ನಿಮ್ಮ ಸೇವೆಯನ್ನು ಹೆಚ್ಚಿಸಬಲ್ಲಿರೋ?
1. ಕ್ಷೇತ್ರ ಸೇವೆಯಲ್ಲಿ ಯಾವ ತುರ್ತಿನ ಅಗತ್ಯವಿದೆ ಮತ್ತು ಏಕೆ?
1 ರಾಜ್ಯ ಸುವಾರ್ತೆಯಲ್ಲಿ ಜನ ಸಮುದಾಯವು ತೋರಿಸಿದ ಆಸಕ್ತಿಯನ್ನು ಕಂಡು ಯೇಸು ತನ್ನ ಶಿಷ್ಯರಿಗೆ “ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ” ಎಂದು ಆದೇಶಿಸಿದನು. (ಮತ್ತಾ. 9:37, 38) ಕೊಯ್ಲಿನ ಕಾಲದ ಕೊನೆಯ ಗಳಿಗೆಯಲ್ಲಿ ನಾವಿರುವುದರಿಂದ ನಮ್ಮ ಕೆಲಸವು ಈಗ ಹಿಂದಿಗಿಂತಲೂ ಹೆಚ್ಚು ತುರ್ತಿನದ್ದಾಗಿದೆ. ಇದರ ಅರ್ಥವೇನಂದರೆ ಕ್ಷೇತ್ರಸೇವೆಯನ್ನು ಇನ್ನೂ ಹೆಚ್ಚು ಮಾಡುವುದು ಹೇಗೆ ಎಂಬದನ್ನು ನಾವು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಬೇಕು.—ಯೋಹಾ. 14:13, 14.
2. ಕ್ಷೇತ್ರದಲ್ಲಿ ಹೆಚ್ಚಿನ ಕೆಲಸಗಾರರು ಬೇಕೆಂಬ ಕರೆಗೆ ಕೆಲವರು ಹೇಗೆ ಪ್ರತಿಕ್ರಿಯಿಸಿದ್ದಾರೆ?
2 ಸೇವೆಯನ್ನು ಹೆಚ್ಚಿಸಿದ ವಿಧ: ಯೆಹೋವನ ಮಾರ್ಗದರ್ಶನ ಮತ್ತು ಸಹಾಯದಿಂದ ಅನೇಕರಿಗೆ ಪಯನೀಯರ್ ಸೇವೆಮಾಡಲು ಸಾಧ್ಯವಾಗಿದೆ. (ಕೀರ್ತ. 26:2, 3; ಫಿಲಿ. 4:6) ಕೆಲವರು ವರ್ಷದಲ್ಲಿ ಒಂದು ಅಥವಾ ಹೆಚ್ಚು ತಿಂಗಳು ಆಕ್ಸಿಲಿಯರಿ ಪಯನೀಯರರಾಗಿ ಸೇವೆಮಾಡಲು ವಿಶೇಷ ಪ್ರಯತ್ನ ಮಾಡಿದ್ದಾರೆ. ಇದು ಅವರ ಶುಶ್ರೂಷೆಯನ್ನು ಹೆಚ್ಚಿಸುವ ಒಂದು ಉತ್ತಮ ವಿಧಾನವಾಗಿ ರುಜುವಾಯಿತು. ಈ ಸುಯೋಗದಲ್ಲಿ ಭಾಗವಹಿಸಿದರಿಂದ ದೊರೆತ ಸಂತೋಷವು ಅವರಲ್ಲಿ ಅನೇಕರನ್ನು ರೆಗ್ಯುಲರ್ ಪಯನೀಯರರಾಗಲು ಯೋಚಿಸುವಂತೆ ಮಾಡಿತು.—ಅ. ಕಾ. 20:35.
3. ನೀವು ಈ ಹಿಂದೆ ಪಯನೀಯರರಾಗಿ ಸೇವೆಮಾಡಿದ್ದಲ್ಲಿ ಪುನಃ ಏನನ್ನು ಮಾಡಲು ನೀವೀಗ ಯೋಚಿಸಬಹುದು?
3 ಪಯನೀಯರ್ ಸೇವೆಯನ್ನು ಪುನಃ ಮಾಡಬಲ್ಲಿರೋ?: ನೀವು ಈ ಹಿಂದೆ ಪಯನೀಯರರಾಗಿ ಸೇವೆಮಾಡಿದ್ದಲ್ಲಿ ಅದರ ಸವಿ ನೆನಪುಗಳು ನಿಮಗಿರಬಹುದು. ಪುನಃ ಆ ಪಯನೀಯರ್ ಸೇವೆಗಿಳಿಯುವ ಸಾಧ್ಯತೆಯನ್ನು ನೀವು ಪ್ರಾರ್ಥನಾಪೂರ್ವಕವಾಗಿ ಯೋಚಿಸಿದ್ದೀರೋ? ಪಯನೀಯರ್ ಸೇವೆಯನ್ನು ನಿಲ್ಲಿಸುವಂತೆ ಮಾಡಿದ ಪರಿಸ್ಥಿತಿಗಳು ಈಗ ಒಂದುವೇಳೆ ನಿಮಗೆ ತಡೆಯಾಗಿರಲಿಕ್ಕಿಲ್ಲ. ಆ ವಿಶೇಷ ಸುಯೋಗವನ್ನು ಪುನಃ ಒಮ್ಮೆ ಆನಂದಿಸಲು ಸಮಯವೀಗ ಬಂದಿರಬಹುದು.—1 ಯೋಹಾ. 5:14, 15.
4. ಯಾವ ವಿಶೇಷ ಸದವಕಾಶವು ನಮ್ಮೆಲ್ಲರ ಮುಂದಿದೆ?
4 ಕೊಯ್ಲಿನ ಕೆಲಸವು ಪ್ರಗತಿಪರವಾಗಿ ಮುಂದುವರಿಯುತ್ತಿದೆ ಮತ್ತು ಈಗ ಬೇಗನೆ ಕೊನೆಗೊಳ್ಳಲಿದೆ. (ಯೋಹಾ. 4:35, 36) ಕ್ಷೇತ್ರದಲ್ಲಿ ನಮ್ಮ ಭಾಗವಹಿಸುವಿಕೆಯನ್ನು ಇನ್ನೂ ಹೆಚ್ಚಿಸುವಂತೆ ನಮ್ಮ ದಿನದಿನದ ಚಟುವಟಿಕೆಯನ್ನು ಹೊಂದಿಸಿಕೊಳ್ಳಬಲ್ಲೆವೊ ಎಂದು ನಿರ್ಣಯಿಸಲು ನಾವೆಲ್ಲರೂ ನಮ್ಮ ಸದ್ಯದ ಸನ್ನಿವೇಶವನ್ನು ಪರೀಕ್ಷಿಸೋಣ. ನಮ್ಮ ಸೇವೆಯನ್ನು ಹೆಚ್ಚಿಸಲು ಸಾಧ್ಯವಿಲ್ಲವೆಂದು ನಮಗೆ ಪ್ರಾಮಾಣಿಕವಾಗಿ ಕಂಡುಬಂದಲ್ಲಿ, ಕಡಿಮೆಪಕ್ಷ ಅದನ್ನು ಹೆಚ್ಚು ಪರಿಣಾಮಕಾರಿಯಾಗಿಯಾದರೂ ಮಾಡಲು ಪ್ರಯತ್ನಿಸಬಲ್ಲೆವೋ? (ಮಾರ್ಕ 12:41-44) ಈ ವಿಶೇಷ ಪ್ರಯತ್ನದಲ್ಲಿ ಯೆಹೋವನಿಂದ ಉಪಯೋಗಿಸಲ್ಪಡಲು ಯಾರ ಸದ್ಯದ ಪರಿಸ್ಥಿತಿಗಳು ಅನುಮತಿಸುತ್ತವೋ ಅವರೆಲ್ಲರ ಮುಂದೆ ಎಂಥ ಒಳ್ಳೆಯ ಸುಯೋಗವಿದೆ!—ಕೀರ್ತನೆ 110:3.