ಮಾದರಿ ನಿರೂಪಣೆ
ಕಾವಲಿನಬುರುಜು ಜನವರಿ-ಮಾರ್ಚ್
“ದೇವರ ಬಗ್ಗೆ ಒಬ್ಬೊಬ್ಬರು ಒಂದೊಂದು ಥರ ಹೇಳುತ್ತಾರೆ. ಕೆಲವರು ಆತನು ವ್ಯಕ್ತಿ ಅಲ್ಲ ಒಂದು ಶಕ್ತಿ ಅಂತಾರೆ, ಇನ್ನು ಕೆಲವರು ದೇವರು ನಮ್ಮ ಸ್ನೇಹಿತನ ಥರ, ನಮ್ಮನ್ನು ತುಂಬ ಪ್ರೀತಿಸುತ್ತಾನೆ ಅಂತಾರೆ. ನಿಮಗೇನು ಅನಿಸುತ್ತೆ? ದೇವರನ್ನು ನಾವು ಯಾವ ರೀತಿ ನೋಡಬೇಕೆಂದು ಆತನು ಇಷ್ಟಪಡುತ್ತನೆ? [ಉತ್ತರಕ್ಕಾಗಿ ಕಾಯಿರಿ.] ಇದರ ಬಗ್ಗೆ ಸ್ವತಃ ದೇವರೇ ಏನು ಹೇಳುತ್ತಾರೆ ಅಂತ ಒಂದು ಪುಸ್ತಕದಿಂದ ನಿಮಗೆ ತೋರಿಸಬಹುದಾ? [ಮನೆಯವನು ಒಪ್ಪಿದರೆ ಯಾಕೋಬ 4:8ಎ ಓದಿ.] ದೇವರ ಸ್ನೇಹಿತರಾಗಬೇಕೆಂದರೆ ತುಂಬ ಮುಖ್ಯವಾಗಿರುವ ಮೂರು ವಿಷಯಗಳನ್ನು ಮಾಡಬೇಕು. ಅವುಗಳನ್ನು ಈ ಪತ್ರಿಕೆ ತಿಳಿಸುತ್ತದೆ.”