ಡಿಸೆಂಬರ್ 16ರ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 16ರ ವಾರ
ಗೀತೆ 106 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 31 ಪ್ಯಾ. 13-23, ಪು. 319ರ ಚೌಕ (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಪ್ರಕಟನೆ 1-6 (10 ನಿ.)
ನಂ. 1: ಪ್ರಕಟನೆ 3:14-4:8 (4 ನಿಮಿಷದೊಳಗೆ)
ನಂ. 2: ಲೋಟನ ಪತ್ನಿ ಹಿಂದೆ ನೋಡಿದಳು—ಬೈಬಲ್ ಕಥೆಗಳು, ಕಥೆ 15 (5 ನಿ.)
ನಂ. 3: ಯೇಸು ಯಾವೆಲ್ಲ ವಿಧಗಳಲ್ಲಿ ತನ್ನ ಶಿಷ್ಯರಿಗಾಗಿ ‘ಮಾದರಿಯನ್ನು ಇಟ್ಟನು?’—ಯೋಹಾ. 13:15 (5 ನಿ.)
□ ಸೇವಾ ಕೂಟ:
15 ನಿ: ಯುವ ಜನರೇ, ಯೆಹೋವನನ್ನು ಸ್ತುತಿಸಿ. (ಕೀರ್ತ. 148:12, 13) ಆದರ್ಶಪ್ರಾಯರಾದ ಇಬ್ಬರು ಅಥವಾ ಮೂವರು ಯುವಜನರ ಸಂದರ್ಶನ. ಶಾಲೆ/ಕಾಲೇಜಿನಲ್ಲಿ ಅವರ ನಂಬಿಕೆಗೆ ಯಾವ ಸವಾಲುಗಳು ಎದುರಾಗುತ್ತಿವೆ? ಈ ಸವಾಲುಗಳನ್ನು ಎದುರಿಸಲು ಅವರ ಹೆತ್ತವರು ಮತ್ತು ಇತರರು ಹೇಗೆ ಸಹಾಯಮಾಡಿದ್ದಾರೆ? ತಮ್ಮ ಕ್ರೈಸ್ತ ನಂಬಿಕೆಗಳ ಬಗ್ಗೆ ಮಾತಾಡಲು ಅವರಿಗೆ ಹೇಗೆ ಧೈರ್ಯ ಸಿಕ್ಕಿದೆ? ತಮಗಾದ ಅನುಭವಗಳನ್ನು ತಿಳಿಸಲು ಹೇಳಿ.
15 ನಿ: “ಸ್ನೇಹಪರ ಸಂಭಾಷಣೆಗಳು ಹೃದಯ ಮುಟ್ಟುತ್ತವೆ.” ಪ್ರಶ್ನೋತ್ತರ. ಜನರೊಂದಿಗೆ ಸ್ನೇಹಪರರಾಗಿ ಮಾತಾಡಿದ್ದರಿಂದ ಸಿಕ್ಕಿದ ಒಳ್ಳೇ ಪ್ರತಿಕ್ರಿಯೆಯ ಕುರಿತ ಅನುಭವಗಳನ್ನು ತಿಳಿಸಲು ಒಬ್ಬರು ಇಲ್ಲವೇ ಇಬ್ಬರು ಪ್ರಚಾರಕರನ್ನು ಆಮಂತ್ರಿಸಿ. ಅನಂತರ, ರಾಜ್ಯ ವಾರ್ತೆ ನಂ. 38ನ್ನು ವಿತರಿಸುವ ಅಭಿಯಾನ ಸ್ಥಳೀಯವಾಗಿ ಹೇಗೆ ಸಾಗುತ್ತಾ ಇದೆಯೆಂದು ಸಭೆಗೆ ತಿಳಿಸಿ.
ಗೀತೆ 75 ಮತ್ತು ಪ್ರಾರ್ಥನೆ