‘ನಿಮ್ಮ ಬೆಳಕು ಪ್ರಕಾಶಿಸಲಿ’
1. ಯಾವುದನ್ನು ಪಸರಿಸುವ ಸದವಕಾಶ ನಮಗಿದೆ?
1 ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ಇರುವ ಬೆಳಕಿನ ಸೌಂದರ್ಯ ಯೆಹೋವ ದೇವರಿಗೆ ಸ್ತುತಿ ತರುತ್ತದೆ. ಆದರೆ ಇನ್ನೊಂದು ಬಗೆಯ ಬೆಳಕನ್ನು ಪಡೆದುಕೊಳ್ಳುವಂತೆ ಯೇಸು ತನ್ನ ಶಿಷ್ಯರನ್ನು ಆಮಂತ್ರಿಸಿದನು. ಅದೇ ‘ಜೀವದ ಬೆಳಕು.’ (ಯೋಹಾ. 8:12) ಆಧ್ಯಾತ್ಮಿಕ ಜ್ಞಾನೋದಯವೆಂಬ ಈ ಬೆಳಕನ್ನು ಪಡೆದುಕೊಳ್ಳುವುದು ಒಂದು ವಿಶೇಷ ವರದಾನ. ಅದರಲ್ಲಿ ಗಂಭೀರ ಜವಾಬ್ದಾರಿಗಳೂ ಸೇರಿವೆ. “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ” ಎಂದು ಯೇಸು ನಿರ್ದೇಶಿಸಿದನು. ಇದರಿಂದ ಇತರರಿಗೆ ಪ್ರಯೋಜನ ಸಿಗುತ್ತದೆ. (ಮತ್ತಾ. 5:16) ಇಂದಿನ ಆಧ್ಯಾತ್ಮಿಕ ಅಂಧಕಾರದ ನಡುವೆ ಈ ಬೆಳಕನ್ನು ಎಲ್ಲೆಡೆ ಪಸರಿಸಬೇಕಾಗಿದೆ. ಅದರ ಅಗತ್ಯವು ಎಂದಿಗಿಂತಲೂ ಇಂದು ಅತಿ ಹೆಚ್ಚಾಗಿದೆ! ಕ್ರಿಸ್ತನಂತೆ ನಾವು ಹೇಗೆ ನಮ್ಮ ಬೆಳಕನ್ನು ಪ್ರಕಾಶಿಸಬಲ್ಲೆವು?
2. ಆಧ್ಯಾತ್ಮಿಕ ಬೆಳಕನ್ನು ಪಸರಿಸುವ ಮಹತ್ವವನ್ನು ಯೇಸು ಹೇಗೆ ತೋರಿಸಿಕೊಟ್ಟನು?
2 ಸಾರುವ ಮೂಲಕ: ಯೇಸು ತನ್ನ ಸಮಯ, ಶಕ್ತಿ, ಸಂಪನ್ಮೂಲಗಳನ್ನು ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಬೆಟ್ಟದ ಮೇಲೆ ಹೀಗೆ ಜನರು ಎಲ್ಲೆಲ್ಲಿ ಸಿಗುತ್ತಾರೋ ಅಲ್ಲಲ್ಲಿ ಅವರಿಗೆ ಸತ್ಯದ ಬೆಳಕನ್ನು ತಿಳಿಯಪಡಿಸಲು ಉಪಯೋಗಿಸಿದನು. ನಿಜ ಆಧ್ಯಾತ್ಮಿಕ ಜ್ಞಾನೋದಯವನ್ನು ಕೊಡುವುದರಿಂದ ಸಿಗುವ ಬಾಳುವ ಪ್ರಯೋಜನಗಳ ಬಗ್ಗೆ ಆತನು ತಿಳಿದಿದ್ದನು. (ಯೋಹಾ. 12:46) ಇನ್ನೂ ಹೆಚ್ಚು ಜನರಿಗೆ ಈ ಬೆಳಕನ್ನು ಪಸರಿಸಲಿಕ್ಕಾಗಿ ಯೇಸು ತನ್ನ ಶಿಷ್ಯರನ್ನು ‘ಲೋಕದ ಬೆಳಕಾಗಿರುವಂತೆ’ ಸಿದ್ಧಪಡಿಸಿದನು. (ಮತ್ತಾ. 5:14) ಅವರು ತಮ್ಮ ನೆರೆಯವರಿಗೆ ಒಳ್ಳೇದನ್ನು ಮಾಡುವ ಮೂಲಕ ಮತ್ತು ಆಧ್ಯಾತ್ಮಿಕ ಸತ್ಯಗಳನ್ನು ತಿಳಿಸುವ ಮೂಲಕ ತಮ್ಮ ಬೆಳಕನ್ನು ಪ್ರಕಾಶಿಸಿದರು.
3. ಸತ್ಯದ ಬೆಳಕಿಗಾಗಿ ನಾವು ಹೇಗೆ ಯಥಾರ್ಥ ಕೃತಜ್ಞತೆಯನ್ನು ತೋರಿಸಬಲ್ಲೆವು?
3 “ಬೆಳಕಿನ ಮಕ್ಕಳಾಗಿ ನಡೆಯುತ್ತಾ” ಇರಬೇಕಾದ ಜವಾಬ್ದಾರಿಯನ್ನು ದೇವಜನರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಮತ್ತು ಜನರು ಸಿಕ್ಕಿದಲ್ಲೆಲ್ಲ ಸಾರುತ್ತಾರೆ. (ಎಫೆ. 5:8) ಕೆಲಸದ ಸ್ಥಳ ಅಥವಾ ಶಾಲೆಯಲ್ಲಿ ವಿರಾಮದ ವೇಳೆಯಲ್ಲಿ ಇತರರಿಗೆ ಕಾಣಿಸುವಂತೆ ಬೈಬಲನ್ನೊ ಕ್ರೈಸ್ತ ಪ್ರಕಾಶನಗಳನ್ನೊ ಓದುವುದು ತಾನೇ ಆಧ್ಯಾತ್ಮಿಕ ಚರ್ಚೆಗೆ ದಾರಿ ಮಾಡಿಕೊಡಬಲ್ಲದು. ಈ ರೀತಿಯಲ್ಲೇ ಒಬ್ಬ ಎಳೆಯ ಸಹೋದರಿ ಬೈಬಲ್ ಅಧ್ಯಯನವನ್ನು ಆರಂಭಿಸಿದಳು ಮತ್ತು 12 ಸಹಪಾಠಿಗಳಿಗೆ ಪುಸ್ತಕಗಳನ್ನು ನೀಡಿದಳು!
4. ಬೆಳಕನ್ನು ಪ್ರಕಾಶಿಸುವುದರಲ್ಲಿ ನಮ್ಮ ಉತ್ತಮ ನಡತೆಯೂ ಏಕೆ ಸೇರಿದೆ?
4 ಸತ್ಕಾರ್ಯಗಳ ಮೂಲಕ: ದಿನನಿತ್ಯದ ನಡತೆಯ ಮೂಲಕವೂ ನಾವು ನಮ್ಮ ಬೆಳಕನ್ನು ಪ್ರಕಾಶಿಸಬಲ್ಲೆವು. (ಎಫೆ. 5:9) ಕೆಲಸದ ಸ್ಥಳ, ಶಾಲೆ ಮತ್ತು ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಕ್ರೈಸ್ತ ನಡತೆಯು ಇತರರ ಗಮನ ಸೆಳೆಯುತ್ತದೆ ಮತ್ತು ಬೈಬಲ್ ಸತ್ಯಗಳನ್ನು ತಿಳಿಸುವ ಅವಕಾಶ ಮಾಡಿಕೊಡುತ್ತದೆ. (1 ಪೇತ್ರ 2:12) ಉದಾಹರಣೆಗೆ, 5 ವರ್ಷದ ಬಾಲಕನ ಉತ್ತಮ ನಡತೆಯನ್ನು ಕಂಡು ಅವನ ಅಧ್ಯಾಪಕಿ ಅವನ ಹೆತ್ತವರನ್ನು ಕರೆಸಿ ಹೀಗಂದಳು: “ಸರಿತಪ್ಪುಗಳ ಬಗ್ಗೆ ಇಷ್ಟು ಚೆನ್ನಾಗಿ ತಿಳಿದಿರುವ ಮಗುವನ್ನು ನಾನು ಈ ವರೆಗೂ ನೋಡಿದ್ದಿಲ್ಲ!” ಹೌದು ನಮ್ಮ ಶುಶ್ರೂಷೆ ಮತ್ತು ಉತ್ತಮ ನಡತೆ ಜನರನ್ನು ‘ಜೀವದ ಬೆಳಕಿನ’ ಕಡೆಗೆ ಆಕರ್ಷಿಸುತ್ತದೆ ಮತ್ತು ನಮ್ಮ ದೇವರಿಗೆ ಸ್ತುತಿ ತರುತ್ತದೆ.