ಸೇವಾ ಕೂಟದ ಶೆಡ್ಯೂಲ್
ಜನವರಿ 14ರಿಂದ ಆರಂಭವಾಗುವ ವಾರ
ಗೀತೆ 41
10 ನಿ:ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 8ರಲ್ಲಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜನವರಿ-ಮಾರ್ಚ್ ಕಾವಲಿನಬುರುಜು ಮತ್ತು ಜನವರಿ-ಮಾರ್ಚ್ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ: “ಶುಶ್ರೂಷೆಯಲ್ಲಿ ನಿಮ್ಮ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿರಿ.”a ಕ್ಷೇತ್ರ ಸೇವೆಗಾಗಿರುವ ಕೂಟವನ್ನು ಉತ್ತೇಜನದಾಯಕವಾಗಿ ನಡೆಸಿ ಗುಂಪನ್ನು ಸೇವೆಯಲ್ಲಿ ತೊಡಗಿಸುವುದರಲ್ಲಿ ಮುಂದಾಳತ್ವ ವಹಿಸುವ ಆದರ್ಶಪ್ರಾಯ ಸಹೋದರನೊಬ್ಬನನ್ನು ಇಂಟರ್‌ವ್ಯೂ ಮಾಡಿ. ಗುಂಪನ್ನು ಕ್ಷೇತ್ರ ಸೇವೆಗೆ ಕರಕೊಂಡು ಹೋಗಲು ಮತ್ತು ಶುಶ್ರೂಷೆಯಲ್ಲಿ ಅವರು ತಮ್ಮ ಸಮಯವನ್ನು ಪರಿಣಾಮಕಾರಿಯಾಗಿ ಬಳಸುವಂತೆ ಮಾಡಲು ಅವನು ಯಾವ ತಯಾರಿಯನ್ನು ಮಾಡುತ್ತಾನೆ?
20 ನಿ: ‘ನಿಮ್ಮ ಸಂಭಾಷಣೆ ಯಾವಾಗಲೂ ರಸವತ್ತಾಗಿರಲಿ’b ಪ್ಯಾರ 2ನ್ನು ಪರಿಗಣಿಸುವಾಗ ಯೋಹಾನ 4:7-15, 39ನ್ನು ಓದಿ.
ಗೀತೆ 85
ಜನವರಿ 21ರಿಂದ ಆರಂಭವಾಗುವ ವಾರ
ಗೀತೆ 215
10 ನಿ:ಸ್ಥಳಿಕ ಪ್ರಕಟನೆಗಳು. ಫೆಬ್ರವರಿ ತಿಂಗಳ ಸಾಹಿತ್ಯ ನೀಡುವಿಕೆಯನ್ನು ತಿಳಿಸಿರಿ ಮತ್ತು ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ. ಫೆಬ್ರವರಿ 4ನೇ ವಾರದ ಸೇವಾ ಕೂಟದಲ್ಲಿ ನಡೆಸಲಾಗುವ ಚರ್ಚೆಯ ತಯಾರಿಗಾಗಿ, ರಕ್ತಪೂರಣಕ್ಕೆ ಬದಲಿಯಾದ ಆರೋಗ್ಯಾರೈಕೆ—ರೋಗಿಯ ಅಗತ್ಯಗಳು ಮತ್ತು ಹಕ್ಕುಗಳನ್ನು ಪೂರೈಸುವುದು (ಇಂಗ್ಲಿಷ್) ಎಂಬ ವಿಡಿಯೋವನ್ನು ವೀಕ್ಷಿಸುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.
10 ನಿ:ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಪುಸ್ತಿಕೆಯನ್ನು ನೀವು ಉಪಯೋಗಿಸುತ್ತಿದ್ದೀರೋ? ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು—2008ರ ಮುನ್ನುಡಿಯ ಮೇಲೆ ಆಧಾರಿತ. ಬೈಬಲ್ ವಚನ ಮತ್ತು ಅದರ ಕುರಿತ ಹೇಳಿಕೆಗಳನ್ನು ಪರಿಶೀಲಿಸಲು ಪ್ರತಿದಿನವೂ ಸಮಯ ತೆಗೆದುಕೊಳ್ಳುವುದರ ಮೌಲ್ಯವನ್ನು ಚರ್ಚಿಸಿರಿ. ದಿನದ ವಚನವನ್ನು ಪರಿಗಣಿಸುವ ತಮ್ಮ ರೂಢಿಯ ಕುರಿತು ಮತ್ತು ಅದರಿಂದ ಅವರು ಹೇಗೆ ಪ್ರಯೋಜನ ಪಡೆದಿದ್ದಾರೆ ಎಂಬದರ ಕುರಿತು ತಿಳಿಸುವಂತೆ ಸಭಿಕರನ್ನು ಕೇಳಿರಿ. ಒಂದೆರಡು ಹೇಳಿಕೆಗಳನ್ನು ಮುಂಚಿತವಾಗಿಯೇ ಏರ್ಪಡಿಸಬಹುದು. 2008ರ ವಾರ್ಷಿಕ ವಚನವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
25 ನಿ: “ಧೈರ್ಯ ಮತ್ತು ವಿವೇಚನೆಯಿಂದ ಸಾರುವುದು.”c ಪುರವಣಿಯ ಪ್ಯಾರ 1-13ರ ವರೆಗೆ ಒಬ್ಬ ಹಿರಿಯನು ಸಭಿಕರೊಂದಿಗೆ ನಡೆಸುವ ಚರ್ಚೆ. ಕೂಟದಲ್ಲಿ ಈ ವಿಷಯಭಾಗವನ್ನು ಚರ್ಚಿಸುವ ಮುಂಚೆ, ಇದನ್ನು ಸ್ಥಳಿಕ ಪರಿಸ್ಥಿತಿಗಳಿಗೆ ಹೊಂದಿಕೆಯಲ್ಲಿ ಎಷ್ಟರ ಮಟ್ಟಿಗೆ ಅನ್ವಯಿಸಸಾಧ್ಯವಿದೆ ಎಂಬುದನ್ನು ಹಿರಿಯರು ಚರ್ಚಿಸತಕ್ಕದ್ದು.
ಗೀತೆ 106
ಜನವರಿ 28ರಿಂದ ಆರಂಭವಾಗುವ ವಾರ
ಗೀತೆ 52
10 ನಿ:ಸ್ಥಳಿಕ ಪ್ರಕಟನೆಗಳು. ಜನವರಿ ತಿಂಗಳ ಕ್ಷೇತ್ರ ಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪು ಹುಟ್ಟಿಸಿರಿ. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಜನವರಿ-ಮಾರ್ಚ್ ಕಾವಲಿನಬುರುಜು ಮತ್ತು ಜನವರಿ-ಮಾರ್ಚ್ ಎಚ್ಚರ! ಪತ್ರಿಕೆಗಳ ಮೇಲೆ ಆಧರಿಸಿ ಸಭಿಕರೊಂದಿಗಿನ ಚರ್ಚೆ. ಪ್ರತಿಯೊಂದು ಸಂಚಿಕೆಯ ಸಂಕ್ಷಿಪ್ತ ವಿವರಣೆಯನ್ನು ನೀಡಿದ ಬಳಿಕ, ಟೆರಿಟೊರಿಯಲ್ಲಿರುವ ಜನರಿಗೆ ಯಾವ ಲೇಖನಗಳು ಇಷ್ಟವಾಗಬಹುದು ಮತ್ತು ಏಕೆ ಎಂದು ಸಭಿಕರನ್ನು ಕೇಳಿರಿ. ತಾವು ಪರಿಚಯಪಡಿಸಲು ಯೋಜಿಸಿರುವ ಲೇಖನಗಳಲ್ಲಿರುವ ನಿರ್ದಿಷ್ಟ ಅಂಶಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿರಿ. ಸಂಭಾಷಣೆಯನ್ನು ಆರಂಭಿಸಲು ಯಾವ ಪ್ರಶ್ನೆಯನ್ನು ಕೇಳಸಾಧ್ಯವಿದೆ? ತದನಂತರ ಲೇಖನದಲ್ಲಿರುವ ಯಾವ ವಚನವನ್ನು ಓದಸಾಧ್ಯವಿದೆ? ಆ ವಚನವನ್ನು ಲೇಖನಕ್ಕೆ ಹೇಗೆ ಜೋಡಿಸಸಾಧ್ಯವಿದೆ? ಸೂಕ್ತ ನಿರೂಪಣೆಯನ್ನು ಉಪಯೋಗಿಸಿ ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿರಿ.
10 ನಿ:ಸ್ಥಳಿಕ ಅಗತ್ಯಗಳು.
25 ನಿ: “ಧೈರ್ಯ ಮತ್ತು ವಿವೇಚನೆಯಿಂದ ಸಾರುವುದು.” ಪುರವಣಿಯ ಪ್ಯಾರ 14-27ರ ಪ್ರಶ್ನೋತ್ತರ ಚರ್ಚೆ. ಒಬ್ಬ ಹಿರಿಯನು ನಿರ್ವಹಿಸತಕ್ಕದ್ದು. ಸ್ಥಳಿಕ ಪರಿಸ್ಥಿತಿಗಳಿಗೆ ಅನುಸಾರವಾಗಿ ವಿಷಯಭಾಗವನ್ನು ಅನ್ವಯಿಸಿರಿ.
ಗೀತೆ 199
ಫೆಬ್ರವರಿ 4ರಿಂದ ಆರಂಭವಾಗುವ ವಾರ
ಗೀತೆ 161
10 ನಿ:ಸ್ಥಳಿಕ ಪ್ರಕಟನೆಗಳು. ಪ್ರಶ್ನಾ ಚೌಕವನ್ನು ಚರ್ಚಿಸಿರಿ.
15 ನಿ: “ರಾಜ್ಯ ಸುವಾರ್ತೆಯ ಪ್ರಚಾರಕರಾಗಲು ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಿ.”d ಸಮಯವಿರುವಲ್ಲಿ, ಕೊಡಲಾಗಿರುವ ಬೈಬಲ್ ವಚನಗಳ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿರಿ.
20 ನಿ: “ನೀವದನ್ನು ಮುಂದೂಡುತ್ತಿದ್ದೀರೊ?” ಒಬ್ಬ ಹಿರಿಯನು ನಿರ್ವಹಿಸತಕ್ಕದ್ದು. ನೇರವಾಗಿ ಲೇಖನದಲ್ಲಿ ಕೊಡಲಾಗಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ, ರೋಗಿಯ ಅಗತ್ಯಗಳು ಮತ್ತು ಹಕ್ಕುಗಳು (ಇಂಗ್ಲಿಷ್) ವಿಡಿಯೋದ ಚರ್ಚೆಯನ್ನು ನಡೆಸಿರಿ. ಸಮಾಪ್ತಿಯಲ್ಲಿ, ಕೊನೆಯ ಪ್ಯಾರವನ್ನು ಓದಿ ಮತ್ತು ಉಲ್ಲೇಖಿಸಿರುವ ಕಾವಲಿನಬುರುಜು ಮತ್ತು ನಮ್ಮ ರಾಜ್ಯದ ಸೇವೆಯ ಲೇಖನಗಳನ್ನು ಜಾಗರೂಕತೆಯಿಂದ ಓದುವಂತೆ ಎಲ್ಲರನ್ನು ಉತ್ತೇಜಿಸಿರಿ. ಡಿಪಿಎ ಕಾರ್ಡನ್ನು ಇನ್ನೂ ಭರ್ತಿಮಾಡದಿರುವ ಪ್ರತಿಯೊಬ್ಬನು, ರಕ್ತದ ಅಂಶಗಳ ಮತ್ತು ಚಿಕಿತ್ಸಾಕ್ರಮಗಳ ವಿಷಯದಲ್ಲಿ ವೈಯಕ್ತಿಕ ನಿರ್ಣಯಗಳನ್ನು ಮಾಡಲು 2006ರ ನವೆಂಬರ್ ತಿಂಗಳ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿರುವ ವರ್ಕ್ ಶೀಟನ್ನು ಹೇಗೆ ಉಪಯೋಗಿಸಸಾಧ್ಯವಿದೆ ಮತ್ತು ಅನಂತರ ತಾನು ಮಾಡಿದ ನಿರ್ಣಯಗಳನ್ನು ಡಿಪಿಎ ಕಾರ್ಡ್‌ನ ಮೇಲೆ ಹೇಗೆ ಬರೆಯಸಾಧ್ಯವಿದೆ ಎಂಬುದನ್ನು ವಿವರಿಸಿರಿ. ಈಗಾಗಲೇ ಡಿಪಿಎ ಕಾರ್ಡನ್ನು ಭರ್ತಿಮಾಡಿರುವವರು ತಮ್ಮ ಹಿಂದಿನ ಆಯ್ಕೆಗಳನ್ನು ಮರುಪರಿಶೀಲಿಸಿ, ಅಗತ್ಯವಿರುವಲ್ಲಿ ಹೊಸ ಡಿಪಿಎ ಕಾರ್ಡನ್ನು ಭರ್ತಿಮಾಡಬಹುದು.
ಗೀತೆ 4
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.