ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 4/8 ಪು. 22-24
  • ಜಾರವರಿಂದ ಕಲಿಯುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಾರವರಿಂದ ಕಲಿಯುವುದು
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅನಾಗರಿಕ ಜನರೋ?
  • ಜಾರವರ ಜೀವಿತ ವಿಧಾನ
  • ವಿಫುಲತೆಯ ಒಂದು ಮನೆ
  • ಭವಿಷ್ಯವು ಏನಾಗಿದೆ
  • ವಿಶಿಷ್ಟ ರುಚಿಯ ಒಂದು ಏಡಿ
    ಎಚ್ಚರ!—1995
  • ಭೂಮಿಯ ಮೇಲಿನ ಬಹೂಪಯೋಗಿ ಕಾಯಿಗಳಲ್ಲೊಂದು
    ಎಚ್ಚರ!—2003
  • “ಮನುಷ್ಯನ ಅತಿ ಪ್ರಯೋಜನಕಾರಿಯಾದ ಮರ”
    ಎಚ್ಚರ!—1994
  • ಕ್ಲೇಶಮುಕ್ತ ಪ್ರಮೋದವನಕ್ಕಾಗಿ ಅನ್ವೇಷಣೆ
    ಎಚ್ಚರ!—1997
ಎಚ್ಚರ!—1991
g91 4/8 ಪು. 22-24

ಜಾರವರಿಂದ ಕಲಿಯುವುದು

ಭಾರತದ ಎಚ್ಚರ! ಬಾತ್ಮಿದಾರನಿಂದ

ನಿಮ್ಮ ರಕ್ತದೊತ್ತಡ ಬಹಳ ಹೆಚ್ಚಿದೆ ಮತ್ತು ನಿಮ್ಮ ನರಗಳು ಭಗ್ನಗೊಂಡಿವೆ. ಒಂದು ಉಷ್ಣವಲಯದ ಒಂದು ದ್ವೀಪಕ್ಕೆ ಪಯಣ ಬೆಳಸಿರಿ ಮತ್ತು ವಿಶ್ರಾಂತಿ ಪಡೆಯಿರಿ!” ಆಧುನಿಕ ನಾಗರಿಕತೆಯ ಬಿಗುಪುಗಳ ಮತ್ತು ಒತ್ತಡಗಳ ಕೆಳಗೆ ನೀವು ಇರುವುದಾದರೆ, ಇದೊಂದು ನಿಮ್ಮ ಆವಶ್ಯಕತೆಯ ಯೋಗ್ಯ ಸಲಹೆಯಾಗಿರಬಹುದು. ವೈದ್ಯಕೀಯ ಕಾರಣಗಳಿಗಲ್ಲದಿದ್ದರೂ, ಅಂತಹ ಆಕರ್ಷಕ ಸಲಹೆಗಳನ್ನು ಯಾರು ಪ್ರತಿರೋಧಿಸಬಲ್ಲರು? ಹಾಗಿರುವುದಾದರೆ, ಜಾರವರ ನಿವಾಸಸ್ಥಾನವಾದ ಅಂಡಮಾನ್‌ ದ್ವೀಪಗಳಿಗೆ ಭೇಟಿಕೊಟ್ಟು ಯಾಕೆ ಅದೆಲ್ಲದರಿಂದ ದೂರವಿರಬಾರದು?

ಅಂಡಮಾನ್‌ ದ್ವೀಪಗಳೋ? ಜಾರವರೋ? ಅವರ ಕುರಿತು ನೀವೆಂದೂ ಕೇಳಿರದಿದ್ದರೆ, ಪೇಚಾಡಬೇಡಿರಿ, ಯಾಕಂದರೆ ಅದು ಲೋಕದ ಪ್ರವಾಸಗಳ ಪ್ರಚಲಿತವಾಗಿರುವ ಮಾರ್ಗದಿಂದ ಬಹುದೂರದಲ್ಲಿದೆ. ನೀವೊಂದು ಭೂಪಟವನ್ನು ನೋಡುವುದಾದರೆ, ಅಂದಮಾನ್‌ ದ್ವೀಪಗಳನ್ನು ನೀವು ಬಂಗಾಲ ಕೊಲ್ಲಿಯಲ್ಲಿ ಭಾರತ ಮತ್ತು ಮೈಯನ್ಮಾರ್‌ನ (ಮೊದಲಿನ ಬರ್ಮಾ) ನಡುವೆ ಇದೆ. ಈ ದ್ವೀಪಗಳ ಸಮೂಹದಲ್ಲಿ ಸುಮಾರು 300 ದ್ವೀಪಗಳಿದ್ದು, ಇದು ಭಾರತ ಗಣರಾಜ್ಯದ ಭೂಪ್ರದೇಶದ ತುದಿಯಾಗಿದೆ.

ಅನಾಗರಿಕ ಜನರೋ?

ಈ ದ್ವೀಪಗಳು ನೀಗ್ರೋಕಲ್ಪಜಾತಿಯ (ನಿಗ್ರೀಟೋ) ನಾಲ್ಕು ಕುಲಗಳ ನಿವಾಸಸ್ಥಾನವಾಗಿದೆ—ಗ್ರೇಟ್‌ ಅಂದಮಾನೀಯರು, ಜಾರವರು, ಸೆಂಟಿನೆಲಿಸ್‌ ಜನರು ಮತ್ತು ಒಂಗೀಗಳು. ನಿಗ್ರೀಟೋಸ್‌ ಅಂದರೆ “ಪುಟ್ಟ ನೀಗ್ರೋಗಳು,” ಒಂದಾನೊಂದು ಕಾಲದಲ್ಲಿ ಆಗ್ನೇಯ ಏಶ್ಯಾ ಮತ್ತು ಓಷಿಯಾನಿಕ (ಪಾಲಿನೀಷಿಯ ಸಾಗರ ದ್ವೀಪಗಳ)ದ ಹೆಚ್ಚಿನ ಪ್ರದೇಶಗಳಲ್ಲಿ ನಿವಾಸಿತರಾಗಿದ್ದ ಪ್ರಾಚೀನ, ಕಪ್ಪು ಚರ್ಮದ ಪಿಗ್ಮಿ ಕುಲದವರ ಉಳಿಕೆಯವರು ಎಂದೆಣಿಸಲಾಗುತ್ತದೆ. ಅವರು ಪೂರ್ಣವಾಗಿ ವಿಂಗಡಿಸಲ್ಪಟ್ಟ ಕಾರಣ, “ಶಿಲಾಯುಗದ ಮನುಷ್ಯನ” ಅಪ್ಪಟ ಶೇಷಜನಾಂಗವೆಂದು ಯಾ ಒಮ್ಮೆ ಈ ದ್ವೀಪಗಳನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಬ್ರಿಟಿಷ್‌ ಸೇನೆಯ ಲೆಪ್ಟಿನೆಂಟ್‌ ಕೊಲ್‌ಬ್ರೂಕ್‌ ಹೇಳಿದಂತೆ “ಲೋಕದ ಅತಿ ಕನಿಷ್ಠ ನಾಗರಿಕತೆಯದ್ದು” ಎಂದು ಕರೆಯಲ್ಪಡುತ್ತಾರೆ.

1858ರಲ್ಲಿ ಬ್ರಿಟಿಷರು ಅಲ್ಲಿ ಒಂದು ಶಾಶ್ವತ ಕಾರಾಗೃಹದ ವಸತಿಯನ್ನು ಸ್ಥಾಪಿಸಿದಾಗ, ಅಲ್ಲಿಯ ಅಂದಮಾನದವರು ಸಾವಿರಾರು ಸಂಖ್ಯೆಯಲ್ಲಿದ್ದರು. ಬಲುಬೇಗನೆ, ಬಾಹ್ಯ ರೋಗಗಳ—ದಡಾರ, ಫರಂಗಿಹುಣ್ಣು (ಸಿಫಿಲಿಸ್‌), ಮತ್ತು ಇನ್ನಿತರ—ಒಟ್ಟಿಗೆ ಆಫೀಮ್‌ ಮತ್ತು ಮದ್ಯಪಾನದ ಚಟಗಳು ಈ ಕುಲದ ಪುರುಷರನ್ನು ಧ್ವಂಸಗೊಳಿಸಿತು. ಈಗ ಕೆಲವರೇ ಅವರಲ್ಲಿ ಉಳಿದಿರುತ್ತಾರೆ, ಎಲ್ಲ ಮಿಶ್ರ ರಕ್ತವಾಗಿದ್ದು, ಚಿಕ್ಕ ಸ್ಟ್ರೆಯ್ಟ್‌ ದ್ವೀಪದಲ್ಲಿದ್ದಾರೆ. ಒಂಗೀಗಳು ಕೂಡಾ ತದ್ರೀತಿಯ ವಿಧಿಯಿಂದ ಬಾಧಿತರಾಗಿದ್ದಾರೆ.

ಜಾರವರು ಮತ್ತು ಸೆಂಟಿನಿಲಿಸ್‌ ಜನರು ಹಲವಾರು ವರ್ಷಗಳ ತನಕ ಬಾಹ್ಯ ಜನರೊಂದಿಗಿನ ಸಂಪರ್ಕ ಮತ್ತು ಅವರಿಂದ ಶೋಷಣೆಯಾಗುವುದನ್ನು ಪ್ರತಿರೋಧಿಸಿದರು. ಅವರು ವಿರೋಧವು ಅವರನ್ನು ಬೇರ್ಪಟ್ಟವರಾಗಿ ಇಟ್ಟು ಕೊಳ್ಳಲು ಸಹಾಯ ಮಾಡಿತು, ಆದರೂ ಅನಾಗರಿಕರು ಮತ್ತು ರಕ್ತಪೀಪಾಸು ನರಭಕ್ಷಕರೆಂಬ ಖ್ಯಾತಿಯನ್ನು ಪಡೆಯಿತು. ಕೆಲವೇ ವರ್ಷಗಳ ಹಿಂದೆ, ಅಂಡಮಾನ್‌ ದ್ವೀಪದ ಮುಖ್ಯನಗರವಾದ ಪೋರ್ಟ್‌ಬ್ಲೇರ್‌ನಲ್ಲಿನ ಮಾನವ ಶಾಸ್ತ್ರವಿಭಾಗದ ಅಧಿಕಾರಿಗಳು ಆ ಬುಡಕಟ್ಟಿನ ಒಬ್ಬನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರ ನಾವೆಗೆ ಬಾಣಗಳ ಸುರಿಮಳೆಯಾಗಿ, ಒಂದು ಛಾಯಾಚಿತ್ರಗಾರನ ಕಾಲಿಗೆ ತಗಲಿತು.

ಇಷ್ಟೊಂದು ವಿರೋಧಿಗಳನ್ನಾಗಿ ಅವರನ್ನು ಮಾಡಿದ್ದು ಯಾವುದು? ಕಳೆದ ಶತಕದ ಕೊನೆಯಲ್ಲಿ ಈ ದ್ವೀಪಗಳ ಮೇಲ್ವಿಚಾರಣೆ ಮಾಡುತ್ತಿದ್ದ ಬ್ರಿಟಿಷ್‌ ಅಧಿಕಾರಿಯೊಬ್ಬನಾದ ಎಂ.ವಿ.ಪೊರ್ಟ್‌ಮೆನ್‌ ವಿಶ್ಲೇಷಿದ್ದು: “ನಮ್ಮ ಆಗಮನದ ನಂತರ, ಕರಾವಳಿಯ ಅಂದಮಾನದ ಜನರನ್ನು ಉದ್ರೇಕಿಸಿ, ಅವರನ್ನು ಸತತವಾಗಿ ಕಿರುಕುಳ ಕೊಡಲು ನಾವು ಆರಂಭಿಸುವ ತನಕ ಜಾರವರು ನಮ್ಮೆಡೆಗೆ ಶಾಂತರೂ ನಿರಾಕ್ರಮಣಿಗಳೂ ಆಗಿದ್ದು, ನಮಗೆ ಯಾವುದೇ ಆತಂಕ ಕೂಡ ಮಾಡಲಿಲ್ಲ. ಕೆಲವು ವರ್ಷಗಳ ಗಲಭೆಯ ನಂತರ, ಜಾರವರ ಜೀವನವು ಬಹಳ ಕಠಿಣಕರವಾಗಿ ಪರಿಣಮಿಸಿತು ಮತ್ತು ಪ್ರತೀಕಾರವಾಗಿ ಅವರು ನಮ್ಮ ಮೇಲೆ ಧಾಳಿ ಮಾಡಲು ಆರಂಭಿಸಿದರು. ಜಾರವರು ವಿರೋಧಿಗಳಾಗಿರುವುದಾದರೆ, ಅದು ನಮ್ಮ ತಪ್ಪು.”

ಜಾರವರ ಜೀವಿತ ವಿಧಾನ

ಜಾರವರು ಹೆಚ್ಚು ಕಡಿಮೆ ಅಲೆಮಾರಿಗಳು. ಅವರು ಸುಮಾರು 30ರಷ್ಟು ಸಂಖ್ಯೆಯಲ್ಲಿ ಜೀವಿಸುತ್ತಾರೆ ಮತ್ತು ನೆರೆಕರೆಯ ಕೆಲವು ಗುಂಪುಗಳು ಸೇರಿ ಒಂದು ಕುಲವಾಗುತ್ತದೆ. ಪ್ರತಿಯೊಂದು ಗುಂಪು ತನ್ನದೇ ನಿಶ್ಚಿತ ನಿಗದಿ ಮಾಡಿದ ಗಡಿಯೊಳಗೆ ಚಲಿಸುತ್ತದೆ ಮತ್ತು ಇತರ ಗುಂಪುಗಳ ಕಾರ್ಯಕ್ಷೇತ್ರದಲ್ಲಿ ಅತಿಕ್ರಮಣ ಮಾಡುವುದಿಲ್ಲ. ಹುಲುಸಾಗಿರುವ, ಉಷ್ಣವಲಯದ ಪರಿಸರದಲ್ಲಿ ಜೀವಿಸುತ್ತಾ, ಅವರು ವ್ಯವಸಾಯವನ್ನಾಗಲಿ, ಸಾಕುಪ್ರಾಣಿಗಳನ್ನು ಪಾಲಿಸುವುದನ್ನಾಗಲಿ ಮಾಡುವುದಿಲ್ಲ. ಅವರ ಜೀವಿತವು — ಬೇಟೆಗಾಗಿ ಮತ್ತು ಮೀನು ಹಿಡಿಯುವುದಕ್ಕಾಗಿರುವ—ಅವರ ಬಿಲ್ಲು ಬಾಣಗಳ ಮತ್ತು ಈಟಿಗಳ ಆಧರಿತವಾಗಿತ್ತು.

ಅವರ ಜೀವಿತ ವಿಧಾನದ ಒಂದು ಭಾಗವು ಆಹಾರವನ್ನು ಸರ್ವಸಮಾನವಾಗಿ ಹಂಚಲಾಗುತ್ತಿತ್ತು. ಗುಂಪಿನಲ್ಲಿ ಒಬ್ಬನು ಆಮೆಯನ್ನು ಹಿಡಿದರೆ, ಪ್ರತಿಯೊಬ್ಬನಿಗೆ ಆಮೆ ಇರುತ್ತದೆ. ಒಬ್ಬನು ಹಂದಿಯನ್ನು ಹಿಡಿದರೆ, ಪ್ರತಿಯೊಬ್ಬನಿಗೆ ಹಂದಿ ಇರುತ್ತದೆ. ಅವರ ಸಾಮಾಜಿಕ ಅಂತಸ್ತಿನಲ್ಲಿ, ಇರುವವರು ಮತ್ತು ಇಲ್ಲದವರು ಎಂಬ ವರ್ಗಬೇಧ ಇಲ್ಲ. “ಜಾರವರನ್ನು ಬಡವರೆಂದು ಎಣಿಸಲಾಗುವುದಿಲ್ಲ, ಅವರ ಅಗತ್ಯತೆಗಳೆಲ್ಲಾ ವಿಫುಲತೆಯಲ್ಲಿ ಇವೆ,” ಎಂದು ಮಾನವ ಶಾಸ್ತ್ರಜ್ಞರಲ್ಲೊಬ್ಬನು ಹೇಳಿದನು.

ಜಾರವರಲ್ಲಿ ಒಂದು ಅಸಾಮಾನ್ಯ ಸಂಗತಿಯೇನಂದರೆ, ಬೆಂಕಿಯನ್ನು ಆರಂಭಿಸುವುದು ಹೇಗೆ ಎಂದು ಲೋಕದಲ್ಲೆಲ್ಲಾ ತಿಳಿಯದಿರುವ ಕೆಲವೇ ಜನಾಂಗಗಳಲ್ಲಿ ಅವರೂ ಇದ್ದಾರೆ. ಗುಡುಗುಮಿಂಚುಗಳ ಸಮಯದಲ್ಲಿ ಕಾಡುಗಳಿಗೆ ಮಿಂಚಿನಿಂದ ಬೆಂಕಿ ಹತ್ತಿದಾಗ ಅವರು ತಮ್ಮ ಬೆಂಕಿಯನ್ನು ಪಡೆಯುತ್ತಾರೆ. ಮತ್ತು ಅವರು ತಮ್ಮ ಬೆಂಕಿಯನ್ನು ಬಹಳ ಜಾಗರೂಕತೆಯಿಂದ ಕಾಪಾಡುತ್ತಾರೆ ಮತ್ತು ಅವರು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವಾಗ ಅದನ್ನು ಕೊಂಡೊಯ್ಯುತ್ತಾರೆ.

ಆಧುನಿಕ ನಾಗರಿಕತೆಯ ಒಂದು ಕೇಡು ಅಂದರೆ ನೈತಿಕ ಮೌಲ್ಯತೆಗಳ ಕುಸಿತವೇ. ಮೇಲೆ ಉಲ್ಲೇಖಿಸಿದ ಅಧಿಕಾರಿಯು ಹೇಳಿದ್ದು: “ಜಾರವರ ನಡುವೆ ವಿವಾಹದ ಮೊದಲು ಲೈಂಗಿಕಕ್ರಿಯೆ ಇರುವುದಿಲ್ಲ. ವ್ಯಭಿಚಾರವು ಅತಿ ವಿರಳ. ತಪ್ಪಿತಸ್ಥನು ಅತಿ ಕಠಿಣವಾದ ಸಾಮಾಜಿಕ ಅಸಮ್ಮತಿಯನ್ನು ಎದುರಿಸುತ್ತಾನೆ. ಅವನು ಎಷ್ಟೊಂದು ಕೆಟ್ಟವನೆಂಬ ಭಾವನೆ ಹೊಂದುತ್ತಾನೆಂದರೆ, ಅವನಿಗೆ ಹಿಂದೆ ಬರುವ ಭಾವನೆ ಬರುವ ತನಕ, ಕೆಲವು ಸಮಯದ ತನಕ ಅವನು ತನ್ನ ಸಮಾಜವನ್ನು ತ್ಯಜಿಸಿ ಹೊರಟು ಹೋಗುತ್ತಾನೆ.” ನಿಮ್ಮ “ನಾಗರಿಕತೆಯ” ಸಮಾಜದಲ್ಲಿ ಅಂತಹ ತೀವ್ರವಾದ ನೈತಿಕತೆಯ ಪ್ರಜ್ಞೆಯಿಂದ ಜೀವಿಸುತ್ತಾರೋ?

ಆಧುನಿಕ ನಾಗರಿಕತೆಯು ಅಧಿಕ ರಕ್ತದೊತ್ತಡ, ಹೃದ್ರೋಗ, ಕ್ಯಾನ್ಸರ್‌ ಮತ್ತು ತದ್ರೀತಿಯ ವಿಷಯಗಳಿಗೆ ಪರ್ಯಾಯ ಶಬ್ದವಾಗಿದೆ. ಜಾರವರು ಅಂತಹ ರೋಗಗಳಿಂದ ಬಾಧಿತವಾಗಿಲ್ಲ. ಆಕಾರದಲ್ಲಿ ಸಣ್ಣಗಾತ್ರದವರಾಗಿರುವುದಾದರೂ,—ಪುರುಷರು ಐದು ಅಡಿಗಳಿಗಿಂತ ಹೆಚ್ಚು ಎತ್ತರವಿಲ್ಲದವರಾದರೆ, ಹೆಂಗಸರು ಅದಕ್ಕಿಂತಲೂ ಕಡಿಮೆ—“ಅಸ್ತಿತ್ವದಲ್ಲಿರುವ ಅತಿ ಪರಿಪೂರ್ಣವಾದ ಪುಟ್ಟ ವ್ಯಕ್ತಿಗಳು” ಅಗಿರುತ್ತಾರೆ. ಅವರ ಸ್ವಂತ ಪರಿಸರದಲ್ಲಿ ಅವರು ರೋಗಗ್ರಸ್ತರಾಗುವುದು ಇಲ್ಲವೇ ಎನ್ನಬಹುದು.

ಧರ್ಮವು ಅವರ ಜೀವನದಲ್ಲಿ ಪ್ರಾಮುಖ್ಯವಾಗಿಲ್ಲವಾದರೂ, ಜಾರವರಲ್ಲಿ ಸತ್ತವರಿಗಾಗಿ ಕೆಲವು ನಿರ್ದಿಷ್ಟ ಸಂಸ್ಕಾರಗಳು ಇವೆ. ಒಬ್ಬನು ಸತ್ತಾಗ, ದೇಹವು ಹೂಣಲ್ಪಡುತ್ತದೆ ಮತ್ತು ಮೃತನಿಂದ ನಿವಾಸಿಸಲ್ಪಟ್ಟ ಗುಡಿಸಲು ತ್ಯಜಿಸಲ್ಪಡುತ್ತದೆ. ಕೆಲವು ತಿಂಗಳುಗಳ ನಂತರ, ದೇಹವನ್ನು ಅಗೆದು ಹೊರಗೆ ತೆಗೆಯಲಾಗುತ್ತದೆ. ತಲೇಬುರುಡೆ, ಯಾ ಹೆಚ್ಚಿನ ಸಂದರ್ಭಗಳಲ್ಲಿ ಕೆಳಗಿನ ದವಡೆಯನ್ನು ಅವನ ಸಮೀಪಬಂಧುವಿನಿಂದ ಧರಿಸಲಾಗುತ್ತದೆ. ಕೆಲವು ಸಮಯಗಳ ನಂತರ ಇತರ ಸಂಬಂಧಿಗಳು ಸರದಿ ಪ್ರಕಾರ ಧರಿಸುತ್ತಾರೆ. ಈ ಪದ್ಧತಿಯು ಮೃತರಿಗೆ ತೋರಿಸುವ ಗೌರವದ ಒಂದು ಸೂಚಕ ಎಂದು ಎಣಿಸಲ್ಪಡುತ್ತದೆ ಮತ್ತು ಸತ್ತವರ ಕುರಿತು ಅವರಿಗಿರುವ ಒಂದು ಕಲ್ಪನೆಯೊಂದಿಗೆ ಸ್ಪಷ್ಟವಾಗಿ ಜೋಡಿಸಲ್ಪಟ್ಟಿದೆ. ಒಂದು ಆತ್ಮವಿದೆ, ಅದು ಜೀವದ ವಾಹಕವಾಗಿದ್ದು ಇನ್ನೊಂದು ಲೋಕದಲ್ಲಿ ಜೀವಿಸುತ್ತಾ ಇರುತ್ತದೆ ಎಂದು ಜಾರವರು ನಂಬುತ್ತಾರೆ. ಆತ್ಮವು ಅವರಲ್ಲಿ ಇನ್ನೂ ಆಸಕ್ತಿ ತೆಗೆದು ಕೊಳ್ಳುತ್ತದೆ, ಆದುದರಿಂದ ಅದಕ್ಕೆ ರೇಗಿಸುವ ಯಾವುದನ್ನೂ ಅವರು ಮಾಡುವುದಿಲ್ಲ.

ವಿಫುಲತೆಯ ಒಂದು ಮನೆ

ಸಮೃದ್ಧಿಯಿಂದ ತುಂಬಿರುವ ಒಂದು ಮನೆಯಲ್ಲಿ ಜಾರವರು ಸಂತೋಷಿಸುತ್ತಾರೆ. ದ್ವೀಪವನ್ನು ಅಲಂಕರಿಸುವ ಅನೇಕ ಸುಂದರವಾದ ಗಿಡಗಳಲ್ಲಿ ಉಜ್ವಲವರ್ಣದ ಚಿತ್ರವಿಚಿತ್ರ ಹೂವು ಬಿಡುವ ಗಿಡ (ಆರ್ಕಿಡ್‌), ಕೆಲವೊಂದು ಈ ದ್ವೀಪದಲ್ಲಿ ಮಾತ್ರ ಕಾಣಸಿಗುತ್ತವೆ. 1880ರಲ್ಲಿ ಪ್ರಾದೇಶಿಕ ಸಸ್ಯವಿಜ್ಞಾನಿ ಡಾ. ಎನ್‌.ಪಿ.ಬಾಲಕೃಷ್ಣನ್‌ಗನುಸಾರ, ಈ ಆರ್ಕಿಡ್‌ಗಳ ಕೆಲವು ವಿಧಗಳು “ಅಪರೂಪದ ವಜ್ರಗಳಂತೆ” “ಬಹಳ ದುಬಾರಿ ಬೆಲೆಯನ್ನು ಇಂಗ್ಲೆಂಡಿನಲ್ಲಿ” ತರುತ್ತಿದ್ದವು.

ಒಬ್ಬ ಜರ್ಮನ್‌ ವಿಜ್ಞಾನಿಯು ಸೆಂಟಿನಲ್‌ ದ್ವೀಪದ ಮೇಲೆ ಇತ್ತೀಚೆಗೆ ಒಂದು ಕಳ್ಳ ಏಡಿಯನ್ನು ಒಂದು ಬೆರಳು ತೆತ್ತು ಕಂಡು ಕೊಂಡನು. ಅಂದಮಾನ್‌ ದ್ವೀಪಗಳ ಪೋರ್ಟ್‌ ಬ್ಲೇರ್‌ನಲ್ಲಿನ ಸರಕಾರೀ ಮತ್ಸ್ಯ ಖಾತೆಯ ಪ್ರದರ್ಶನದಲ್ಲಿ ಕಳ್ಳ ಏಡಿಯ ಕೆಳಗಿನ ವಿವರಣೆ ಹೀಗಿತ್ತು: ‘ತೆಂಗಿನ ಬೆಳೆಗೆ ಅಪಾಯಕಾರಿ. ತೆಂಗಿನ ಮರಗಳನ್ನು ಏರುತ್ತದೆ. ಬೆಳೆದ ಹಣ್ಣನ್ನು ಕೀಳುತ್ತದೆ. ಅದರ ಗಟ್ಟಿಯಾದ ಕಾಲಿನ ಮೊನೆಯುಗುರಗಳಿಂದ ಕಾಯಿಯ ಚಿಪ್ಪನ್ನು ಒಡೆದು ತೆರೆಯುತ್ತದೆ. ಒಳಗಿನ ಸಿಹಿ ನೀರನ್ನು ಕುಡಿದು, ಕಾಯಿಯನ್ನು ತಿನ್ನುತ್ತದೆ.’ ಇದೆಲ್ಲವನ್ನೂ ಈ ಏಡಿ ನಿಜವಾಗಿ ಮಾಡುವುದರ ಕುರಿತು ಇತರರು ಪ್ರಶ್ನೆಯೆಬ್ಬಿಸಿರುತ್ತಾರೆ. ಏಡಿಯು ಮರವೇರುವುದನ್ನು ಅಂಗೀಕರಿಸುವುದಾದರೂ, ಠೀಕಾಕಾರರು ಈಗಾಗಲೇ ಹಾಳಾಗಿ ನೆಲದ ಮೇಲೆ ಬಿದ್ದ ತೆಂಗಿನಕಾಯಿಗಳನ್ನು ಮಾತ್ರ ತೆರೆಯುತ್ತದೆ ಮತ್ತು ತಿನ್ನುತ್ತದೆ ಎಂದು ಹೇಳುತ್ತಾರೆ.

ಭವಿಷ್ಯವು ಏನಾಗಿದೆ

ಆಧುನಿಕ ನಾಗರಿಕತೆಯ ಪ್ರಭಾವದ ಕೆಳಗೆ ಜಾರವರು, ಗ್ರೇಟ್‌ ಅಂದಮಾನೀಯರು ಮತ್ತು ಒಂಗೀಗಳು ಹೋದ ಮಾರ್ಗದಲ್ಲಿ ಹೋಗುತ್ತಾ—ಅಂದರೆ ಮೆಲ್ಲಮೆಲ್ಲನೆ ಇಳಿಮುಖಗೊಳ್ಳುತ್ತಾ, ಪ್ರಾಯಶಃ ಕ್ರಮೇಣ ಇಲ್ಲವಾಗುತ್ತಾರೋ? ಸಮಯವು ಮಾತ್ರವೇ ಹೇಳಬಲ್ಲದು. ಆದರೆ ಹೊರಗಿನ ಜನರು ಬರುವ ಮೊದಲಿನ ಹಲವಾರು ಶತಮಾನಗಳಿಂದ, ತಮ್ಮ ದೇವ-ದತ್ತ ಮನೆಯ ಜಾಗ್ರತೆಯನ್ನು ಅವರು ತೆಗೆದು ಕೊಳ್ಳುತ್ತಿದ್ದರು ಮತ್ತು ನಿಸ್ವಾರ್ಥ ರೀತಿಯಲ್ಲಿ ಅದರ ಒದಗಿಸುವಿಕೆಗಳ ಬಳಕೆಯನ್ನು ಮಾಡುತ್ತಿದ್ದರು. ಅವರದ್ದು ಖಂಡಿತವಾಗಿಯೂ, ಒಂದು ಸರಳ, ಶಾಂತಿಯುಕ್ತ ಜೀವಿತ ವಿಧಾನವಾಗಿತ್ತು. ಜಾರವರಿಂದ ಕೆಲವನ್ನು ನಾವು ಕಲಿಯಬಲ್ಲೆವೋ? (g90 2/22)

[ಪುಟ 24 ರಲ್ಲಿರುವಚಿತ್ರ]

ಮರ ಹತ್ತುವ ಈ ಏಡಿಯು ತೆಂಗಿನಕಾಯಿಗಳನ್ನು ತಿನ್ನುತ್ತದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ