ಜಗತ್ತನ್ನು ಗಮನಿಸುವುದು
ಚರ್ಚಿನ ಲೈಂಗಿಕ ದುರಾಚಾರ
“ಹಲವಾರು ವರ್ಷಗಳಿಂದ ನ್ಯೂಫೌಂಡ್‌ಲೆಂಡ್‌ನ ಚರ್ಚುಗಳಲ್ಲಿ ಕೆಲಸಮಾಡುವ ರೋಮನ ಕಥೋಲಿಕ್ ಪಾದ್ರಿಗಳು ಮತ್ತು ಇನ್ನಿತರ ಚರ್ಚು ಕೆಲಸಗಾರರು ಪುನಃ ಪುನಃ ಡಜನುಗಟ್ಲೆಯಲ್ಲಿ ಮಕ್ಕಳ ದುರುಪಯೋಗ ಮಾಡಿದ್ದಾರೆ, ವಿಶೇಷವಾಗಿ ಎಳೆಯ ಹುಡುಗರು, ಅಧಿಕಾಂಶ ಮಂದಿ ಅನಾಥರು, ಅವರ ಶುಶ್ರೂಷೆ ತೆಗೆದುಕೊಳ್ಳುವಲ್ಲಿಯೂ ಕೂಡಾ,” ಎಂದು ಕೆನಡಾದ ವಾರ್ತಾಪತ್ರಿಕೆ ಮ್ಯಾಕ್ಲಿನ್ಸ್ ವರದಿಸಿದೆ. “ಇಂತಹ ದುರಾಚಾರವು ಕೇವಲ ನ್ಯೂಫೌಂಡ್‌ಲೇಂಡ್ ಮಾತ್ರ ಸೀಮಿತಗೊಂಡಿಲ್ಲ: ಚರ್ಚ್ ಕಥೋಲಿಕ್ ಮನುಷ್ಯರಿಂದ ಮಕ್ಕಳನ್ನು ಲೈಂಗಿಕವಾಗಿ ದೂಷಿಸಿದ ಕಡಿಮೆ ಪಕ್ಷ ಸುಮಾರು ಆರು ಹೆಚ್ಚು ಮೊಕದ್ದಮೆಗಳು ಕೆನಡಾದ ಇನ್ನೆಡೆಗಳಲ್ಲೂ ಮತ್ತು ಸುಮಾರು 20 ಅಮೆರಿಕದಲ್ಲೂ ವರದಿಯಾಗಿವೆ.” ಪ್ರತಿ ತಿಂಗಳು ಲೈಂಗಿಕವಾಗಿ ದುರುಪಯೋಗಮಾಡುವುದು ಏರುತ್ತಿರುವ ವರದಿಗಳೊಂದಿಗೆ— ಈಗಾಗಲೇ ಪಾದ್ರಿಗಳನ್ನು ಮತ್ತು ಚರ್ಚಿಗೆ ಸಂಬಂಧಿತ ಇತರರನ್ನು ಒಳಗೊಂಡ ಸುಮಾರು 17ರಷ್ಟು ಆಪಾದಿಸಲ್ಪಟ್ಟ ಮೊಕದ್ದಮೆಗಳು ಇವೆ—ತಮ್ಮ ಪಾದ್ರಿಗಳ ಮೇಲಿನ ಅನೇಕರ ವಿಶ್ವಾಸ ಮತ್ತು ಭರವಸವು ಅಲುಗಾಡಿಸಲ್ಪಟ್ಟಿದೆ. ಹೆಚ್ಚು ಮನಕ್ಷೋಭೆಗೊಳಿಸುವ ಸಂಗತಿಯೆಂದರೆ ಚರ್ಚಿನಲ್ಲಿ ಲೈಂಗಿಕ ದೂಷಣೆಯ ಅಪವಾದವು ದೀರ್ಘಕಾಲದಿಂದ ಇರುವುದು ಮಾತ್ರವಲ್ಲ, ಆದರೆ ಸಾಮಾನ್ಯವಾಗಿ ಅದನ್ನು ಮುಚ್ಚಿಹಾಕಲಾಗುತ್ತದೆ ಮತ್ತು ಕೆಲವೊಮ್ಮೆ ಅಪರಾಧಿ ಪಾದ್ರಿಯನ್ನು ಇನ್ನೊಂದು ಚರ್ಚಿಗೆ ವರ್ಗಾಯಿಸಲಾಗುತ್ತದೆ, ಮತ್ತು ಅಲ್ಲಿ ಹೊಸ ಅಪರಾಧಗಳನ್ನು ಕೆಲವೊಮ್ಮೆ ಗೈಯಲಾಗುತ್ತದೆ. ವೇದಿಯ ಹುಡುಗರಾಗಿ ಸೇವೆ ಸಲ್ಲಿಸಲು, ಕೆಲವೊಮ್ಮೆ ಪಾಪನಿವೇದನೆ ಮಾಡುವಲ್ಲಿ ತಮ್ಮ ಮಕ್ಕಳು ಪ್ರವೇಶಿಸುವುದನ್ನು ಹೆತ್ತವರು ನಿರಾಕರಿಸಿ ತಮ್ಮ ಪ್ರತಿಕ್ರಿಯೆ ತೋರಿಸಿರುತ್ತಾರೆ. “ಒಂದಾನೊಂದು ಕಾಲದಲ್ಲಿ ರೋಮನ್ ಕೊರಳ ಪಟ್ಟಿಯನ್ನು ಹೆಮ್ಮೆಯಿಂದ ಧರಿಸಲಾಗುತ್ತಿತ್ತು, ಈಗ ಲಜ್ಜೆಗೀಡು ಮಾಡುವ ಮತ್ತು ಸಂಶಯದ ಒಂದು ಉಗಮವಾಗಿದೆ,” ಎಂದು ಸೈಂಟ್ ಜೋನ್ ಕಥೋಲಿಕ್ ಶಾಲಾ ಮಂಡಲಿಯ ವೈಸ್ ಚೇಯರ್‌ಮ್ಯಾನ್, ಪೌಲ್ ಸ್ಟೇಪಲ್‌ಟನ್ ಹೇಳುತ್ತಾರೆ. “ಇತ್ತೀಚೆಗಿನ ಘಟನೆಗಳು ಎಲ್ಲಾ ಪಾದ್ರಿಗಳನ್ನು ಮಾತಾಡಲ್ಪಡುವ ಇಲ್ಲವೇ ಮೌನವಾಗಿ ತೋರಿಸಲ್ಪಡುವ ಸಂಶಯದ ಕೆಳಗಡೆ ಹಾಕಿದೆ. ಸಂದೇಶ ಹೀಗೆಂದು ಭಾಸವಾಗುತ್ತದೆ: ನಿನ್ನನ್ನು ಮತ್ತು ದೇವರನ್ನು ಬಿಟ್ಟರೆ ಬೇರೆ ಯಾರನ್ನು ನೀನು ನಂಬಸಾಧ್ಯವಿಲ್ಲ.”
“ನಿರ್ಮೂಲದ ಕಡೆಗೆ ಅಪ್ಪಳಿಸುವಿಕೆ”
“ಆಫ್ರಿಕನ್ ಆನೆಗಳು ನಿರ್ಮೂಲದೆಡೆಗೆ ಅಪ್ಪಳಿಸುತ್ತಿವೆ, ದಂತಕ್ಕಾಗಿರುವ ತಣಿಯಲಾರದ ಲೋಕ ವ್ಯಾಪಾರದ ಬಲಿಪಶುವಾಗಿದೆ,” ಎಂದು ಸಾಯನ್ಸ್ ಪತ್ರಿಕೆ ಹೇಳುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಆಫ್ರಿಕಾದ ಆನೆಗಳ ಸಂಖ್ಯೆಯು ಶೇಕಡಾ 40ರಷ್ಟು ಇಳಿದಿದೆ—13 ಲಕ್ಷದಿಂದ 7,50,000ಕ್ಕೆ ಇಳಿದಿದೆ. ಈಗ ಹತಿಸುವ ವೇಗದಲ್ಲಿ ಮುಂದುವರಿದರೆ, 50 ವರ್ಷಗಳಲ್ಲಿ ಆನೆಗಳೆಲ್ಲಾ ಪೂರ್ಣವಾಗಿ ನಿರ್ಮೂಲವಾಗುತ್ತವೆ. ಆದರೆ ಅದಕ್ಕಿಂತಲೂ ಹೆಚ್ಚಿನದ್ದು ಇದೆ. “ದಂತದ ತೃಷೆಯು ಈ ಜಾತಿಗಳ ಅನುಪಾತ ಸಂಖ್ಯೆಯಲ್ಲಿ ಮತ್ತು ಅದರ ಸಾಮಾಜಿಕ ರಚನೆಯಲ್ಲಿ ಏರುಪಾರುಗಳನ್ನು ಉಂಟುಮಾಡಿದೆ,” ಎಂದು ಸಾಯನ್ಸ್ ಅನ್ನುತ್ತದೆ. ಕೆಲವು ಪ್ರದೇಶಗಳಲ್ಲಿ ಗಂಡಾನೆಗಳ ಸಂಖ್ಯೆಯು ಶೇಕಡಾ 5ಕ್ಕಿಂತಲೂ ಕಡಿಮೆಯಾಗಿದ್ದು ಗರ್ಭಧಾರಣೆಮಾಡಿಕೊಳ್ಳಲು ಬಯಸುವ ಆನೆಗಳಿಗೆ ಗಂಡಾನೆ ಸಿಗದೆ, ಅವರ ಸಂಖ್ಯೆಯಲ್ಲಿ ಇನ್ನಷ್ಟು ಅವನತಿಯಾಗಿದೆ. ಮತ್ತು ದೊಡ್ಡ ಗಾತ್ರದ ಗಂಡಾನೆಗಳು ಇಲ್ಲದಿರುವುದರಿಂದ, ಅಷ್ಟೇ ಪ್ರಮಾಣದ ದಂತವನ್ನು ಪಡೆಯಲು ಹೆಚ್ಚು ಆನೆಗಳನ್ನು ಕೊಲ್ಲಬೇಕಾಗುತ್ತದೆ. ಅವರ ತಾಯಂದಿರು ಹತಿಸಲ್ಪಡುವುದರಿಂದ, ಸಾಯುವಂತಹ ಆನೆಗಳಲ್ಲಿ ನಾಲ್ಕನೆಯ ಒಂದು ಭಾಗ ಅನಾಥವಾದ ಮರಿಯಾನೆಗಳು ಹಸಿವಿನಿಂದಲೇ ಸಾಯುತ್ತವೆ. ವಾಣಿಜ್ಯದೋಪಾದಿ ದಂತವ್ಯಾಪಾರವನ್ನು ಪೂರ್ಣವಾಗಿ ನಿಷೇಧಿಸಲು ಪ್ರಸ್ತಾಪನೆ ಇರುವುದಾದರೂ. ಬರಲಿರುವ ನಿಷೇಧದ ಸುದ್ದಿಯು, ಕಳ್ಳ ಬೇಟೆಗಾರರು ತಮ್ಮ ಕೊನೆ ನಿಮಿಷದ ಹತಿಸುವಿಕೆಯಲ್ಲಿ ತೀವ್ರವಾಗಿ ತೊಡಗುವಂತೆ ಮಾಡಬಹುದೆಂದು ಭಯಪಡಲಾಗಿದೆ.
ವಿಫುಲತೆಯ ನಡುವೆಯೂ ಹಸಿವೆ
ಕಡಿಮೆಪಕ್ಷ 50 ಕೋಟಿ ಜನರು ಹಸಿವೆಯಿಂದಿದ್ದಾರೆ ಎಂದು ಸಂಯುಕ್ತ ರಾಷ್ಟ್ರ ಸಂಘದ ಕಾರ್ಯನಿಯೋಗದ ಜಾಗತಿಕ ಆಹಾರ ಕೌನ್ಸಿಲಿನ 15ನೆಯ ವಾರ್ಷಿಕ ಸಮ್ಮೇಳನದಲ್ಲಿ ತಿಳಿಸಲಾಯಿತು. ಬೇಕಾಗಿರುವುದಕ್ಕಿಂತಲೂ ಶೇಕಡಾ 10 ಪಟ್ಟು ಆಹಾರವನ್ನು ಉತ್ಪಾದಿಸುವುದಾದರೂ, ಲಕ್ಷಗಟ್ಟಲೆ ಜನರು ಹಸಿವೆಯಿಂದಿರುವಂತೆ ಬಿಡಲ್ಪಟ್ಟಿರುತ್ತಾರೆ, ಕಾರಣವೇನಂದರೆ ನಿರಾತಂಕತೆ, ಅಜಾಗರೂಕತೆ ಮತ್ತು ಅಸಾಮರ್ಥ್ಯತೆ. ಕೌನ್ಸಿಲಿನ ಅಧ್ಯಕ್ಷ ಮೆಕ್ಷಿಕೊದ ಎಡ್ವರ್ಡೊ ಪೆಸ್ಕಿರಾರಿಗನುಸಾರ ಲೋಕವ್ಯಾಪಕ ಹಸಿವೆಯನ್ನು ಅಂತ್ಯಗೊಳಿಸಲು “ಶಾಂತಿಯು ಮೂಲಭೂತ ಆವಶ್ಯಕತೆಯಾಗಿದೆ;” ಅನೇಕ ರಾಷ್ಟ್ರಗಳು ಯುದ್ಧದಲ್ಲಿ ತೊಡಗಿದ್ದು “ತಮ್ಮ ವಿರಳವಾಗಿ ರುವ ಸಂಪತ್ತು “ಆಹಾರ ಕಾರ್ಯಕ್ರಮಗಳಿಗೆ ತೊಡಗಿಸುವುದರ ಬದಲು ಯುದ್ಧ ಶಸ್ತ್ರಗಳಿಗೆ ಹೋಗುತ್ತದೆ.” ನ್ಯೂನ್ಯ ಪೋಷಣೆಯ ಅಧಿಕಾಂಶ ಜನರು ಏಶಿಯಾ ಮತ್ತು ಆಫ್ರಿಕಾದಲ್ಲಿ ಜೀವಿಸುತ್ತಾರೆ. ಐದು ವರ್ಷಕ್ಕಿಂತ ಕಡಿಮೆಯ ವಯಸ್ಸಿನ ಸುಮಾರು ಒಂದು ಕೋಟಿ 40 ಲಕ್ಷದಷ್ಟು ಮಕ್ಕಳು ಪ್ರತಿ ವರ್ಷ ಸಾಯುತ್ತಾರೆ ಯಾಕಂದರೆ ನ್ಯೂನ್ಯ ಪೋಷಣೆಯೊಟ್ಟಿಗೆ ಅತಿಭೇದಿ ಮತ್ತು ಅಂಟುರೋಗಗಳಿಂದಾಗಿಯೇ ಎಂದು ಕೌನ್ಸಿಲ್ ಹೇಳಿತು. (g89 11/8)
ಏಯ್ಡ್ಸ್ ಸಾಂಕ್ರಮಿಕ ವಿಷದ ವಿರಳ ರೂಪ
ವಿಶೇಷವಾಗಿ ಪಶ್ಚಿಮ ಆಫ್ರಿಕಾದಲ್ಲಿ ತೋರಿಬಂದ ಏಯ್ಡ್ಸ್ ಸಾಂಕ್ರಮಿಕ ವಿಷದ ಎರಡನೆಯ ರೂಪ ನ್ಯೂಯೋರ್ಕ್ ನಗರದ ಅನೇಕ ರಕ್ತ ನಮೂನೆಗಳಲ್ಲಿ ಕಾಣಬರಲಾರಂಭಿಸಿದೆ. ಅಮೆರಿಕದ ಸರ್ವಸಾಮಾನ್ಯ ಏಯ್ಡ್ಸ್ ಪರೀಕ್ಷಣೆಗಳಲ್ಲಿ ಈ ಹೊಸ ರೂಪದ ಪ್ರತಿವಿಷದ ವಸ್ತು, ಹೆಚ್‌ಐವಿ-2 ಕ್ರಮಾನುಗತವಾಗಿ ತೋರಿಬರಲು ತಪ್ಪಿದೆ. ಇದು ಎರಡು ಗುಂಪಿನ ಜನರಲ್ಲಿ ಅನಿಶ್ಚಯತೆಗೆ ಕಾರಣವಾಗಿದೆ: ಸರ್ವಸಾಮಾನ್ಯ ಪರೀಕ್ಷಣೆಯಿಂದ ಈ ರೋಗ ತಟ್ಟಿದೆ ಎಂದು ತಟ್ಟಿದವರಿಗೆ ತೋರಿಸದಿರುವುದು ಮತು ರಕ್ತ ಸಂಚಯನಿಧಿಗಳನ್ನು ಇಟ್ಟು ಕೊಳ್ಳುವವರಿಗೆ ತೋರಿಸದಿರುವುದು, ಅವರು ದಾನವಾಗಿ ಪಡೆದ ರಕ್ತವು ಸುರಕ್ಷಿತವೋ ಅಲ್ಲವೋ ಎಂದು ಅವರು ನಿಶ್ಚಯವಾಗಿ ಹೇಳಶಕ್ತರಲ್ಲ. ರೋಗಲಕ್ಷಣಗಳು ತೋರಿಬರುವ ಮೊದಲು ಈ ಹೊಸರೂಪವು ಶರೀರದಲ್ಲಿ ಹೆಚ್ಚು ಕಾಲ “ಮೌನವಾಗಿ” ಉಳಿಯ ಬಹುದು ಮತ್ತು ಏಯ್ಡ್ಸ್‌ನ ಮೊದಲ ಸಾಂಕ್ರಾಮಿಕ ವಿಷ, ಹೆಚ್‌ಐವಿ-1 ಅಷ್ಟೇ ಅಂಟುಜಾಡ್ಯವಾಗಿರ ಸಾಧ್ಯತೆಯಿದೆ. ದ ನ್ಯೂ ಯೋರ್ಕ್ ಟೈಮ್ಸ್‌ಗನುಸಾರ ಹೆಚ್‌ಐವಿ-1 “ಹತ್ತು ಲಕ್ಷ ಯಾ ಅದಕ್ಕಿಂತಲೂ ಹೆಚ್ಚು ಅಮೆರಿಕನರಿಗೆ ತಟ್ಟಿದೆ ಎಂದು ಅಂದಾಜಿಸಲಾಗಿದ್ದು, ಮೇ 31, (1989) ತನಕ ವರದಿ ಮಾಡಲಾದ 97,193 ಏಯ್ಡ್ಸ್ ರೋಗಿಗಳಲ್ಲಿ 56,468 ಜನರು ಸತ್ತಿದ್ದಾರೆ.” (g89 10/8)
“ಮದೋನ್ಮತ್ತ”ನಾಗಲು ಯಾವುದಕ್ಕೂ ಸೈ
ಮಾದಕೌಷಧದ ದುರುಪಯೋಗಿಗಳು ರಾಸಾಯನಿಕವಾಗಿ ಮದೋನ್ಮತ್ತರಾಗಲು ಯಾವುದೇ ಅತಿಯಾದ ಕೃತ್ಯಗಳನ್ನು ಮಾಡಲು ಸಿದ್ಧರಾಗಿರುತ್ತಾರೆ. ಇದನ್ನು ಉದಾಹರಿಸಲು ಮೂರು ಉಲ್ಲೇಖಗಳನ್ನು ಕೊಡಲಾಗಿದೆ.
◼ “ಕ್ರಾಕ್” (ಸಿಡಿತ) ಎಂದು ಪರಿಚಿತವಾಗಿರುವ ಮದ್ದಿನಿಂದ ಸಿಡಿಯಲ್ಪಡುವ, ಸಂಕ್ಷಿಪ್ತವಾದ ಸ್ಫೋಟನಾತ್ಮಕ ಅನುಭವದ ನಂತರ ಹಿಂಬಾಲಿಸಿ ಬರುವ ನರಗಳ ಮಂದಗೊಳಿಸುಕೆಯನ್ನು ಹಿಮ್ಮುಖಗೊಳಿಸಲು ನ್ಯೂಯೋರ್ಕ್ ನಗರದ ಮಾದಕೌಷಧ ಉಪಯೋಗಿಗಳು ಒಂದು ವಿಧಾನವನ್ನು ಕಂಡು ಹಿಡಿದಿದ್ದಾರೆ. ಅವರು ಕ್ರಾಕ್‌ನ್ನು, ಒಂದು ವಿಧದ ಕೋಕೆಯ್ನ್, ಹಿರೋಯಿನ್‌ನೊಟ್ಟಿಗೆ ಬೆರಸುತ್ತಾರೆ ಮತ್ತು ಅದರ ಸಂಮಿಶ್ರಣವನ್ನು ಪೈಪಿನ ಮೂಲಕ ಸೇದುತ್ತಾರೆ. ಹಿರೋಯಿನ್‌ನಿಂದ ಬರುವ ಮದೋನ್ಮತ್ತತೆ ಕೆಲವು ಗಂಟೆಗಳ ತನಕ ಉಳಿಯುತ್ತದೆ ಮತ್ತು ಕ್ರಾಕ್‌ನಿಂದ ಬರುವ ಸ್ಫೋಟನವನ್ನು ಮೃದುಗೊಳಿಸುತ್ತದೆ. ಹಿರೋಯಿನ್‌ನ ಬಳಕೆಯು ಕಡಿಮೆಯಾಗುತ್ತಾ ಇದೆ ಯಾಕಂದರೆ ಸೂಜಿಗಳನ್ನು ಬಳಸುವುದಕ್ಕೆ ಅನೇಕ ಎಳೆಯರು ಹಿಮ್ಮೆಟ್ಟುತ್ತಾರೆ. ಆದರೆ ಈಗ ಇಡೀ ಒಂದು ಹೊಸ ಗಿರಾಕಿ ಸಮೂಹವು ಹಿರೋಯಿನ್‌ನ ದಾಸ್ಯತ್ವಕ್ಕೆ ಒಂದು ದಿನ ಬಲಿಯಾಗ ಬಹುದು.
◼ ಮೆಕ್ಷಿಕೋದ ಜೊರೌಸ್‌ನಲ್ಲಿ, ಸ್ಥಳೀಕ ಮಕ್ಕಳು ಮುನ್ಸಿಪಾಲಿಟಿಯ ಕಸಕೊಂಪೆಯಲ್ಲಿದ್ದ ಅಪರಿಚಿತ ಬಂಡೆಗಲ್ಲುಗಳನ್ನು ಆಘ್ರಾಣಿಸುತ್ತಿರುವುದನ್ನು ವೀಕ್ಷಿಸಲಾಯಿತು. ಈ ಬಂಡೆಗಲ್ಲುಗಳು ಘನೀಕೃತವಾದ ವಿಷಕಾರೀ ಹಿಪ್ಪೆಯಾಗಿದ್ದು, ಮೆಕ್ಷಿಕೋದಲ್ಲಿರುವ ಅಮೆರಿಕಾದ ಕಂಪೆನಿಗಳು ಕಾನೂನುರೀತ್ಯವಾಗಿ ಹೊರಚೆಲ್ಲಿದ ಕೊಂಪೆಯೆಂದು ಆಪಾದಿಸಲಾಗಿದೆ. ಈ ಬಂಡೆಗಲ್ಲುಗಳನ್ನು ಆಘ್ರಾಣಿಸುವುದರಿಂದ, ಮರವಜ್ರದಂತಹ ಅಂಟನ್ನು ಆಘ್ರಾಣಿಸುವುದರಿಂದ ಉಂಟಾಗುವ ಅದೇ ಅಪಾಯಗಳು ಎಳೆಯರಲ್ಲಿ ಉತ್ಪನ್ನವಾಗಬಹುದು: ಮೂತ್ರಪಿಂಡಗಳಿಗೆ, ಪಿತ್ತಜನಕಾಂಗಕ್ಕೆ ಮತ್ತು ಮೆದುಳಿಗೆ ಅಪಾಯವಾಗುವ ಸಾಧ್ಯತೆಗಳಿವೆ ಮತ್ತು ನೀರ್ವೀರ್ಯನಾಗುವ ಯಾ ಒಂದಾನೊಂದು ದಿನ ವಿಕಾರತೆಯ ಮಕ್ಕಳನ್ನು ಉತ್ಪಾದಿಸುವ ಅಪಾಯಗಳು ಒಳಗೂಡಿವೆ.
◼ ಸಾನ್ ಫ್ರಾನ್ಸಿಸ್ಕೋ ಎಕ್ಷಾಮಿನರ್‌ಗಳಿಗನುಸಾರ ಕೆಲವರು ಮದೋನ್ಮತ್ತರಾಗಲು ಕಾಡುಕಪ್ಪೆಯನ್ನು ಕೂಡಾ ನೆಕ್ಕುತ್ತಾರೆ. ಬುಫೊಟಿನೊಯಿನ್ ಎಂಬ ರಾಸಾಯನಿಕ ದ್ರವ್ಯವು ಕೆಲವು ನಿರ್ದಿಷ್ಟ ಕಾಡುಕಪ್ಪೆಗಳಲ್ಲಿ ಸ್ರವಿಸಲ್ಪಡುತ್ತದೆ. ಅದನ್ನು ಕೊಂಚ ಪ್ರಮಾಣದಲ್ಲಿ ಸೇವಿಸಿದರೆ, ಅದು ನರಗಳನ್ನು ಬಾಧಿಸುತ್ತದೆ ಮತ್ತು ಭ್ರಾಂತಿಗೊಳಿಸುತ್ತದೆ. ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅದು ಅಪಾಯಕರವಾಗಿ ವಿಷಕಾರೀ ಮತ್ತು ಔಷಧ ತಜ್ಞರಿಂದ ಇತರ ಕಾನೂನು ಬಾಹಿರ ಔಷಧಗಳಾದ ಎಲ್‌ಎಸ್‌ಡಿ ಮತ್ತು ಹಿರೋಯಿನ್‌ನೊಟ್ಟಿಗೆ ವರ್ಗೀಕರಿಸಲಾಗಿದೆ. ಇದು ಒಂದು ಸಾಮಾನ್ಯ ಪದ್ಧತಿಯಾಗಿಲ್ಲವಾದರೂ, ದಕ್ಷಿಣ ಅಮೆರಿಕಾ, ಅಮೆರಿಕಾ ಮತ್ತು ಆಸ್ಟ್ರೇಲಿಯದಂತಹ ವಿಭಿನ್ನ ಪ್ರದೇಶಗಳಲ್ಲಿ ಜನರು ಕಾಡುಕಪ್ಪೆಯ ಚರ್ಮದಿಂದ ಮದೋನ್ಮತ್ತರಾಗಲು ಪ್ರಯತ್ನಿಸುತ್ತಾರೆಂದು ವರದಿಮಾಡಲ್ಪಟ್ಟಿದೆ.
ಆಹಾರವನ್ನು ಹಾಳುಮಾಡುವುದು
ಯುರೋಪಿನಲ್ಲಿ ಆಹಾರವನ್ನು ನಾಶಮಾಡುವುದು ಒಂದು ದೀರ್ಘಕಾಲದ ಧೋರಣೆಯಾಗಿರುತ್ತದೆ. ಹಣ್ಣು ಹಂಪಲು ಮತ್ತು ತರಕಾರಿ ಪಲ್ಯಗಳ ಧಾರಣೆಯನ್ನು ಸ್ಥಿರವಾಗಿ ಇಡಲು ಯುರೋಪಿನ ಕಾಮನ್ ಮಾರ್ಕೆಟ್ ಸಂಸ್ಥೆಯು ಹೆಚ್ಚಿರುವ ಉತ್ಪಾದನೆಯನ್ನು ಖರೀದಿಸುತ್ತದೆ. ಆದರೆ ಯುರೋಪಿನ ಲೆಕ್ಕಪತ್ರ ಪರಿಶೋಧನಾ ಕಛೇರಿಯ ಇತ್ತೀಚೆಗಿನ ವರದಿಗನುಸಾರ, ಇಟೆಲಿ, ಫ್ರಾನ್ಸ್, ನೆದರ್‌ಲೆಂಡ್ಸ್ ಮತ್ತು ಗ್ರೀಸಿನಿಂದ ಖರೀದಿಸಿದ ಮಿಗತೆಗಳಲ್ಲಿ ಶೇಕಡಾ 84 ಪಟ್ಟು—ಪ್ರತಿವರ್ಷ 25 ಲಕ್ಷದಷ್ಟು ಟನ್ನುಗಳಷ್ಟು—ನಾಶಮಾಡಲಾಯಿತು. ಉಳಿದಿದ್ದರಲ್ಲಿ “ಶೇಕಡಾ 10 ಪಾಲು ಜಾನುವಾರುಗಳ ಆಹಾರವಾಗಿ ಮತ್ತು ಶೇಕಡಾ 5 ಪಾಲು ಮದ್ಯಸಾರವಾಗಿ ಮತ್ತು ಕೇವಲ ಶೇಕಡಾ 1 ಪಾಲು ಮಾತ್ರ ಬಡವರಿಗೆ ಧರ್ಮಾರ್ಥವಾಗಿ ವಿತರಿಸಲಾಯಿತು,” ಎಂದು ಜರ್ಮನ್ ವಾರ್ತಾಪತ್ರ ವೆಟಿರೌವುರ್ ಜೈಟುಂಗ್ ಹೇಳಿದೆ. (g89 10/22)