ಮಾದರಿ ನಿರೂಪಣೆಗಳು
ಎಚ್ಚರ! ಜನವರಿ-ಮಾರ್ಚ್
“ತುಂಬ ಸಾಮಾನ್ಯವಾಗುತ್ತಿರುವ ಒಂದು ಆರೋಗ್ಯ ಸಮಸ್ಯೆಯ ಬಗ್ಗೆ ಮಾತಾಡಲು ನಾವು ಬಂದಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನಾಲ್ಕು ಜನರಲ್ಲಿ ಒಬ್ಬರು ಅವರ ಜೀವನದ ಒಂದಲ್ಲ ಒಂದು ಸಂದರ್ಭದಲ್ಲಿ ಖಿನ್ನತೆಗೆ ಅಥವಾ ಇನ್ನಿತರ ಮಾನಸಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರಂತೆ. ಮಾನಸಿಕ ರೋಗಗಳು ಹೀಗೆ ಹೆಚ್ಚಾಗುತ್ತಾ ಹೋದರೆ ಇದಕ್ಕೆ ಪರಿಹಾರ ಸಿಗಬಹುದಾ? ನಿಮಗೇನು ಅನಿಸುತ್ತೆ? [ಮನೆಯವನ ಉತ್ತರಕ್ಕಾಗಿ ಕಾಯಿರಿ.] ಭವಿಷ್ಯದಲ್ಲಿ ಇಡೀ ಭೂಮಿಯ ಮೇಲೆ ಕಾಯಿಲೆ, ನೋವು ಇಲ್ಲದೇ ಹೋಗುವಂಥ ಪರಿಸ್ಥಿತಿಯ ಬಗ್ಗೆ ಇರುವ ಒಂದು ವಿಷಯವನ್ನು ನಿಮಗೆ ತೋರಿಸಬಹುದಾ? [ಮನೆಯವನು ಒಪ್ಪಿದರೆ ಪ್ರಕಟಣೆ 21: 3, 4ನ್ನು ಓದಿ.] ಈ ಪತ್ರಿಕೆ ಮಾನಸಿಕ ಕಾಯಿಲೆಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಲೇಬೇಕಾದಂಥ ಒಂದಿಷ್ಟು ಮಾಹಿತಿ ಕೊಡುತ್ತದೆ.”