ಮಾದರಿ ನಿರೂಪಣೆಗಳು
ಜುಲೈ ತಿಂಗಳ ಮೊದಲ ಶನಿವಾರ ಬೈಬಲ್ ಅಧ್ಯಯನ ಆರಂಭಿಸಲು
“ಎಲ್ಲ ಜನರೂ ಶಾಂತಿಸಮಾಧಾನನ ಇಷ್ಟಪಡ್ತಾರೆ. ಆದ್ರೆ ಲೋಕದಲ್ಲಿ ಯುದ್ಧಗಳು ನಡಿತಾನೇ ಇವೆ. ಯಾಕೆ ಶಾಂತಿ ಸ್ಥಾಪಿಸಕ್ಕಾಗ್ತಿಲ್ಲ?” ಉತ್ತರಕ್ಕಾಗಿ ಕಾಯಿರಿ. ಈ ವಿಷಯಕ್ಕೆ ಸಂಬಂಧಪಟ್ಟ ಕೆಲವೊಂದು ಮಾಹಿತಿಯನ್ನು ಬೈಬಲಿನಿಂದ ತಿಳಿಸಬಹುದಾ ಅಂತ ಮನೆಯವರನ್ನು ಕೇಳಿ. ಮನೆಯವರಿಗೆ ಆಸಕ್ತಿಯಿದ್ದರೆ ಜುಲೈ-ಸೆಪ್ಟೆಂಬರ್ ಕಾವಲಿನಬುರುಜು ಪತ್ರಿಕೆಯನ್ನ ಅವರ ಕೈಗೆ ಕೊಟ್ಟು ಪುಟ 16ರ 1ನೇ ಪ್ರಶ್ನೆಯ ಕೆಳಗಿರುವ ವಿಷಯಭಾಗ ಓದಿ, ಚರ್ಚಿಸಿ. ಅಲ್ಲಿ ಕೊಟ್ಟಿರುವ ಒಂದು ವಚನವನ್ನಾದರೂ ಓದಿ. ಪತ್ರಿಕೆಗಳನ್ನು ನೀಡಿ. ಮುಂದಿನ ಪ್ರಶ್ನೆ ಚರ್ಚಿಸಲು ಪುನರ್ಭೇಟಿಯ ಏರ್ಪಾಡು ಮಾಡಿ.
ಸೂಚನೆ: ಈ ನಿರೂಪಣೆಯನ್ನು ಜುಲೈ 6ರ ವಾರದಲ್ಲಿ ನಡೆಯುವ ಕ್ಷೇತ್ರಸೇವಾ ಕೂಟದಲ್ಲಿ ಪ್ರಾತ್ಯಕ್ಷಿಕೆ ನಡೆಸಿ.
ಕಾವಲಿನಬುರುಜು ಜುಲೈ-ಸೆಪ್ಟೆಂಬರ್
“ಎಷ್ಟೊಂದು ನೈಸರ್ಗಿಕ ವಿಪತ್ತುಗಳು ನಡೀತಿವೆ. ದೇವರೇ ಇದನ್ನೆಲ್ಲ ಮಾಡ್ತಿರೋದು. ದೇವರು ಕ್ರೂರಿ. ಇಲ್ಲದಿದ್ರೆ ಕಷ್ಟಗಳನ್ನೆಲ್ಲ ತಡಿತಿದ್ದನಲ್ಲಾ ಅಂತ ತುಂಬ ಜನರು ಹೇಳ್ತಾರೆ. ನೀವೇನು ನೆನಸ್ತೀರಾ? [ಉತ್ತರಕ್ಕಾಗಿ ಕಾಯಿರಿ.] ದೇವರ ವ್ಯಕ್ತಿತ್ವದ ಬಗ್ಗೆ ತಿಳಿಸೋ ಒಂದು ಬೈಬಲ್ ವಚನವನ್ನು ನಾನು ಓದಬಹುದಾ? [ಮನೆಯವರಿಗೆ ಆಸಕ್ತಿಯಿದ್ದರೆ 1 ಯೋಹಾನ 4:8 ಓದಿ.] ಈ ಮಾತನ್ನು ಕೆಲವರು ಒಪ್ಕೋತಾರೆ, ಇನ್ನು ಕೆಲವರು ಒಪ್ಕೊಳಲ್ಲ. ಆದರೆ ದೇವರು ಕ್ರೂರಿ ಅಂತ ನಾವು ನಿರ್ಣಯಿಸಬಾರದು, ಯಾಕೆ ಅಂತ ಕೆಲವು ಕಾರಣಗಳನ್ನ ಈ ಪತ್ರಿಕೆ ತಿಳಿಸುತ್ತೆ.”
ದೇವರಿಂದ ನಿಮಗೊಂದು ಸಿಹಿಸುದ್ದಿ!
“ದೇವರಿಗೆ ನಮ್ಮ ಮೇಲೆ ಪ್ರೀತಿ ಇದ್ದಿದ್ರೆ ನಾವು ಕಷ್ಟಪಡೋದನ್ನ ನೋಡಿ ಸುಮ್ನೆ ಇರ್ತಿರಲಿಲ್ಲ ಅಂತ ತುಂಬ ಜನ ಹೇಳ್ತಾರೆ. ನೀವೇನು ನೆನಸ್ತೀರಾ, ಮನುಷ್ಯರು ಕಷ್ಟಪಡಬೇಕು ಅಂತಾನೇ ದೇವರು ಅವರನ್ನು ಸೃಷ್ಟಿಮಾಡಿದ್ದಾ?” ಉತ್ತರಕ್ಕಾಗಿ ಕಾಯಿರಿ. ಬೈಬಲಿನಿಂದ ಕೆಲವೊಂದು ಮಾಹಿತಿಯನ್ನು ತಿಳಿಸಬಹುದಾ ಅಂತ ಮನೆಯವರನ್ನು ಕೇಳಿ. ಒಪ್ಪುವಲ್ಲಿ 5ನೇ ಅಧ್ಯಾಯ ತೆರೆದು ಮೊದಲ ಎರಡು ಪ್ಯಾರ ಹಾಗೂ ದಪ್ಪಕ್ಷರದಲ್ಲಿರುವ ವಚನಗಳನ್ನು ಓದಿ ಚರ್ಚಿಸಿ. ಈ ಕಿರುಹೊತ್ತಗೆಯನ್ನು ಅವರಿಗೆ ನೀಡಿ. ಮುಂದಿನ ಪ್ರಶ್ನೆಯನ್ನು ಚರ್ಚಿಸಲು ಪುನರ್ಭೇಟಿಯ ಏರ್ಪಾಡನ್ನು ಮಾಡಿ.