ಸೆಪ್ಟೆಂಬರ್ 21ರ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 21ರ ವಾರ
ಗೀತೆ 130 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 72 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಅರಸುಗಳು 19-22 (8 ನಿ.)
ನಂ. 1: 2 ಅರಸುಗಳು 20:12-21 (3 ನಿಮಿಷದೊಳಗೆ)
ನಂ. 2: ಏಹೂದ—ವಿಷಯ: ಯೆಹೋವನು ತನ್ನ ಜನರನ್ನು ರಕ್ಷಿಸುತ್ತಾನೆ—ನ್ಯಾಯ 3:12-30 (5 ನಿ.)
ನಂ. 3: ಯೆಹೋವನ ಸಾಕ್ಷಿಗಳ ಆರಂಭ—ಬೈಬಲ್ ವಿಷಯಗಳು 28 ಎ (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ‘ಸುವಾರ್ತೆಗೆ ಕೂಲಂಕಷ ಸಾಕ್ಷಿ ಕೊಡಿ.’—ಅ. ಕಾ. 20:24.
15 ನಿ: ಕಳೆದ ಸೇವಾ ವರ್ಷದಲ್ಲಿ ನಾವೇನನ್ನು ಸಾಧಿಸಿದೆವು? ಸೇವಾ ಮೇಲ್ವಿಚಾರಕರ ಭಾಷಣ. ಕಳೆದ ಸೇವಾ ವರ್ಷದಲ್ಲಿ ಸಭೆಯಲ್ಲಾದ ಚಟುವಟಿಕೆಗಳನ್ನು ಪುನರವಲೋಕಿಸಿ. ಯಾವೆಲ್ಲ ವಿಷಯಗಳನ್ನು ಸಾಧಿಸಲಾಯಿತೆಂದು ಹೇಳಿ ಶ್ಲಾಘಿಸಿ. ಈ ಸೇವಾ ವರ್ಷದಲ್ಲಿ ಸುವಾರ್ತೆಗೆ ಸಂಬಂಧಪಟ್ಟಂತೆ ಸಭೆ ಕೆಲಸ ಮಾಡಬೇಕಿರುವ ಒಂದು ಅಥವಾ ಎರಡು ವಿಷಯಗಳನ್ನು ತಿಳಿಸಿ. ಪ್ರಾಯೋಗಿಕ ಸಲಹೆ ನೀಡಿ.
15 ನಿ: “ನಮ್ಮ ಸಾಹಿತ್ಯಗಳನ್ನು ಅಮೂಲ್ಯವೆಂದೆಣಿಸುತ್ತೀರೋ?” ಸಭಿಕರೊಂದಿಗೆ ಚರ್ಚೆ. ಮನೆಯವರಿಗೆ ಆಸಕ್ತಿ ಇದೆಯಾ ಎಂದು ಪ್ರಚಾರಕರು ಹೇಗೆ ವಿವೇಚಿಸಿ ತಿಳಿದುಕೊಳ್ಳುವುದೆಂದು ತಿಳಿಸಿ.
ಗೀತೆ 10 ಮತ್ತು ಪ್ರಾರ್ಥನೆ