ಸೇವಾ ಕೂಟದ ಶೆಡ್ಯೂಲ್
ನವೆಂಬರ್ 12ರಿಂದ ಆರಂಭವಾಗುವ ವಾರ
ಗೀತೆ 59
10 ನಿ: ಸ್ಥಳಿಕ ಪ್ರಕಟನೆಗಳು. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಅಕ್ಟೋಬರ್-ಡಿಸೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ನವೆಂಬರ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಕೇವಲ ಒಂದು ಪತ್ರಿಕೆಯ ಕುರಿತು ಮಾತನಾಡಿದರೂ ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿ ಎರಡು ಪತ್ರಿಕೆಗಳನ್ನು ಜೊತೆಯಾಗಿ ನೀಡಬೇಕು.
15 ನಿ: “ಬೆಳ್ಳಿಯೆಲ್ಲಾ ನನ್ನದು ಬಂಗಾರವೆಲ್ಲಾ ನನ್ನದು.” 2007, ನವೆಂಬರ್ 1ರ ಕಾವಲಿನಬುರುಜು ಪುಟ 19-23ರ ಮೇಲೆ ಆಧರಿಸಿ ಹಿರಿಯನೊಬ್ಬನು ನೀಡುವ ಭಾಷಣ.
20 ನಿ: “ಜ್ಞಾನವಂತರಾಗಿ ನಡೆದುಕೊಳ್ಳಿರಿ.”a ಸಮಯವಿರುವಲ್ಲಿ ಕೊಡಲಾಗಿರುವ ವಚನಗಳ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.
ಗೀತೆ 192
ನವೆಂಬರ್ 19ರಿಂದ ಆರಂಭವಾಗುವ ವಾರ
ಗೀತೆ 109
10 ನಿ: ಸ್ಥಳಿಕ ಪ್ರಕಟನೆಗಳು. ಡಿಸೆಂಬರ್ ತಿಂಗಳ ಸಾಹಿತ್ಯ ನೀಡುವಿಕೆಯನ್ನು ತಿಳಿಸಿರಿ ಮತ್ತು ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ಹಿಂಜರಿಯದಿರಿ!”b ಪ್ಯಾರ 5ನ್ನು ಪರಿಗಣಿಸುವಾಗ, ಅಧ್ಯಯನದ ಫಲವಾಗಿ ವ್ಯಕ್ತಿಗಳು ಸತ್ಯಕ್ಕೆ ಬಂದಂಥ ಅನುಭವವಿರುವವರ ಹೇಳಿಕೆಗಳನ್ನು ಒಳಗೂಡಿಸಿರಿ. ಪ್ರಗತಿಪರ ಬೈಬಲ್ ಅಧ್ಯಯನವನ್ನು ನಡೆಸುವುದು ಹೇಗೆ ಪ್ರತಿಫಲದಾಯಕವಾಗಿದೆ ಮತ್ತು ಆನಂದವನ್ನು ತರುತ್ತದೆ? ಒಂದೆರಡು ಹೇಳಿಕೆಗಳನ್ನು ಮುಂಚಿತವಾಗಿಯೇ ಏರ್ಪಡಿಸಬಹುದು.
ಗೀತೆ 96
ನವೆಂಬರ್ 26ರಿಂದ ಆರಂಭವಾಗುವ ವಾರ
ಗೀತೆ 172
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ನವೆಂಬರ್ ತಿಂಗಳ ಕ್ಷೇತ್ರ ಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪು ಹುಟ್ಟಿಸಿರಿ. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಅಕ್ಟೋಬರ್-ಡಿಸೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಡಿಸೆಂಬರ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ: ನೀವು ಪ್ರೀತಿಯನ್ನು ವಿಶಾಲಗೊಳಿಸಬಲ್ಲಿರೋ? 2004, ಅಕ್ಟೋಬರ್ 1ರ ಕಾವಲಿನಬುರುಜು ಪುಟ 14-19ರ ಮೇಲೆ ಆಧರಿಸಿ ಹಿರಿಯನೊಬ್ಬನು ನೀಡುವ ಭಾಷಣ.
20 ನಿ: ಎಳೆಯರೇ ನೀವು ಹೇಗೆ ಯೆಹೋವನನ್ನು ಸ್ತುತಿಸಬಲ್ಲಿರಿ? 2005, ಜೂನ್ 15ರ ಕಾವಲಿನಬುರುಜು ಪುಟ 26-7, ಪ್ಯಾರ 15-19ರ ಅಧ್ಯಯನ ಪ್ರಶ್ನೆಗಳನ್ನು ಉಪಯೋಗಿಸುತ್ತಾ ಚರ್ಚೆ. ಪ್ಯಾರ 18ನ್ನು ಪರಿಗಣಿಸುವಾಗ, ಸಭಿಕರಲ್ಲಿರುವ ಎಳೆಯ ಮಕ್ಕಳು ಶಾಲೆಯಲ್ಲಿ ತಮ್ಮ ಸಹಪಾಠಿಗಳಿಗೆ ಅಥವಾ ಶಿಕ್ಷಕರಿಗೆ ಹೇಗೆ ಸಾಕ್ಷಿ ನೀಡಿದರೆಂಬುದನ್ನು ತಿಳಿಸುವಂತೆ ಕೇಳಿಕೊಳ್ಳಿ.
ಗೀತೆ 5
ಡಿಸೆಂಬರ್ 3ರಿಂದ ಆರಂಭವಾಗುವ ವಾರ
ಗೀತೆ 77
15 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪ್ರಶ್ನಾ ಚೌಕವನ್ನು ಚರ್ಚಿಸಿರಿ.
15 ನಿ: ಲೋಕವ್ಯಾಪಕವಾಗಿ ಜನರಿಗೆ ಪ್ರಯೋಜನ ತರುವಂಥ ಪದವೀಧರರನ್ನು ಸೃಷ್ಟಿಸುವ ಒಂದು ಶಾಲೆ. 2005ರ ಮಾರ್ಚ್ ತಿಂಗಳ ನಮ್ಮ ರಾಜ್ಯದ ಸೇವೆ ಪುಟ 5-6ರ ಮೇಲೆ ಆಧರಿತವಾದ ಭಾಷಣ. ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾದ ಹಿರಿಯರ ಅಥವಾ ಶುಶ್ರೂಷಾ ಸೇವಕರ ಒಂದು ಸಂಕ್ಷಿಪ್ತ ಇಂಟರ್‌ವ್ಯೂ ಅನ್ನು ಒಳಗೂಡಿಸಿರಿ. ಸೌವಾರ್ತಿಕರಾಗಿ, ಕುರಿಪಾಲರಾಗಿ ಮತ್ತು ಬೋಧಕರಾಗಿ ಪ್ರಗತಿ ಹೊಂದಲು ಶಾಲೆಯು ಅವರಿಗೆ ಹೇಗೆ ಸಹಾಯಮಾಡಿತು? ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾಗುವ ಗುರಿಯನ್ನಿಡಲು ಅರ್ಹರಾದ ಸಹೋದರರನ್ನು ಉತ್ತೇಜಿಸಿರಿ.
15 ನಿ: “ನಮ್ಮ ರಾಜ್ಯ-ನಿರೀಕ್ಷೆಯನ್ನು ನಾವು ಹಂಚಿಕೊಳ್ಳುತ್ತೇವೆ”c ಸಮಯವಿರುವಲ್ಲಿ ಕೊಡಲ್ಪಟ್ಟಿರುವ ವಚನಗಳ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.
ಗೀತೆ 173
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.