ನವೆಂಬರ್ 28ರಿಂದ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 28ರಿಂದ ಆರಂಭವಾಗುವ ವಾರ
ಗೀತೆ 50 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 11 ಪ್ಯಾರ. 15-21, ಪುಟ. 117ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಪರಮ ಗೀತ 1-8 (10 ನಿ.)
ನಂ. 1: ಪರಮ ಗೀತ 1:1–17 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ದೇವರ ರಾಜ್ಯದ ಸಾಧನೆಗಳು—ಈಗ ಮತ್ತು ಸಹಸ್ರ ವರುಷಗಳ ಕಾಲಾವಧಿಯಲ್ಲಿ—wt ಪು. 98 ಪ್ಯಾರ. 15 – ಪು. 100 ಪ್ಯಾರ. 17 (5 ನಿ.)
ನಂ. 3: ನಾವು ಇತರರ ಗೌರವವನ್ನು ಹೇಗೆ ಸಂಪಾದಿಸಬಹುದು? (5 ನಿ.)
❑ ಸೇವಾ ಕೂಟ:
10 ನಿ: ಪ್ರಕಟಣೆಗಳು. ಪುಟ 4ರಲ್ಲಿರುವ ಮಾದರಿ ನಿರೂಪಣೆಯನ್ನು ಉಪಯೋಗಿಸುತ್ತಾ ಡಿಸೆಂಬರ್ ತಿಂಗಳಿನ ಮೊದಲನೇ ಶನಿವಾರದಂದು ಬೈಬಲ್ ಅಧ್ಯಯನ ಹೇಗೆ ಆರಂಭಿಸಬಹುದೆಂದು ಪ್ರತ್ಯಕ್ಷಾಭಿನಯಿಸಿ. ಈ ಏರ್ಪಾಡಿನಲ್ಲಿ ಭಾಗವಹಿಸುವಂತೆ ಎಲ್ಲರನ್ನೂ ಉತ್ತೇಜಿಸಿ.
15 ನಿ: “ಉತ್ತಮ ಬೋಧಕರಲ್ಲಿ ಇರಬೇಕಾದ ಪ್ರಾಮುಖ್ಯ ಗುಣ.” ಪ್ರಶ್ನೋತ್ತರ. ತಮಗೆ ಬೈಬಲ್ ಅಧ್ಯಯನ ಮಾಡಿದವರು ತೋರಿಸಿದ ಪ್ರೀತಿಯು ಆಧ್ಯಾತ್ಮಿಕ ಪ್ರಗತಿ ಮಾಡಲು ಹೇಗೆ ಸಹಾಯ ಮಾಡಿತು ಎಂದು ತಿಳಿಸುವಂತೆ ಸಭಿಕರನ್ನು ಕೇಳಿ.
10 ನಿ: ಡಿಸೆಂಬರ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ಸಲಹೆಗಳು. ಚರ್ಚೆ. ನಿಮ್ಮ ಟೆರಿಟೊರಿಯಲ್ಲಿರುವ ಜನರ ಆಸಕ್ತಿ ಕೆರಳಿಸುವಂಥ ಕೆಲವು ಲೇಖನಗಳನ್ನು ಒಂದೆರಡು ನಿಮಿಷಗಳಲ್ಲಿ ಹೇಳಿ. ನಂತರ ಕಾವಲಿನಬುರುಜು ಪತ್ರಿಕೆಯ ಮುಖಪುಟ ಲೇಖನವನ್ನು ಬಳಸಿ ಮಾತಾಡುವಾಗ ಯಾವ ಆಸಕ್ತ ಪ್ರಶ್ನೆ ಕೇಳಬಹುದು ಹಾಗೂ ಯಾವ ವಚನವನ್ನು ಓದಬಹುದೆಂದು ಸಭಿಕರನ್ನು ಕೇಳಿ. ಎಚ್ಚರ! ಪತ್ರಿಕೆಯ ಮುಖಪುಟ ಲೇಖನದ ವಿಷಯದಲ್ಲೂ ಹೀಗೆ ಕೇಳಿ. ಸಮಯವಿರುವಲ್ಲಿ, ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯಿಂದ ಇನ್ನೊಂದು ಲೇಖನವನ್ನು ಹೇಗೆ ಪರಿಚಯಿಸಬಹುದೆಂದೂ ಕೇಳಿ. ಪ್ರತಿಯೊಂದು ಸಂಚಿಕೆಯನ್ನು ಹೇಗೆ ನೀಡಬಹುದು ಎಂದು ಪ್ರತ್ಯಕ್ಷಾಭಿನಯಿಸಿ.
ಗೀತೆ 63 ಮತ್ತು ಪ್ರಾರ್ಥನೆ