ಪ್ರಶ್ನಾ ಚೌಕ
◼ ಕೂಪನ್‌ಗಳನ್ನು ಯಾರು ಭರ್ತಿಮಾಡಬೇಕು ಹಾಗೂ ಇಂಟರ್‌ನೆಟ್ ಮೂಲಕ ವಿನಂತಿಯನ್ನು ಯಾರು ಮಾಡಬೇಕು?
ನಮ್ಮ ಪ್ರಕಾಶನಗಳಲ್ಲಿ ಸಾಮಾನ್ಯವಾಗಿ ಕೂಪನ್‌ಗಳು ಇರುತ್ತವೆ. ಈ ಕೂಪನ್‌ಗಳನ್ನು ಭರ್ತಿಮಾಡಿ ಸಾಹಿತ್ಯಕ್ಕಾಗಿಯೋ ಅಥವಾ ಯೆಹೋವನ ಸಾಕ್ಷಿಗಳ ಭೇಟಿಗಾಗಿಯೋ ವಿನಂತಿಸಿ ಬ್ರಾಂಚ್ ಆಫೀಸ್‌ಗೆ ಕಳುಹಿಸಬಹುದು. ಇದಲ್ಲದೆ ನಮ್ಮ ವೆಬ್ ಸೈಟ್ www.watchtower.org ಮೂಲಕ ಬೈಬಲ್ ಅಧ್ಯಯನಕ್ಕಾಗಿ ವಿನಂತಿಸಬಹುದು. ಈ ಏರ್ಪಾಡುಗಳು ಸತ್ಯವನ್ನು ಕಲಿಯಲು ಅನೇಕರಿಗೆ ನೆರವಾಗುತ್ತಿವೆ. ಆದರೆ ತಮ್ಮ ಸಂಬಂಧಿಕರಿಗೆ ಅಥವಾ ಇತರರಿಗೆ ಆಧ್ಯಾತ್ಮಿಕವಾಗಿ ಸಹಾಯ ಮಾಡಲು ಪ್ರಚಾರಕರು ಈ ಏರ್ಪಾಡುಗಳನ್ನು ಬಳಸಿದಾಗ ಸಮಸ್ಯೆಗಳು ಎದ್ದಿವೆ.
ವೈಯಕ್ತಿಕವಾಗಿ ವಿನಂತಿಸದವರಿಗೆ ಬ್ರಾಂಚ್ ಆಫೀಸಿನಿಂದ ಕಳುಹಿಸಲಾದ ಸಾಹಿತ್ಯಕ್ಕಾಗಿ ಕೆಲವರು ದೂರು ನೀಡುತ್ತಾ ನಮ್ಮ ಸಂಘಟನೆ ಅವರಿಗೆ ಪದೇ ಪದೇ ಪ್ರಕಾಶನಗಳನ್ನು ಕಳುಹಿಸಿ ಕಾಟಕೊಡುತ್ತಿದೆ ಎಂದು ಹೇಳಿದ್ದಾರೆ. ವೈಯಕ್ತಿಕವಾಗಿ ವಿನಂತಿಯನ್ನು ಮಾಡದವರನ್ನು ಭೇಟಿಮಾಡಲು ಪ್ರಚಾರಕರನ್ನು ಕಳುಹಿಸಿದಾಗ ಅವರ ಮೇಲೆ ಮನೆಯವರು ಕಿಡಿಕಾರಿದ್ದಾರೆ. ಇದರಿಂದ ಪೇಚಾಟ ಉಂಟಾಗಿದೆ. ಹಾಗಾಗಿ, ನಮ್ಮ ವೆಬ್ ಸೈಟ್ ಮೂಲಕ ಅಥವಾ ಕೂಪನ್‌ಗಳ ಮೂಲಕ ಆಸಕ್ತ ವ್ಯಕ್ತಿಯೇ ವಿನಂತಿ ಕಳುಹಿಸಬೇಕು, ಅವರ ಪರವಾಗಿ ಪ್ರಚಾರಕರು ವಿನಂತಿಸಬಾರದು. ಇತರರ ಪರವಾಗಿ ಪ್ರಚಾರಕರು ವಿನಂತಿ ಕಳುಹಿಸುವಲ್ಲಿ ಬ್ರಾಂಚ್ ಆ ವಿನಂತಿಯನ್ನು ಪರಿಗಣಿಸುವುದಿಲ್ಲ.
ಹಾಗಾದರೆ, ನಮ್ಮ ಸಂಬಂಧಿಕರಿಗೆ ಅಥವಾ ಪರಿಚಯಸ್ಥರಿಗೆ ನಾವು ಹೇಗೆ ಆಧ್ಯಾತ್ಮಿಕ ನೆರವು ನೀಡಬಹುದು? ಅವರು ಸಾಹಿತ್ಯವನ್ನು ಪಡೆಯಬೇಕೆಂದು ನಿಮಗನಿಸುವಲ್ಲಿ ನೀವೇ ಯಾಕೆ ಉಡುಗೊರೆಯಾಗಿ ಅವರಿಗೆ ಅದನ್ನು ಕಳುಹಿಸಬಾರದು? ಒಂದು ವೇಳೆ ಆ ವ್ಯಕ್ತಿಗೆ ಆಸಕ್ತಿ ಇದ್ದು ಯೆಹೋವನ ಸಾಕ್ಷಿಗಳ ಭೇಟಿಯನ್ನು ಬಯಸುತ್ತಾನೆ. ಆದರೆ ಸ್ಥಳಿಕ ಸಭೆಯ ಹಿರಿಯರನ್ನು ಸಂಪರ್ಕಿಸುವುದು ಹೇಗೆಂದು ತಿಳಿಯದಿದ್ದಲ್ಲಿ ನೀವು ಪ್ಲೀಸ್ ಫಾಲೋ ಅಪ್ (S-43) ಫಾರ್ಮ್ ಅನ್ನು ಭರ್ತಿಮಾಡಿ ನಿಮ್ಮ ಸಭಾ ಸೆಕ್ರಿಟರಿಗೆ ಕೊಡಿ. ಅವರು ಅದನ್ನು ಪರಿಶೀಲಿಸಿ ಬ್ರಾಂಚ್ ಆಫೀಸ್‌ಗೆ ಕಳುಹಿಸುವರು. ಆಸಕ್ತ ವ್ಯಕ್ತಿ ಜೈಲಿನಲ್ಲಿ ಅಥವಾ ಆಸ್ಪತ್ರೆಯಲ್ಲಿ ಇರುವುದಾದರೆ ಅವನನ್ನು ಸಂಪರ್ಕಿಸುವಂತೆ ಬ್ರಾಂಚ್ ಆಫೀಸ್‌ಗೆ ನೀವು ಬರೆಯಬಾರದು. ಬದಲಾಗಿ ಅಲ್ಲಿಗೆ ಬರುವ ಸಹೋದರರನ್ನು ಆ ವ್ಯಕ್ತಿಯೇ ವೈಯಕ್ತಿಕವಾಗಿ ಭೇಟಿಯಾಗುವಂತೆ ಅಥವಾ ಅವನೇ ಬ್ರಾಂಚ್ ಆಫೀಸ್‌ಗೆ ಬರೆಯುವಂತೆ ಹೇಳಿ.