ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/11 ಪು. 4
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2011 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2014 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2013 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2011 ನಮ್ಮ ರಾಜ್ಯದ ಸೇವೆ
km 6/11 ಪು. 4

ಮಾದರಿ ನಿರೂಪಣೆಗಳು

ಜುಲೈ ತಿಂಗಳ ಮೊದಲ ಶನಿವಾರದಂದು ಬೈಬಲ್‌ ಅಧ್ಯಯನ ಆರಂಭಿಸಲಿಕ್ಕಾಗಿ

“ಜನರು ಬೈಬಲನ್ನು ಒಂದು ಪವಿತ್ರ ಗ್ರಂಥವೆಂದು ಗೌರವಿಸುತ್ತಾರೆ. ಬೈಬಲಿನ ಕರ್ತೃ ಯಾರೆಂದು ನಿಮ್ಮ ಅಭಿಪ್ರಾಯ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಅದರ ಕರ್ತೃ ಯಾರು ಮತ್ತು ಅದನ್ನು ಯಾಕೆ ಬರೆಯಲಾಯಿತು ಎಂಬದರ ಬಗ್ಗೆ ಬೈಬಲೇ ಏನು ಹೇಳುತ್ತದೆಂದು ನಿಮಗೆ ತೋರಿಸಲೋ?” ಮನೆಯವನಿಗೆ ಆಸಕ್ತಿಯಿರುವಲ್ಲಿ 2 ತಿಮೊಥೆಯ 3:16 ಓದಿ. ನಂತರ ಜುಲೈ-ಸೆಪ್ಟೆಂಬರ್‌ ಕಾವಲಿನಬುರುಜುವಿನ ಸಂಚಿಕೆಯನ್ನು ಮನೆಯವನ ಕೈಯಲ್ಲಿ ಕೊಟ್ಟು ಪುಟ 15ರ 4ನೇ ಪ್ರಶ್ನೆಯ ಕೆಳಗಿರುವ ವಿಷಯಭಾಗವನ್ನು ಓದಿ, ಚರ್ಚಿಸಿ. ಪತ್ರಿಕೆಗಳನ್ನು ನೀಡಿರಿ. ಮುಂದಿನ ಪ್ರಶ್ನೆಯ ಉತ್ತರವನ್ನು ಪರಿಗಣಿಸಲು ಪುನರ್ಭೇಟಿಗಾಗಿ ಏರ್ಪಾಡು ಮಾಡಿ.

ಕಾವಲಿನಬುರುಜು ಜುಲೈ-ಸೆಪ್ಟೆಂಬರ್‌

“ಇಂದು ವಿವಾಹ ವಿಚ್ಛೇದ ತೀರ ಸಾಮಾನ್ಯವಾಗುತ್ತಾ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಏನೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಅನೇಕ ದಂಪತಿಗಳಿಗೆ ನೆರವಾಗಿರುವ ಸಲಹೆಯೊಂದನ್ನು ನಿಮಗೆ ತೋರಿಸಲೋ? [ಮನೆಯವನು ಒಪ್ಪುವಲ್ಲಿ 1 ಕೊರಿಂಥ 10:24 ಓದಿ.] ಪತಿಪತ್ನಿಯರಿಂದ ಸಾಮಾನ್ಯವಾಗಿ ಕೇಳಿಬರುವ ಆರು ದೂರುಗಳನ್ನು ಈ ಪತ್ರಿಕೆ ಚರ್ಚಿಸುತ್ತದೆ. ಅಲ್ಲದೆ ಬೈಬಲ್‌ ಸೂತ್ರಗಳನ್ನು ಅನ್ವಯಿಸುವುದರಿಂದ ಹೇಗೆ ಪ್ರಯೋಜನವಾಗುವುದೆಂದೂ ಅದು ತಿಳಿಸುತ್ತದೆ.”

ಎಚ್ಚರ! ಜುಲೈ-ಸೆಪ್ಟೆಂಬರ್‌

“ವೃದ್ಧರ ಪರಾಮರಿಕೆ ಮಾಡುವುದು ಹೆಚ್ಚಾಗಿ ಕಷ್ಟ. ಮನೆಯಲ್ಲಿ ಅವರ ಸುರಕ್ಷತೆಗಾಗಿ ಏನೆಲ್ಲ ಮಾಡಬಹುದು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ನಾವು ವೃದ್ಧರನ್ನು ಹೇಗೆ ಉಪಚರಿಸಬೇಕೆಂದು ನಮ್ಮ ನಿರ್ಮಾಣಿಕನು ಇಚ್ಛಿಸುತ್ತಾನೆಂಬದರ ಬಗ್ಗೆ ತಿಳಿಸಲೋ? [ಮನೆಯವನಿಗೆ ಆಸಕ್ತಿಯಿದ್ದಲ್ಲಿ ವಿಮೋಚನಕಾಂಡ 20:12 ಓದಿ.] ಈ ಪತ್ರಿಕೆಯ ಪುಟ 23ರಲ್ಲಿರುವ ಲೇಖನದಲ್ಲಿ, ವೃದ್ಧರಿಗಾಗಿ ಮನೆಯನ್ನು ಸುರಕ್ಷಿತಗೊಳಿಸುವ ಬಗ್ಗೆ ಸಲಹೆಗಳಿವೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ