ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜನ.-ಮಾರ್ಚ್
“ವಿವಾಹದ ಸಮಸ್ಯೆಗಳು ಹೆಚ್ಚುತ್ತಾ ಬರುವಾಗ ತಮ್ಮ ದಾಂಪತ್ಯದ ಬಂಧವನ್ನು ಬಲಪಡಿಸಲು ಪತಿಪತ್ನಿಯರಿಗೆ ಯಾವುದು ನೆರವಾಗುವುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಒಂದು ವಚನವನ್ನು ಓದಬಹುದೋ ಎಂದು ಕೇಳಿ. ಆಸಕ್ತಿ ತೋರಿ ಬಂದಲ್ಲಿ ಯೋಬ 31:1 ಓದಿ.] ಮದುವೆಯ ಬದ್ಧತೆಗಳನ್ನು ಉಳಿಸಿಕೊಳ್ಳಲು ದಂಪತಿಗಳಿಗೆ ನೆರವಾಗುವ ಶಾಸ್ತ್ರೀಯ ಮೂಲತತ್ತ್ವಗಳನ್ನು ಈ ಲೇಖನವು ಚರ್ಚಿಸುತ್ತದೆ.” ಪುಟ 12ರಲ್ಲಿ ಆರಂಭಿಸುವ ಲೇಖನವನ್ನು ಎತ್ತಿಹೇಳಿ.
ಎಚ್ಚರ! ಜನ.-ಮಾರ್ಚ್
“ಇಂಟರ್ನೆಟ್ ಒಂದು ಉಪಯುಕ್ತ ಉಪಕರಣ ನಿಜ. ಆದರೆ ಅದು ಮಕ್ಕಳಿಗೆ ಅತಿ ಅಪಾಯಕಾರಿಯಾಗಿರಬಲ್ಲದು. ಅದರಿಂದ ನಾವು ಮಕ್ಕಳನ್ನು ಕಾಪಾಡುವ ಬಗೆ ಹೇಗೆ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಒಂದು ಪುರಾತನ ನಾಣ್ಣುಡಿಯಲ್ಲಿ ತಿಳಿಸಲ್ಪಟ್ಟ ವಿಚಾರವನ್ನು ಗಮನಿಸಿ. [ಮನೆಯವನು ಆಸಕ್ತಿ ತೋರಿಸುವಂತೆ ಕಂಡರೆ ಜ್ಞಾನೋಕ್ತಿ 18:1ನ್ನು ಓದಿ ಅನ್ವಯಿಸಿರಿ.] ತಮ್ಮ ಮಕ್ಕಳನ್ನು ಕಾಪಾಡಲು ಹೆತ್ತವರಿಗೆ ನೆರವಾಗುವಂತೆ ಈ ಲೇಖನದಲ್ಲಿ ಎತ್ತಿಹೇಳಿರುವ ಆರು ಸೂತ್ರಗಳಲ್ಲಿ ಇದು ಒಂದು. ಪುಟ 16ರಲ್ಲಿರುವ ಲೇಖನವನ್ನು ತೋರಿಸಿರಿ.