ಫೆಬ್ರವರಿ 23ರಿಂದ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 23ರಿಂದ ಆರಂಭವಾಗುವ ವಾರ
ಗೀತೆ 22
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 32-35
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
❑ ಸೇವಾ ಕೂಟ:
ಗೀತೆ 1
5 ನಿ: ಪ್ರಕಟಣೆಗಳು. ಮಾರ್ಚ್ಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ.
10 ನಿ: ಜನವರಿ-ಮಾರ್ಚ್ ಕಾವಲಿನಬುರುಜು ಹಾಗೂ ಜನವರಿ-ಮಾರ್ಚ್ ಎಚ್ಚರ! ಪತ್ರಿಕೆ ನೀಡಿರಿ. ಪತ್ರಿಕೆಗಳಲ್ಲಿರುವ ಲೇಖನಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಿದ ಬಳಿಕ, ಟೆರಿಟೊರಿಯಲ್ಲಿರುವ ಜನರಿಗೆ ಯಾವ ಲೇಖನಗಳು ಇಷ್ಟವಾಗಬಹುದು ಮತ್ತು ಏಕೆ ಎಂದು ಸಭಿಕರನ್ನು ಕೇಳಿರಿ. ಮನೆಯವನಿಗೆ ನಿಜವಾಗಿಯೂ ಆಸಕ್ತಿಯಿದೆಯೋ ಎಂಬುದನ್ನು ಕಂಡುಹಿಡಿಯಲಿಕ್ಕಾಗಿ ಅಥವಾ ಸಂಭಾಷಣೆಯನ್ನು ಪ್ರಾರಂಭಿಸಲಿಕ್ಕಾಗಿ ಯಾವ ಪ್ರಶ್ನೆಯನ್ನು ಕೇಳಬಹುದು ಮತ್ತು ಪತ್ರಿಕೆಯನ್ನು ನೀಡುವ ಮೊದಲು ಯಾವ ವಚನವನ್ನು ಓದಬಹುದು ಎಂದು ಸಭಿಕರನ್ನು ಕೇಳಿರಿ. ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿ ಕೊನೆಗೊಳಿಸಿ.
10 ನಿ: ಸ್ಥಳಿಕ ಅಗತ್ಯಗಳು.
10 ನಿ: ಪ್ರತಿನಿತ್ಯ ಶಾಸ್ತ್ರವಚನಗಳನ್ನು ಪರೀಕ್ಷಿಸುವುದು ಪುಸ್ತಿಕೆಯನ್ನು ನೀವು ಉಪಯೋಗಿಸುತ್ತಿದ್ದೀರೋ? ಪ್ರತಿನಿತ್ಯ ಶಾಸ್ತ್ರವಚನಗಳನ್ನು ಪರೀಕ್ಷಿಸುವುದು—2009ರ ಮುನ್ನುಡಿಯ ಮೇಲೆ ಆಧರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಶಾಸ್ತ್ರವಚನ ಮತ್ತು ಹೇಳಿಕೆಗಳನ್ನು ಓದಲು ಪ್ರತಿದಿನ ಸಮಯವನ್ನು ಬದಿಗಿರಿಸುವುದರ ಮಹತ್ವದ ಕುರಿತು ಚರ್ಚಿಸಿರಿ. ಸಭಿಕರು ದಿನವಚನವನ್ನು ಯಾವಾಗ ಮತ್ತು ಹೇಗೆ ಪರಿಗಣಿಸುತ್ತಾರೆಂದು ಮತ್ತು ಇದರಿಂದ ಯಾವ ಪ್ರಯೋಜನಗಳನ್ನು ಪಡೆದಿದ್ದಾರೆಂಬುದನ್ನು ಕೇಳಿರಿ.
ಗೀತೆ 160