ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2010, ಆಗಸ್ಟ್ 30ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2010ರ ಜುಲೈ 5ರಿಂದ ಆಗಸ್ಟ್ 30ರ ತನಕದ ವಾರಗಳ ನೇಮಕಗಳಲ್ಲಿ ಆವರಿಸಲಾದ ವಿಷಯಗಳ ಮೇಲೆ ಇವು ಆಧಾರಿತ. 20 ನಿಮಿಷಗಳ ಈ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
1. ಸೊಲೊಮೋನನು ಆಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ಮಾಡಿದ ಪ್ರಾರ್ಥನೆಯ ಕುರಿತು ಧ್ಯಾನಿಸುವಾಗ ಯೆಹೋವನ ವ್ಯಕ್ತಿತ್ವಕ್ಕಾಗಿ ನಮ್ಮ ಗಣ್ಯತೆ ಹೇಗೆ ಹೆಚ್ಚುತ್ತದೆ? (1 ಅರ. 8:22-53) [w05 7/1 ಪು. 30 ಪ್ಯಾರ. 3]
2. ದಾವೀದನು ಅನೇಕ ತಪ್ಪುಗಳನ್ನು ಮಾಡಿದರೂ ಯೆಹೋವನ ಮುಂದೆ “ಪೂರ್ಣಮನಸ್ಸಿನಿಂದ [ಹೃದಯದ ಸಮಗ್ರತೆಯಿಂದ, NW]” ನಡೆದುಕೊಂಡನು ಎಂದು ಏಕೆ ಹೇಳಸಾಧ್ಯ? (1 ಅರ. 9:4) [w97 5/1 ಪು. 5 ಪ್ಯಾರ. 1-2]
3. ‘ಸದಾ ನಿನ್ನ ಮುಂದೆ ನಿಂತುಕೊಂಡು ನಿನ್ನ ಜ್ಞಾನವಾಕ್ಯಗಳನ್ನು ಕೇಳುವ ನಿನ್ನ ಸೇವಕರು ಧನ್ಯರು’ ಎಂದು ಶೆಬದ ರಾಣಿ ಸೊಲೊಮೋನನಿಗೆ ಹೇಳಿದ್ದೇಕೆ? (1 ಅರ. 10:4-8) [w99 11/1 ಪು. 20 ಪ್ಯಾರ. 5-7]
4. ಅಬೀಯನಿಗೆ ಯೋಗ್ಯ ರೀತಿಯಲ್ಲಿ ಸಮಾಧಿಮಾಡಬೇಕೆಂದು ಯೆಹೋವನು ಆಜ್ಞೆಕೊಟ್ಟ ಸಂಗತಿಯಿಂದ ನಾವೇನು ತಿಳಿಯಬಲ್ಲೆವು? (1 ಅರ. 14:13) [cl ಪು. 244 ಪ್ಯಾರ. 11]
5. ಓಬದ್ಯನು ಮಾಡಿದ ಕೆಲಸವು ದೇವಭಯಕ್ಕಿರುವ ಶಕ್ತಿಯ ಬಗ್ಗೆ ಏನು ತಿಳಿಸುತ್ತದೆ? (1 ಅರ. 18:4) [w06 10/1 ಪು. 21 ಪ್ಯಾರ. 18-19]
6. ‘ಎರಡು ಮನಸ್ಸುಳ್ಳವರು’ ಎಂದು ಎಲೀಯನು ಯಾವ ಅರ್ಥದಲ್ಲಿ ಹೇಳಿದನು? (1 ಅರ. 18:21) [w08 1/1 ಪು. 19 ಪ್ಯಾರ. 2-3]
7. ಎಲೀಯನ ವಿಷಯದಲ್ಲಿ ನಾವು ಗಮನಿಸುವಂತೆ ಯೆಹೋವನು ತನ್ನ ಸೇವಕರ ಸಂಬಂಧದಲ್ಲಿ ಯಾವ ಉದ್ದೇಶಕ್ಕಾಗಿ ತನ್ನ ಶಕ್ತಿಯನ್ನು ಉಪಯೋಗಿಸುತ್ತಾನೆ? (1 ಅರ. 19:1-12) [cl ಪು. 43 ಪ್ಯಾರ. 15-16]
8. ನಾಬೋತನು ತನ್ನ ದ್ರಾಕ್ಷಾತೋಟವನ್ನು ಆಹಾಬನಿಗೆ ಮಾರಲು ನಿರಾಕರಿಸಿದ್ದೇಕೆ? ಈ ವೃತ್ತಾಂತದಿಂದ ನಾವೇನು ಕಲಿಯಬಲ್ಲೆವು? (1 ಅರ. 21:3) [w97 8/1 ಪು. 13 ಪ್ಯಾರ. 18-20]
9. ಶೂನೇಮಿನ ಸ್ತ್ರೀ ಎಲೀಷನಿಗಾಗಿ ಯಾವ ವಿಧದಲ್ಲಿ ‘ಕಷ್ಟಪಟ್ಟಳು’? (2 ಅರ. 4:13) [w97 10/1 ಪು. 30 ಪ್ಯಾರ. 6-8]
10. ನಾಮಾನನು ಕೊಟ್ಟ ಕಾಣಿಕೆಯನ್ನು ಎಲೀಷನು ಏಕೆ ಸ್ವೀಕರಿಸಲಿಲ್ಲ? (2 ಅರ. 5:15, 16) [w05 8/1 ಪು. 9 ಪ್ಯಾರ. 3]