ಕ್ರೀಡೆಗಳಲ್ಲಿ ಹಿಂಸಾಚಾರ ಯಾಕೆ ವೃದ್ಧಿ?
“ಕ್ರೀಡೆ ಅಂದರೆ ಆರೋಗ್ಯ” ಎಂಬುದು ಒಂದು ಹಳೆಯ ನಾಣ್ನುಡಿ. ಹಾಳತವಿರುವ ಕ್ರೀಡಾ ಚಟುವಟಿಕೆಯು ಒಳ್ಳೆಯ ಆರೋಗ್ಯವನ್ನು ತರಬಲ್ಲದು ಎಂದು ಪುರಾತನ ಕಾಲದಲ್ಲಿ ಗ್ರೀಕ್ ವೈದ್ಯರು ವಾದಿಸುತ್ತಿದ್ದರು.
ಇಂದು, ಆದಾಗ್ಯೂ, ಅನೇಕ ಕ್ರೀಡಾ ಘಟನೆಗಳು, ಭಾಗವಹಿಸುವವರಿಗಾಗಲಿ, ಪ್ರೇಕ್ಷಕರಿಗಾಗಲಿ ಆರೋಗ್ಯ ಒಂದು ಬಿಟ್ಟು ಬೇರೆಲ್ಲಾ ಆಗಿರುತ್ತವೆ. ಕ್ರೀಡೆಗಳಲ್ಲಿ ಹಿಂಸಾಚಾರವು ಯಾವ ಹಂತಕ್ಕೆ ತಲುಪಿದೆಯೆಂದರೆ ಒಂದು ಅಧಿಕೃತ ನಿಯೋಗವಾದ ಯೂರೋಪಿಯನ್ ಪಾರ್ಲಿಮೆಂಟ್ “ಕ್ರೀಡೆಗಳಲ್ಲಿ ವಿಧ್ವಂಸಕತೆ ಮತ್ತು ಹಿಂಸಾಚಾರದ ಮೇಲೆ” ಒಂದು ದೀರ್ಘವಾದ ಠರಾವನ್ನು ಮಂಜೂರು ಮಾಡಿದೆ. ಕ್ರೀಡಾ ಘಟನೆಗಳ ಮೊದಲು ಮತ್ತು ನಂತರದ ಆಟಗಾರರ ಮತ್ತು ವಿರುದ್ಧ ತಂಡಗಳ ಆಸಕ್ತರುಗಳ ನಡುವಣ ಘರ್ಷಣೆಗಳ ಕ್ರೌರ್ಯತೆಯ ಅಪಾಯಸೂಚಕದಿಂದ ಎಚ್ಚರಗೊಂಡು, ಯೂರೋಪಿಯನ್ ಪಾರ್ಲಿಮೆಂಟ್ನ ಸದಸ್ಯರುಗಳು ಇದರ ಬೆಳವಣಿಗೆಯ ವಿವಿಧ ಲಕ್ಷಣಗಳು, ಅದರ ಕಾರಣಗಳು ಮತ್ತು ಅದನ್ನು ನಿಗ್ರಹಿಸಲು ತೆಗೆದು ಕೊಳ್ಳಬೇಕಾದ ಸಂಭಾವ್ಯ ಕ್ರಮಗಳು, ಇದನ್ನು ಪರೀಕ್ಷಿಸಿದರು. ಅವರೇನು ಕಂಡುಕೊಂಡರು, ಮತ್ತು ಕ್ರೀಡೆಗಳಲ್ಲಿ ಹಿಂಸಾಚಾರವು ಯಾವ ವಿಧಗಳನ್ನು ಹೊಂದಿದೆ?
‘ಒಂದು ವಿಸ್ತಾರ್ಯದ ಬೆಳವಣಿಗೆ’
ಫುಟ್ಬಾಲ್, ಲೋಕದ ಅತಿ ಮೆಚ್ಚಿಕೆಯ ಕ್ರೀಡೆಯು, ಅತಿ ಹೆಚ್ಚಿನ ಠೀಕೆಗೆ ಒಳಗಾಗಿದೆ, ಆದರೆ ಈ ಸಮಸ್ಯೆಯಲ್ಲಿ ಹೆಚ್ಚಿನಾಂಶ ಎಲ್ಲಾ ವಿವಿಧ ಕ್ರೀಡೆಗಳು ಸೇರ್ಪಡೆಗೊಂಡಿವೆ. 1988ರಲ್ಲಿ ಜರ್ಮನಿಯಲ್ಲಿ ಜರುಗಿದ ಯೂರೋಪಿನ ಅಂತರ್ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಷಿಪ್ ಸಮಯದಲ್ಲಿ ಹಿಂಸಾಚಾರವು ಸ್ಫೋಟನಗೊಂಡಿತು. ಅವರ ರಾಷ್ಟ್ರೀಯ ತಂಡ ಒಳಗೊಂಡಿದ್ದ ಒಂದು ಆಟದಲ್ಲಿ, ಬ್ರಿಟಿಷ್ ಆಸಕ್ತರುಗಳು ಸಂರ್ಘಷಣೆ ನಡಿಸಲು ಆರಂಭಿಸಿದರು, ಗಾಯಗೊಂಡ ಪೊಲೀಸರುಗಳು ಮತ್ತು ಆಸ್ತಿ-ಪಾಸ್ತಿ ನಾಶನಗಳೊಂದಿಗೆ ಇದು ಮುಕ್ತಾಯಗೊಂಡಿತು ಮತ್ತು 300 ಮಂದಿಗಳನ್ನು ದಸ್ತಗಿರಿ ಮಾಡಲಾಯಿತು. ಅದೇ ಚಾಂಪಿಯನ್ಷಿಪ್ನ ಸಮಯದಲ್ಲಿ ಇಟಾಲಿಯನ್ ತಂಡವು ಗೆದಾದ್ದ ನಂತರ, ಉತ್ಸುಕತೆಯ ಉನ್ಮದಾವೇಗದಲ್ಲಿ ಮೂರು ಮಂದಿ ಕೊಲ್ಲಲ್ಪಟ್ಟರು.
ಬ್ರಿಟನ್ನ ಕುಖ್ಯಾತ ಪುಂಡರು ಹೋದಲ್ಲೆಲ್ಲಾ ಭೀತಿಯನ್ನು ಬಿತ್ತಿದರು, ದ ಗಾರ್ಡಿಯನ್ ಹೇಳಿದಂತೆ, ಇದರಿಂದ “ಸ್ವದೇಶದಲ್ಲಿ ಮತ್ತು ವಿದೇಶಗಳಲ್ಲಿ ಇಂಗ್ಲಿಷ್ ಫುಟ್ಬಾಲಿನ ರೂಪವನ್ನು ಕೆಡಿಸಲು” ನೆರವಾದರು. ಒಂದು ಕ್ರೀಡಾಕಾಲದಲ್ಲಿ ಅನೇಕ ಬಾರಿ ಇಟಾಲಿಯನ್ ಕ್ರೀಡಾ ವಾರ್ತಾಪತ್ರಗಳ ಸೋಮವಾರದ ಸಂಚಿಕೆಗಳು “ಕಪ್ಪು” ಆದಿತ್ಯವಾರಗಳ ಕುರಿತು ಹೇಳಿದವು—ಕ್ರೀಡಾ ಘಟನೆಗಳು ಮರಣ, ಘಾಸಿಗೊಳ್ಳುವಿಕೆ ಮತ್ತು ಇತರರ ಅಂಗವಿಕಲತೆಗೆ ಕಾರಣವಾಗುವ ದೊಂಬಿಗಳಾಗಿ ಸ್ಫೋಟಿಸಿದವು. ಒಂದು ವಾರ್ತಾ ಪತ್ರವು ಹೇಳಿರುವಂತೆ, ಕ್ರೀಡಾ ಸವಲತ್ತುಗಳು “ಗೆರಿಲ್ಲಾ ಯುದ್ಧದ ಅಂಗಣ”ಗಳಾಗಿವೆ. ಆದರೆ ಅಂತಹ ಪರಿಸ್ಥಿತಿಯು ಕೇವಲ ಬ್ರಿಟನ್ ಮತ್ತು ಇಟಲಿಗೆ ಸೀಮಿತವಾಗಿಲ್ಲ. ನೆದರ್ಲೆಂಡ್ಸ್, ಜರ್ಮನಿ, ಸೋವಿಯೆಟ್ ಒಕ್ಕೂಟ, ಸ್ಪೇಯ್ನ್ ಮತ್ತು ಇತರ ಅನೇಕ ದೇಶಗಳು ಅದೇ ಸಮಸ್ಯೆಯನ್ನು ನಿವಾರಿಸಬೇಕಾಗಿದೆ.
“ಕ್ರೀಡಾಸಕ್ತರ ಯುದ್ಧ”
ಕೆಲವು ಕ್ರೀಡಾಸಕ್ತರು, ವಾರ್ತಾಸಮೂಹ ಮಾಧ್ಯಮಗಳ ಮೂಲಕ ಅವರ ಆಕ್ರಮಣಕಾರೀ ಆತ್ಮವು ಕೆರಳಿಸಲ್ಪಟ್ಟು, ಕ್ರೀಡಾ ಘಟನೆಗಳ ಸಮಯದಲ್ಲಿ ತಮ್ಮ ಕೀಳ್ಮಟ್ಟದ ಸಹಜಪ್ರವೃತ್ತಿಗಳಿಗೆ ಎಡೆಕೊಡುತ್ತಾರೆ. ಫುಟ್ಬಾಲ್ ಆಟದಲ್ಲಿ, ಇಟಾಲಿಯನ್ ಅಲ್ಟ್ರಾ ಇಲ್ಲವೇ ಬ್ರಿಟಿಷ್ ಪುಂಡರು “ರೆಡ್ ಆರ್ಮಿ (ಕೆಂಪು ಸೇನೆ) ಇಲ್ಲವೇ “ಟೈಗರ್ಸ್ ಕಮಾಂಡ್” (ಹುಲಿಯ ಆಜ್ಞೆ) ಎಂಬಂತಹ ಬಿರುದುಗಳು ಹೊತ್ತಿರುವ ಬಾವುಟಗಳ ಕೆಳಗೆ ಒಟ್ಟುಗೂಡುತ್ತಾರೆ. ಒಬ್ಬ ಪುಂಡನು ಹೇಳಿದಂತೆ, ಫುಟ್ಬಾಲ್ ಆಟದ ಆಸಕ್ತನು “ಹೋರಾಡಲು, ವಿರೋಧಿಯ ಕ್ಷೇತ್ರವನ್ನು ವಶಪಡಿಸಲು ಬಯಸುತ್ತಾನೆ.” ಕ್ರೀಡಾಂಗಣದ ಅಟಣ್ಟೆಗಳಲ್ಲಿ, ಪ್ರಾಚೀನ ರೋಮನ್ ಮಲ್ಲರಂಗದಲ್ಲಿದ್ದಂತಹ ಪರಿಸ್ಥಿತಿಗಳಿಗೆ ಸಮಾನವಾಗಿರುವಂತಹದ್ದು ಇರುತ್ತದೆ, ತಮ್ಮ ವಿರೋಧಿಗಳನ್ನು ಹತಿಸುವಂತೆ ಖಡ್ಗಮಲ್ಲರಿಗೆ ಆಗ ಪ್ರೇಕ್ಷಕರು ಹುರಿದುಂಬಿಸುತ್ತಿದ್ದರು. ಮತ್ತು ಆಸಕ್ತರ ಕೆರಳಿಸುವ ಮೇಳಗೀತವು ಅಶ್ಲೀಲತೆಗಳಿಂದ ವತ್ತು ವರ್ಣೀಯ ಗುರಿನುಡಿಗಳ ಉದ್ಗಾರಗಳಿಂದ ತುಂಬಿರುತ್ತದೆ.
ಕ್ರೀಡಾಸಕ್ತರು ಕೆಲವೊಮ್ಮೆ ಅಪಾಯಕಾರೀ ಸಾಧನಗಳನ್ನು ಕೊಂಡೊಯ್ಯುತ್ತಾರೆ. ಕೆಲವು ಪಂದ್ಯಾಟಗಳು ಆರಂಭಿಸುವ ಮೊದಲು ಪೊಲೀಸರು ನಡಿಸಿದ ತನಿಖೆಯಲ್ಲಿ, ಪೂರ್ಣ ಮಟ್ಟದ ಯುದ್ಧಾಯುಧಗಳು ಬೆಳಕಿಗೆ ತರಲ್ಪಟ್ಟಿವೆ—ಚೂರಿಗಳು, ಭಗ್ಗನೆ ಉರಿಹೊತ್ತಿಕೊಳ್ಳುವ ಪಿಸ್ತೂಲುಗಳು, ಬಿಲಿಯರ್ಡ್ಸ್ ಚೆಂಡುಗಳು. ಬ್ರಿಟಿಷ್ ಕ್ರೀಡಾಂಗಣದ ಅಟಣ್ಟೆಗಳಲ್ಲಿ ಸೀಲ್ಟ್ ತಾಗಿಸಿರುವ ಬಾಣಗಳ ಮೋಡಗಳ ಸುರಿಮಳೆಯೇ ಬಿದ್ದಿತು!
ಸರಕಾರದ ನಡುಪ್ರವೇಶ
ಕ್ರೀಡೆಗಳಲ್ಲಿ ಹಿಂಸಾಚಾರವನ್ನು ನಿಗ್ರಹಿಸಲು ಬಲವಾದ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಗಳಿಗೆ ಯೂರೋಪಿಯನ್ ಪಾರ್ಲಿಮೆಂಟ್ ಎಚ್ಚರಿಕೆಯನ್ನಿತಿತ್ತು. ಉದಾಹರಣೆಗೆ, ಬ್ರಿಟಿಷ್ ಸರಕಾರವು, ಅದರ ಪಂತ ಪ್ರಧಾನಿಯಾದ ಮಾರ್ಗರೆಟ್ರ ನಿರ್ದೇಶನಕ್ಕನುಸಾರ ಅಂತಹ ಹೆಜ್ಜೆಗಳನ್ನು ತೆಗೆದುಕೊಂಡಿತು. ಶ್ರೀಮತಿ ಮಾರ್ಗರೆಟ್ ಇದಕ್ಕಿಂತಲೂ ಕಠಿಣವಾದ ಕ್ರಮಗಳನ್ನು, ಅಂದರೆ ಕ್ರೀಡಾಂಗಣಕ್ಕೆ ಪ್ರವೇಶಿಸಲು ಗುರುತು ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಆಗ್ರಹ ಪಡಿಸಿದಳು. ಇದನ್ನು ಪಡೆದವರು ಯಾವುದೇ ಹಿಂಸಾಚಾರದ ಕೃತ್ಯಗಳಲ್ಲಿ ತೊಡಗಿರುವುದಾದರೆ, ಆ ಗುರುತು ಕಾರ್ಡುಗಳನ್ನು ಹಿಂತೆಗೆದುಕೊಳ್ಳಲ್ಪಡುವದು. ಇದಕ್ಕೆ ಕೂಡಿಸಿ, ಆ ಮೂಲಕ ಕ್ರೀಡಾಸಕ್ತರ ಮೇಲೆ ಕಣ್ಗಾವಲು ಇಡಲು ಕ್ಲೊಸ್ಡ್-ಸರ್ಕಿಟ್ ಟೆಲಿವಿಶನ್ ಕೆಮರಾಗಳಿಂದ ಅದನ್ನು ಅಳವಡಿಸಲು, ವಿರೋಧಿಸುವ ಬೆಂಬಲಿಗರನ್ನು ಪ್ರತ್ಯೇಕಿಸಲು ಅಡ್ಡತಡೆಗಳನ್ನು ನಿರ್ಮಿಸಲು ಮತ್ತು ಯಾವುದೇ ಸುಲಭ ದಾಹ್ಯ ವಸ್ತುಗಳನ್ನು ಇಲ್ಲದಂತೆ ಮಾಡಲು, ಬ್ರಿಟನ್ನಲ್ಲಿ ಕ್ರೀಡೆಗಳ ಸವಲತ್ತುಗಳನ್ನು ರಚಿಸಲು ಇಲ್ಲವೇ ಪುನಃ ಕಟ್ಟಲು ಯೋಜನೆಗಳನ್ನು ಮಾಡಲಾಗುತ್ತದೆ. ಪುಂಡರ ತಂಡಗಳ ನಡುವೆ, ಅತಿ ಉಗ್ರ ಹಿಂಸಾಚಾರಿ ಆಸಕ್ತರ ನಡುವೆ, ರಹಸ್ಯವಾಗಿ ಪೊಲೀಸರು ಸೇರಿಕೊಂಡು, ಅವರ ಮಧ್ಯದಲ್ಲಿರುವ ಗುಂಪಿನ ನಾಯಕರುಗಳನ್ನು ಗುರುತಿಸುತ್ತಾರೆ ಮತ್ತು ಅವರನ್ನು ದಸ್ತಗಿರಿ ಮಾಡುತ್ತಾರೆ.
ಬೇರೆ ದೇಶಗಳಲ್ಲಿಯೂ ಕೂಡಾ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ. ಆಂತರಿಕ ಇಲಾಖೆಯ ಸಹಕಾರದೊಂದಿಗೆ ಇಟಾಲಿಯನ್ ಕ್ರೀಡಾ ಅಧಿಕಾರಿಗಳು ಕ್ರೀಡಾಂಗಣದಲ್ಲಿ ಮುಳ್ಳುಸರಿಗೆಗಳನ್ನು ಮತ್ತು ಸುರಕ್ಷಿತ ಬಲೆಗಳನ್ನು ಬಳಸಲು, ಹೆಲಿಕಾಪ್ಟರುಗಳನ್ನು, ಪೊಲೀಸರ ತಂಡಗಳನ್ನು ಮತ್ತು ಕ್ಲೊಸ್ಡ್-ಸರ್ಕಿಟ್ ಟೆಲಿವಿಶನ್ ಕೆಮರಾಗಳನ್ನು ಉಪಯೋಗಿಸಲು ನಿರ್ಧರಿಸಿದರು. ಕ್ರೀಡಾಂಗಣಗಳನ್ನು ಸೈನಿಕ ನೆಲೆಗಳನ್ನಾಗಿ ಮಾಡುವ ಕುರಿತೂ ಪರಿಗಣಿಸಲಾಗುತ್ತದೆ. 1988ರಲ್ಲಿ ಕೊರಿಯದ ಸಿಯೋಲ್ನಲ್ಲಿ ಒಲಿಂಪಿಕ್ ಗೇಮ್ಸ್ನ ಸಿದ್ಧತೆಗಳ ಸಮಯದಲ್ಲಿ, ಭಯವಾದಿಗಳ ಆಕ್ರಮಣಗಳನ್ನು ಎದುರಿಸಲು ಅಧಿಕಾರಿಗಳು ಪೊಲೀಸ್ರುಗಳನ್ನು ತರಬೇತುಗೊಳಿಸಿದರು.
ಅನಂತರ, ಆಟದ ತೀರ್ಪುಗಾರರ (ರೆಪರೀ) ವಿರುದ್ಧ ನಿರ್ದೇಶಿಸಲ್ಪಡುವ ಹಿಂಸಾಚಾರದ ಕೃತ್ಯಗಳಿವೆ. ಇಟೆಲಿಯ ಇತ್ತೀಚೆಗಿನ ಒಂದು ಫುಟ್ಬಾಲ್ ಆಟದಲ್ಲಿ 690 ತೀರ್ಪುಗಾರರು ಇದಕ್ಕೆ ತುತ್ತಾದರು. ಸಿಯೋಲ್ ಒಲಿಂಪಿಕ್ಸ್ನ ಒಂದು ಕುಸ್ತಿ ಪಂದ್ಯಾಟದಲ್ಲಿ ಒಬ್ಬ ತೀರ್ಪುಗಾರನು ತರಬೇತಿ ಕೊಡುವವರಿಂದ ಮತ್ತು ಆ ತೀರ್ಮಾನವನ್ನು ಒಪ್ಪದಿದ್ದ ಪೊಲೀಸ್ರಿಂದಲೂ ಕೂಡಾ ಕ್ರೂರವಾಗಿ ಆಕ್ರಮಣಕ್ಕೊಳಗಾದನು.
ಜನರ ಜೀವಗಳಿಗೆ ಆಗುವ ಅಪಾಯದ ಹೊರತಾಗಿಯೂ, ಕ್ರೀಡೆಗಳ ಹಿಂಸಾಚಾರದಿಂದ ಗಣನೀಯ ಮಟ್ಟದಲ್ಲಿ ಆರ್ಥಿಕ ನಷ್ಟ ಕೂಡಾ ಇದೆ. ಕಳವುಗಳಿಂದ, ಸೂರೆಮಾಡುವುದರಿಂದ ಮತ್ತು ಪುಂಡುಗಾರಿಕೆಯಿಂದ ಆದ ನಷ್ಟಕ್ಕಾಗಿ ನೂರಾರು ಸಾವಿರಾರು ಡಾಲರುಗಳನ್ನು ಭರ್ತಿ ಮಾಡಿ ಕೊಡುವುದು ಮಾತ್ರವಲ್ಲ, ಆದರೆ ಅದರ ತಡೆಗಾಗಿಯೂ ಕೂಡಾ ತೆರಬೇಕಾಗುತ್ತದೆ. ಬ್ರಿಟಿಷ್ ಫುಟ್ಬಾಲ್ ಆಟದ ಕ್ಯಾಲಂಡರಿನ ಒಂದು ಸಾಮಾನ್ಯ ದಿನವೊಂದರಲ್ಲಿ ಪೊಲೀಸ್ ಭದ್ರತೆಗೋಸ್ಕರವೇ ಸುಮಾರು ರೂ.1,26,00,000ಗಳಷ್ಟನ್ನು ವ್ಯಯಿಸಲಾಗುತ್ತದೆ.
ಇಂತಹ ಮೃಗೀಯ ಆಕ್ರಮಣವು ಇರುವುದಾದರೂ ಯಾಕೆ?
ಹಿಂಸಾಚಾರ—ಇಂದು ಕ್ರೀಡೆಗಳು ಆಡಲ್ಪಡುವ ವಿಧದ “ವಾಸ್ತವಿಕತೆ”
ಇಂದು, ಕ್ರೀಡೆಗಳೊಂದಿಗೆ ಹಿಂಸಾಚಾರದ ಆಕ್ರಮಣತೆಯು ಜೋಡಿಸಲ್ಪಟ್ಟಿದೆ. ಆಸಕ್ತಕರವಾಗಿಯೇ, ಯೂರೋಪಿಯನ್ ಪಾರ್ಲಿಮೆಂಟ್ನಿಂದ ಅಂಗೀಕೃತವಾದ ಠರಾವನ್ನು ತಯಾರಿಸಿದ ಅದೇ ನಿಯೋಗವು ತಿಳಿಸಿದ್ದೇನೆಂದರೆ “ಹಿಂಸಾಚಾರವು ಕ್ರೀಡೆಯ ಒಂದು ಆವಶ್ಯಕ ಭಾಗವಲ್ಲ, ಆದರೂ ಕ್ರೀಡೆಯು ಇಂದು ಆಡಲ್ಪಡುವ ಪರಿಸ್ಥಿತಿಗಳಲ್ಲಿ ಅದು ವಾಸ್ತವಿಕವಾಗಿದೆ ಮತ್ತು ವಾಸ್ತವತೆಯೇನಂದರೆ ಆಟದ ನಿಯಮಗಳೆಂದು ಒಂದು ವೇಳೆ ಅವುಗಳನ್ನು ಕರೆಯುವುದಾದರೆ, ಅದನ್ನು ಸಾಕಾಗುವಷ್ಟು ತಡೆಯಸಾಧ್ಯವಿಲ್ಲ.” ಇದು ಯಾಕೆ?
ಒಳ್ಳೆಯದು, ಕ್ರೀಡಾಸಕ್ತರ ಹಿಂಸಾಚಾರದ ಕೃತ್ಯಗಳ ಹೊರತಾಗಿಯೂ, ಆಟಗಳು ಆಡಲ್ಪಡುವ ವಿಧದಲ್ಲಿಯೂ ಬದಲಾವಣೆಯಾಗಿರುತ್ತದೆ. ಯೂರೋಪಿಯನ್ ಪಾರ್ಲಿಮೆಂಟ್ ಅಂಗೀಕರಿಸಿರುವಂತೆ, ಸಮಾಜದಲ್ಲಿಯೇ “ಬೆಳೆಯುತ್ತಿರುವ ಹಿಂಸಾಚಾರವು ಇದೆ.” ಅಲ್ಲದೆ, ಕ್ರೀಡಾ ಜಗತ್ತು ಕೇವಲ ಶಾರೀರಿಕ ಚಟುವಟಿಕೆಯ ಮೇಲೆ ಮಾತ್ರ ಈಗ ಒತ್ತರವನ್ನು ಹಾಕುತ್ತಿಲ್ಲ. ಉದಾಹರಣೆಗೆ, ಏಥೇನ್ಸ್ನಲ್ಲಿ 1896ರಲ್ಲಿ ಆಧುನಿಕ ದಿನಗಳಲ್ಲಿ ನಡೆದ ಮೊದಲ ಒಲಿಂಪಿಕ್ ಆಟಗಳಲ್ಲಿ, ಬ್ರಿಟಿಷ್ ಸ್ಪರ್ಧಿಗಳ ಒಂದು ತಂಡವು, ಆಟದ ಆರಂಭದ ಮೊದಲೇ ತರಬೇತಿಗೊಳಿಸಲ್ಪಟ್ಟ ಕಾರಣ ಅನರ್ಹಗೊಳಿಸಲ್ಪಟ್ಟಿತು. ಕ್ರೀಡೆಯು ಜರುಗಿಸಲ್ಪಡುವ ಮೊದಲು ತರಬೇತಿಯ ಒಂದು ಕೃತ್ಯವು ಆ ಸಮಯದಲ್ಲಿ ಹುರಿದುಂಬಿಸಲ್ಪಡುತ್ತಿದ್ದ ಹವ್ಯಾಸಿ (ಎಮೆಚೂರ್) ಆತ್ಮಕ್ಕೆ ವಿರೋಧವೆಂದು ಎಣಿಸಲ್ಪಡುತ್ತಿತ್ತು. ಅಂತಹ ಒಂದು ಉಪಕಥೆಯು ಬಹಳ ಮಂದಿಯನ್ನು ನಗುವಂತೆ ಮಾಡುತ್ತದೆ.
ಮೊದಲನೆಯ ಲೋಕಯುದ್ಧದ ನಂತರ ಮತ್ತು ವಿಶೇಷವಾಗಿ ಎರಡನೆಯ ಲೋಕಯುದ್ಧವನ್ನು ಹಿಂಬಾಲಿಸಿ, ಪ್ರಗತಿ-ಶೀಲವೆಂದು ಕರೆಯಲ್ಪಡುವ ದೇಶಗಳಲ್ಲಿ ಜೀವಿಸುವ ಜನರಿಗೆ ಬಹಳಷ್ಟು ಬಿಡು ಸಮಯ ಇರುತ್ತಿತ್ತು. ವಿನೋದಾವಳಿಯು ಒಂದು ಲಾಭದಾಯಕ ಚಟುವಟಿಕೆಯಾಗಿ ಅಥವಾ ವಾಣಿಜ್ಯ ಲೋಕವಾಗಿ ಬಲುಬೇಗನೆ ಪರಿವರ್ತನೆ ಹೊಂದಿತು. ರಾಷ್ಟ್ರೀಯ ಮತ್ತು ಸಾಮಾಜಿಕ ಹಿತಾಸಕ್ತಿಗಳೊಂದಿಗೆ ಹಣಕಾಸಿನ ಹಿತಾಸಕ್ತಿಯು ಒಟ್ಟೊಟ್ಟಿಗೆ ತಮ್ಮ ಸ್ಥಾನವನ್ನು ತೆಗೆದುಕೊಂಡಿತು. ಇಂದಿನ ಕ್ರೀಡಾ ಘಟನಾವಳಿಗಳು “ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ವಾಸ್ತವಾಂಶಗಳು ದೊರೆತನ ನಡಿಸುವ ಒಂದು ದೃಶ್ಯ ವಿವರಣೆಯಾಗಿರುತ್ತದೆ.” ಇನ್ನೊಂದು ಮಾತಿನಲ್ಲಿ, ಕ್ರೀಡೆಗಳು “ಜನಸಮೂಹಗಳ ಒಂದು ಅತಿಶಯ ಸಂಗತಿಯಾಗಿ” ಪರಿಣಮಿಸಿವೆ. ಗೆಲ್ಲುವುದು ಅಂದರೆ ವಿಜೇತರಿಗೆ ಮಿಲಿಯಗಟ್ಲೆ ಡಾಲರುಗಳು ಸಿಗುವ ಅರ್ಥದಲ್ಲಿರುತ್ತದೆ! ಟೆಲಿವಿಶನ್ ಕೂಡಾ ಆಟೋಟಗಳ ಜನಪ್ರಿಯತೆಗೆ ತನ್ನ ಪಾಲನ್ನು ಒದಗಿಸಿದೆ ಮತ್ತು ಕ್ರೀಡೆಗಳಲ್ಲಿನ ಕ್ರೌರ್ಯತೆಗೆ ಕೂಡಾ ಒದಗಿಸಿರಬಹುದು. ಕೆಲವೊಮ್ಮೆ ಟೀವೀ ಕೆಮರಾಗಳು ಶಾಂತಕರ ಘಟನೆಗಳ ಮೇಲೆ ಕೇಂದ್ರೀಕರಿಸಲ್ಪಡುವ ಬದಲು, ಹಿಂಸಾಚಾರದ ಆಟವನ್ನು, ಅದನ್ನು ತಕ್ಷಣದ ಮರುಆಟಗಳೋಪಾದಿ ಪುನಃ ಪುನಃ ಪ್ರದರ್ಶಿಸುವುದರ ಮೂಲಕ, ಅವುಗಳಲ್ಲಿ ನಿರತವಾಗಿರುತ್ತವೆ. ಈ ಮೂಲಕ ಭಾವೀ ಕ್ರೀಡಾಸಕ್ತರ ಮತ್ತು ಆಟಗಾರರ ಮನಸ್ಸುಗಳಲ್ಲಿ ಅರಿವಿಲ್ಲದೇ ಟೀವೀಗಳು ಕ್ರೀಡಾ ಜಗತ್ತಿನ ಹಿಂಸಾಚಾರದ ಪರಿಣಾಮಗಳನ್ನು ಉತ್ಪ್ರೇಕ್ಷಿಸಬಹುದು. ಹವ್ಯಾಸಿ ಕ್ರೀಡೆಗಳು ಈಗ ಇರುವದು ವಿರಳ ಮತ್ತು ಒಂದು ನಿಯತ ಕಾಲಿಕ ಪತ್ರಿಕೆಯು ಸಿಯೋಲ್ನಲ್ಲಿನ 1988ರ ಒಲಿಂಪಿಕ್ಸ್ನ ಸಮಯದಲ್ಲಿ ಹತ್ತಾರು ಸಾವಿರಾರು ಡಾಲರುಗಳನ್ನು ಆಟೋಟದ ಪಾಲಿಗರು ಸಂಪಾದಿಸಿದರು ಎಂದು ಮಾತಾಡುತ್ತಾ, ಅವುಗಳ ಸ್ಥಾನದಲ್ಲಿ “ವೃತ್ತಿನಿರತ ಹವ್ಯಾಸವು” ಅಲ್ಲಿರುತ್ತದೆ ಎಂದು ಹೇಳಿದೆ.
ರಾಷ್ಟ್ರೀಯತೆಯು ಕ್ರೀಡಾಪಟುಗಳನ್ನು, ತರಬೇತಿಗಾರರನ್ನು, ವ್ಯವಸ್ಥಾಪಕರುಗಳನ್ನು ಮತ್ತು ಪ್ರೇಕ್ಷಕರನ್ನು, ವಿಜಯಕ್ಕೆ ಅತಿಶಯಮಾಡಲ್ಪಟ್ಟ ಪ್ರಾಮುಖ್ಯತೆಯ ಪ್ರವೃತ್ತಿಯನ್ನು ಜೋಡಿಸುತ್ತದೆ. ಕೆಲವು ಅಂತರ್ರಾಷ್ಟ್ರೀಯ ಕ್ರೀಡಾ ಘಟನೆಗಳ ನಂತರ ವಿಜೇತ ಪಕ್ಷಕ್ಕೆ, ಪುರಾತನ ಕಾಲದಲ್ಲಿ ವಿಜಯಿಗಳಾಗಿ ಮನೆಗೆ ಹಿಂತೆರಳುತ್ತಿದ್ದ ಸೇನಾದಂಡನಾಯಕರುಗಳಿಗೆ ಕೊಡಲ್ಪಡುತ್ತಿದ್ದಂತೆ, ವಿಜಯೋತ್ಸಾಹದ ಗೌರವ ಪ್ರಶಸ್ತಿಗಳನ್ನು ಕೊಡಲಾಗುತ್ತದೆ. ಇದನ್ನು ಇತ್ತೀಚೆಗಿನ ವರುಷಗಳಲ್ಲಿ ಕೊನೆಯ ಉಸಿರಿನ ತನಕ ನಿರ್ಲಜ್ಜಾ ರೀತಿಯಲ್ಲಿ ಕ್ರೀಡಾಪಟುಗಳು ಇಟೆಲಿ, ಅರ್ಜೆಂಟೀನಾ ಮತ್ತು ನೆದರ್ಲೇಂಡ್ಸ್ನಲ್ಲಿ ನಡಿಸಿದ ನೇರವಾದ ಹೋರಾಟಗಳಲ್ಲಿ ಕಂಡುಬಂದಿದೆ. ಮತ್ತು ಕ್ರೀಡಾಸಕ್ತರು ಅವರನ್ನು ಅಣಕಿಸುತ್ತಾರೆ, ಕ್ರೀಡೆಯ ಮೊದಲು, ಆ ಸಮಯದಲ್ಲಿ ಮತ್ತು ಅನಂತರ ಅವರ ತಂಡಗಳಿಗೆ ಮತ್ತು ಅವರ ರಾಷ್ಟ್ರಕ್ಕೆ ತೋರಿಸುವ ನಿಷ್ಠೆಯ ಅತಿರೇಕತೆಯಿಂದ ರೋಷೋದ್ರಿಕ್ತ ಕಾದಾಟಗಳಿಗೆ ಪ್ರಚೋದನೆ ನೀಡುತ್ತಾರೆ.
1988ರ ಯೂರೋಪಿಯನ್ ಅಂತರ್ ರಾಷ್ಟ್ರೀಯ ಪುಟ್ಬಾಲ್ ಚಾಂಪ್ಯನ್ಷಿಪ್ಗಳ ಆರಂಭದ ಮೊದಲು, ಡರ್ ಸ್ಪಯ್ಗೆಲ್ ಎಂಬ ಜರ್ಮನ್ ವಾರ ಪತ್ರಿಕೆಯು ಹೇಳಿದ್ದೇನಂದರೆ ಈ ಘಟನೆಯು “ಆಕ್ರಮಣ, ರಾಷ್ಟ್ರೀಯತೆ ಮತ್ತು ನವ್ಯ-ಫಾಶಿಸಂ ಸಂಮಿಳಿತವಾಗಿರುವ ಒಂದು ಉನ್ನತ ಮಟ್ಟದ ಸ್ಫೋಟಕಗೊಳ್ಳಬಹುದಾದ ಪೋಷಣಾ-ನೆಲೆಯಾಗಬಹುದೆಂದು” ಭೀತಿ ಇತ್ತು.
ಇನ್ನೊಂದು ವಿಧದ ಹಿಂಸಾಚಾರ
ಕ್ರೀಡೆಗಳಲ್ಲಿನ ಹಿಂಸಾಚಾರಕ್ಕೆ ಇಷ್ಟೇ ಇರುವದಲ್ಲ. 1988ರ ಸಿಯೋಲ್ ಒಲಿಂಪಿಕ್ಸ್ನಲ್ಲಿ “ಮತ್ತುಬರಿಸುವ ಮಾದಕದ ಲೋಕಪವಾದ” ಹೊರಬಿತ್ತು. ಕ್ರೀಡಾಪಟುಗಳ ಶಕ್ತಿಯ ಮಟ್ಟವನ್ನು ಏರಿಸುವ ಮತ್ತು ಆ ಮೂಲಕ ಅವರ ಸಾಮಾನ್ಯ ದೈಹಿಕ ಸಾಮರ್ಥ್ಯಕ್ಕಿಂತ ಶ್ರೇಷ್ಠತಮ ಗುಣಮಟ್ಟಕ್ಕೆ ಮುಟ್ಟಲು ಅವರಿಗೆ ಸಾಧ್ಯ ಮಾಡುವ ಕಾನೂನುಬಾಹಿರ ಮದ್ದುಗಳ ಬಳಕೆ, ಮತ್ತುಬರಿಸುವ ಮಾದಕವಸ್ತು, ಕ್ರೀಡಾ ಆತ್ಮಕ್ಕೆ ಮತ್ತು ಆಟಗಾರರ ಆರೋಗ್ಯಕ್ಕೆ ಹಿಂಸಾಚಾರವನ್ನು ಗೈಯುತ್ತದೆ.
ಈ ಬೆಳವಣಿಗೆಯು ಎಷ್ಟೊಂದು ವಿಸ್ತಾರವಾಗಿರುತ್ತದೆ? (g89 11/8)
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ಕೆಲವೊಮ್ಮೆ ಟೀವೀ ಕೆಮರಾಗಳು ಹಿಂಸಾಚಾರದ ಆಟವನ್ನು, ಅದನ್ನು ತಕ್ಷಣದ ಮರುಆಟಗಳೋಪಾದಿ ಪುನಃ ಪುನಃ ಪ್ರದರ್ಶಿಸುವುದರ ಮೂಲಕ, ಅವುಗಳಲ್ಲಿ ನಿರತವಾಗಿರುತ್ತವೆ
[ಪುಟ 7 ರಲ್ಲಿರುವಚಿತ್ರ]
ರಾಷ್ಟ್ರೀಯತೆಯು ವಿಜಯಕ್ಕೆ ಅತಿಶಯಮಾಡಲ್ಪಟ್ಟ ಪ್ರಾಮುಖ್ಯತೆಯ ಪ್ರವೃತ್ತಿಯನ್ನು ಜೋಡಿಸುತ್ತದೆ
[ಕೃಪೆ]
Nancie Battaglia