ಸೆಪ್ಟೆಂಬರ್ 15ರ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 15ರ ವಾರ
ಗೀತೆ 81 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು ಕಥೆ 5, 6 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 26-29 (10 ನಿ.)
ನಂ. 1: ಅರಣ್ಯಕಾಂಡ 27:15-28:10 (4 ನಿಮಿಷದೊಳಗೆ)
ನಂ. 2: ಸ್ವರ್ಗಕ್ಕೆ 1,44,000 ಮಂದಿ ಮಾತ್ರ ಹೋಗುತ್ತಾರೆ—ಬೈಬಲ್ ವಿಷಯಗಳು 45 ಎ (5 ನಿ.)
ನಂ. 3: ಪಾಪ ಮಾಡಿದರೆ ಕೆಟ್ಟ ಫಲಿತಾಂಶ ಕಟ್ಟಿಟ್ಟಬುತ್ತಿ ಎನ್ನುವುದನ್ನು ಆದಾಮನಿಂದ ಕಲಿಯಬಹುದು—ಆದಿ 3:1-23; ಯೋಹಾ 3:16, 18; ರೋಮ 5:12, 14; 6:23; 1ಕೊರಿಂ 15:22, 45, 47 (5 ನಿ.)
❑ ಸೇವಾ ಕೂಟ:
15 ನಿ: ಕಳೆದ ವರ್ಷ ನಾವೇನನ್ನು ಸಾಧಿಸಿದೆವು? ಸೇವಾ ಮೇಲ್ವಿಚಾರಕನ ಭಾಷಣ. ಕಳೆದ ಸೇವಾ ವರ್ಷದ ಸಭೆಯ ಚಟುವಟಿಕೆಗಳನ್ನು, ಆಗಸ್ಟ್ನಲ್ಲಿ ನಡೆದ ವಿಶೇಷ ಅಭಿಯಾನವನ್ನು ಪುನರವಲೋಕಿಸಿ. ಯಾವೆಲ್ಲ ವಿಷಯಗಳನ್ನು ಸಾಧಿಸಲಾಯಿತೆಂದು ಹೇಳಿ, ಸಭೆಯನ್ನು ಶ್ಲಾಘಿಸಿ. ಆಗಸ್ಟ್ನಲ್ಲಿ ಅಭಿಯಾನ ಮಾಡುವಾಗ ಸಿಕ್ಕ ಒಳ್ಳೆ ಅನುಭವಗಳನ್ನು ತಿಳಿಸುವಂತೆ ಸಭಿಕರಿಗೆ ಹೇಳಿ. ಸೇವೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡ ಪ್ರಚಾರಕನೊಬ್ಬನ ಸಂದರ್ಶನ ಮಾಡಿ. ಈ ಸೇವಾ ವರ್ಷದಲ್ಲಿ ಸಾರುವ ಕೆಲಸಕ್ಕೆ ಸಂಬಂಧಪಟ್ಟಂತೆ ಯಾವ ಎರಡು ವಿಷಯಗಳಲ್ಲಿ ಸಭೆ ಕೆಲಸ ಮಾಡಬೇಕೆಂದು ತಿಳಿಸಿ. ಯಾವುದರಲ್ಲಿ ಪ್ರಗತಿ ಮಾಡಬೇಕು ಎನ್ನುವುದರ ಬಗ್ಗೆ ಪ್ರಾಯೋಗಿಕ ಸಲಹೆ ನೀಡಿ.
15 ನಿ: “ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ನಹೂಮ.” ಪ್ರಶ್ನೋತ್ತರ.
ಗೀತೆ 46 ಮತ್ತು ಪ್ರಾರ್ಥನೆ