ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಡಿಸೆಂಬರ್‌ ಪು. 8
  • ಪತ್ರಿಕೆಗಳನ್ನ ಬಳಸುತ್ತಾ ಇರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪತ್ರಿಕೆಗಳನ್ನ ಬಳಸುತ್ತಾ ಇರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ನಿಮ್ಮ ಶುಶ್ರೂಷೆಯಲ್ಲಿ ಪತ್ರಿಕೆಗಳನ್ನು ಕೊಡುವುದಕ್ಕೆ ಪ್ರಾಧಾನ್ಯ ನೀಡಿರಿ
    2005 ನಮ್ಮ ರಾಜ್ಯದ ಸೇವೆ
  • ನಮ್ಮ ಪತ್ರಿಕೆಗಳ ಅತ್ಯುತ್ತಮ ಉಪಯೋಗವನ್ನು ಮಾಡಿರಿ
    1996 ನಮ್ಮ ರಾಜ್ಯದ ಸೇವೆ
  • ಪತ್ರಿಕೆಗಳು ರಾಜ್ಯವನ್ನು ಘೋಷಿಸುತ್ತವೆ
    1998 ನಮ್ಮ ರಾಜ್ಯದ ಸೇವೆ
  • ಪತ್ರಿಕಾ ಚಟುವಟಿಕೆಗಾಗಿ ಸಮಯವನ್ನು ಬದಿಗಿಡಿರಿ
    1993 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಡಿಸೆಂಬರ್‌ ಪು. 8
ಒಬ್ಬ ಸಹೋದರಿ ‘ಎಚ್ಚರ!’ ಪತ್ರಿಕೆಯಲ್ಲಿರೋ ಒಂದು ವಿಷ್ಯದ ಬಗ್ಗೆ ಒಬ್ಬ ಸ್ತ್ರೀ ಹತ್ರ ಮಾತಾಡುತ್ತಿದ್ದಾರೆ.

ನಮ್ಮ ಕ್ರೈಸ್ತ ಜೀವನ

ಪತ್ರಿಕೆಗಳನ್ನ ಬಳಸುತ್ತಾ ಇರಿ

2018 ರಿಂದ ಸಾರ್ವಜನಿಕರಿಗಾಗಿ ತಯಾರಿಸಲ್ಪಟ್ಟ ಪತ್ರಿಕೆಗಳ ಪ್ರತಿಯೊಂದು ಸಂಚಿಕೆ ಯಾವುದಾದ್ರು ಒಂದು ನಿರ್ದಿಷ್ಟ ವಿಷಯದ ಬಗ್ಗೆ ಮಾತಾಡುತ್ತೆ. ಈ ಪತ್ರಿಕೆಗಳು ಬೋಧನಾ ಸಾಧನಗಳು ವಿಭಾಗದಲ್ಲಿ ಇವೆ. ಹಾಗಾಗಿ ಈ ಪತ್ರಿಕೆಗಳನ್ನ ಸೇವೇಲಿ ಬಳಸಬಹುದು. ಪ್ರಯಾಣ ಮಾಡುವಾಗ, ಶಾಪಿಂಗ್‌ಗೆ ಹೋಗುವಾಗ ಸಹ ಕೆಲವು ಪತ್ರಿಕೆಗಳನ್ನ ತಗೊಂಡು ಹೋಗಬಹುದು. ಜನರಿಗೆ ಬೈಬಲ್‌ ಬಗ್ಗೆ ಕಲಿಸೋಕೆ ಈ ಪತ್ರಿಕೆಗಳನ್ನ ಬಳಸೋದಿಲ್ಲ ನಿಜ. ಆದ್ರೆ ಈ ಪತ್ರಿಕೆಗಳಿಗೆ ಎಷ್ಟು ಶಕ್ತಿ ಇದೆ ಅಂದ್ರೆ ಇವು ಜನರಲ್ಲಿ ಬೈಬಲ್‌ ಬಗ್ಗೆ ಕಲಿಯೋ ಆಸೆಯನ್ನ ಹುಟ್ಟಿಸುತ್ತೆ.

ಮನೆಯವರೊಂದಿಗೆ ಸಂಭಾಷಣೆ ಶುರುಮಾಡಿದ ಮೇಲೆ ಒಂದು ಬೈಬಲ್‌ ವಚನ ತೋರಿಸಿ. ನಂತ್ರ ಅವರಿಗೆ ಇಷ್ಟ ಆಗೋ ವಿಷಯವನ್ನ ಯಾವುದಾದರೊಂದು ಪತ್ರಿಕೆಯಿಂದ ಆರಿಸಿಕೊಂಡು ಅದರ ಬಗ್ಗೆ ಮಾತಾಡಿ. ಉದಾಹರಣೆಗೆ ಅವರಿಗೆ ಕುಟುಂಬವನ್ನ ನೋಡಿಕೊಳ್ಳೋ ಜವಾಬ್ದಾರಿ ಇದ್ರೆ, ದುಃಖ ಒತ್ತಡ ಇದ್ರೆ ನೀವು ಹೀಗೆ ಹೇಳಬಹುದು: “ನಾನು ಕೆಲವು ದಿನಗಳ ಹಿಂದೆ ಈ ವಿಷಯದ ಬಗ್ಗೆ ಒಂದು ಒಳ್ಳೇ ಲೇಖನ ಓದಿದೆ. ಅದ್ರಿಂದ ನನಗೆ ತುಂಬಾ ಪ್ರಯೋಜನ ಆಯ್ತು. ಅದನ್ನ ತೋರಿಸ್ಲಾ?” ಮನೆಯವರಿಗೆ ಆಸಕ್ತಿ ಇದೆ ಅಂತ ಅನಿಸಿದ್ರೆ ಅವರಿಗೆ ಆ ಪತ್ರಿಕೆಯ ಒಂದು ಪ್ರತಿ ಕೊಡಬಹುದು. ಫೋನ್‌ ಮೂಲಕನೂ ಅದನ್ನ ಕಳಿಸಬಹುದು. ಇದನ್ನ ನೀವು ಆರಂಭದ ಭೇಟಿಯಲ್ಲೇ ಮಾಡಬಹುದು. ಪತ್ರಿಕೆಗಳನ್ನ ಕೊಡೋದು ಮಾತ್ರ ನಮ್ಮ ಗುರಿಯಲ್ಲ. ಆದ್ರೆ ಈ ಪತ್ರಿಕೆಗಳ ಮೂಲಕ ದೇವರ ಬಗ್ಗೆ ಕಲಿತು ಅದರ ಪ್ರಕಾರ ನಡೆಯಲು ಇಷ್ಟಪಡೋ ಜನರನ್ನ ಹುಡುಕೋದೇ ನಮ್ಮ ಉದ್ದೇಶ.—ಅಕಾ 13:48.

2018

ಕೊಲಾಜ್‌: 2018 ರ ‘ಕಾವಲಿನಬುರುಜು’ ಮತ್ತು ‘ಎಚ್ಚರ!’ ಪತ್ರಿಕೆಗಳ ಮುಖ್ಯ ವಿಷಯ. 1. ‘ಬೈಬಲ್‌ ಈಗಿನ ಕಾಲಕ್ಕೂ ಸೂಕ್ತ ಆಗಿದೆಯಾ?’ 2. ‘ಭವಿಷ್ಯ ಹೇಗಿರಲಿದೆ?’ 3. ‘ದೇವರಿಗೆ ನಿಮ್ಮ ಬಗ್ಗೆ ಚಿಂತೆ ಇದೆಯಾ?’ 4. ‘ಸಂತೋಷದ ಜೀವನಮಾರ್ಗ.’ 5. ‘ಯಶಸ್ವಿ ಕುಟುಂಬಗಳ 12 ಸೂತ್ರಗಳು.’ 6. ‘ಸಾವಿನ ನೋವಿನಲ್ಲಿ ಇರುವವರಿಗೆ ಸಹಾಯ.’

2019

ಕೊಲಾಜ್‌: 2019 ರ ‘ಕಾವಲಿನಬುರುಜು’ ಮತ್ತು ‘ಎಚ್ಚರ!’ ಪತ್ರಿಕೆಗಳ ಮುಖ್ಯ ವಿಷಯ. 1. ‘ಸೃಷ್ಟಿಕರ್ತ ದೇವರು ಯಾರು?’ 2. ‘ಬರಡಾದ ಬದುಕಿಗೆ ಆಶಾಕಿರಣ.’ 3. ‘ಇಷ್ಟೇನಾ ನಮ್ಮ ಜೀವನ?’ 4. ‘ಸಂಪೂರ್ಣ ಸುರಕ್ಷತೆ ಸಾಧ್ಯನಾ?‘ 5. ‘ಮಕ್ಕಳಿಗೆ ಕಲಿಸಬೇಕಾದ ಆರು ಪಾಠಗಳು.’ 6. ‘ಬದುಕನ್ನೇ ಬದಲಾಯಿಸುವ ಪುಸ್ತಕ ಅದು ಯಾವುದು?’

2020

ಕೊಲಾಜ್‌: 2020 ರ ‘ಕಾವಲಿನಬುರುಜು’ ಮತ್ತು ‘ಎಚ್ಚರ!’ ಪತ್ರಿಕೆಗಳ ಮುಖ್ಯ ವಿಷಯ. 1. ‘ಸತ್ಯದ ಹುಡುಕಾಟ.’ 2. ‘ದೇವರ ಸರ್ಕಾರ ಅಂದ್ರೆ ಏನು?’ 3. ‘ದೇವರಿಂದ ಮಾನವರಿಗೆ ಸಿಗಲಿದೆ ಶಾಶ್ವತ ಆಶೀರ್ವಾದ!’ 4. ‘ಒತ್ತಡದಿಂದ ಹೊರಗೆ ಬನ್ನಿ.’ 5. ‘ಇಷ್ಟೊಂದು ಕಷ್ಟ ಯಾಕಿದೆ? ಉತ್ತರ ಇಲ್ಲಿದೆ.’ 6. ‘ಭೇದಭಾವ ಕಿತ್ತೆಸೆಯಲು ಸಾಧ್ಯನಾ?’

ನಿಮ್ಮ ಟೆರಿಟೊರಿಯಲ್ಲಿ ಇರೋ ಜನರಿಗೆ ಯಾವ ವಿಷಯಗಳ ಬಗ್ಗೆ ಮಾತಾಡಿದ್ರೆ ಇಷ್ಟ ಆಗುತ್ತೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ