ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಅಕ್ಟೋಬರ್-ಡಿಸೆಂಬರ್
“ಸುಳ್ಳು ವರದಿ ಕೊಟ್ಟೋ ಸತ್ಯಾಂಶಗಳನ್ನು ಮುಚ್ಚಿಟ್ಟೋ ತಪ್ಪಿಸಿಕೊಳ್ಳಲು ಅವಕಾಶ ಸಿಕ್ಕಿದರೆ ಅನೇಕರು ಹಾಗೆ ಮಾಡಲು ಹಿಂಜರಿಯುವುದಿಲ್ಲ. ನೀವೇನನ್ನುತ್ತೀರಿ? ಇದು ಪ್ರಾಮಾಣಿಕತೆಯೋ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಮನೆಯವರಿಗೆ ಆಸಕ್ತಿ ಇರುವಲ್ಲಿ ಬೈಬಲಿನ ಸೂತ್ರವೊಂದನ್ನು ಓದಬಹುದೋ ಎಂದು ಕೇಳಿ. ಒಪ್ಪುವಲ್ಲಿ ಇಬ್ರಿಯ 4:13 ಓದಿ.] ಈ ಸೂತ್ರವನ್ನು ಈ ಲೇಖನ ವಿವರಿಸುತ್ತದೆ.” ಪುಟ 17ರ ಲೇಖನ ತೋರಿಸಿ.
ಎಚ್ಚರ! ಅಕ್ಟೋಬರ್-ಡಿಸೆಂಬರ್
“ಒಂದುವೇಳೆ ಕೆಲಸಹೋದರೆ ಸನ್ನಿವೇಶವನ್ನು ಹೇಗೆ ನಿಭಾಯಿಸುವುದು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಇದಕ್ಕೆ ಸಂಬಂಧಪಟ್ಟ ಸೂತ್ರವೊಂದನ್ನು ನಿಮಗೆ ತೋರಿಸಬಹುದೋ? [ಮನೆಯವರಿಗೆ ಆಸಕ್ತಿ ಇರುವಲ್ಲಿ ಜ್ಞಾನೋಕ್ತಿ 21:5 ಓದಿ.] ಈ ಪತ್ರಿಕೆಯಲ್ಲಿ ಇಂಥ ಹಲವಾರು ವ್ಯಾವಹಾರಿಕ ಸಲಹೆಗಳಿವೆ.”
ಕಾವಲಿನಬುರುಜು ಜನವರಿ-ಮಾರ್ಚ್
“ಹೆಚ್ಚಿನವರು ಸರ್ವಶಕ್ತನನ್ನು ‘ದೇವರು’ ಎಂದು ಕರೆಯುತ್ತಾರೆ. ನೀವೇನು ನೆನಸುತ್ತೀರಿ, ಆತನಿಗೂ ಒಂದು ಹೆಸರಿರಬಹುದಾ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಉತ್ತರವನ್ನು ಬೈಬಲಿನಿಂದ ತೋರಿಸಬಹುದೋ ಎಂದು ಮನೆಯವರನ್ನು ಕೇಳಿ. ಒಪ್ಪುವಲ್ಲಿ ಯೆಶಾಯ 42:8ಎ ಓದಿ.] ದೇವರ ಹೆಸರನ್ನು ತಿಳಿದುಕೊಳ್ಳುವುದರಲ್ಲಿ ಏನೆಲ್ಲ ಒಳಗೂಡಿದೆ ಎಂಬುದನ್ನು ಈ ಪತ್ರಿಕೆ ವಿವರಿಸುತ್ತದೆ.”
ಎಚ್ಚರ! ಜನವರಿ-ಮಾರ್ಚ್
“ಬಹುಶಃ ಈ ಮುಂಚೆಯೂ ಯೆಹೋವನ ಸಾಕ್ಷಿಗಳು ನಿಮ್ಮನ್ನು ಭೇಟಿಯಾಗಿರಬಹುದು. ನಾವು ಯಾಕೆ ಈ ರೀತಿ ಮನೆಯಿಂದ ಮನೆಗೆ ಹೋಗಿ ಜನರನ್ನು ಭೇಟಿಯಾಗುತ್ತೇವೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿಗೆ ಬಂದಿದೆಯಾ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಮನೆಯವರಿಗೆ ಆಸಕ್ತಿ ಇರುವಲ್ಲಿ ಮತ್ತಾಯ 24:14 ಓದಿ.] ಅನೇಕರಿಗೆ ನಮ್ಮ ಬಗ್ಗೆ ತಪ್ಪಭಿಪ್ರಾಯಗಳಿವೆ. ಯೆಹೋವನ ಸಾಕ್ಷಿಗಳ ಮತ್ತು ಅವರ ನಂಬಿಕೆಗಳ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಅನೇಕ ಪ್ರಶ್ನೆಗಳಿಗೆ ಈ ಪತ್ರಿಕೆಯಲ್ಲಿ ಉತ್ತರಗಳಿವೆ.”