ಕ್ರೀಡಾ ಪ್ರಪಂಚದಲ್ಲಿ ಏನು ಸಂಭವಿಸುತ್ತದೆ?
ಇಟೆಲಿಯ ಎಚ್ಚರದ ಬಾತ್ಮೀದಾರ
ಎದುರಿನ ಪುಟದಲ್ಲಿರುವ ವರದಿಗಳು ಲ್ಯಾಟೀನ್ ಅಮೆರಿಕನ್ ದೇಶವೊಂದರಲ್ಲಿ ಇತ್ತೀಚೆಗೆ ನಡೆದ ಕ್ಷಿಪ್ರ ಕ್ರಾಂತಿಯೊಂದನ್ನು ಅಥವಾ ಯೂರೋಪಿನ ದೇಶದಲ್ಲಿ ಎಲ್ಲಿಯೋ ಒಂದೆಡೆ ಆದ ಭಯಗ್ರಸ್ತವಾದಿಗಳ ಧಾಳಿಯೊಂದನ್ನು ವಿವರಿಸುತ್ತದೋ? ಅಲ್ಲ, ಒಂದು ಇಟಾಲಿಯನ್ ವಾರ್ತಾಪತ್ರ ಹೇಳಿರುವಂತೆ “ಕ್ರೀಡೆಯ ಭಯಂಕರತೆಯ ಒಂದು ಸಾಮಾನ್ಯ ದಿನದ” ಇಂತಹ ಇಲ್ಲವೇ ತದ್ರೀತಿಯ ವರದಿಗಳಾಗಿರುತ್ತವೆ.
ಇಂದಿನ ದಿವಸಗಳಲ್ಲಿ ಕ್ರೀಡೆಗಳು ಮತ್ತು ಹಿಂಸಾಚಾರವು ಒಟ್ಟೊಟ್ಟಿಗೆ ಹೋಗುತ್ತಿರುವಂತೆ ಕಾಣುತ್ತದೆ. ಉದಾಹರಣೆಗೆ, ಅನೇಕರು ಇನ್ನೂ ಕೂಡಾ, ಮೇ 29, 1985ರ ಸಾಯಂಕಾಲವನ್ನು ನೆನಪಿಸುತ್ತಾರೆ, ಆಗ ಯೂರೋಪಿಯನ್ ಚಾಂಪಿಯನ್ಸ್ ಕಪ್ನ ಫುಟ್ಬಾಲ್ ಚಾಂಪಿಯನ್ಶಿಪ್ಗಳ ಕೊನೆಯ ಆಟದ ಮೊದಲು ಕ್ರೀಡಾಸಕ್ತರ ನಡುವೆ ನಡೆದ ಘಟನೆಗಳಲ್ಲಿ 39 ಜನರು ಸತ್ತಿದ್ದರು ಮತ್ತು 200 ಜನರಿಗೆ ಘಾಸಿಯಾಗಿತ್ತು.
ಆದಾಗ್ಯೂ, ಭಾಗವಹಿಸುವವರಿಂದ ಮತ್ತು ಪ್ರೇಕ್ಷಕರಿಂದ ನಡಿಸಲ್ಪಡುವ ಹಿಂಸಾಚಾರದ ಘಟನಾವಳಿಗಳು, ಕೇವಲ ಫುಟ್ಬಾಲ್ನಂತಹ ಒಂದು ಆಟಕ್ಕೆ ಸೀಮಿತವಾಗಿಲ್ಲ, ಬದಲು ಅವು ಎಲ್ಲಾ ವಿಧದ ಕ್ರೀಡೆಗಳಲ್ಲಿ ಸ್ಫೋಟಿಸುತ್ತವೆ—ಬೇಸ್ಬಾಲ್, ಕುಸ್ತಿಯಾಟ, ಹಾಕೀ.
“ಅತ್ಯುತ್ತಮ ವ್ಯಕ್ತಿ ಗೆಲ್ಲಲಿ” ಮತ್ತು, “ವಿಜೇತರಾಗುವದಕ್ಕಿಂತ ಭಾಗವಹಿಸುವದು ಹೆಚ್ಚು ಪ್ರಾಮುಖ್ಯ” ಎಂಬ ನುಡಿಗಳು ಕ್ರೀಡಾ ಪ್ರಪಂಚದ ವಂಶ ನಷ್ಟವಾಗಿ ಹೋದ ಸರೀಸೃಪಗಳಂತಾಗಿವೆ. ಆಟಗಾರರು ಮತ್ತು ಪ್ರೇಕ್ಷಕರು ಸ್ಪರ್ಧಾತ್ಮಕ ಕ್ರೀಡಾ ಘಟನೆಗಳಲ್ಲಿ ಅವರ ನೀಚತಮ ಹುಟ್ಟರಿವುಗಳಿಗೆ, ಹತೋಟಿಯಲ್ಲಿಡಲಾಗದ ಆಕ್ರಮಣ ಪ್ರವೃತ್ತಿಗೆ, ಎಡೆಗೊಡುವದು ಯಾಕೆ? ಕ್ರೀಡೆಗಳ ಹಿಂಸಾಚಾರದ ಹಿಂದೆ ಏನಿದೆ? ಮತ್ತು ಈ ಸಮಸ್ಯೆಯು ಎಷ್ಟೊಂದು ಗಂಭೀರವಾಗಿದೆ? (g89 11/8)