ಡಿಸೆಂಬರ್ 20ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 20ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 16 ಪ್ಯಾರ. 15-22, ಪು. 222ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 20-24
ನಂ. 1: 2 ಪೂರ್ವಕಾಲವೃತ್ತಾಂತ 20:1-12
ನಂ. 2: ಶುದ್ಧ ಭಾಷೆಯನ್ನು ಕಲಿಯುವುದರಲ್ಲಿ ಮತ್ತು ಆಡುವುದರಲ್ಲಿ ಏನೆಲ್ಲ ಒಳಗೂಡಿದೆ? (ಚೆಫ. 3:9)
ನಂ. 3: ದೇವರ ಚಿತ್ತವನ್ನು ಮಾಡುವ ಕುಟುಂಬ (fy ಪು. 188-191 ಪ್ಯಾರ. 13-18)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ನಮ್ಮ ರಾಜ್ಯ ಸೇವೆಯಲ್ಲಿ ಬಂದ ಸಲಹೆಗಳನ್ನು ಅನ್ವಯಿಸಿ ನೋಡಿದ್ದೀರೋ? ಚರ್ಚೆ. ಇತ್ತೀಚೆಗೆ ಮೂಡಿಬಂದ ಈ ಕೆಲವು ಲೇಖನಗಳಲ್ಲಿನ ಮಾಹಿತಿಯನ್ನು ಚುಟುಕಾಗಿ ಪುನರವಲೋಕಿಸಿ: “ಬೈಬಲ್ ಅಧ್ಯಯನ ಹೇಗೆ ನಡೆಸುತ್ತೇವೆಂದು ತೋರಿಸಿಕೊಟ್ಟಿದ್ದೀರೋ?” ಮತ್ತು “ಸಾರಲು ಹೊಸಬರಿಗೆ ತರಬೇತಿ ಕೊಡುವುದು ಹೇಗೆ?” (km 5/10) “ನಿಮ್ಮಿಂದ ಅನೌಪಚಾರಿಕ ಸಾಕ್ಷಿಕೊಡಲು ಖಂಡಿತ ಸಾಧ್ಯ!” (km 8/10). ಈ ಲೇಖನಗಳಲ್ಲಿನ ಸಲಹೆಗಳನ್ನು ಹೇಗೆ ಅನ್ವಯಿಸಿದ್ದಾರೆ, ಯಾವ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ತಿಳಿಸುವಂತೆ ಸಭಿಕರನ್ನು ಕೇಳಿ.
15 ನಿ: “ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು—ಎಷ್ಟು ವಿಷಯಭಾಗವನ್ನು ಆವರಿಸಬೇಕು?” ಪ್ರಶ್ನೋತ್ತರ. ಬೈಬಲ್ ಅಧ್ಯಯನ ನಡೆಸುವುದರಲ್ಲಿ ಅನುಭವಸ್ಥರಾದ ಪ್ರಚಾರಕರೊಬ್ಬರು ಪ್ಯಾರ 4-5ರಲ್ಲಿ ತಿಳಿಸಲಾಗಿರುವ ಸಂಗತಿಗಳ ಬಗ್ಗೆ ಹೊಸ ಪ್ರಚಾರಕರೊಂದಿಗೆ ಚರ್ಚಿಸುತ್ತಿರುವ ಪ್ರತ್ಯಕ್ಷಾಭಿನಯವಿರಲಿ.