ಅಕ್ಟೋಬರ್ 26ರಿಂದ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 26ರಿಂದ ಆರಂಭವಾಗುವ ವಾರ
ಗೀತೆ 200
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಧರ್ಮೋಪದೇಶಕಾಂಡ 11-13
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
❑ ಸೇವಾ ಕೂಟ:
ಗೀತೆ 67
5 ನಿ: ಪ್ರಕಟಣೆಗಳು.
10 ನಿ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡಲು ತಯಾರಿ. ಭಾಷಣ. ಪ್ರಸ್ತುತ ಪತ್ರಿಕೆಗಳಲ್ಲಿರುವ ವಿಷಯವನ್ನು ಚುಟುಕಾಗಿ ತಿಳಿಸಿರಿ. ಯಾವ ಲೇಖನಗಳು ಸ್ಥಳಿಕ ಟೆರಿಟೊರಿಯ ಜನರಿಗೆ ಇಷ್ಟವಾಗಬಹುದೆಂದು ಎತ್ತಿತೋರಿಸಿ. ಒಂದು ಪ್ರತ್ಯಕ್ಷಾಭಿನಯದಲ್ಲಿ ತಂದೆ/ತಾಯಿ ತನ್ನ ಮಗ/ಮಗಳಿಗೆ ಶುಶ್ರೂಷೆಗಾಗಿ ತಯಾರಿಸಲು ಸಹಾಯ ಮಾಡುವುದನ್ನು ತೋರಿಸಿ. ಅವರಿಬ್ಬರೂ ಒಂದು ಲೇಖನವನ್ನು ಆಯ್ಕೆಮಾಡುತ್ತಾರೆ, ಮನೆಯವರಿಗೆ ಯಾವ ಪ್ರಶ್ನೆ ಕೇಳಬೇಕೆಂದು ಯೋಚಿಸುತ್ತಾರೆ ಮತ್ತು ಒಂದು ವಚನವನ್ನು ಆರಿಸುತ್ತಾರೆ. ನಂತರ ತಯಾರಿಸಲಾದ ನಿರೂಪಣೆಯನ್ನು ಮಗ/ಮಗಳು ಪ್ರತ್ಯಕ್ಷಾಭಿನಯಿಸಿ, ದಾನದ ಏರ್ಪಾಡಿನ ಬಗ್ಗೆಯೂ ತಿಳಿಸಲಿ.
10 ನಿ: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಸಭಿಕರೊಂದಿಗೆ ಚರ್ಚೆ. ಸ್ಥಳಿಕ ಟೆರಿಟೊರಿಯಲ್ಲಿ ಪುಸ್ತಕದ ಯಾವ ಅಧ್ಯಾಯಗಳನ್ನು ಅತಿ ಪರಿಣಾಮಕಾರಿಯಾಗಿ ಬಳಸಿದ್ದಾರೆಂದು ಸಭಿಕರನ್ನು ಕೇಳಿರಿ. ಪುಸ್ತಕವನ್ನು ಪರಿಚಯಿಸುವಾಗ ಯಾವ ಪ್ರಶ್ನೆ, ಚಿತ್ರ ಇಲ್ಲವೆ ವಚನವನ್ನು ಅವರು ಬಳಸಿದ್ದಾರೆ? ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.
10 ನಿ: ಪ್ರಶ್ನಾ ಚೌಕ. ಸಭಿಕರೊಂದಿಗೆ ಚರ್ಚೆ. ಚೌಕದಲ್ಲಿರುವ ವಚನಗಳನ್ನು ಓದಿ ಚರ್ಚಿಸಿರಿ.
ಗೀತೆ 70