಗಿ ತೋರುವಲ್ಲಿ, ಯೆಹೋವನು ಹೇಗೆ ಯೆರೆಮೀಯನಿಗೆ ಸಹಾಯ ಮಾಡಿದನೋ ಹಾಗೆಯೇ ನಿಮಗೂ ಸಹಾಯಮಾಡುವನು. (ಯೆರೆ. 1:6-10) ಮೋಶೆಯ ‘ಮಾತೂ ನಾಲಿಗೆಯೂ ಮಂದವಾಗಿದ್ದರೂ’ ಯೆಹೋವನು ತನ್ನ ಚಿತ್ತವನ್ನು ಪೂರೈಸಲಿಕ್ಕಾಗಿ ಅವನನ್ನು ಉಪಯೋಗಿಸಿದನು. (ವಿಮೋ. 4:10-12) ಸೇವೆಮಾಡುವ ಸಾಮರ್ಥ್ಯವಿಲ್ಲವೆಂದು ನಿಮಗನಿಸುವಲ್ಲಿ ಧೈರ್ಯಕ್ಕಾಗಿ ಯೆಹೋವನನ್ನು ಬೇಡಿಕೊಳ್ಳಿ.
6. ಆರೋಗ್ಯ ಸಮಸ್ಯೆಗಳು ಇಲ್ಲವೆ ಬ್ಯುಸಿ ಶೆಡ್ಯೂಲ್ ಇದ್ದರೂ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಸಾಧ್ಯವಿದೆ ಹೇಗೆ?
6 ಆರೋಗ್ಯ ಸಮಸ್ಯೆಗಳು ಇಲ್ಲವೆ ಬ್ಯುಸಿ ಶೆಡ್ಯೂಲ್ನಿಂದಾಗಿ ನೀವು ಅರ್ಜಿಹಾಕಲು ಹಿಂದೆಮುಂದೆ ನೋಡುತ್ತೀರೊ? ಬಲಕುಗ್ಗಿದ ವ್ಯಕ್ತಿ ನೀವಾಗಿರುವಲ್ಲಿ, ಸ್ವಲ್ಪ ನಿಧಾನ ಗತಿಯಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಸಾಧ್ಯವಾಗಬಹುದು. ನಿಮಗೊಂದು ಬ್ಯುಸಿ ಶೆಡ್ಯೂಲ್ ಇರುವಲ್ಲಿ ಅನಾವಶ್ಯಕ ಕೆಲಸಗಳನ್ನು ಇನ್ನೊಂದು ತಿಂಗಳಿಗೆ ತಳ್ಳಲು ನಿಮಗೆ ಸಾಧ್ಯವಿರಬಹುದು. ಪೂರ್ಣ ಸಮಯದ ಉದ್ಯೋಗವಿರುವ ಕೆಲವರು ಒಂದೆರಡು ದಿನ ರಜೆ ಹಾಕುವ ಮೂಲಕ ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿ ಸಮಯ ಕೊಳ್ಳಲು ಶಕ್ತರಾಗಿದ್ದಾರೆ.—ಕೊಲೊ. 4:5.
7. ಆಕ್ಸಿಲಿಯರಿ ಪಯನೀಯರ್ ಸೇವೆಯ ಕುರಿತಾಗಿ ಪ್ರಾರ್ಥಿಸುವುದು ಏಕೆ ಉಪಯುಕ್ತ?
7 ಅದನ್ನು ಮಾಡುವ ವಿಧ: ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬೇಕೆಂದು ನಿಮಗಿರುವ ಅಪೇಕ್ಷೆಯ ಕುರಿತು ಪ್ರಾರ್ಥಿಸಿರಿ. ನಿಮ್ಮ ಶುಶ್ರೂಷೆಯನ್ನು ವಿಸ್ತರಿಸಲು ನೀವು ಮಾಡುತ್ತಿರುವ ಪ್ರಯತ್ನಗಳನ್ನು ಹರಸುವಂತೆ ಯೆಹೋವನ ಬಳಿ ಬೇಡಿಕೊಳ್ಳಿ. (ರೋಮಾ. 12:11, 12) ನಿಮ್ಮ ಶೆಡ್ಯೂಲನ್ನು ಹೇಗೆ ಹೊಂದಿಸಿಕೊಳ್ಳಬೇಕೆಂಬ ವಿವೇಕಯುತ ನಿರ್ಣಯಗಳನ್ನು ಮಾಡಲು ಆತನು ನಿಮಗೆ ಸಹಾಯ ಮಾಡುವನು. (ಯಾಕೋ. 1:5) ಒಂದುವೇಳೆ ನಿಮಗೆ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಅಪೇಕ್ಷೆ ಇಲ್ಲದಿರುವಲ್ಲಿ, ಸಾರುವ ಕೆಲಸದಲ್ಲಿ ಆನಂದವನ್ನು ಪಡೆಯಲು ಸಹಾಯ ಮಾಡುವಂತೆ ಯೆಹೋವನನ್ನು ಕೇಳಿಕೊಳ್ಳಿ.—ಲೂಕ 10:1, 17.
8. ಜ್ಞಾನೋಕ್ತಿ 15:22ನ್ನು ಅನ್ವಯಿಸುವುದು ನೀವು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವುದನ್ನು ಹೇಗೆ ಸಾಧ್ಯಗೊಳಿಸುವುದು?
8 ಆಕ್ಸಿಲಿಯರಿ ಪಯನೀಯರ್ ಸೇವಾ ಗುರಿಯ ಕುರಿತು ಕುಟುಂಬವಾಗಿ ಚರ್ಚಿಸಿರಿ. (ಜ್ಞಾನೋ. 15:22) ಕುಟುಂಬದಲ್ಲಿ ಕಡಿಮೆಪಕ್ಷ ಒಬ್ಬ ಸದಸ್ಯನಾದರೂ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲಾಗುವಂತೆ ಮನೆಯಲ್ಲಿ ಬೇರೆಯವರೆಲ್ಲರೂ ಬೆಂಬಲ ಕೊಡಬಹುದು. ಪಯನೀಯರ್ ಸೇವೆಮಾಡಲು ನಿಮಗಿರುವ ಅಪೇಕ್ಷೆಯ ಬಗ್ಗೆ ಸಭೆಯಲ್ಲಿ ಇತರರೊಂದಿಗೆ ಚರ್ಚಿಸಿರಿ. ವಿಶೇಷವಾಗಿ ನಿಮ್ಮಂಥ ಪರಿಸ್ಥಿತಿಗಳಲ್ಲಿ ಇರುವವರೊಂದಿಗೆ ಮಾತಾಡಿರಿ. ಇದು, ಇತರರಲ್ಲೂ ಆಕ್ಸಿಲಿಯರಿ ಪಯನೀಯರ್ ಸೇವೆಮಾಡುವ ಉತ್ಸಾಹವನ್ನು ಹುಟ್ಟಿಸಬಲ್ಲದು.
9. ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿ ನೀವು ಯಾವ ತಿಂಗಳುಗಳನ್ನು ಆರಿಸಿಕೊಳ್ಳಬಹುದು?
9 ಹೊಸ ಸೇವಾ ವರ್ಷಕ್ಕಾಗಿ ನಿಮ್ಮ ಶುಶ್ರೂಷಾ ಶೆಡ್ಯೂಲನ್ನು ವಿಮರ್ಶಿಸುತ್ತಿರುವಾಗ ನೀವು ಯಾವ ತಿಂಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಶಕ್ತರಾಗುವಿರೆಂದು ನೆನಸುತ್ತೀರಿ? ನಿಮಗೆ ಪೂರ್ಣಸಮಯದ ಉದ್ಯೋಗವಿರುವಲ್ಲಿ ಇಲ್ಲವೇ ನೀವು ಶಾಲೆಗೆ ಹೋಗುತ್ತಿರುವಲ್ಲಿ, ರಜೆಯಿರುವ ತಿಂಗಳುಗಳನ್ನು ಇಲ್ಲವೆ ಐದು ಶನಿವಾರ ಹಾಗೂ ಐದು ಭಾನುವಾರಗಳಿರುವ ತಿಂಗಳುಗಳನ್ನು ಆರಿಸಬಹುದು. ಉದಾಹರಣೆಗಾಗಿ, ಸೆಪ್ಟೆಂಬರ್, ಡಿಸೆಂಬರ್, ಮಾರ್ಚ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಐದು ಶನಿವಾರ ಹಾಗೂ ಐದು ಭಾನುವಾರಗಳಿವೆ. ಮೇ ತಿಂಗಳಲ್ಲಿ ಐದು ಶನಿವಾರಗಳು ಮತ್ತು ಜೂನ್ ತಿಂಗಳಲ್ಲಿ ಐದು ಭಾನುವಾರಗಳಿವೆ. ನಿಮಗೆ ಆರೋಗ್ಯದ ಸಮಸ್ಯೆಗಳಿರುವಲ್ಲಿ, ಸಾಧಾರಣಮಟ್ಟಿಗೆ ಒಳ್ಳೇ ಹವಾಮಾನವಿರುವ ತಿಂಗಳುಗಳನ್ನು ನೀವು ಆರಿಸಬಹುದು. ಸರ್ಕಿಟ್ ಮೇಲ್ವಿಚಾರಕರು ನಿಮ್ಮ ಸಭೆಯನ್ನು ಭೇಟಿಮಾಡಲಿರುವ ತಿಂಗಳಲ್ಲಿ ಪಯನೀಯರ್ ಸೇವೆಮಾಡುವುದರ ಬಗ್ಗೆ ಸಹ ನೀವು ಯೋಚಿಸಬಹುದು. ಆ ಸಮಯದಲ್ಲಿ ರೆಗ್ಯುಲರ್ ಪಯನೀಯರರೊಂದಿಗೆ ನಡೆಸಲ್ಪಡುವ ಕೂಟದ ಮೊದಲ ಅರ್ಧ ಭಾಗಕ್ಕೆ ಹಾಜರಾಗುವ ಹೆಚ್ಚಿನ ಸುಯೋಗ ನಿಮಗೆ ಸಿಗುವುದು. ಮುಂದಿನ ವರ್ಷ ಜ್ಞಾಪಕಾಚರಣೆಯು ಮಾರ್ಚ್ 22ಕ್ಕೆ ಇರುವುದರಿಂದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳುಗಳು ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿ ಅತ್ಯುತ್ತಮ ತಿಂಗಳುಗಳಾಗಿವೆ. ನೀವು ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಬಯಸುವ ತಿಂಗಳು ಇಲ್ಲವೇ ತಿಂಗಳುಗಳನ್ನು ಆರಿಸಿಕೊಂಡ ಬಳಿಕ, ತಾಸಿನ ಆವಶ್ಯಕತೆಯನ್ನು ತಲಪುವಂತೆ ನಿಮ್ಮನ್ನು ಶಕ್ತಗೊಳಿಸುವ ಒಂದು ಶೆಡ್ಯೂಲನ್ನು ಬರೆದಿಡಿ.
10. ನಿಮಗೆ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಸಾಧ್ಯವಿಲ್ಲದಿದ್ದರೆ ನೀವೇನು ಮಾಡಬಲ್ಲಿರಿ?
10 ಈ ಮುಂದಿನ ಸೇವಾ ವರ್ಷದಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಸಾಧ್ಯವಿಲ್ಲವೆಂದು ನಿಮಗನಿಸಿದರೂ, ಕ್ಷೇತ್ರಸೇವೆಯಲ್ಲಿ ನಿಮ್ಮ ಹುರುಪನ್ನು ಕಾಪಾಡಿಕೊಳ್ಳಿ. ಶುಶ್ರೂಷೆಯಲ್ಲಿ ನಿಮ್ಮಿಂದಾಗುವ ಎಲ್ಲವನ್ನು ಮಾಡುತ್ತಾ ಇರಿ. ಯೆಹೋವನಿಗೆ ಅತ್ಯುತ್ತಮವಾದುದನ್ನು ಕೊಡಲು ನಿಮ್ಮ ಪೂರ್ಣಪ್ರಾಣದ ಪ್ರಯತ್ನದ ವಿಷಯದಲ್ಲಿ ಆತನು ಸಂತೋಷಿಸುತ್ತಾನೆಂಬ ಪೂರ್ಣ ಭರವಸೆ ನಿಮಗಿರಲಿ. (ಗಲಾ. 6:4) ಆಕ್ಸಿಲಿಯರಿ ಪಯನೀಯರ್ ಸೇವೆಮಾಡುವವರಿಗೆ ಬೆಂಬಲ ಹಾಗೂ ಉತ್ತೇಜನಕೊಡಿ. ನೀವು ಸಾಮಾನ್ಯವಾಗಿ ಸೇವೆಗೆ ಹೋಗುವ ದಿನವಲ್ಲದೆ, ಪಯನೀಯರರೊಂದಿಗೆ ವಾರದಲ್ಲಿ ಇನ್ನೊಂದು ದಿನವೂ ಸೇವೆಮಾಡಲಿಕ್ಕೋಸ್ಕರ ನಿಮ್ಮ ಶೆಡ್ಯೂಲನ್ನು ಹೊಂದಿಸಿಕೊಳ್ಳಬಹುದು.
11. ನಮಗೆ ತುರ್ತುಪ್ರಜ್ಞೆ ಇರಬೇಕು ಏಕೆ?
11 ಯೆಹೋವನ ಜನರಿಗೆ ತುರ್ತು ಪ್ರಜ್ಞೆಯಿದೆ. ಸುವಾರ್ತೆ ಸಾರುವ ಕೆಲಸವನ್ನು ಮಾಡಿಮುಗಿಸಲಿಕ್ಕಿದೆ. ಇದು ಜನರ ಜೀವಗಳ ಪ್ರಶ್ನೆಯಾಗಿದೆ ಮತ್ತು ಉಳಿದಿರುವ ಸಮಯವೂ ಕೊಂಚ. (1 ಕೊರಿಂ. 7:29-31) ದೇವರ ಹಾಗೂ ನೆರೆಯವನ ಮೇಲಣ ಪ್ರೀತಿಯು, ನಾವು ಶುಶ್ರೂಷೆಯಲ್ಲಿ ನಮ್ಮಿಂದ ಆಗುವುದೆಲ್ಲವನ್ನೂ ಮಾಡುವಂತೆ ಪ್ರಚೋದಿಸುವುದು. ಪ್ರಯತ್ನ ಹಾಗೂ ಒಳ್ಳೇ ಯೋಜನೆಯಿಂದ ನಾವು ಹೊಸ ಸೇವಾ ವರ್ಷದಲ್ಲಿ ಕಡಿಮೆಪಕ್ಷ ಒಂದು ತಿಂಗಳಾದರೂ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಶಕ್ತರಾಗಬಹುದು. ಇದೊಂದು ಯೋಗ್ಯ ಗುರಿಯೇ ಸರಿ!