ಮೇ 24ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 24ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 7 ಪ್ಯಾರ. 10-19, ಪುಟ 93ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಸಮುವೇಲ 13-15
ನಂ. 1: 2 ಸಮುವೇಲ 13:23-33
ನಂ. 2: ಕುಟುಂಬವು ಏನು ಮಾಡಸಾಧ್ಯವಿದೆ? (fy ಪು. 145-147 ಪ್ಯಾರ. 9-13)
ನಂ. 3: ನಾವು ಲೋಕವನ್ನು ಪೂರ್ಣವಾಗಿ ಅನುಭೋಗಿಸಬಾರದು ಏಕೆ? (1 ಕೊರಿಂ. 7:31)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಜೂನ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ತಯಾರಿ. ಸಭಿಕರೊಂದಿಗೆ ಚರ್ಚೆ. ಪತ್ರಿಕೆಗಳಲ್ಲಿರುವ ವಿಷಯಗಳನ್ನು ಒಂದೆರಡು ನಿಮಿಷಗಳಲ್ಲಿ ತಿಳಿಸಿ. ಅನಂತರ ಎರಡು ಅಥವಾ ಮೂರು ಲೇಖನಗಳನ್ನು ಆಯ್ಕೆಮಾಡಿ. ಆ ಲೇಖನಗಳನ್ನು ಮನೆಯವರಿಗೆ ಪರಿಚಯಿಸಲು ಯಾವ ಪ್ರಶ್ನೆಗಳನ್ನೂ ವಚನಗಳನ್ನೂ ಬಳಸಬಹುದೆಂದು ಸಭಿಕರನ್ನು ಕೇಳಿ. ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿ.
10 ನಿ: ಸ್ವಚ್ಛ ರಾಜ್ಯ ಸಭಾಗೃಹವು ಯೆಹೋವನಿಗೆ ಗೌರವ ತರುತ್ತದೆ. ಹಿರಿಯನಿಂದ ಭಾಷಣ. ಯೆಹೋವನು ಪವಿತ್ರ ದೇವರು. ಆದುದರಿಂದ ಆತನ ಜನರು ಶಾರೀರಿಕ ನೈರ್ಮಲ್ಯಕ್ಕೆ ಆದ್ಯತೆ ಕೊಡಬೇಕು. (ವಿಮೋ. 30:17-21; 40:30-32) ನಮ್ಮ ಆರಾಧನಾ ಸ್ಥಳವನ್ನು ಸ್ವಚ್ಛವಾಗಿಯೂ ಸುಸ್ಥಿತಿಯಲ್ಲಿಯೂ ಇಡುವ ಮೂಲಕ ನಾವು ಯೆಹೋವನಿಗೆ ಮಹಿಮೆ ತರುತ್ತೇವೆ. (1 ಪೇತ್ರ 2:12) ಸ್ಥಳೀಯ ಸಭಾಗೃಹವನ್ನು ಸ್ವಚ್ಛಗೊಳಿಸಲು ಮತ್ತು ಸುಸ್ಥಿತಿಯಲ್ಲಿಡಲು ಏರ್ಪಾಡುಗಳನ್ನು ಮಾಡುವ ಸಹೋದರನನ್ನು ಇಂಟರ್ವ್ಯೂ ಮಾಡಿ. ರಾಜ್ಯ ಸಭಾಗೃಹವನ್ನು ನೀಟಾಗಿಟ್ಟದ್ದರಿಂದ ಸಮುದಾಯಕ್ಕೆ ಹೇಗೆ ಸಾಕ್ಷಿಸಿಕ್ಕಿತ್ತೆಂದು ತೋರಿಸುವ ಸ್ಥಳೀಯ ಅನುಭವಗಳನ್ನೋ ಪ್ರಕಾಶನಗಳಲ್ಲಿರುವ ಅನುಭವಗಳನ್ನೋ ತಿಳಿಸಿ. ರಾಜ್ಯ ಸಭಾಗೃಹ ಹಾಗೂ ಅದರ ಸುತ್ತಲಿನ ಪರಿಸರವನ್ನು ಸ್ವಚ್ಛವೂ ಸುಸ್ಥಿತಿಯಲ್ಲಿಯೂ ಇಡುವಂತೆ ಎಲ್ಲರನ್ನೂ ಉತ್ತೇಜಿಸಿರಿ.
10 ನಿ: “ರಾಜ್ಯದ ಸುವಾರ್ತೆ ಖಂಡಿತ ಸಾರಲ್ಪಡುವುದು!” ಪ್ರಶ್ನೋತ್ತರ ಚರ್ಚೆ.