ನಿಮ್ಮ ಆಯ್ಕೆಗಳು ನಿಮಗೆ ತಿಳಿದಿವೆಯೋ?
ರಕ್ತರಹಿತ ಶಸ್ತ್ರಕ್ರಿಯೆಗಳು ಇಂದು ಭೂಸುತ್ತಲೂ ಇರುವ ವೈದ್ಯಕೀಯ ಕೇಂದ್ರಗಳಲ್ಲಿ ಹೆಚ್ಚೆಚ್ಚಾಗಿ ನಡೆಸಲ್ಪಡುತ್ತಿವೆ. ಲಭ್ಯವಿರುವ ರಕ್ತರಹಿತ ಚಿಕಿತ್ಸೆಯಲ್ಲಿರುವ ಆಯ್ಕೆಗಳ ಕುರಿತು ನೀವು ಪೂರ್ಣ ಮಾಹಿತಿ ಪಡಕೊಂಡಿದ್ದೀರೋ? ನೀವು ಅವುಗಳನ್ನು ತಿಳಿದಿರಬೇಕಾದ ಅಗತ್ಯವಿದೆ. ಆ ಮೂಲಕ ವೈದ್ಯಕೀಯ ಚಿಕಿತ್ಸೆ ಮತ್ತು ಶಸ್ತ್ರಕ್ರಿಯೆಯ ಸಂಬಂಧದಲ್ಲಿ ನೀವು ತಿಳುವಳಿಕೆಯುಳ್ಳ ನಿರ್ಣಯಗಳನ್ನು ಮಾಡಲು ಶಕ್ತರಾಗುವಿರಿ. ಆದುದರಿಂದ ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ (ಇಂಗ್ಲಿಷ್) ವಿಡಿಯೋವನ್ನು ನೋಡಿರಿ. ಬಳಿಕ, ಈ ಕೆಳಗಿರುವ ಪ್ರಶ್ನೆಗಳ ಸಹಾಯದಿಂದ ನೀವು ಕಲಿತ ವಿಷಯಗಳನ್ನು ಪ್ರಾರ್ಥನಾಪೂರ್ವಕವಾಗಿ ಧ್ಯಾನಿಸಿರಿ.—ಸೂಚನೆ: ಈ ವಿಡಿಯೋದಲ್ಲಿ ಶಸ್ತ್ರಕ್ರಿಯೆಯ ಸಂಕ್ಷಿಪ್ತ ದೃಶ್ಯಗಳಿವೆ. ಆದುದರಿಂದ ಚಿಕ್ಕ ಮಕ್ಕಳೊಂದಿಗೆ ಈ ವಿಡಿಯೋ ವೀಕ್ಷಿಸುವ ವಿಷಯದಲ್ಲಿ ಹೆತ್ತವರು ವಿವೇಚನೆಯನ್ನು ಬಳಸಬೇಕು.
(1) ಯೆಹೋವನ ಸಾಕ್ಷಿಗಳು ರಕ್ತಪೂರಣಗಳನ್ನು ನಿರಾಕರಿಸುವುದಕ್ಕೆ ಮುಖ್ಯ ಕಾರಣವೇನು? (2) ವೈದ್ಯಕೀಯ ಆರೈಕೆಯ ವಿಷಯದಲ್ಲಾದರೋ ಯೆಹೋವನ ಸಾಕ್ಷಿಗಳು ಬಯಸುವುದೇನು? (3) ರೋಗಿಗಳಿಗೆ ಯಾವ ಮೂಲಭೂತ ಹಕ್ಕಿದೆ? (4) ರಕ್ತಪೂರಣ ಬದಲಿಗಳನ್ನು ಆಯ್ಕೆಮಾಡುವುದು ತರ್ಕಸಮ್ಮತವೂ ಮತ್ತು ನಮ್ಮ ಆರೋಗ್ಯದ ಬಗ್ಗೆ ನಮಗಿರುವ ಜವಾಬ್ದಾರಿಯನ್ನೂ ತೋರಿಸುತ್ತದೆ ಏಕೆ? (5) ವಿಪರೀತ ರಕ್ತನಷ್ಟದ ಸಂದರ್ಭದಲ್ಲಿ ಡಾಕ್ಟರುಗಳು ತುರ್ತಾಗಿ ಮಾಡಬೇಕಾದ ಎರಡು ಪ್ರಮುಖ ವಿಷಯಗಳು ಯಾವುವು? (6) ರಕ್ತಪೂರಣಕ್ಕೆ ಬದಲಿಯಾದ ಕಾರ್ಯವಿಧಾನಗಳ ನಾಲ್ಕು ಮೂಲತತ್ತ್ವಗಳಾವುವು? (7) ಡಾಕ್ಟರರು ಹೇಗೆ (ಎ) ರಕ್ತನಷ್ಟವಾಗುವುದನ್ನು ಕಡಿಮೆಗೊಳಿಸಬಹುದು, (ಬಿ) ಕೆಂಪು ರಕ್ತಕಣಗಳು ನಷ್ಟವಾಗದಂತೆ ನೋಡಿಕೊಳ್ಳಬಹುದು, (ಸಿ) ರಕ್ತ ಉತ್ಪಾದನೆಯನ್ನು ಹೆಚ್ಚಿಸಬಹುದು ಮತ್ತು (ಡಿ) ನಷ್ಟಗೊಂಡ ರಕ್ತವನ್ನು ಪುನಃ ಗಳಿಸುವಂತೆ ಮಾಡಬಹುದು? (8) ಈ ಚಿಕಿತ್ಸಾಕ್ರಮಗಳು ಏನೆಂದು ವರ್ಣಿಸಿ: (ಎ) ಹೀಮೊಡೈಲ್ಯೂಷನ್ ಮತ್ತು (ಬಿ) ಸೆಲ್ ಸ್ಯಾಲ್ವೇಜ್. (9) ಯಾವುದೇ ರಕ್ತಪೂರಣ ಬದಲಿಯ ಬಗ್ಗೆ ನಿಮಗೆ ಏನು ತಿಳಿಸಲ್ಪಡಬೇಕೆಂದು ನೀವು ಬಯಸಬೇಕು? (10) ರಕ್ತಪೂರಣಗಳಿಲ್ಲದೆ ಗಂಭೀರವಾದ ಹಾಗೂ ಜಟಿಲವಾದ ಶಸ್ತ್ರಕ್ರಿಯೆಗಳನ್ನು ನಡೆಸಸಾಧ್ಯವೋ? (11) ವೈದ್ಯಕೀಯ ಸಮುದಾಯದಲ್ಲಿ ಯಾವ ಸಕಾರಾತ್ಮಕ ಬದಲಾವಣೆ ನಡೆಯುತ್ತಿದೆ?
ಈ ವಿಡಿಯೋದಲ್ಲಿ ತೋರಿಸಲಾದ ಕೆಲವು ಚಿಕಿತ್ಸೆಗಳನ್ನು ಸ್ವೀಕರಿಸುವುದು, ಪ್ರತಿಯೊಬ್ಬರು ತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗೆ ಅನುಸಾರ ತಕ್ಕೊಳ್ಳುವ ವೈಯಕ್ತಿಕ ನಿರ್ಣಯವಾಗಿದೆ. ನಿಮಗೆ ಮತ್ತು ನಿಮ್ಮ ಮಕ್ಕಳಿಗಾಗಿ ಯಾವ ಔಷಧೋಪಚಾರ ಹಾಗೂ ಚಿಕಿತ್ಸಾಕ್ರಮಗಳನ್ನು ತೆಗೆದುಕೊಳ್ಳುವಿರಿ ಎಂಬುದನ್ನು ಮೊದಲಾಗಿ ನಿರ್ಣಯಿಸಿ, ಆಮೇಲೆ ನಿಮ್ಮ ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ ಅನ್ನು ಭರ್ತಿಮಾಡಿದ್ದೀರೋ? ಈ ಕುರಿತ ಸಂಪೂರ್ಣ ಚರ್ಚೆಗಾಗಿ 2004, ಜೂನ್ 15ರ ಮತ್ತು 2000, ಅಕ್ಟೋಬರ್ 15ರ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ಲೇಖನವನ್ನು ಜಾಗ್ರತೆಯಿಂದ ಪರಿಶೀಲಿಸಿ. ಆ ಬಳಿಕ, ನೀವು ಯಾವ ಆಯ್ಕೆಗಳನ್ನು ಸ್ವೀಕರಿಸುವಿರಿ ಅಥವಾ ನಿರಾಕರಿಸುವಿರಿ ಎಂಬ ವಿಷಯದಲ್ಲಿ ನಿಮ್ಮ ವೈಯಕ್ತಿಕ ನಿರ್ಣಯಗಳನ್ನು ಮಾಡಲು 2006, ನವೆಂಬರ್ ತಿಂಗಳ ನಮ್ಮ ರಾಜ್ಯದ ಸೇವೆಯ ಪುರವಣಿಯ “ರಕ್ತದ ಅಂಶಗಳ ಬಗ್ಗೆ ಮತ್ತು ನನ್ನ ಸ್ವಂತ ರಕ್ತವನ್ನು ಬಳಸುವ ಚಿಕಿತ್ಸಾಕ್ರಮಗಳ ಬಗ್ಗೆ ನನ್ನ ನಿರ್ಣಯವೇನು?” ಲೇಖನದಲ್ಲಿರುವ ವರ್ಕ್ ಶೀಟನ್ನು ಉಪಯೋಗಿಸಿರಿ. ಕೊನೆಯಲ್ಲಿ, ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ನಲ್ಲಿ ನಿಮ್ಮ ಆಯ್ಕೆಗಳ ಕುರಿತು ಸರಿಯಾಗಿ ಬರೆದಿದ್ದೀರೆಂದು ಖಚಿತಪಡಿಸಿಕೊಳ್ಳಿ. ನೀವು ಆಯ್ದುಕೊಂಡ ವ್ಯಕ್ತಿಗಳಿಗೆ ಮತ್ತು ಸಾಕ್ಷಿಗಳಲ್ಲದ ಕುಟುಂಬದವರಿಗೂ ನಿಮ್ಮ ನಿರ್ಣಯಗಳ ಬಗ್ಗೆ ಪೂರ್ಣವಾಗಿ ತಿಳಿದಿರಬೇಕು.
[ಪುಟ 3ರಲ್ಲಿರುವಚೌಕ]
• ನಿಮಗೆ ಮತ್ತು ನಿಮ್ಮ ಮಕ್ಕಳಿಗಾಗಿ ಯಾವ ಔಷಧೋಪಚಾರ ಹಾಗೂ ಚಿಕಿತ್ಸಾಕ್ರಮಗಳನ್ನು ತೆಗೆದುಕೊಳ್ಳುವಿರಿ ಎಂಬುದರ ಬಗ್ಗೆ ದೃಢನಿರ್ಣಯವನ್ನು ಮಾಡಿದ್ದೀರೋ?
• ತುರ್ತುಪರಿಸ್ಥಿತಿಯಲ್ಲಿ ಬಳಸಲು ಪೂರ್ಣವಾಗಿ ಭರ್ತಿಯಾಗಿರುವ ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ ನಿಮ್ಮ ಬಳಿ ಇದೆಯೋ?