ವಿಶಿಷ್ಟ ರುಚಿಯ ಒಂದು ಏಡಿ
ಸಾಲೊಮನ್ ಐಲೆಂಡ್ಸ್‌ನ ಎಚ್ಚರ! ಸುದ್ದಿಗಾರರಿಂದ
ತೆಂಗಿನಕಾಯಿ ಏಡಿ—ಅದು ವಿಚಿತ್ರವಾಗಿ ಧ್ವನಿಸುತ್ತದೋ?a ನ್ಯೂ ಜಾರ್ಜಿಯದ ದ್ವೀಪಗಳನ್ನು, ಸಾಲೊಮನ್ ದ್ವೀಪಗಳ ಭಾಗವನ್ನೊಳಗೊಂಡು ಕೇವಲ ಕೆಲವೊಂದು ಸ್ಥಳಗಳಲ್ಲಿ ಇದು ಕಂಡುಬರುತ್ತದೆ.
“ತೆಂಗಿನಕಾಯಿ ಏಡಿಗಳು? ಹೌದು, ಅವು ಇಲ್ಲಿವೆ, ಆದರೆ ನೀವು ಅವುಗಳನ್ನು ನೋಡಲು ಇರುಳಿನಲ್ಲಿ ಹೋಗಬೇಕು,” ಎಂದು ಸ್ಥಳಿಕ ಜನರು ವಿವರಿಸುತ್ತಾರೆ. ಈ ಇರುಳು ಚಟುವಟಿಕೆಯ ಏಡಿಗಳು ಹಗಲು ವೇಳೆಯನ್ನು ದಟ್ಟವಾದ ಅಡವಿಯ ಕುರುಚಲು ಸಸ್ಯಗಳಲ್ಲಿ, ಕೊಳೆತ ಮರಗಳ ಆಳವಾದ ನಡುಭಾಗದ ಕಂದರಗಳಲ್ಲಿ ಕಳೆಯುತ್ತವೆ. ಇರುಳಲ್ಲಿ ಹೊರಬಂದು, ಅವು ಆಹಾರವನ್ನು ತೆಗೆದುಕೊಳ್ಳುತ್ತವೆ, ಹೌದು, ತಮ್ಮ ಬಲಿಷ್ಠ ಚಿಮುಟಾಂಗಗಳಿಂದ ಸಿಪ್ಪೆಗಳನ್ನು ಅವು ಸಿಗಿದುಹಾಕುತ್ತಾ ತೆಂಗಿನಕಾಯಿಗಳನ್ನು ತಿನ್ನುತ್ತವೆ, ಆದರೆ ಅವು ವಿವಿಧ ಮೃದುಲ ಹಸಿರು ಸಸ್ಯವನ್ನು ಸಹ ತಿನ್ನುತ್ತವೆ. ಈ ಗುಪ್ತ ಜೀವಿಯನ್ನು ನೋಡಲಿಕ್ಕೆ, ಬಿದ್ದುಹೋದ ಮರಗಳ ಕೊಳೆಯುತ್ತಿರುವ ಕಾಂಡದ ಕಪ್ಪು ಕಂದರಗಳ ಪ್ರವೇಶದಲ್ಲಿ ಬಿಟ್ಟುಹೋದ, ಸೀಳಿರುವ ಸಿಪ್ಪೆಗಳ ಸೂಚಕ ಗುರುತುಗಳಿಗಾಗಿ ಒಬ್ಬನು ನೋಡತಕ್ಕದ್ದು.
ಜೂನ್ ಮತ್ತು ಜುಲೈ ಅವಧಿಯಲ್ಲಿ ಏಡಿಗಳು ನೆಲದೊಳಗೆ ಹುದುಗಿಕೊಳ್ಳುತ್ತವೆ, ಮತ್ತು ಅಲ್ಲಿ ತಮ್ಮ ಹೊರ ಚಿಪ್ಪನ್ನು ತೊರೆದಾದ ಅನಂತರ, ಗೋಚರಕ್ಕೆ ಬರುವ ಮುನ್ನ ಒಂದು ನವೀನವಾದ, ದೊಡ್ಡದಾದ ರಕ್ಷಾಕವಚವನ್ನು ಅವು ವರ್ಧಿಸುತ್ತವೆಂದು ದ್ವೀಪ ನಿವಾಸಿಗಳು ವಿವರಿಸುತ್ತಾರೆ. ಕೆಲವು ತೆಂಗಿನಕಾಯಿ ಏಡಿಗಳು 50 ವರ್ಷಗಳ ತನಕ ಜೀವಿಸುವುದರಿಂದ, ಅವು ತಲಪಸಾಧ್ಯವಿರುವ ಭಾರಿ ಗಾತ್ರಗಳನ್ನು ಒಬ್ಬನು ಗಣ್ಯಮಾಡಬಲ್ಲನು. ನಾನು ಪ್ರೇಕ್ಷಿಸಿದಂತೆಯೇ, ಸುಮಾರು 50 ಸೆಂಟಿಮೀಟರ್‌ಗಳಷ್ಟು ಉದ್ದದ ಕಾಲೊಂದಿಗೆ ಏಡಿಯೊಂದು ತನ್ನ ಬಿಲದಿಂದ ಹೊರಬಂತು.b
ಅಸಂತೋಷಕರವಾಗಿ, ಬಿಲದ ಪ್ರಾರಂಭವನ್ನು ಗುರುತಿಸುವ ನೆಲದಲ್ಲಿನ ವೃತ್ತಾಕಾರದ ಕುಸಿತವನ್ನು ಯಾರು ಗುರುತಿಸಬಲ್ಲನೋ, ಆ ಬೇಟೆಗಾರನ ವಿರುದ್ಧ ಅವುಗಳ ಆಚ್ಛಾದನೆಯ ಬಿಲದ ಸುರಕ್ಷಣೆಯ ತೋರಿಕೆಯು ರಕ್ಷಣೆಯಾಗಿರುವುದಿಲ್ಲ. ಕ್ಷಿಪ್ರಗತಿಯಲ್ಲಿ ಆ ಅರಕ್ಷಿತ ಜೀವಿಯು ನಿರ್ಧರಿಸಿದ ರಸಜ್ಞನ ಮೇಜಿಗಾಗಿ ಹೊರಗೆ ಎಳೆಯಲ್ಪಡುತ್ತದೆ. ಈ ಏಡಿ ಏಷ್ಯಾದ ಭೋಜನಾಲಯಗಳಲ್ಲಿ, ವಿಶೇಷವಾಗಿ ಅದರಲ್ಲಿರುವ ಮೃದುಲ, ದುಂಡನೆಯ, ಸುಲಭಬೇಧ್ಯ ಹಿಂಗಡೆ ತೋಳುಗಳ ಮಾಂಸಕ್ಕಾಗಿ ಅತಿ ಮೌಲ್ಯವುಳ್ಳದ್ದಾಗಿದೆ.
ಹೀಗೆ ಇಲ್ಲಿ ಸಾಲೊಮನ್ ಐಲೆಂಡ್ಸ್‌ನಲ್ಲಿ, ತೆಂಗಿನಕಾಯಿ ಏಡಿಯ ನಿರ್ನಾಮದ ಸಂಭವನೀಯತೆಯು, ನಿಜವಾಗಿಯೂ ಚಿಂತನೆಯ ವಿಷಯವಾಗಿದೆ. ಮೀನುಗಾರಿಕಾ ಇಲಾಖೆಯು ಮೊಟ್ಟೆಯಿಡುವ ಹೆಣ್ಣು ಜಾತಿಗಳ ಸಂಖ್ಯೆಯ ಮೇಲೆ ಮತ್ತು ರಫ್ತು ಮಾಡಸಾಧ್ಯವಿರುವ ಏಡಿಯ ಗಾತ್ರದ ಮೇಲೆ ಪರಿಮಿತಿಗಳನ್ನಿಡುತ್ತದೆ. ಎಲ್ಲಿಂದ ಏಡಿಗಳನ್ನು ತಮ್ಮ ಸ್ವಾಭಾವಿಕ ನೆಲೆಯೊಳಗೆ ಬಿಡಸಾಧ್ಯವೋ, ಆ ಸಾಕುಪ್ರದೇಶಗಳನ್ನು ನಿರ್ಮಿಸುವಂತೆ ಕೆಲವರು ಸಲಹೆ ನೀಡಿದ್ದಾರೆ. ಆದರೆ ಅವುಗಳ ಸಂತಾನವೃದ್ಧಿ ಮಾಡುವ ಸ್ವಭಾವಗಳ ಕುರಿತು ಸಾಕಷ್ಟು ತಿಳಿದಿಲ್ಲವಾದುದರಿಂದ, ಹೆಚ್ಚಿನ ಸಂಶೋಧನೆಯ ಆವಶ್ಯಕತೆಯಿರುವುದು.
ತೆಂಗಿನಕಾಯಿ ಏಡಿಯ ಕ್ಷೀಣಿಸುತ್ತಿರುವ ಸಂಖ್ಯೆಯು, ಒಂದು ಸಮತೆಯ ಸನ್ನಿವೇಶವನ್ನು ಸ್ಥಾಪಿಸಲಿರುವ ಒಂದು ಲೋಕ ವ್ಯವಸ್ಥೆಯ ಆವಶ್ಯಕತೆಯನ್ನು ಹೆಚ್ಚು ಒತ್ತಿ ಹೇಳುತ್ತದೆ. ಅದರ ಕೆಳಗೆ, ಸೃಷ್ಟಿಕರ್ತನ ಭೂ ಜೀವಿಗಳ ವಿಸ್ಮಯಕರ ಅನುಬಿಂಬದಲ್ಲಿ ಪ್ರತಿಯೊಂದು, ಕೀರ್ತನೆ 148:5-10ರ ನೆರವೇರಿಕೆಯಲ್ಲಿನ ತನ್ನ ಭಾಗವನ್ನು ವಹಿಸಬಲ್ಲದು: “ಅವು ಯೆಹೋವನ ನಾಮವನ್ನು ಸುತ್ತಿಸಲಿ; ಆತನು ಅಪ್ಪಣೆಕೊಡಲು ಅವು ಉಂಟಾದವು . . . ಭೂಮಂಡಲದಿಂದ ಯೆಹೋವನಿಗೆ ಸುತ್ತಿಯುಂಟಾಗಲಿ . . . ಎಲ್ಲಾ ಮೃಗಪಶುಪಕ್ಷಿ ಕ್ರಿಮಿಕೀಟಗಳೂ.”
[ಅಧ್ಯಯನ ಪ್ರಶ್ನೆಗಳು]
a ಕಳ್ಳ ಏಡಿ ಎಂದು ಸಹ ಗುರುತಿಸಲ್ಪಡುತ್ತದೆ.
b ಪ್ರೌಢ ತೆಂಗಿನಕಾಯಿ ಏಡಿಗಳು, ತಲೆಯಿಂದ ಬಾಲದ ವರೆಗೆ ಸುಮಾರು ಒಂದು ಮೀಟರ್ ಉದ್ದವಾಗಿದ್ದು, ಸುಮಾರು 17 ಕಿಲೋಗ್ರಾಮ್‌ಗಳಷ್ಟು ತೂಕದ್ದಾಗಿರುತ್ತವೆ.