ಕ್ರಿಸ್ತನ ಸ್ಮರಣೆಗೆ ನೀವು ಹೇಗೆ ಸಿದ್ಧತೆ ಮಾಡುತ್ತಿದ್ದೀರಾ?
ಕ್ರಿ.ಶ. 33 ನೈಸಾನ್ 13ರ ಸಂಜೆ, ತನ್ನ ಶಿಷ್ಯರೊಂದಿಗೆ ಸಮಯ ಕಳೆಯಲು ತನಗಿದ್ದ ಕೊನೆಯ ಅವಕಾಶ ಎಂದು ಯೇಸುವಿಗೆ ತಿಳಿದಿತ್ತು. ಕಾರಣ, ಮರುದಿನ ಅವನು ಸಾಯಲಿದ್ದನು. ಆದ್ದರಿಂದ ಅವರೊಂದಿಗೆ ತನ್ನ ಕೊನೆಯ ಪಸ್ಕ ಹಬ್ಬವನ್ನು ಆಚರಿಸಿ, ಕರ್ತನ ಸಂಧ್ಯಾ ಭೋಜನವೆಂಬ ಒಂದು ಹೊಸ ಆಚರಣೆಯನ್ನು ಆರಂಭಿಸಲಿದ್ದನು. ಇಂಥ ಪ್ರಾಮುಖ್ಯ ಆಚರಣೆಯನ್ನು ನಡೆಸಲು ತುಂಬ ಸಿದ್ಧತೆ ಮಾಡಬೇಕಿತ್ತು. ಆ ಸಿದ್ಧತೆಗಳನ್ನೆಲ್ಲಾ ನೋಡಿಕೊಳ್ಳುವಂತೆ ಪೇತ್ರ ಮತ್ತು ಯೋಹಾನರಿಗೆ ಯೇಸು ಹೇಳಿದನು. (ಲೂಕ 22:7-13) ಅಂದಿನಿಂದ ಇಂದಿನವರೆಗೂ, ಪ್ರತಿ ವರ್ಷ ಯಾರೆಲ್ಲಾ ಕ್ರಿಸ್ತನ ಮರಣವನ್ನು ಸ್ಮರಿಸಲು ಇಷ್ಟಪಡುತ್ತಾರೋ ಅವರೆಲ್ಲಾ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಬೇಕು. (ಲೂಕ 22:19) ಹಾಗಾದರೆ, ಏಪ್ರಿಲ್ 3ರಂದು ನಡೆಯಲಿರುವ ಸ್ಮರಣೆಗೆ ಮುಖ್ಯವಾಗಿ ನಾವು ಯಾವೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು?
ಪ್ರಚಾರಕರು ಮಾಡಬೇಕಾದ ಸಿದ್ಧತೆಗಳು:
ಸ್ಮರಣೆಯ ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಇಂದಿನಿಂದಲೇ ಏರ್ಪಾಡು ಮಾಡಿಕೊಳ್ಳಿ.
ನಿಮ್ಮ ಬೈಬಲ್ ವಿದ್ಯಾರ್ಥಿಗಳ, ಸಂಬಂಧಿಕರ, ಸಹಪಾಠಿಗಳ, ಜೊತೆ ಕೆಲಸಗಾರರ ಮತ್ತು ಪರಿಚಯಸ್ಥರ ಹೆಸರುಗಳನ್ನು ಪಟ್ಟಿ ಮಾಡಿ ಅವರನ್ನೆಲ್ಲಾ ಆಮಂತ್ರಿಸಿ.
ಸ್ಮರಣೆಯ ವಾರದಲ್ಲಿ ಓದಲು ಕೊಡಲಾದ ಬೈಬಲಿನ ವಚನಗಳನ್ನು ಓದಿ, ಧ್ಯಾನಿಸಿ.
ಸ್ಮರಣೆಯ ದಿನದಂದು ಹೊಸದಾಗಿ ಬರುವವರನ್ನು ಸ್ವಾಗತಿಸಲು ಆದಷ್ಟು ಬೇಗ ಬನ್ನಿ.