ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2009, ಫೆಬ್ರವರಿ 23ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2009ರ ಜನವರಿ 5ರಿಂದ ಫೆಬ್ರವರಿ 23ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲೆ ಆಧಾರಿತವಾದ 20-ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
1. ನಾಲ್ಕನೆಯ ದಿನದ ತನಕ ಸೂರ್ಯಚಂದ್ರರು ಸೃಷ್ಟಿಸಲ್ಪಟ್ಟಿರದಿದ್ದಲ್ಲಿ, ಮೊದಲ ದಿನವೇ ದೇವರು ಬೆಳಕನ್ನು ಹೇಗೆ ಉಂಟುಮಾಡಸಾಧ್ಯವಿತ್ತು? (ಆದಿ. 1:3, 16) [w04-KA 1/1 ಪು. 28 ಪ್ಯಾರ. 5]
2. ನೋಹನು ಕಾನಾನನಿಗೆ ಶಾಪ ನೀಡಿದ್ದೇಕೆ? (ಆದಿ. 9:20-25) [w04-KA 1/1 ಪು. 31 ಪ್ಯಾರ. 2]
3. ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆ ಯಾವ ತಾರೀಕಿನಂದು ಜಾರಿಗೆ ಬಂತು, ಮತ್ತು ಅದು ಎಷ್ಟರ ತನಕ ಜಾರಿಯಲ್ಲಿತ್ತು? [w04-KA 1/15 ಪು. 26 ಪ್ಯಾರ. 4; w01-KA 8/15 ಪು. 17 ಪ್ಯಾರ. 13]
4. ನಿಮ್ರೋದನು ಮತ್ತು ಅವನ ಮಾರ್ಗವನ್ನು ಹಿಂಬಾಲಿಸಿದವರು ತಮಗಾಗಿ ‘ಒಂದು ದೊಡ್ಡ ಹೆಸರನ್ನು’ ಮಾಡಿಕೊಳ್ಳಲಾಗಲಿಲ್ಲ ಎಂಬುದನ್ನು ಯಾವುದು ತೋರಿಸುತ್ತದೆ? (ಆದಿ. 11:4) [w98-KA 3/15 ಪು. 24 ಪ್ಯಾರ. 7-ಪು. 25]
5. ಎರಡನೆಯ ಪೇತ್ರ 2:7ರಲ್ಲಿ ಲೋಟನನ್ನು ‘ನೀತಿವಂತನೆಂದು’ ಹೇಳಿರಲಾಗಿ ಅವನೇಕೆ ತನ್ನ ಹೆಣ್ಣುಮಕ್ಕಳನ್ನು ವಿಕೃತಕಾಮಿಗಳ ಗುಂಪಿಗೆ ಒಪ್ಪಿಸಲು ಸಿದ್ಧನಾದನು? (ಆದಿ. 19:8) [w05-KA 2/1 ಪು. 26 ಪ್ಯಾರ. 15-16; w04-KA 1/15 ಪು. 27 ಪ್ಯಾರ. 4]
6. ಇಷ್ಮಾಯೇಲನ ಕುರಿತು ಸಾರ ಮತ್ತು ಹಾಗರಳ ಮಧ್ಯೆ ಇದ್ದ ಭಿನ್ನಾಭಿಪ್ರಾಯವನ್ನು ಅಬ್ರಾಹಾಮನು ಇತ್ಯರ್ಥಗೊಳಿಸಿದ ರೀತಿಯಿಂದ ವಿವಾಹಿತ ದಂಪತಿಗಳು ಏನನ್ನು ಕಲಿಯಬಲ್ಲರು? (ಆದಿ. 21:10-14; 1 ಥೆಸ. 2:13) [w06-KA 4/15 ಪು. 6 ಪ್ಯಾರ. 5-8]
7. ಇಸಾಕನಿಗೆ ಹೆಣ್ಣನ್ನು ಹುಡುಕುವುದರಲ್ಲಿ ಯೆಹೋವನ ಮಾರ್ಗಕ್ಕನುಸಾರ ಕಾರ್ಯನಡಿಸಲು ಎಲೀಯೆಜರನು ಪಟ್ಟ ಪ್ರಯತ್ನದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? (ಆದಿ. 24:14, 15, 17-19, 26, 27) [w97-KA 1/1 ಪು. 31 ಪ್ಯಾರ. 2]
8. ನಿಚ್ಚಣಿಗೆಯ ಮೇಲೆ “ದೇವದೂತರು ಹತ್ತುತ್ತಾ ಇಳಿಯುತ್ತಾ” ಇದ್ದ ಹಾಗೆ ಯಾಕೋಬನು ಕಂಡ ಕನಸಿನ ಅರ್ಥವೇನಾಗಿತ್ತು? (ಆದಿ. 28:10-13) [w03-KA 10/15 ಪು. 29 ಪ್ಯಾರ. 1; w04-KA 1/15 ಪು. 28 ಪ್ಯಾರ. 6]
9. ಲೇಯಳ ಮಗನ ಹತ್ತಿರವಿದ್ದ ಕಾಮಜನಕ ಫಲಗಳನ್ನು ಪಡೆದುಕೊಳ್ಳಲು ರಾಹೇಲಳು ಏಕೆ ಅಷ್ಟೊಂದು ಬಯಸಿದಳು? (ಆದಿ. 30:14, 15) [w04-KA 1/15 ಪು. 28 ಪ್ಯಾರ. 7]
10. ದೀನಳ ಉದಾಹರಣೆಯು ಅಪಾಯದ ಹತ್ತಿರಕ್ಕೆ ಹೋಗುವುದರ ದುಷ್ಪರಿಣಾಮವನ್ನು ಹೇಗೆ ತೋರಿಸುತ್ತದೆ? (ಆದಿ. 34:1, 2, 19) [w04-KA 10/15 ಪು. 21 ಪ್ಯಾರ. 6; ಪು. 22 ಪ್ಯಾರ, 5]