ಕ್ಷೇತ್ರ ಸೇವಾ ಮುಖ್ಯಾಂಶಗಳು
ಆಗಸ್ಟ್ 2014
ಆಡಳಿತ ಮಂಡಲಿಯ ಇಚ್ಛೆಯಂತೆ ಆಗಸ್ಟ್ ತಿಂಗಳಿನಲ್ಲಾದ ವಿಶೇಷ ಅಭಿಯಾನ ನಮ್ಮ ದೇಶದಲ್ಲಿ ಅವಿಸ್ಮರಣೀಯವಾಯಿತು. ಆ ತಿಂಗಳಿನಲ್ಲಿ 20,314 ಪ್ರಚಾರಕರು, 20,697 ರೆಗ್ಯುಲರ್ ಮತ್ತು ಆಕ್ಸಿಲಿಯರಿ ಪಯನೀಯರರು ಮತ್ತು 299 ವಿಶೇಷ ಪಯನೀಯರರು ಒಟ್ಟಾಗಿ 1,03,86,681 ಟ್ರ್ಯಾಕ್ಟ್ ಮತ್ತು ಕಿರುಹೊತ್ತಗೆಗಳನ್ನು ವಿತರಿಸಿದ್ದಾರೆ. ವಾರ್ಷಿಕ ವರದಿಯ ಪ್ರಕಾರ ಕಳೆದ ಸೇವಾ ವರ್ಷ ಪ್ರಚಾರಕರ ಸಂಖ್ಯೆಯಲ್ಲಿ 7 ಪ್ರತಿಶತ ಅಭಿವೃದ್ಧಿಯಾಗಿದೆ. ಪ್ರಚಾರಕರ ಮತ್ತು ಪಯನೀಯರರ ಒಟ್ಟು ಸಂಖ್ಯೆ ಈಗ 41,310ನ್ನು ತಲುಪಿದೆ. ಆದರೂ ನಾವು ಮಾಡಬೇಕಾದ ಕೆಲಸ ಇನ್ನು ಬಹಳ ಇದೆ. “ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ.”—ಮತ್ತಾಯ 9:38.