ಅದೆಲ್ಲವು ಯಾವಾಗ ಅಂತ್ಯಗೊಳ್ಳಲಿದೆ?
ನವಚೈತ್ಯನ್ಯವನ್ನುಂಟುಮಾಡುವ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವದು ಆಹ್ಲಾದವೂ, ಆರೋಗ್ಯಕರವೂ ಆಗಿರುತ್ತದೆ. ಆದರೆ ದೌರ್ಭಾಗ್ಯಕರವಾಗಿಯೇ, ಒಂದು ಕ್ರೀಡಾ ಘಟನೆಯಲ್ಲಿ ಭಾಗವಹಿಸುವವರು ಇಲ್ಲವೇ ಕೇವಲ ಪ್ರೇಕ್ಷಕರು ತಾನೇ ಆಗಿರುವದು ಕೆಲವೊಮ್ಮೆ ಅತಿರೇಕದ ಹಿಂಸಾಚಾರದಲ್ಲಿ ಮತ್ತು ಆಗಾಗ್ಯೆ ಮದ್ದು-ತುಂಬಿರುವ ಲೋಕವೊಂದರಲ್ಲಿ ಸೆಳೆಯಲ್ಪಡುವದು ಎಂಬರ್ಥದಲ್ಲಿರುತ್ತದೆ.
ಆಧುನಿಕ ದಿನದ ಕ್ರೀಡೆಯು ಆ ಹಿಂಸಾಚಾರ ಲೋಕದ ಕೇವಲ ಒಂದು ವ್ಯಕ್ತ ಪಡಿಸುವಿಕೆಯಾಗಿರುತ್ತದೆ. 1985ರಲ್ಲಿ ಬೆಲ್ಜಿಯಮ್ನಲ್ಲಿ ನಡೆದ ಘಟನೆಯಲ್ಲಿ ಫುಟ್ಬಾಲ್ ಸ್ಟೇಡಿಯಂನ ಅಟಣ್ಟೆಗಳಲ್ಲಿ 39 ಜನರ ಮೃತ್ಯುವಿಗೆ ಕಾರಣವಾದ ನಂತರ, ತತ್ವಜ್ಞಾನಿ ಇಮಾನುವೆಲ್ ಸಿವಿರಿನೊ ಹೇಳಿದ್ದು: “ಬ್ರಸೆಲ್ಸ್ನಲ್ಲಿ ನಡೆದಂತಹ ಘಟನೆಗಳು ಸಂಭವಿಸಲು ಕಾರಣವೇನಂದರೆ ನಮ್ಮ ಸಮಾಜದ ಕೆಲವು ನಿರ್ದಿಷ್ಟ ಮೂಲಭೂತ ಮೌಲ್ಯಗಳಲ್ಲಿ ಜನರಲ್ಲಿ ಬೆಳೆಯುತ್ತಿರುವ ಅಪನಂಬಿಕೆಯೇ” ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ. ಅನಂತರ ಅವನು ಕೂಡಿಸಿದ್ದು: “ನಮ್ಮ ದಿನಗಳಲ್ಲಿ ಹಿಂಸಾಚಾರವು ನಡೆಯುವದು ಮೌಲ್ಯತೆಗಳು ಇಲ್ಲದಿರುವದಿಂದಲ್ಲ, ಬದಲು ಹೊಸ ಮೌಲ್ಯತೆಗಳ ಹಾಜರಿಯಿಂದಲೇ.”
ಕ್ರೀಡೆಗಳಲ್ಲಿ ಹೊಸ ಮೌಲ್ಯತೆಗಳು
ಪ್ರೊಫೆಸರ್ ಸಿವಿರಿನೊರಿಂದ ಹೇಳಲ್ಪಟ್ಟ ಈ ಹೊಸ ಮೌಲ್ಯತೆಗಳು ಯಾವುವು? ಇದರಲ್ಲಿ ಒಂದು ಕ್ರೀಡಾ ಪಟುಗಳ ಸ್ವಾರಾಧನಾ ಪ್ರವೃತ್ತಿ (ನಾರ್ಸಿಸಿಸ್ಮ್), ಅದು ಚಾಂಪಿಯನ್ಸ್ರನ್ನು “ಅರ್ಧ ದೇವರುಗಳನ್ನಾಗಿ“ ಮಾಡುತ್ತದೆ.
ಅನಂತರ ಅಲ್ಲಿ ರಾಷ್ಟ್ರೀಯತೆ ಮತ್ತು ಅದರ ಫಲಿತಾಂಶವಾಗಿರುವ ರಾಜಕೀಯ ಅಡಕವಾಗಿರುವ ಸಂಗತಿಗಳು ಇರುತ್ತವೆ. ಲಾ ಇಸ್ಪಸ್ರ್ಸೊ ಪತ್ರಿಕೆ ಹೇಳುವುದು: “ಸಾಮಾಜಿಕ ಉತ್ತೀರ್ಣತೆಗೆ ಒಂದು ಮಹಾ ವಾಹಕವಾಗಿ ಕ್ರೀಡೆಯು ಪರಿಣಮಿಸಿದೆ. ಹೆಚ್ಚೆಚ್ಚು ವಿಜಯಗಳನ್ನು ಅದು ಪಡೆದಷ್ಟಕ್ಕೆ, ಅದೊಂದು ರಾಷ್ಟ್ರವಾಗಿ ಹೆಚ್ಚೆಚ್ಚಾಗಿ ಪರಿಗಣಿಸಲ್ಪಡುತ್ತದೆ.”
ಕ್ರೀಡಾ ಜಗತ್ತಿನ ಒಂದು ಭಾಗವಾಗಿ ಹಣವೂ ಕೂಡಾ ಒಂದು ಹೊಸ ಮೌಲ್ಯತೆಯಾಗಿ ಪರಿಣಮಿಸಿದೆ. ಗಮನಾರ್ಹವಾದ ಅರ್ಥಿಕ ಮತ್ತು ವಾಣಿಜ್ಯ ಅಭಿರುಚಿಗಳು—ಟೆಲಿವಿಶನ್-ಪ್ರಸರಣ ಹಕ್ಕುಗಳು, ಪ್ರಕಟನೋದ್ಯೋಗ, ಲಾಟರಿಗಳು, ಮತ್ತು ಪುರಸ್ಕರಣತ್ವಗಳು (ಸ್ಪಾನ್ಸರ್ಷಿಪ್ಸ್)—ಕೆಲವೊಮ್ಮೆ ಸ್ವತಃ ಕ್ರೀಡಾ ಪುರುಷರುಗಳು ಸಹಿತ ಒಳಗೂಡಿರುವ, “ನೀತಿನಿಷ್ಠತೆಗಳಿಲ್ಲದ ಸ್ಪರ್ಧೆ”ಯನ್ನು ಖಚಿತಗೊಳಿಸುತ್ತವೆ. ಒಬ್ಬ ಮಾಜೀ ಫುಟ್ಬಾಲ್ ಆಟಗಾರನು ಹೇಳಿದ್ದೇನಂದರೆ ಫುಟ್ಬಾಲ್ ಆಟ “ಇನ್ನು ಮುಂದೆ ಒಂದು ಆಟವಾಗಿರುವದಿಲ್ಲ. ಇದು ಕೇವಲ ಒಂದು ವ್ಯಾಪಾರ.”
ಯಾವುದೇ ಬೆಲೆ ತೆತ್ತಾದರೂ ವಿಜಯವನ್ನು ಪಡೆಯಬೇಕೆಂಬದೇ ಚಾಲ್ತಿಯಲ್ಲಿರುವ ಒಂದು ಸೂತ್ರವಾಗಿರುತ್ತದೆ, ಮತ್ತು ಇಂದಿನ ಹೊಸ ಮೌಲ್ಯತೆಗಳಿಗನುಸಾರವಾಗಿ, ಇದರ ಅರ್ಥ ಎಲ್ಲಾ ಸೇರಿ—ಕ್ರೀಡಾ ರಂಗದಲ್ಲಿನ ಮತ್ತು ಅಟಣ್ಟೆಗಳಲ್ಲಿನ ಹಿಂಸಾಚಾರದಿಂದ, ಕ್ರೀಡಾಸಕ್ತರು ಆಟದ ಮೊದಲು ಮತ್ತು ಅನಂತರ ನಡಿಸಲ್ಪಡುವ ಹಿಂಸಾಚಾರದ ವರೆಗೆ, ಮತ್ತುಬರಿಸುವಿಕೆ ಮತ್ತು ಅದರ ಮಾರಕ ಪರಿಣಾಮಗಳಿಂದ ಹಿಡಿದು ಅನ್ಯಾಯ ಮತ್ತು ನೀತಿನಿಷ್ಠೆಗಳಿಲ್ಲದಿರುವುದರ ತನಕ. ಕ್ರೀಡೆಯ ಆತ್ಮ, ಅಂದರೆ ನ್ಯಾಯೋಚಿತ ಆಟವೆಂದು ಕರೆಯಲ್ಪಡುವದು, ಗತಕಾಲದ ಒಂದು ಸಂಗತಿಯಾಗಿ ಪರಿಣಮಿಸಿದೆ ಎಂದು ಭಾಸವಾಗುತ್ತದೆ. ಅದು ಎಂದಾದರೂ ಹಿಂತೆರಳಿ ಬರಲಿರುವದೋ? ಏನು ಹೇಳಲ್ಪಟ್ಟಿದೆಯೋ ಅದರ ಆಧಾರದಿಂದ ತೀರ್ಪು ಮಾಡುವದಾದರೆ, ಜನರು ಹಾಗೆ ಅಗುವದೆಂದು ನಿರೀಕ್ಷಿಸುತ್ತಾರೆ, ಆದರೆ ವಾಸ್ತವಾಂಶಗಳು, ಪ್ರೋತ್ಸಾಹನೀಯವಾಗಿರುವದನ್ನು ಬಿಟ್ಟು ಬೇರೆಲ್ಲಾ ತೋರಿಸುತ್ತವೆ.
ಮದ್ದುಗಳು ಮತ್ತು ಹಿಂಸಾಚಾರ—ಎಂದಾದರೂ ಅಂತ್ಯಗೊಳ್ಳಲಿರುವದೋ?
ಪ್ರೊಫೆಸರ್ ಸಿವಿರಿನೊ ಒಪ್ಪುವಂತೆ, ಕ್ರೀಡೆಗಳಲ್ಲಿನ ಹಿಂಸಾಚಾರವು ಆಧುನಿಕ ಸಮಾಜವನ್ನು ಪೀಡಿಸುತ್ತಿರುವ ಅದಕ್ಕಿಂತಲೂ ಹೆಚ್ಚು ಸಾಮಾನ್ಯವಾಗಿರುವ ಹಿಂಸಾಚಾರದ ಒಂದು ಭಾಗವಾಗಿರುತ್ತದೆ. ಸಮಸ್ಯೆಯನ್ನು ಅರ್ಥೈಸಲು ಬೈಬಲಿನ ಒಂದು ಪ್ರವಾದನೆಯು ನಮಗೆ ಸಹಾಯವನ್ನೀಯುತ್ತದೆ. ಈ ದುಷ್ಟ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳ ಕುರಿತು ಮಾತಾಡುತ್ತಾ ಅಪೊಸ್ತಲ ಪೌಲನು ಈ ಗುಣಸ್ವಭಾವಗಳ ಒಂದು ಪಟ್ಟಿಯನ್ನು ಮಾಡಿದನು: ‘ಮನುಷ್ಯರು ಸ್ವಾರ್ಥಚಿಂತಕರೂ, ಹಣದಾಸೆಯವರೂ, ನಿಷ್ಠತೆಯಿಲ್ಲದವರೂ, ದಮೆಯಿಲ್ಲದವರೂ, ಉಗ್ರತೆಯುಳ್ಳವರೂ, ಒಳ್ಳೇದನ್ನು ಪ್ರೀತಿಸದವರೂ, ದ್ರೋಹಿಗಳೂ, ದುಡುಕಿನವರೂ, ಉಬ್ಬಿಕೊಂಡವರೂ, ಭೋಗಗಳನ್ನೇ ಪ್ರೀತಿಸುವವರೂ ಆಗಿರುವರು.’ ಮತ್ತು ಅವನು ಕೂಡಿಸಿದ್ದು: “ಆದರೆ ದುಷ್ಟರೂ ವಂಚಕರೂ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.”—2 ತಿಮೊಥಿ 3:1-5, 13.
ಸದ್ಯದ ಲೋಕವು, ಬೈಬಲು ವಿವರಿಸುವದು, “ಕೆಡುಕನ ವಶದಲ್ಲಿ ಬಿದಿದ್ದೆ.” (1 ಯೋಹಾನ 5:19) ಆರೋಗ್ಯಕರವಾದ ಕ್ರೀಡಾ ಚಟುವಟಿಕೆಗಳಂತಹ ಒಳ್ಳೆಯ ಸಂಗತಿಗಳನ್ನು ಭೃಷ್ಟಗೊಳಿಸುವ ಈ “ಕೆಡುಕನು” ಪಿಶಾಚನಾದ ಸೈತಾನನಾಗಿದ್ದಾನೆ. ಈ ಹಿಂಸಾಚಾರದ ಆತ್ಮಕ್ಕೆ ಅವನು ಜವಾಬ್ದಾರನಾಗಿದ್ದಾನೆ. ಅವನು ರಾಷ್ಟ್ರೀಯತೆ, ಸ್ವಾರ್ಥತೆ, ಮತ್ತು ಲೋಭತ್ವವನ್ನು ಕೂಡಾ ಉತ್ತೇಜಿಸುತ್ತಾನೆ, ಅವು ಸಮಾಜವನ್ನು ಮತ್ತು ಕ್ರೀಡೆಗಳನ್ನು ನಾಶಗೊಳಿಸಿವೆ.
ಆದರೆ ವ್ಯಕ್ತಿಗಳೋಪಾದಿ, ನಾವು ಪೈಶಾಚಿಕ ಆತ್ಮಕ್ಕೆ ಶರಣಾಗತರಾಗಬೇಕಾದ ಆವಶ್ಯಕತೆಯೇನೂ ಇಲ್ಲ. ಬೈಬಲ್ ತತ್ವಗಳನ್ನು ಅನ್ವಯಿಸುವದರ ಮೂಲಕ, ನಾವು, ಹಿಂಸಾಚಾರದ ವರ್ತನೆಗಳು ಸೇರಿರುವ ನಮ್ಮ ಹಳೆಯ ಸ್ವಭಾವವನ್ನು ಅದರ ಕೆಟ್ಟ ಅಭ್ಯಾಸಗಳ ಸಹಿತ “ಕಳಚಿ ಹಾಕ” ಸಾಧ್ಯವಿದೆ ಮತ್ತು “ನೂತನ ವ್ಯಕ್ತಿತ್ವವನ್ನು” ಧರಿಸಿಕೊಳ್ಳ ಬಹುದಾಗಿದೆ. ಇದು ಸಮಾಧಾನದ ಫಲವನ್ನು ಉತ್ಪಾದಿಸುತ್ತದೆ.—ಕೊಲೊಸ್ಸೆಯ 3:9, 10; ಗಲಾತ್ಯ 5:22, 23.
ಏನಿದ್ದರೂ, ಕ್ರೀಡೆಗಳಲ್ಲಿರುವ ಹಿಂಸಾಚಾರಕ್ಕೆ ಮತ್ತು ಮತ್ತುಬರಿಸುವಿಕೆಗೆ ಎಂದಾದರೂ ಅಂತ್ಯವೊಂದು ಇರುವದೋ? ಅತಿ ಖಂಡಿತವಾಗಿಯೂ! ಯಾವಾಗ? ಸಮಾಜದಲ್ಲಿ ಯಾವಾಗ ಹಿಂಸಾಚಾರ ಮತ್ತು ಮದ್ದಿನ ದುರುಪಯೋಗವು ಅಂತ್ಯಗೊಳ್ಳುತ್ತದೋ ಆವಾಗ. ಸದ್ಯದ ದುಷ್ಟತನದಲ್ಲಿನ ಏರುವಿಕೆಯು, ಆ ಸಮಯವು ಸನ್ನಿಹಿತವಾಗಿದೆ ಎಂದು ಸೂಚಿಸುತ್ತದೆ!—ಕೀರ್ತನೆ 92:7. (g89 11/8)