ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 11/8 ಪು. 28
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಧರ್ಮಾಚರಿಸದ ಕ್ಯಾಥಲಿಕರು
  • ಸಲಿಂಗಿಕಾಮದ ನೆಪ
  • ಕಾರ್‌ ಅಪಹರಣ
  • ಪಕ್ಷಪಾತದ ಸ್ಪರ್ಧೆ?
  • ಬಾಡಿಗೆಗೆ ಕೋತಿಗಳು
  • ಅವರ ಕಿವಿಗಳಲ್ಲಿ ‘ಕಣ್ಣುಗಳನ್ನು’ ಹಾಕುವುದು
  • ಅತ್ಯಂತ ಹೆಚ್ಚು ಬೆಲೆಯ ವಿಮಾನ
  • ನಾಯಿಗಳು ಬಣ್ಣ ಕಾಣುತ್ತವೆಯೆ?
  • ಭಾರತದಲ್ಲಿ ಏಡ್ಸ್‌
  • ಪೂರಣದ ಕುರಿತು ಪುನರಾಲೋಚನೆ
  • “ಹುಸಿ ಮೌಲ್ಯಗಳು”
  • ತಡೆದು ಹಿಡಿಯಲ್ಪಟ್ಟಿರುವ ಕೊಲೆಗಾರ
    ಎಚ್ಚರ!—1992
  • ಮುದ್ದಾಡ ಬೇಕೆನಿಸುವ ಕೋಆಲದಿಂದ ಮೋಹಿತರಾಗುವುದು
    ಎಚ್ಚರ!—1992
  • ಲೋಕವನ್ನು ಗಮನಿಸುವುದು
    ಎಚ್ಚರ!—1993
  • ಜಗತ್ತನ್ನು ಗಮನಿಸುವುದು
    ಎಚ್ಚರ!—1994
ಇನ್ನಷ್ಟು
ಎಚ್ಚರ!—1991
g91 11/8 ಪು. 28

ಜಗತ್ತನ್ನು ಗಮನಿಸುವುದು

ಧರ್ಮಾಚರಿಸದ ಕ್ಯಾಥಲಿಕರು

ಪ್ಯಾರಿಸಿನ ಲ ಫಿಗೆರೊ ವೃತ್ತಪತ್ರಿಕೆಗನುಸಾರ “ಫ್ರೆಂಚರ ಮಧ್ಯೆ ಧಾರ್ಮಿಕಾರಾಧನೆ ಸಲೀಸಾಗಿ ಬೀಳುತ್ತಿದೆ” ಎಂದು ಇತ್ತೀಚಿನ ಒಂದು ಅಧ್ಯಯನ ತಿಳಿಸಿತು. ಫ್ರೆಂಚ್‌ ಜನಸಂಖ್ಯೆಯಲ್ಲಿ 82 ಪ್ರತಿಶತ ಕ್ಯಾಥಲಿಕರೆಂದು ಹೇಳಿಕೊಂಡರೂ ಇವರಲ್ಲಿ 12 ಪ್ರತಿಶತ ಮಾತ್ರ, ಹೆಚ್ಚಿನವರು ಮುದುಕಿಯರು, ಚರ್ಚ್‌ ಆರಾಧನೆಗೆ ಕ್ರಮವಾಗಿ ಹಾಜರಾಗುತ್ತಾರೆ. ಇದಲ್ಲದೆ, ಕ್ಯಾಥಲಿಕರೆಂದು ಹೇಳಿಕೊಳ್ಳುವವರಲ್ಲಿ 44 ಪ್ರತಿಶತ ತಾವು “ಧರ್ಮಾಚರಿಸದ ಕ್ಯಾಥಲಿಕರು” ಎಂದು ಹೇಳುತ್ತಾರೆ. ಇವರಲ್ಲಿ 83 ಪ್ರತಿಶತ “ತಾವು ಚರ್ಚಿನೊಳಗೆ ಕಾಲಿಡುವುದಿಲ್ಲ” ಎಂದು ಒಪ್ಪುತ್ತಾರೆ. ಫ್ರೆಂಚರು ಧರ್ಮಾಚರಿಸದ ಕ್ಯಾಥಲಿಕರ ಒಂದು ರಾಷ್ಟ್ರವೆಂದು ಕಾಣುತ್ತದೆಂದು ಲಿ ಫಿಗೆರೊ ಗಮನಿಸಿತು. ಅವರ ಧಾರ್ಮಿಕ ಸದಸ್ಯತನ, ಕ್ರಿಯಾಶೀಲ ನಂಬಿಕೆಯ ಬದಲು, ದೀಕ್ಷಾಸ್ನಾನ, ವಿವಾಹ, ಶವಸಂಸ್ಕಾರ ಮುಂತಾದ ಸಾಮಾಜಿಕ ವಾಡಿಕೆಗಳಿಂದ ಎದ್ದು ಬರುತ್ತದೆಂದು ಕಾಣುತ್ತದೆ. (g90 6/22)

ಸಲಿಂಗಿಕಾಮದ ನೆಪ

ಬಲಾತ್ಕಾರ ಸಂಭೋಗ, ಅಸಭ್ಯ ಆಘಾತ, ಸರಳ ಆಘಾತ ಮತ್ತು ನ್ಯಾಯ ವಿರುದ್ಧವಾದ ನಿರ್ಬಂಧ—ಈ ಆಪಾದನೆಗಳಿದ್ದ ಯುವಕನನ್ನು ಅನಿರೀಕ್ಷಿತ ಸಾಕ್ಷಿ ಕೊಟ್ಟ ಹೇಳಿಕೆಯು ನೆಪವನ್ನು ಒದಗಿಸಿದರ್ದಿಂದ ಕೋರ್ಟುಗಳು ಬಿಡುಗಡೆ ಮಾಡಿದವು. ಈ ಸಾಕ್ಷಿ ಕೊಟ್ಟ ವ್ಯಕ್ತಿ ಅಮೆರಿಕದ ಪೆನ್ಸಿಲೇನ್ವಿಯದ ಪಿಟ್ಸ್‌ಬರ್ಗ್‌ ನಗರದ ಡಯೊಸಿಸಿಗೆ ನೇಮಕವಾಗಿದ್ದ ಕ್ಯಾಥಲಿಕ್‌ ಪಾದ್ರಿ. ನ್ಯಾಷನಲ್‌ ಕ್ಯಾಥಲಿಕ್‌ ರಿಪೋರ್ಟರ್‌ ವೃತ್ತಪತ್ರಿಕೆಗನುಸಾರ, “ಆಪಾದಿತನೂ ತಾನೂ ಪ್ರೇಮಿಗಳಾಗಿದ್ದೆವೆಂದೂ ಬಲಾತ್ಕಾರ ಸಂಭೋಗ ನಡೆದಾಗ ತಾವು ಒಟ್ಟಿಗಿದ್ದೆವೆಂದೂ ಪುರೋಹಿತನು ಸಾಕ್ಷಿ ಕೊಟ್ಟನು.” ಈ ಬೆಚ್ಚಿಸುವ ಸಲಿಂಗೀಕಾಮದ ಬಹಿರಂಗ ಒಪ್ಪಿಕೆಯ ಪರಿಣಾಮವಾಗಿ ಆ ಸಲಿಂಗೀಕಾಮಿ ಪುರೋಹಿತನನ್ನು ಅನಿಶ್ಚಿತ ರಜೆಯಲ್ಲಿ ಕಳುಹಿಸಲಾಯಿತು. (g90 7/8)

ಕಾರ್‌ ಅಪಹರಣ

ಎಷ್ಟೊ ಕಾರುಗಳಲ್ಲಿ ಕಳ್ಳತನದ ವಿರುದ್ಧ ವ್ಯವಸ್ಥೆಗಳಿರುವುದರಿಂದ ಕಳ್ಳರು ಈಗ ಇನ್ನೊಂದು ಮಾರ್ಗವನ್ನು ಹಿಡಿಯುತ್ತಿದ್ದಾರೆ. ದಕ್ಷಿಣ ಆಫ್ರಿಕದ ಜೊಹ್ಯಾನೆಸ್‌ಬರ್ಗಿನ ಸ್ಯಾಟರ್ಡೆ ಸ್ಟಾರ್‌ ಹೇಳುವುದು: “ಜನರಿಲ್ಲದ ಕಾರುಗಳ ಕಿಟಿಕಿ ಒಡೆದು ‘ತಂತಿ ಜೋಡಿಸಿ’ ಅದನ್ನು ಡ್ರೈವ್‌ ಮಾಡಿಕೊಂಡು ಹೋಗುವ ಬದಲು ಕಾರು ಕಳ್ಳರು ಈಗ, ಅನನುಮಾನಿಗಳಾದ ವಾಹನಗಾರರು ಪ್ರಯಾಣಿಸುತ್ತಿರುವಾಗ ಯಾ ತಮ್ಮ ವಾಹನಗಳಲ್ಲಿ ಕುಳಿತಿರುವಾಗ ವಾಹನಗಳನ್ನು ಅಪಹರಿಸಲು ಇಷ್ಟಪಡುತ್ತಾರೆ.” ಕಳ್ಳರು ನೀಲ ಬೆಳಕನ್ನು ಥಳಥಳಿಸುವ ವಾಹನಗಳಲ್ಲಿ ಪೋಲೀಸ್‌ ಆಫೀಸರರಂತೆ ನಟಿಸಿದ್ದುಂಟು. ತಮ್ಮ ಗುರಿಹಲಗೆಗಳು ವಾಹನ ನಿಲ್ಲಿಸಿದಾಗ ಅವರು ಬಂದೂಕು ತೋರಿಸಿ ಕಾರನ್ನು ಅಪಹರಿಸುತ್ತಾರೆ. ಇತರ ಕಾರುಗಳನ್ನು ಡ್ರೈವರರು ಟ್ರ್ಯಾಫಿಕ್‌ ಲೈಟಿಗಾಗಿ ಗಾಡಿ ನಿಲ್ಲಿಸಿದಾಗ ಯಾ ಗಾಡಿಯ ಬೀಗ ಕಳಚಿದಾಗ ಅಪಹರಿಸಲಾಗಿದೆ. ವ್ಯಾಪಾರ ವಾಹನಗಳನ್ನು ಅವುಗಳಲ್ಲಿರುವ ಸರಕುಗಳಿಗಾಗಿ ಯಾ ವಾಹನಗಳಿಗಾಗಿಯೆ ಅಪಹರಣ ಮಾಡಲಾಗಿದೆಯೆಂದು ಪೋಲೀಸ್‌ ವರದಿ ತಿಳಿಸುತ್ತದೆ. ವಾಹನಗಾರರು ತಮ್ಮ ಬಾಗಲಿಗೆ ಬೀಗ ಹಾಕಿಡುವಂತೆಯೂ ಕಿಟಿಕಿಗಳನ್ನು ತೀರಾ ತೆರೆದು ಇಡದಂತೆಯೂ ಲೈಟ್‌ ಯಾ ಸಾಪ್ಟ್‌ ಸಂಕೇತಗಳಿಗಾಗಿ ನಿಲ್ಲುವಾಗ ಹೆಚ್ಚು ಎಚ್ಚರಿಕೆ ವಹಿಸುವಂತೆಯೂ ಅವರು ಎಚ್ಚರಿಸಿದ್ದಾರೆ. (g90 7/8)

ಪಕ್ಷಪಾತದ ಸ್ಪರ್ಧೆ?

ವರ್ಷ 1928ರಿಂದ ಕ್ಯಾಲಿಫೋರ್ನಿಯದ ಕಲಾವೆರೆಸ್‌ ಕೌಂಟಿ ಕಪ್ಪೆ ನೆಗೆತದ ಸ್ಪರ್ಧೆಯನ್ನು ನಡೆಸಿಕೊಂಡು ಬಂದಿದೆ. ಇದಕ್ಕೆ ಸೇರುವವುಗಳಲ್ಲಿ ಹೆಚ್ಚಿನವು ಕ್ಯಾಲಿಫೋರ್ನಿಯ ಗೂಳಿಕಪ್ಪೆ ಮತ್ತು ಅವುಗಳ ಭಾರ ಒಂದು ಪೌಂಡಿಗಿಂತ ಹೆಚ್ಚಿರುವುದು ವಿರಳ. ಆದರೆ ವಿಚಿತ್ರ ಸೌಂದರ್ಯದ ಪ್ರಾಣಿಗಳ ಒಬ್ಬ ಆಮದುಗಾರನು ತನ್ನ ಸ್ವಂತ ಕಪ್ಪೆಗಳನ್ನು ಈ ಸ್ಪರ್ಧೆಗೆ ಸೇರಿಸಲು ಪ್ರಯತ್ನಿಸಿದ್ದಾನೆ. ಪಶ್ಚಿಮ ಆಫ್ರಿಕದ ಗೊಲ್ಯಾತ್‌ ಕಪ್ಪೆಗಳೇ ಇವು. ಅವು 15 ಪೌಂಡುಗಳಷ್ಟೂ ತೂಗಿ ಸುಮಾರು 3 ಅಡಿ ಉದ್ದವಿವೆ. ಸ್ಪರ್ಧೆಯ ಈಗಿನ ದಾಖಲೆ, ಮೂರು ನೆಗೆತಗಳಲ್ಲಿ 21.5 ಅಡಿ. ಈ ಗೊಲ್ಯಾತರ ಆಮದುಗಾರನು, ತನ್ನ ಕಪ್ಪೆಗಳು ಅಷ್ಟನ್ನು ಒಂದೇ ನೆಗೆತದಲ್ಲಿ ಮುಟ್ಟುತ್ತವೆ ಎಂದು ಹೇಳುತ್ತಾನೆ. ಸ್ಪರ್ಧೆಯ ವ್ಯವಸ್ಥಾಪಕರು ಇದು ಪಕ್ಷಪಾತದ ಸ್ಪರ್ಧೆ ಎಂದು ಹೇಳಿ ಗೊಲ್ಯಾತರು ಸ್ಪರ್ಧೆಗೆ ಸೇರದಂತೆ ತಡೆ ಹಾಕಿದ್ದಾರೆ. ಈ ಗೊಲ್ಯಾತರು ಚಿಕ್ಕ ಕಪ್ಪೆಗಳನ್ನು ತಿನ್ನಬಹುದು ಮತ್ತು ಕೆಲವು ಕಪ್ಪೆಗಳು 35 ಅಡಿಗಳ ರಂಗದ ಹೊರಗೆ ಹಾರಿ ಪ್ರೇಕ್ಷಕರಿಗೆ ಹೊಡೆಯಬಹುದೆಂಬ ಆಕ್ಷೇಪವನ್ನೂ ಅವರು ಎತ್ತುತ್ತಾರೆ. (g90 7/8)

ಬಾಡಿಗೆಗೆ ಕೋತಿಗಳು

ಕೆಲಸದ ಜನರ ತೀರಾ ಕೊರತೆಯ ಕಾರಣ, ಸೋಲ್‌ ನಗರದ ಹೊರಗಿನ ಕೊರಿಯನ್‌ ರೈತನೊಬ್ಬನು ತನ್ನ ಹೊಲದಲ್ಲಿ ಪೈನ್‌ ಕಾಯಿಗಳನ್ನು ಹೆಕ್ಕಲು ಕೋತಿಗಳನ್ನು ಇಟಿದ್ದಾನೆ. ಕೆಲಸಕ್ಕೆ ಹಿಡಿದ 20 ಮಂಗಗಳು, “ಅಲ್ಪಕಾಲ ತರಬೇತುಗೊಳಿಸಿದ ಬಳಿಕ ಎಷ್ಟು ಶ್ರದ್ಧೆಯಿಂದ ಕೆಲಸ ಮಾಡಿದವೆಂದರೆ ಒಂದು ದಿನದಲ್ಲಿ ಐದು ಜನರು ಮಾಡುವ ಕೆಲಸವನ್ನು ಒಂದೊಂದು ಕಪಿ ಮಾಡಿತು” ಎಂದು ಜಪಾನಿನ ಮೈಂಚಿನಿ ಡೆಯ್ಲಿ ನ್ಯೂಸ್‌ ತಿಳಿಸಿತು. ಇತರ ಹೊಲಗಳಲ್ಲಿ ಕೆಲಸ ಮಾಡಲು ತಾವು ಥಾಯ್ಲೆಂಡಿನಿಂದ ಹೆಚ್ಚು ಕೋತಿಗಳನ್ನು ತರಿಸುವುದಾಗಿ ಸ್ಥಳೀಕ ಸರಕಾರಿ ಅಧಿಕಾರಿಗಳು ಹೇಳುತ್ತಾರೆ. ಕೊರಿಯನ್‌ ರಿಪಬ್ಲಿಕಿನಲ್ಲಿ ವಿದೇಶಿ ಕೈಗೆಲಸಗಾರರ ಮೇಲೆ ನಿಷೇಧವಿರುವುದಾದರೂ ವಿದೇಶಿ ಕಪಿಗಳ ಮೇಲೆ ಇಲ್ಲವೆಂಬುದು ವ್ಯಕ್ತ. (g90 8/8)

ಅವರ ಕಿವಿಗಳಲ್ಲಿ ‘ಕಣ್ಣುಗಳನ್ನು’ ಹಾಕುವುದು

ಸಿನೆಮ, ಟೆಲಿವಿಜನ್‌ ಮತ್ತು ನಾಟಕಗಳಿಂದ ಕುರುಡರು ಹೆಚ್ಚು ಸಂತೋಷ ಪಡೆಯುವಂತೆ ಹೊಸ ಮನೋರಂಜನೆಯ ವ್ಯವಸ್ಥೆಯನ್ನು ರಚಿಸಲಾಗಿದೆ. ಯೂರೋಪಿನಲ್ಲಿ ನಡೆದ ಪ್ರಥಮ ಕಾರ್ಯಕ್ರಮದ ಕುರಿತು ವರದಿ ಮಾಡುತ್ತಾ ಪ್ಯಾರಿಸಿನ ಇಂಟರ್‌ನ್ಯಾಷನಲ್‌ ಹೆರಲ್ಡ್‌ ಟ್ರಿಬ್ಯೂನ್‌, ಈ ವಿಧಾನ “ಚಿತ್ರಾತ್ಮಕವಾಗಿ ಮಾತನಾಡುವ” ಕಲೆಯನ್ನು ಉಪಯೋಗಿಸುತ್ತದೆಂದು ಹೇಳುತ್ತದೆ. ಕರ್ಣಗೋಚರ ಕಾರ್ಯಕ್ರಮವಲ್ಲದೆ, ಸಂವಾದಗಳ ಮಧ್ಯೆ ಕುರುಡರು ಎರಡನೆಯ ಸಮಕಾಲಿಕ ಸೌಂಡ್‌ ಟ್ರ್ಯಾಕಿನಲ್ಲಿ ನಟನೆಗಳನ್ನು ಕೇಳುವಂತೆ ವಿಶೇಷ ಹೆಡ್‌ಫೋನುಗಳು ಅನುಮತಿಸುತ್ತವೆ. ಪಾತ್ರಧಾರಿಗಳು, ಅವರ ಉಡುಪು, ನಟನೆ, ಅಭಿವ್ಯಕ್ತಿಗಳನ್ನೂ ಅದು ವರ್ಣಿಸಿ, ಹೀಗೆ, ಕುರುಡರು ನೋಡಲಿಕ್ಕಾಗದುದನ್ನು ಭಾವಿಸುವಂತೆ ಸಹಾಯ ಮಾಡುತ್ತದೆ. ವಿಶೇಷ ಸಜ್ಜಿತ ಥಿಯೇಟರ್‌ಗಳಲ್ಲಿ ಇದನ್ನು ದೊರಕಿಸಲಾಗಿ ಟೆಲಿವಿಜನ್‌ ಕಾರ್ಯಕ್ರಮದೊಂದಿಗೆ ಇದನ್ನು ಎಫೆಮ್‌ ರೇಡಿಯೊ ಮೂಲಕ ಪ್ರಸಾರ ಮಾಡಲಾಗುವುದು. (g90 8/8)

ಅತ್ಯಂತ ಹೆಚ್ಚು ಬೆಲೆಯ ವಿಮಾನ

ಅಮೆರಿಕದ ಅಧ್ಯಕ್ಷರು ಬೇಗನೆ, “ತಯಾರಿಸಲಾಗಿರುವ ವಿಮಾನಗಳಲ್ಲಿ ಅತ್ಯಂತ ಹೆಚ್ಚು ಬೆಲೆಯ ವಿಮಾನ”ವನ್ನು ಉಪಯೋಗಿಸಲಿರುವರು ಎಂದು ಟೈಮ್‌ ಪತ್ರಿಕೆ ವರದಿ ಮಾಡುತ್ತದೆ. “ಹಾರಾಡುವ ತಾಜ್‌ಮಹಲ್‌” ಎಂದು ಕರೆಯಲಾಗಿರುವ ಮತ್ತು ಅನೇಕ ವರ್ಷಗಳ ಹಿಂದೆ ಆರ್ಡರ್‌ ಮಾಡಲ್ಪಟ್ಟಿರುವ ಈ ಏಯರ್‌ ಫೋರ್ಸ್‌ ವನ್‌ ವಿಮಾನ, ಅತಿ ವಿಶಾಲ, ಅತಿ ಭದ್ರ ಮತ್ತು ಅತ್ಯುತ್ತಮವಾಗಿ ರಚಿಸಲ್ಪಟ್ಟಿದೆ. ಇದನ್ನು “ರಚಿಸಲ್ಪಟ್ಟಿರುವ ಇತರ ವಿಮಾನಗಳಿಗಿಂತ ಹೆಚ್ಚು ಸ್ವಾವಲಂಬನೆ, ಕ್ಷೇತ್ರ(7,140 ಮೈಲು) ಸುಖ ಸಾಧನ ಮತ್ತು ಸೌಕರ್ಯಗಳಿಂದ ರಚಿಸಲಾಗಿದೆ.” ವಿಮಾನದಲ್ಲಿ ಅಧ್ಯಕ್ಷರ ವಾಸಸ್ಥಳ, ಅವಳಿ ಮಂಚ, ಸ್ನಾನ ತೊಟ್ಟಿ, ಆರು ಹೆಚ್ಚಿಗೆಯ ಪಾಯಿಖಾನೆಗಳು, 85 ಟೆಲಿಫೋನುಗಳು, ಚಿಕ್ಕ ಆಸ್ಪತ್ರೆಯ ಏರ್ಪಾಡು, ಆರು ಕ್ಯೂಬಿಕ್‌ ಅಡಿಯ ತಿಜೋರಿ, ಒಂದೇ ಸಮಯ ಎಂಟು ಚ್ಯಾನಲ್‌ಗಳಲ್ಲಿ ಜನಸಮೂಹವನ್ನು ಪರೀಕ್ಷಿಸುವ ಟೆಲಿವಿಜನ್‌ ವ್ಯವಸ್ಥೆ, 23 ವಿಮಾನ ಸಿಬ್ಬಂದಿಗಳಿಗೆ ಮತ್ತು 70 ಪ್ರಯಾಣಿಕರಿಗೆ ಒಂದು ವಾರ ಬೇಕಾಗುವಷ್ಟು ಆಹಾರ ಪದಾರ್ಥಗಳು ಹಿಡಿಸುವ ಎರಡು ಗ್ಯಾಲಿ ರೆಫ್ರಿಜರೇಟರ್‌-ಫ್ರೀಜರ್‌, ಅತ್ಯಾಧುನಿಕ ಕ್ಷಿಪಣಿ ವಿರುದ್ಧ ಅಸ್ತ್ರಗಳು, ದೂರಸಂಪರ್ಕ ಸಾಧನಗಳು, ಮತ್ತು ಇನ್ನೂ ಅನೇಕ ನಿರ್ವಾಹಕಯೋಗ್ಯ ಸೌಕರ್ಯಗಳು ಇವೆ. ಟೈಮ್‌ ಹೇಳುವುದು: “ಅಧ್ಯಕ್ಷರು ಆರೋಹಣ ಮಾಡುವಂತೆ ಅಮೆರಿಕನರು ಒಂದು ಬಿಲ್ಯ ಡಾಲರಿನಲ್ಲಿ ಹೆಚ್ಚಿನದನ್ನು ಖರ್ಚು ಮಾಡುತ್ತಾರೆ ಮತ್ತು ಅವರನ್ನು ಅಲ್ಲಿ ಇಡಲು ಪ್ರತಿ ತಾಸಿಗೆ ಸುಮಾರು 6,000 ಡಾಲರುಗಳನ್ನು ಖರ್ಚು ಮಾಡುತ್ತಾರೆ. ಅದು ಗ್ರೀನ್ಲೆಂಡಿನ ರಾಷ್ಟ್ರೀಯ ಉತ್ಪನ್ನಕ್ಕಿಂತ ಹೆಚ್ಚು.” (g90 8/8)

ನಾಯಿಗಳು ಬಣ್ಣ ಕಾಣುತ್ತವೆಯೆ?

ನಾಯಿಗಳಿಗೆ ಸೀಮಿತ ವರ್ಣದೃಷ್ಟಿಯಿದೆ, ಎಂದು ಸಾಂಟ ಬಾರ್ಬರದಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಸಂಶೋಧಕರ ತೀರ್ಮಾನ. ಒಂದು ವರ್ಷ ಅಧ್ಯಯನ ಮಾಡಿದ ಬಳಿಕ, ನಾಯಿಗಳು ವರ್ಣಪಟಲದ ಎರಡು ಪರಸ್ಪರ ವಿರುದ್ಧ ಬದಿಗಳ ಬಣ್ಣವನ್ನು ಅಂದರೆ ಕೆಂಪು ಮತ್ತು ನೀಲವನ್ನು ಗುರುತಿಸಬಲ್ಲವು ಆದರೆ ಹಳದಿ, ಪಚ್ಚೆ ಮತ್ತು ಕಿತ್ತಳೆ ಬಣ್ಣಗಳಲ್ಲಿ ವ್ಯತ್ಯಾಸವನ್ನು ಕಾಣಲಾರವು. (g90 8/8)

ಭಾರತದಲ್ಲಿ ಏಡ್ಸ್‌

1990ರ ಆರಂಭದಲ್ಲಿ ಭಾರತದಲ್ಲಿ ಕೇವಲ 41 ಪೂರ್ತಿ ಅರಳಿದ ಏಡ್ಸ್‌ ಕೇಸುಗಳಿದ್ದವು. ಆದರೆ ದ ಟೊರಾಂಟೊ ಸ್ಟಾರ್‌ ಪತ್ರಿಕೆಗನುಸಾರ ಈ ರಾಷ್ಟ್ರ ಏಸ್ಯಾದಲ್ಲಿ ದೊಡ್ಡ ಏಡ್ಸ್‌ ವ್ಯಾಧಿಯ ಪ್ರಥಮ ರೋಗಿಯಾಗಬಹುದು. ಭಾರತ ಸರ್ಕಾರದ ಅಂದಾಜಿಗನುಸಾರ ಬಾಂಬೆಯ 10,000ದಿಂದ 100,000 ಮಂದಿ ವೇಶ್ಯೆಯರಿಗೆ ಈ ಮಾರಕ ರೋಗಾಣು ಆಗಲೆ ತಟ್ಟಿದೆ. ಈ ಗುಂಪೇ ಒಂದು ವರ್ಷದಲ್ಲಿ 20,000 ಪುರುಷರಿಗೆ ಇದನ್ನು ದಾಟಿಸಬಲ್ಲದು. ತಮಗೆ ರೋಗ ತಟ್ಟಿದೆ ಎಂದು ಗೊತ್ತಿದ್ದರೂ ಅನೇಕ ವೇಶ್ಯೆಯರು ತಮಗೆ ಬೇರೆ ಜೀವನೋಪಾಯವಿಲ್ಲೆಂದು ಹೇಳಿ ಈ ವ್ಯಾಪಾರವನ್ನು ಬಿಡಲು ನಿರಾಕರಿಸುತ್ತಾರೆ. ಭಾರತದ ನೂರಾರು ಜನ ಸರ್ವಕ್ತ ಮಾರುವ ಉದ್ಯೋಗ ಮಾಡುವವರಿಗೂ ಏಡ್ಸ್‌ ತಟ್ಟಿದೆ. ಆದರೂ ಜೀವನ ನಡೆಸಲು ಅವರು ಇದನ್ನು ಮಾರುತ್ತಾ ಇದ್ದಾರೆ. ಈ ರೋಗಾಣು ದೇಶದಲ್ಲೆಲ್ಲ ಹರಡುವಾಗ ಬಾಂಬೆಯ ಒಬ್ಬ ವೈದ್ಯಕೀಯ ಅಧಿಕಾರಿ ಆ ನಗರದ ಚಿತ್ರವನ್ನು ಸಾರಾಂಶ ರೂಪದಲ್ಲಿ, “ಇದು ಸ್ಫೋಟನಾಭಿಮುಖವಾಗಿ ಹೋಗುತ್ತಿರುವ ಟೈಮ್‌ ಬಾಂಬು” ಎಂದು ಹೇಳುತ್ತಾರೆ. (g90 6/8)

ಪೂರಣದ ಕುರಿತು ಪುನರಾಲೋಚನೆ

ಜೀವಾಪಾಯದ ಅ್ಯನೀಮಿಯ ರೋಗ ತಟ್ಟಿರುವ ಯುವ ಮಲೇರಿಯ ರೋಗಿಗಳಿಗೆ ವಿಕಾಸ ಹೊಂದುತ್ತಿರುವ ದೇಶಗಳಲ್ಲಿ ಹೆಚ್ಚೆಚ್ಚಾಗಿ ರಕ್ತಪೂರಣವನ್ನು ಕೊಡಲಾಗುತ್ತಿತ್ತು. ಉದಾಹರಣೆಗೆ, ಸಯೀರ್‌ ದೇಶದ ಕಿನ್‌ಶಾಸ ನಗರದ ಮಾಮಯಿಮೊ ಆಸ್ಪತ್ರೆಯಲ್ಲಿ 1986 ರಲ್ಲಿ 16,352 ಮಂದಿಗೆ ಪೂರಣ ಮಾಡಲಾಯಿತು. ಆದರೆ, 1987ರಲ್ಲಿ ಪೂರಣವಾದವರ ಸಂಖ್ಯೆ ಕಮ್ಮಿಯಾಯಿತು. ಏಕೆ? ಲಂಡನಿನ ಪ್ಯಾನಸ್ಕೋಪ್‌ ಪತ್ರಿಕೆ ವರದಿ ಮಾಡುವುದೇನಂದರೆ, ಮಾಮಯಿಮೊದ ವೈದ್ಯರು, ಮಲೇರಿಯದ ಕಾರಣ ರಕ್ತಪೂರಣ ಮಾಡಲ್ಪಟ್ಟ ಮಕ್ಕಳಲ್ಲಿ 13 ಪ್ರತಿಶತ ಏಡ್ಸ್‌ ರವಾನಿಸುವ ಎಚೈವಿ (HIV)ಯಿಂದ ಪೀಡಿತರಾದರೆಂದು ಕಂಡುಹಿಡಿದಾಗ ಅಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ತಮ್ಮ “ಅ್ಯನೀಮಿಕ್‌ ಮಕ್ಕಳಿಗೆ ಸ್ವಯಂಚಾಲಕ ರಕ್ತಪೂರಣ” ಎಂಬ ಪಾಲಿಸಿಯನ್ನು ಬದಲಾಯಿಸಿದರು. ಕಿನ್‌ಶಾಸ ಆಸ್ಪತ್ರೆಯಲ್ಲಿ ಕೆಲವು ಯುವ ರೋಗಿಗಳಿಗೆ ರಕ್ತ ಹೆಚ್ಚುವಂತೆ ಸಹಾಯ ಮಾಡಲು ಕಬ್ಬಿಣ ಸ್ವತಗಳನ್ನು ಕೊಡಲಾಯಿತು. ಈ ರೀತಿಯಲ್ಲಿ, ಪ್ಯಾನಸ್ಕೋಪ್‌ ಹೇಳುವುದು: “ರಕ್ತಪೂರಣದ ಸಂಖ್ಯೆಯಲ್ಲಿ 73% ಕಡಮೆಯಾಗಿ ಅದು 4,531ಕ್ಕೆ ಇಳಿಯಿತು ಮತ್ತು ಒಂದು ಮಗುವಿನ ಜೀವವೂ ನಷ್ಟವಾಗಲಿಲ್ಲ.” (g90 5/22)

“ಹುಸಿ ಮೌಲ್ಯಗಳು”

ಬಾರಿಸ್‌ ಬೆಕರ್‌ 22 ವಯಸ್ಸಿನಲ್ಲಿ ಜಗತ್ತಿನ ಪ್ರಧಾನ ಟೆನಿಸ್‌ ಆಟಗಾರ. ಅವರು ಅತಿ ಐಶ್ವರ್ಯವಂತರಲ್ಲಿಯೂ ಒಬ್ಬರು. ಅಮೆರಿಕದ ಹಣದಲ್ಲಿ 75 ಮಿಲ್ಯ ಡಾಲರ್‌ ಆಸ್ತಿವಂತರೆಂದು ಅಂದಾಜು ಮಾಡಲಾಗುತ್ತದೆ. ಅವರ ಐಶ್ವರ್ಯ ಟೆನಿಸ್‌ ಆಟ ಗೆದ್ದು ಗಳಿಸಲಾಯಿತು. ಆದರೂ ಈ ಯುವ ಜರ್ಮನ್‌ ಕ್ರೀಡಾಪಟು ತನಗೆ ಯೋಗ್ಯತೆಗಿಂತ ಹೆಚ್ಚು ಹಣ ಕೊಡಲಾಗುತ್ತದೆಂದು ಹೇಳುತ್ತಾರೆ. “ಟೆನಿಸ್‌ ಚೆಂಡನ್ನು ನೆಟ್ಟಿನ ಮೇಲಿಂದ ಹೊಡೆಯುವುದಕ್ಕೆ ಅಷ್ಟು ಹಣವನ್ನು ನಾನು ಪಡೆಯುವುದು ತಮಾಷೆಯೇ ಸರಿ.” ಪರೇಡ್‌ ಮ್ಯಾಗಸಿನ್‌, ಅವರು ಇಂದಿನ ಸಮಾಜದಲ್ಲಿ “ಎಷ್ಟು ಹಣವಿದೆಯೆಂದರೆ ಯಾರೂ ಹಸಿವೆಯುಳ್ಳವರಾಗಿ, ಮನೆಯಿಲ್ಲದವರಾಗಿ ಇರಬಾರದು. ಹುಸಿ ಮೌಲ್ಯಗಳಿಗೆ ಜನರು ವಿಪರೀತ ಗಮನ ಕೊಡುತ್ತಾರೆ” ಎಂದು ಹೇಳಿದರೆಂದು ವರದಿ ಮಾಡಿತು. (g90 5/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ