ಮಾರ್ಚ್ 26ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 26ರಿಂದ ಆರಂಭವಾಗುವ ವಾರ
ಗೀತೆ 18 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 17 ಪ್ಯಾ. 10-15 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 12-16 (10 ನಿ.)
ನಂ. 1: ಯೆರೆಮೀಯ 13:1-14 (4 ನಿಮಿಷದೊಳಗೆ)
ನಂ. 2: ರೊಟ್ಟಿ ಮತ್ತು ದ್ರಾಕ್ಷಾರಸವನ್ನು ಯಾರು ಮಾತ್ರ ಸೇವಿಸಬೇಕು? (5 ನಿ.)
ನಂ. 3: ಯೇಸುವಿನ ಸ್ಮಾರಕಾಚರಣೆಯನ್ನು ಎಷ್ಟು ಬಾರಿ ಮತ್ತು ಯಾವಾಗ ಆಚರಿಸಬೇಕು? (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು. ಕ್ರಿಸ್ತನ ಮರಣದ ಸ್ಮರಣೆಯ ಆಮಂತ್ರಣ ಪತ್ರಗಳನ್ನು ಇನ್ನೆಷ್ಟು ಸೇವಾಕ್ಷೇತ್ರಗಳಲ್ಲಿ ವಿತರಿಸಬೇಕಾಗಿದೆ ಎಂದು ತಿಳಿಸಿ.
10 ನಿ: ಅತಿಥಿಸತ್ಕಾರ ಮಾಡುವುದನ್ನು ಮರೆಯಬೇಡಿ. (ಇಬ್ರಿ. 13:1, 2) ಹಿರಿಯನ ಭಾಷಣ. ಕ್ರಿಸ್ತನ ಮರಣದ ಸ್ಮರಣೆಗೆ ಮಾಡಲಾದ ಸ್ಥಳೀಯ ಏರ್ಪಾಡುಗಳನ್ನು ಪುನಃ ತಿಳಿಸಿ. ಹಾಜರಾಗಲಿರುವ ಹೊಸಬರನ್ನೂ ನಿಷ್ಕ್ರಿಯ ಪ್ರಚಾರಕರನ್ನೂ ಎಲ್ಲರೂ ಹೇಗೆ ಉಪಚರಿಸಬಹುದೆಂಬ ಸಲಹೆಗಳನ್ನು ಕೊಡಿರಿ. ಎರಡು ಭಾಗಗಳ ಈ ಪ್ರಾತ್ಯಕ್ಷಿಕೆ ಇರಲಿ: ಅಭಿಯಾನದ ಸಮಯದಲ್ಲಿ ಆಮಂತ್ರಣ ಪಡೆದು ಬಂದಿರುವ ವ್ಯಕ್ತಿಯೊಬ್ಬನನ್ನು ಪ್ರಚಾರಕನು ಕಾರ್ಯಕ್ರಮಕ್ಕೆ ಮುಂಚೆ ಸ್ವಾಗತಿಸುತ್ತಾನೆ. ಕಾರ್ಯಕ್ರಮದ ಬಳಿಕ, ಆ ವ್ಯಕ್ತಿಯ ಆಸಕ್ತಿಗೆ ನೀರೆರೆಯುವ ಸಲುವಾಗಿ ಏರ್ಪಾಡುಗಳನ್ನು ಮಾಡುತ್ತಾನೆ.
20 ನಿ: ಯೆಹೋವನನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ—ಅಧ್ಯಯನ ಮಾಡಿ. ಚರ್ಚೆ. 2007 ಸೆಪ್ಟೆಂಬರ್ 1ರ ಕಾವಲಿನಬುರುಜು ಪುಟ 28-30 ಪ್ಯಾರ 8-12ರ ಆಧರಿತ.
ಗೀತೆ 110 ಮತ್ತು ಪ್ರಾರ್ಥನೆ